ವಾಟ್ಸ್‌ಆಪ್‌ ಸ್ಟೇಟಸ್‌ ಇಷ್ಟವಾಯಿತಾ..? ಡೌನ್‌ಲೋಡ್‌ ಮಾಡಬೇಕಾ..?

By Avinash
|
Why shouln't upload WhatsApp Status - KANNADA

ವಾಟ್ಸ್‌ಆಪ್‌ನಲ್ಲಿ ಸ್ಟೇಟಸ್‌ ನೋಡಿದಿರಲ್ಲಾ..? ನೋಡಿಯೇ ನೋಡಿರ್ತಿರಿ. ಒಬ್ಬರು ದಿನಕ್ಕೊಂದು ಇಮೇಜ್ ಹಾಕಿದರೆ, ಕೆಲವರು ಆ ಸ್ಟೇಟಸ್‌ ಬಾರ್ ತುಂಬಿ ಹೋಗುವಂತೆ ಫೋಟೋಗಳನ್ನು ವಿಡಿಯೋಗಳನ್ನು ಹಾಕಿರುತ್ತಾರೆ. ಅದರಲ್ಲಿ ಕೆಲವೊಂದು ನಮಗೆ ಇಷ್ಟವಾಗುತ್ತವೆ. ಅವುಗಳು ಬೇಕೆಂದರೆ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುತ್ತೇವೆ. ಆದರೆ, ಫೋಟೊಗಳು ಸ್ಕ್ರೀನ್ ಶಾಟ್‌ಗೆ ಒಕೆ.

ವಿಡಿಯೋಗಳನ್ನು ಹೇಗೆ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವುದು. ಆಗಲ್ಲ ಅಲ್ವಾ. ಆಗ ಸ್ಟೇಟಸ್ ಹಾಕಿದವರಿಗೆ ಸೆಂಡ್‌ ಮಿ ಎನ್ನಬೇಕಾಗುತ್ತದೆ. ಅದಕ್ಕಾಗಿಯೇ ಆ ಕಷ್ಟ ಬೇಡ. ನಾವೊಂದು ಟ್ರಿಕ್ ಹೇಳ್ತಿವಿ. ಅದನ್ನು ಮಾಡಿ ಸಾಕು. ಯಾವುದೇ ಥರ್ಡ್‌ ಪಾರ್ಟಿ ಆಪ್‌ ಕೂಡ ಬೇಕಾಗಿಲ್ಲ ನಿಮ್ಮ ಡೌನ್‌ಲೋಡ್‌ಗೆ, ನೀವು ಸ್ಟೇಟಸ್ ಒಪನ್ ಮಾಡಿ ನೋಡಿದ್ರೆ ಸಾಕು ನಿಮ್ಮ ಮೊಬೈಲ್‌ನಲ್ಲಿ ಸೇವ್ ಆಗಿರುತ್ತದೆ.

ವಾಟ್ಸ್‌ಆಪ್‌ ಸ್ಟೇಟಸ್‌ ಇಷ್ಟವಾಯಿತಾ..? ಡೌನ್‌ಲೋಡ್‌ ಮಾಡಬೇಕಾ..?

ವಿಶ್ವದ ಜನಪ್ರಿಯ ಇನ್‌ಸ್ಟಾಂಟ್‌ ಮೆಸೆಂಜಿಂಗ್ ಆಪ್‌ ಆಗಿರುವ ವಾಟ್ಸ್‌ಆಪ್‌ ಯಾರ ಸ್ಮಾರ್ಟ್‌ಫೋನ್‌ನಲ್ಲಿ ಇಲ್ಲ ಹೇಳಿ. ಪ್ರಸ್ತುತದಲ್ಲಿ ವೈರಲ್‌ ವಿಡಿಯೋಗಳೆಲ್ಲವೂ ವಾಟ್ಸ್‌ಆಪ್‌ ಮೂಲಕವೇ ಬರುತ್ತವೆ ಎಂದರೆ ನಂಬಲೇಬೇಕು. ಫೇಸ್‌ಬುಕ್‌ಗಿಂತ ಹೆಚ್ಚು ಜನಪ್ರಿಯವಾಗುತ್ತಿರುವ ವಾಟ್ಸ್‌ಆಪ್‌ ಹೊಸ ಹೊಸ ಫೀಚರ್‌ಗಳಿಂದಲೇ ಜನರಿಗೆ ಇಷ್ಟವಾಗುತ್ತಿದೆ. ಈಗ ಹೊಸ ಫೀಚರ್ ಪರಿಚಯಸಿದ್ದು, ಸ್ಟೇಟಸ್‌ಗೆ ಸಂಬಂಧಪಟ್ಟಿದ್ದು, ಅದೇನು ಅಂತಿರಾ ಮುಂದೆ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ಎರಡು ರೀತಿ ಡೌನ್‌ಲೋಡ್‌ ಮಾಡಬಹುದು

ವಾಟ್ಸ್‌ಆಪ್‌ ಸ್ಟೇಟಸ್‌ಗಳನ್ನು ಎರಡು ಮಾರ್ಗದಿಂದ ಡೌನ್‌ಲೋಡ್‌ ಮಾಡಬಹುದು. ಒಂದು ಮಾರ್ಗ ನಾವೇಳುವ ರೀತಿಯಂತೆ ನೇರ ಮಾರ್ಗ, ಸ್ಟೇಟಸ್‌ ಡೌನ್‌ಲೋಡ್‌ಗೆ ಇಲ್ಲಿ ಯಾವುದೇ ಆಪ್‌ಗಳು ಬೇಕಿಲ್ಲ. ಇನ್ನೊಂದು ಮಾರ್ಗವೆಂದರೆ ಜಿಬಿ ವಾಟ್ಸ್‌ಆಪ್‌, ಸ್ಟೇಟಸ್‌ ಡೌನ್‌ಲೋಡ್‌ರ್‌ಗಳಂತಹ ಥರ್ಡ್‌ ಪಾರ್ಟಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಸ್ಟೇಟಸ್‌ ಡೌನ್‌ಲೋಡ್‌ ಮಾಡಬೇಕಾಗುತ್ತದೆ.

ನೇರವಾಗಿ ಡೌನ್‌ಲೋಡ್‌ ಆಗುತ್ತವೆ

ನಿಮ್ಮ ಮೊಬೈಲ್‌ನಲ್ಲಿ ವಾಟ್ಸ್‌ಆಪ್‌ ಸ್ಟೇಟಸ್‌ಗಳನ್ನು ನೋಡಿದ ತಕ್ಷಣ ಅವು ನಿಮಗೆ ಗೊತ್ತಿರದ ಆಗೇ ನಿಮ್ಮ ಮೊಬೈಲ್‌ನಲ್ಲಿ ಸೇವ್‌ ಆಗಿರುತ್ತವೆ. ಒಂದಿಷ್ಟು ಹುಡುಕಾಡಿದರೆ ನಿಮಗೆ ಆ ಫೋಲ್ಡರ್‌ ಕೂಡ ಕಾಣುತ್ತದೆ. ನಿಮ್ಮ ಫೈಲ್‌ ಮ್ಯಾನೇಜರ್‌ನಲ್ಲಿ ಇರುವ ವಾಟ್ಸ್‌ಆಪ್‌ ಫೋಲ್ಡರ್‌ನ ಸ್ಟೇಟಸ್‌ ಫೋಲ್ಡರ್‌ನಲ್ಲಿ ಸ್ವಯಂ ಆಗಿ ಸೇವ್‌ ಆಗುತ್ತವೆ.

ಅನ್‌ಹೈಡ್‌ ಮಾಡಬೇಕು

ಆದರೆ, ಎಲ್ಲರಿಗೂ ಈ ಫೀಚರ್ ಸಿಗುವುದಿಲ್ಲ. ಅಪ್‌ಡೇಟ್‌ ಆವೃತ್ತಿಯಾಗಿದ್ದರೆ ಮಾತ್ರ ಈ ಫೀಚರ್‌ ದೊರೆಯುತ್ತದೆ. ಆದರೆ, ಸ್ಟೇಟಸ್‌ ಫೋಲ್ಡರ್‌ ನೇರವಾಗಿ ಕಾಣುವುದಿಲ್ಲ. ಈ ಫೋಲ್ಡರ್ ಕಾಣಬೇಕೆಂದರೆ ನೀವು ಅನ್‌ಹೈಡ್‌ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಿಮ್ಮ ಫೈಲ್‌ ಮ್ಯಾನೇಜರ್‌ನಲ್ಲಿ ಅನ್‌ಹೈಡ್‌ ಆಯ್ಕೆ ಇದ್ದರೆ ಬಹಳ ಸುಲಭವಾಗಿಯೇ ಫೇಸ್‌ಬುಕ್ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳಬಹುದು.

ಅನ್‌ಹೈಡ್‌ ಆಯ್ಕೆ ಇಲ್ಲವೆಂದರೆ..?

ನಿಮ್ಮ ಮೊಬೈಲ್‌ನಲ್ಲಿ ಅನ್‌ಹೈಡ್‌ ಆಯ್ಕೆ ಇಲ್ಲವೆಂದರೆ ನೀವು ಥರ್ಡ್‌ ಪಾರ್ಟಿ ಫೈಲ್‌ ಮ್ಯಾನೇಜರ್ ಆಪ್‌ ಇನ್‌ಸ್ಟಾಲ್ ಮಾಡಿಕೊಂಡು, ಲೊಕೇಷನ್‌ ನ್ಯಾವಿಗೇಟ್‌ ಮಾಡಿಕೊಂಡು ಹೈಡ್‌ ಆಗಿರುವ ಫೋಲ್ಡ್‌ರ್‌ನ್ನು ಅನ್‌ ಹೈಡ್‌ ಮಾಡಬಹುದಾಗಿದೆ.

ಐಒಎಸ್‌ನಲ್ಲೂ ಫೀಚರ್ ಲಭ್ಯ

ವಾಟ್ಸ್‌ಆಪ್‌ನ ಈ ಸ್ಟೇಟಸ್‌ ಡೌನ್‌ಲೋಡ್‌ ಫೀಚರ್ ಆಪಲ್ ಐಒಎಸ್‌ನಲ್ಲಿಯೂ ಲಭ್ಯವಿದ್ದು, ಆಂಡ್ರಾಯ್ಡ್‌ನಲ್ಲಿ ಬಳಸಿದ ರೀತಿಯಲ್ಲಿಯೇ ಐಒಎಸ್‌ನಲ್ಲೂ ವಾಟ್ಸ್‌ಆಪ್‌ ಸ್ಟೇಟಸ್‌ಗಳನ್ನು ಡೌನ್‌ಲೋಡ್‌ ಮಾಡಬಹುದು.

ಥರ್ಡ್‌ ಪಾರ್ಟಿ ಆಪ್‌ ಮೂಲಕ

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಸ್ಟೋರಿ ಸೇವರ್ ಫಾರ್ ವಾಟ್ಸ್‌ಆಪ್ ಆಪ್‌ನ್ನು ಡೌನ್‌ಲೋಡ್‌ ಮಾಡಬೇಕು. ಇದರಂತೆ ಅನೇಕ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ನಿಮ್ಮ ವಾಟ್ಸ್‌ಆಪ್‌ ಅಕೌಂಟ್‌ ಜತೆ ಲಿಂಕ್‌ ಆಗಿರುತ್ತವೆ. ಆಪ್‌ನಲ್ಲಿ ಹೋಗಿ ರಿಸೆಂಟ್‌ ಸ್ಟೋರಿಸ್‌ ಕ್ಲಿಕ್ ಮಾಡಿ, ಡೌನ್‌ಲೋಡ್‌ ಬಟನ್‌ ಕ್ಲಿಕ್ ಮಾಡಿದರೆ ಸ್ಟೇಟಸ್ ನಿಮ್ಮ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
WhatsApp trick! Liked someone’s WA status message picture, video? Now, you can download it – Here is how. To know more this visit kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more