ಏರ್ ಕಂಡೀಷನ್ ಇಲ್ಲದೆ ಉಚಿತವಾಗಿ ನಿಮ್ಮ ಮನೆಯನ್ನು ತಂಪಾಗಿಸಿ
ಕಸದಿಂದ ರಸ ತಯಾರಿ ಎಂಬಂತೆ ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿಕೊಂಡು ಕೂಲಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಇದೀಗ ಸಾಮಾಜಿಕ ತಾಣದಲ್ಲಿ ಹೆಚ್ಚು ವೈರಲ್ ಆಗಿ ಸುದ್ದಿಯಲ್ಲಿದೆ. ಬಳಸಿದ ಪ್ಲಾಸ್ಟಿಕ್ ಬಾಟಲಿ ಮತ್ತು ಕಾರ್ಡ್‌ಬೋರ್ಡ್ ತುಂಡನ್ನು ಬಳಸಿ ಈ ತಂಪು ವ್ಯವಸ್ಥೆಯನ್ನು ಬಾಂಗ್ಲಾದೇಶದ ಜನಗಳು ಕಂಡುಹುಡುಕಿದ್ದಾರೆ. ಇದನ್ನು ಬೋರ್ಡ್‌ನಲ್ಲಿ ಮೌಂಟ್ ಮಾಡಬಹುದಾಗಿದ್ದು, ಮುಚ್ಚಳ ಗಾತ್ರದ ಹೋಲ್‌ಗಳನ್ನು ಮಾಡಿ ಗ್ರಿಡ್ ಮಾದರಿಯಲ್ಲಿ ತುಂಡರಿಸಿ ಈ ಏರ್ ಕೂಲರ್ ಅನ್ನು ತಯಾರಿಸಿದ್ದಾರೆ.
ಓದಿರಿ: ನಿಗೂಢತೆಯನ್ನು ಬಚ್ಚಿಟ್ಟುಕೊಂಡಿರುವ ಫೋಟೋಗ್ರಾಫ್ಸ್
ಇಂದಿನ ಲೇಖನದಲ್ಲಿ ಈ ಕೂಲಿಂಗ್ ಸಿಸ್ಟಮ್ ಕುರಿತಾದ ಇನ್ನಷ್ಟು ಸುದ್ದಿಗಳನ್ನು ನಾವು ನೀಡುತ್ತಿದ್ದು ತಯಾರಿ ವಿಧಾನವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಕಡಿಮೆ ಖರ್ಚಿನಲ್ಲಿ ಕೂಲ್ ಕೂಲ್ ವ್ಯವಸ್ಥೆಯನ್ನು ತಮ್ಮದಾಗಿಸಿಕೊಂಡು ಇಲ್ಲಿನ ನಿವಾಸಿಗಳಿಗೆ ಹ್ಯಾಟ್ಸಾಫ್!

#1
ಇಲ್ಲಿನ 70% ದಷ್ಟು ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು ವಿದ್ಯುತ್ ಇಲ್ಲಿ ಲಭ್ಯವಾಗುವುದು ಕಷ್ಟ. ಅಂತೆಯೇ ತಾಪಮಾನ 113 ಡಿಗ್ರಿ ಫ್ಯಾರನ್ ಹೀಟ್ (45 ಡಿಗ್ರಿ) ಯನ್ನು ಬೇಸಿಗೆಯಲ್ಲಿ ತಲುಪುತ್ತದೆ.

#2
ಇಕೋ ಕೂಲರ್ ಕನಿಷ್ಟ ಪಕ್ಷ 9 ಡಿಗ್ರಿಗಳಷ್ಟು ತಾಪಮಾನವನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು ಸಣ್ಣ ಗುಡಿಸಲುಗಳಲ್ಲಿ ಇದು ಬಹಳಷ್ಟು ಬದಲಾವಣೆಗಳನ್ನು ಮಾಡಿದೆ.

#3
ಮನೆಯಲ್ಲೇ ತಯಾರಿಸುವ ಕೂಲಿಂಗ್ ಸಿಸ್ಟಮ್‌ಗಾಗಿ ಕಾರ್ಡ್‌ಬೋರ್ಡ್ ಅನ್ನು ತೆಗೆದುಕೊಂಡು ಅದನ್ನು ಕಿಟಕಿಗೆ ಕುಳಿತುಕೊಳ್ಳುವಂತೆ ನೀವು ಟ್ರಿಮ್ ಮಾಡಿಕೊಳ್ಳಬೇಕು.

#4
ಗ್ರಿಡ್ ಪ್ಯಾಟ್ರನ್‌ನಲ್ಲಿ ಬಾಟಲಿ ಮುಚ್ಚಳ ಕುಳಿತುಕೊಳ್ಳುವಷ್ಟು ದೊಡ್ಡದಾದ ಹೋಲ್‌ಗಳನ್ನು ಮಾಡಿ ಬಾಟಲಿಯ ಗಾತ್ರಕ್ಕೆ ಇದು ಸಮವಾಗಿದೆ ಎಂಬುದನ್ನು ಖಾತ್ರಿಪಡಿಸಿ.

#5
ಸಾಧ್ಯವಾದಷ್ಟು ಹಳೆಯ ಬಾಟಲಿಗಳನ್ನು ಬಳಸಿ ಬಾಟಲಿಯ ಗಾತ್ರಕ್ಕೆ ತಕ್ಕಂತೆ ಬೋರ್ಡ್‌ನಲ್ಲಿ ನೀವು ಆಕಾರಗಳನ್ನು ತಯಾರುಮಾಡಬೇಕು.

#6
ಬಿಸಿ ಗಾಳಿಯು ಪ್ರತೀ ಬಾಟಲ್‌ನೊಳಗೆ ನುಗ್ಗಿ ರಿಮ್‌ನೊಳಗೆ ಇದನ್ನು ದೂಡಿ ಇದನ್ನು ವಿಸ್ತರಿಸಲು ಆರಂಭಿಸುತ್ತದೆ ಈ ವಿಸ್ತರಣೆಯೇ ಕೊಠಡಿಯನ್ನು ಪ್ರವೇಶಿಸುವ ಗಾಳಿಯನ್ನು ತಂಪಾಗಿಸುತ್ತದೆ.
#7
ಇಕೋ ಕೂಲರ್ ವೀಡಿಯೊವನ್ನು ತಯಾರಿಸಿದ್ದು ಕೂಲಿಂಗ್ ಸಿಸ್ಟಮ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇದರಲ್ಲಿ ತೋರಿಸಿದೆ.


Click it and Unblock the Notifications








