ಹುರ್ರೇ! ವಾಟ್ಸಾಪ್‌ಗೆ ಬರಲಿದೆ ಟಾಪ್ ರಹಸ್ಯ ಫೀಚರ್ಸ್

By Shwetha
|

ಫೇಸ್‌ಬುಕ್ ಒಡೆತನದ ವಾಟ್ಸಾಪ್ ಅನ್ನು ಜನಸಂಖ್ಯೆಯ ಏಳನೇ ಒಂದು ಭಾಗ ಬಳಸಿಕೊಳ್ಳುತ್ತಿದೆ. ಚಾಟಿಂಗ್ ವ್ಯವಸ್ಥೆ, ಕರೆ, ಫೋಟೋ, ವೀಡಿಯೊ ಶೇರಿಂಗ್ ವ್ಯವಸ್ಥೆಯನ್ನು ಇದು ಪಡೆದುಕೊಂಡು ಬಳಕೆದಾರರಿಗೆ ಅನುಕೂಲಕರವಾಗಿದೆ. ಏಳು ವರ್ಷಗಳ ಮೆಸೇಜಿಂಗ್ ವ್ಯವಸ್ಥೆಯಾದ ವಾಟ್ಸಾಪ್ ಇನ್ನಷ್ಟು ಫೀಚರ್‌ಗಳನ್ನು ಇದರಲ್ಲಿ ಅಳವಡಿಸಿದೆ.

ಓದಿರಿ: ಏರ್ ಕಂಡೀಷನ್ ಇಲ್ಲದೆ ಉಚಿತವಾಗಿ ನಿಮ್ಮ ಮನೆಯನ್ನು ತಂಪಾಗಿಸಿ

ಇದೀಗ ತಾನೇ ಬಂದ ಸುದ್ದಿ ಎಂಬಂತೆ ವಾಟ್ಸಾಪ್ ಇನ್ನೂ ಕೆಲವೊಂದು ಹೊಸ ಹೊಸ ವಿಶೇಷತೆಗಳನ್ನು ಅಳವಡಿಸಿಕೊಂಡು ಬಳಕೆದಾರರ ಮುಂದೆ ಬರಲಿದೆ. ಸ್ನ್ಯಾಪ್‌ಚಾಟ್, ವಿಚಾಟ್ ಮತ್ತು ಕೆಲವೊಂದು ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ವಾಟ್ಸಾಪ್ ಭರ್ಜರಿ ಪೈಪೋಟಿಯನ್ನು ನೀಡಲಿದೆ. ಬನ್ನಿ ಆ ವಿಶೇಷತೆಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ತಿಳಿದುಕೊಳ್ಳಲಿದ್ದು ಇದು ನಿಮಗೆ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಅರಿಯೋಣ.

#1

#1

ವೀಡಿಯೊ ಕಾಲಿಂಗ್ ವ್ಯವಸ್ಥೆಗೂ ವಾಟ್ಸಾಪ್ ಬೆಂಬಲವನ್ನು ನೀಡಲಿದೆ ಎಂಬುದಾಗಿ ಇತ್ತೀಚಿನ ಸುದ್ದಿಯೊಂದು ತಿಳಿಸಿದೆ. ಐಓಎಸ್‌ಗಾಗಿ ವಾಟ್ಸಾಪ್ ಬೀಟಾ ಆವೃತ್ತಿಯಲ್ಲಿ ಬಳಕೆದಾರರಿಂದ ಸ್ವೀಕರಿಸಲಾದ ಸ್ಕ್ರೀನ್ ಶಾಟ್ ಲೀಕ್‌ನಿಂದ ಈ ಮಾಹಿತಿ ದೊರೆತಿದೆ.

#2

#2

ಹೆಚ್ಚಿನ ಮೆಸೇಜಿಂಗ್ ಸರ್ವೀಸ್ ಅಪ್ಲಿಕೇಶನ್, ಫೇಸ್‌ಬುಕ್ ಮೆಸೆಂಜರ್ ಸೇರಿದಂತೆ ಜಿಫ್ ಸೇವೆಗೆ ಬೆಂಬಲವನ್ನು ಒದಗಿಸುತ್ತಿದೆ, ವಾಟ್ಸಾಪ್ ಬಳಕೆದಾರರು ನಿರೀಕ್ಷಿಸಿರುವಂತೆ ಈ ಅಪ್ಲಿಕೇಶನ್ ಕೂಡ ಶೀಘ್ರದಲ್ಲಿಯೇ ಜಿಫ್ ಸೇವೆಯನ್ನು ತನ್ನಲ್ಲಿ ಪಡೆದುಕೊಳ್ಳಲಿದೆ ಎಂದಾಗಿದೆ.

#3

#3

ಐಓಎಸ್‌ಗಾಗಿ ವಾಟ್ಸಾಪ್ ಹೆಚ್ಚು ಹೊಸ ಫೀಚರ್‌ಗಳೊಂದಿಗೆ ಬರಲಿದ್ದು ಮ್ಯೂಸಿಕ್ ಶೇರಿಂಗ್ ಕೂಡ ಇದರಲ್ಲಿ ಒಂದಾಗಿದೆ. ಮ್ಯೂಸಿಂಗ್ ಶೇರಿಂಗ್ ವ್ಯವಸ್ಥೆಯನ್ನು ಪಬ್ಲಿಕ್ ಗ್ರೂಪ್‌ನೊಂದಿಗೆ ಹಂಚಿಕೊಳ್ಳುವ ವ್ಯವಸ್ಥೆ ಕೂಡ ಇದರಲ್ಲಿದೆ.

#4

#4

ಜರ್ಮನ್ ಟೆಕ್ ವೆಬ್‌ಸೈಟ್ ಮೇಕರ್ ಕಾಫ್ ತಿಳಿಸಿರುವಂತೆ, ಹೆಚ್ಚು ಕಸ್ಟಮೈಸ್ ಆಗಿರುವ ಲಾರ್ಜ್ ಎಮೋಜಿಗಳನ್ನು ಕೂಡ ಈ ಅಪ್ಲಿಕೇಶನ್ ಬೆಂಬಲಿಸಲಿದೆ ಎಂದಾಗಿದೆ.

#5

#5

ಬಳಕೆದಾರರು ಸಂದೇಶವನ್ನು ರೆಕಾರ್ಡ್ ಮಾಡಿ ಆಲಿಸುವ ಸೌಲಭ್ಯವನ್ನು ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲಿದ್ದು ವಾಯ್ಸ್ ಮೇಲ್ ಫೀಚರ್ ಎಂಬುದಾಗಿ ಇದನ್ನು ಕರೆಯಲಾಗಿದೆ. ಸಾಂಪ್ರಾದಾಯಿಕ ವಾಯ್ಸ್ ಮೇಲ್‌ಗಿಂತಲೂ ಈ ವ್ಯವಸ್ಥೆ ಹೆಚ್ಚು ಆಧುನೀಕವಾಗಿದ್ದು ರೆಕಾರ್ಡಿಂಗ್ ಮಾಡುವ ಸೌಲಭ್ಯವನ್ನು ನೀಡಲಿದೆ.

#6

#6

ವರದಿಗಳ ಪ್ರಕಾರ, ವಾಟ್ಸಾಪ್ ತ್ವರಿತ ಕಾಲ್ ಬ್ಯಾಕ್ ಫೀಚರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಅಧಿಸೂಚನೆಯ ಮೇಲೆ ಸ್ಪರ್ಶಿಸಿದಾಗಿದು ಕರೆಯನ್ನು ಮಾಡಲಿದೆ.

#7

#7

ಅಟ್ಯಾಚ್‌ಮೆಂಟ್‌ಗಳ ಮೂಲಕ ಜಿಫ್ ಫೈಲ್‌ಗಳನ್ನು ಹಂಚಿಕೊಳ್ಳುವ ವ್ಯವಸ್ಥೆಯನ್ನು ವಾಟ್ಸಾಪ್ ಹೊರತರಲಿದೆ ಎಂಬುದಾಗಿ ವದಂತಿಗಳು ತಿಳಿಸಿವೆ. ಪಿಡಿಎಫ್ ಅಥವಾ ವರ್ಡ್ ಡಾಕ್ಯುಮೆಂಟ್‌ಗಳಲ್ಲಿ, ಜಿಫ್ ಫೈಲ್‌ಗಳಂತೆ ಸಂಯೋಜಿಸಲಾಗಿರುವ ಬೇರೆ ಬೇರೆ ವಿಧಗಳಲ್ಲಿ ಫೈಲ್‌ಗಳನ್ನು ಬಳಕೆದಾರರು ಶೇರ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
now the biggest messaging application in the world is rumored to come up with more significant features to constantly sty ahead in competition against rivals including Snapchat, WeChat and others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X