ವಾಟ್ಸಾಪ್‌ನಲ್ಲಿ ಮೆಸೆಜ್ ಸೆಡ್ಯೂಲ್ ಮಾಡಲು ಈ ಕ್ರಮ ಅನುಸರಿಸಿ!

|

ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿರುವ ವಾಟ್ಸಾಪ್ ಹಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರನ್ನು ಸೆಳೆದಿದೆ. ಇತ್ತೀಚಿಗೆ ತನ್ನ ಹೊಸ ಪ್ರೈವಸಿ ನಿಯಮಗಳಿಂದಾಗಿ ಜನಪ್ರಿಯತೆಯಲ್ಲಿ ಸ್ವಲ್ಪ ಹಿನ್ನಡೆ ಕಂಡಿದೆ. ಅದಾಗ್ಯೂ, ವಾಟ್ಸಾಪ್‌ ಬಳಕೆದಾರರ ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆಡಿಯೋ ಮೆಸೆಜ್ ವೇಗವಾಗಿ ಕೇಳುವ ಆಯ್ಕೆ ನೂತನ ಸೇರ್ಪಡೆ ಆಗಿದೆ. ವಾಟ್ಸಾಪ್‌ನಲ್ಲಿ ಮೆಸೆಜ್ ಸೆಡ್ಯೂಲ್‌ ಸಹ ಮಾಡಬಹುದಾಗಿದೆ.

ಥರ್ಡ್‌ಪಾರ್ಟಿ

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ ಪರಿಚಯಿಸಿದೆ. ಇದರೊಂದಿಗೆ ಕೆಲವು ಥರ್ಡ್‌ಪಾರ್ಟಿ ಆಪ್‌ಗಳು ವಾಟ್ಸಾಪ್‌ ಬಳಕೆಯನ್ನು ಮತ್ತಷ್ಟು ವಿಶೇಷವಾಗಿಸಿವೆ. ಆ ಪೈಕಿ ವಾಟ್ಸಾಪ್‌ನಲ್ಲಿ ಮೆಸೆಜ್‌ ಸೆಡ್ಯೂಲ್‌ ಆಯ್ಕೆಯು ಸಹ ಒಂದು ಗಮನ ಸೆಳೆಯುವ ಟ್ರಿಕ್ ಆಗಿದೆ. ಬಳಕೆದಾರರು ಸೆಡ್ಯೂಲ್ ಮಾಡಿದರೇ, ಮೆಸೆಜ್‌ ಆಟೋಮ್ಯಾಟಿಕ್ ಆಗಿ ಸೆಂಡ್‌ ಆಗುತ್ತವೆ. ಅಧಿಕೃತವಾಗಿ ವಾಟ್ಸಾಪ್ ಈ ಆಯ್ಕೆಯನ್ನು ಪರಿಚಯಿಸಿಲ್ಲ. ಹಾಗಾದರೇ ವಾಟ್ಸಾಪ್ನಲ್ಲಿ ಮೆಸೆಜ್ ಸೆಡ್ಯೂಲ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಮೆಸೆಜ್‌ಗಳನ್ನು ಸೆಡ್ಯೂಲ್ ಮಾಡಲು ಹೀಗೆ ಈ ಕ್ರಮ ಅನುಸರಿಸಿ:

ವಾಟ್ಸಾಪ್‌ನಲ್ಲಿ ಮೆಸೆಜ್‌ಗಳನ್ನು ಸೆಡ್ಯೂಲ್ ಮಾಡಲು ಹೀಗೆ ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ.

ಹಂತ 2: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ SKEDit ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ.

ಹಂತ 3: SKEDit ತೆರೆಯಿರಿ ಮತ್ತು ಸೈನ್ ಇನ್ ಮಾಡಿ.

ಹಂತ 4: ಈಗ ಮುಖ್ಯ ಮೆನುವಿನಲ್ಲಿರುವ ವಾಟ್ಸಾಪ್ ಆಯ್ಕೆಯನ್ನು ಟ್ಯಾಪ್ ಮಾಡಿ.

ಪ್ರವೇಶಿಸುವಿಕೆ

ಹಂತ 5: ಈಗ ನೀವು ಅದಕ್ಕೆ ಅನುಮತಿಗಳನ್ನು ನೀಡಬೇಕು. ಪ್ರವೇಶಿಸುವಿಕೆ ಸಕ್ರಿಯಗೊಳಿಸುವ ಆಯ್ಕೆಯನ್ನು ಟ್ಯಾಪ್ ಮಾಡಿ, ನಂತರ SKEDit ಆಯ್ಕೆಯನ್ನು ಟ್ಯಾಪ್ ಮಾಡಿ. ಈಗ, ಸೇವೆಯನ್ನು ಬಳಸಿ ಬಟನ್ ಟಾಗಲ್ ಮಾಡಿ ಮತ್ತು ಅನುಮತಿಸು ಬಟನ್ ಟ್ಯಾಪ್ ಮಾಡಿ.

ಹಂತ 6: ಅಪ್ಲಿಕೇಶನ್‌ಗೆ ಹಿಂತಿರುಗಿ, ಸ್ವೀಕರಿಸುವವರನ್ನು ಆಯ್ಕೆ ಮಾಡಿ, ನಿಮ್ಮ ಸಂದೇಶವನ್ನು ಸೇರಿಸಿ, ನಿಗದಿತ ದಿನಾಂಕ ಮತ್ತು ಸಮಯವನ್ನು ಹೊಂದಿಸಿ.

ಹಂತ 7: ‘Ask me before sending' ಬಟನ್ ಆನ್ ಮಾಡಿ.

ಐಕಾನ್

ಹಂತ 8: ಟಿಕ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಮೆಸೆಜ್‌ ಅನ್ನು ಸೆಡ್ಯೂಲ್ ಮಾಡಲಾಗುತ್ತದೆ.

ಹಂತ 9: ಸೆಡ್ಯೂಲ್ ಸಮಯ ಬಂದಾಗ, ಕ್ರಿಯೆಯನ್ನು ಪೂರ್ಣಗೊಳಿಸಲು ಅಪ್ಲಿಕೇಶನ್ ನಿಮಗೆ ನೋಟಿಫಿಕೇಶನ್ ಕಳುಹಿಸುತ್ತದೆ. ಮೆಸೆಜ್‌ ಅನ್ನು ಕಳುಹಿಸಲು ನೀವು ಸೆಂಡ್ ಬಟನ್ ಟ್ಯಾಪ್ ಮಾಡಬಹುದು. ಕಳುಹಿಸುವ ಮೊದಲು ನೀವು ಅದನ್ನು ಎಡಿಟ್ ಸಹ ಮಾಡಬಹುದಾಗಿದೆ.

Best Mobiles in India

English summary
WhatsApp is one of the most popular messaging apps in the world.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X