ಗ್ಯಾಡ್ಜೆಟ್ಸ್‌ ಖರೀದಿಗೆ ಆನ್‌ಲೈನ್ ಸೂಕ್ತವೋ? ಆಫ್‌ಲೈನ್ ಉತ್ತಮವೋ?

|

ಇದು ತಂತ್ರಜ್ಞಾನದ ಯುಗ. ಇತ್ತೀಚೆಗಂತೂ ಗೆಜೆಟ್ ಗಳು ನಮ್ಮ ಜೀವನದ ಬಹುಮುಖ್ಯ ಅಂಗವೆನಿಸಿದೆ. ಅದೆಷ್ಟೊ ಗೆಜೆಟ್ ಗಳು ನಮ್ಮ ಬಳಿ ಇಲ್ಲದೇ ಇದ್ದರೆ ಅದೇನೋ ಒಂದು ರೀತಿಯ ಅಸಂತೃಪ್ತಿ ನಮ್ಮನ್ನ ಕಾಡಲು ಆರಂಭಿಸಿಬಿಡುತ್ತದೆ. ಅದರಲ್ಲೂ ಮೊಬೈಲ್ ಫೋನ್ ಒಂದು ಕ್ಷಣ ನಮ್ಮ ಕೈಯಲ್ಲಿ ಇಲ್ಲದೇ ಇದ್ದರೆ ಜಗತ್ತೇ ನಶ್ವರ ಅನ್ನಿಸುವ ಪ್ರಮೇಯವಿದೆ. ಇನ್ನು ಇವುಗಳ ಖರೀದಿಯೂ ಕೂಡ ಮೊದಲಿನಷ್ಟು ಕಷ್ಟಕರವಾಗಿಲ್ಲ.

ಗ್ಯಾಡ್ಜೆಟ್ಸ್‌ ಖರೀದಿಗೆ ಆನ್‌ಲೈನ್ ಸೂಕ್ತವೋ? ಆಫ್‌ಲೈನ್ ಉತ್ತಮವೋ?

ಕೆಲವು ದಶಕಗಳ ಹಿಂದೆ ಒಂದು ರೇಡಿಯೋ ಖರೀದಿ ಕೂಡ ಬರೋಬ್ಬರಿ ಅನ್ನಿಸುತ್ತಿತ್ತು. ನಂತರದ ದಿನಗಳಲ್ಲಿ ಬ್ಲಾಕ್ ಎಂಡ್ ವೈಟ್ ಟಿವಿ ಕಾಲ ಶುರುವಾಯಿತು. ಶ್ರೀಮಂತರ ವಸ್ತುಗಳಿವು ಇವು ಅಂತ ಅನ್ನಿಸುತ್ತಿದ್ದ ಕಾಲಗಳವು. ಆದರೆ ಜಗತ್ತು ಅದೆಷ್ಟು ಬೇಗ ಬದಲಾಗಿ ಬಿಡ್ತು ಎಂದರೆ ಇದೀಗ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದವರು ಬಿಡಿ, ಬಡವರ ಮನೆಗಳಲ್ಲೂ ಟಿವಿ ಇರುತ್ತದೆ.

ಯಾವುದು ಸೂಕ್ತ..?

ಯಾವುದು ಸೂಕ್ತ..?

ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುತ್ತದೆ. ಇದರ ಇವುಗಳ ಖರೀದಿಗೆ ಅಂಗಡಿಗೇ ತೆರಳಿ ಖರೀದಿಸಬೇಕಾಗಿಲ್ಲ. ಅದೆಷ್ಟೋ ಮೊಬೈಲ್ ಫೋನ್ ಗಳು ಆನ್ ಲೈನ್ ನಲ್ಲೇ ಬಿಡುಗಡೆಗೊಳ್ಳುತ್ತದೆ ಮತ್ತು ಗ್ರಾಹಕರ ಕೈಗೆಟುಕುತ್ತದೆ. ಆದರೆ ಹೀಗೆ ಆನ್ ಲೈನ್ ನಲ್ಲಿ ಗೆಜೆಟ್ ಗಳನ್ನು ಖರೀದಿಸುವುದು ಎಷ್ಟು ಸೂಕ್ತ? ಈ ಪ್ರಶ್ನೆಯನ್ನು ಆಳವಾಗಿ ಯೋಚಿಸಿದಾಗ ಒಂದಷ್ಟು ಒಳಿತುಗಳು ಮತ್ತು ಕೆಡುಕುಗಳ ವಿಮರ್ಷೆಯನ್ನು ಮಾಡಬಹುದು. ಹಾಗಾದ್ರೆ ಆನ್ ಲೈನ್ ಗೆಜೆಟ್ ಖರೀದಿಯಿಂದ ಲಾಭವೆಷ್ಟು? ನಷ್ಟವೆಷ್ಟು? ಒಳ್ಳೇದೆಷ್ಟು? ಕೆಟ್ಟದೆಷ್ಟು? ಗೆಜೆಟ್ ಖರೀದಿಗೆ ಆನ್ ಲೈನ್ ಶಾಪಿಂಗ್ ಸೂಕ್ತವೋ? ಆಫ್ ಲೈನ್ ಶಾಪಿಂಗ್ ಸೂಕ್ತವೋ? ಹಾಗಾದ್ರೆ ಈ ವಿಚಾರವನ್ನು ಹೋಲಿಸಿ ನೋಡೋಣ. ಮುಂದಿನದ್ದನ್ನು ನೀವೇ ನಿರ್ಧರಿಸಿ.

ಶೇ. 100 ಭರವಸೆ ಇಲ್ಲ

ಶೇ. 100 ಭರವಸೆ ಇಲ್ಲ

ಬೆಲೆಯ ವಿಚಾರದಲ್ಲಿ ಗ್ರಾಹಕರಿಗೆ ಆನ್ ಲೈನ್ ಶಾಪಿಂಗ್ ನಲ್ಲಿ ಲಾಭವಾಗುವುದು ಗ್ಯಾರೆಂಟಿ. ಆದರೆ ಗುಣಮಟ್ಟದ ಬಗ್ಗೆ ಖಂಡಿತ 100 ಶೇಕಡಾ ಭರವಸೆಯನ್ನು ಆನ್ ಲೈನ್ ಶಾಪಿಂಗ್ ನಲ್ಲಿ ನೀಡಲಾಗುವುದಿಲ್ಲ. ಇನ್ನು ಯಾವುದೇ ವೆಬ್ ಸೈಟ್ ಕೂಡ ಕ್ಯಾಷ್ ಆನ್ ಡೆಲಿವರಿ ಸೌಲಭ್ಯಕ್ಕೆ ಹೆಚ್ಚಿನ ಅವಕಾಶವನ್ನು ಅಥವಾ ರಿಯಾಯಿತಿಯನ್ನು ನೀಡುವುದಿಲ್ಲ.

ಮೋಸಕ್ಕೂ ಅವಕಾಶವಿದೆ

ಮೋಸಕ್ಕೂ ಅವಕಾಶವಿದೆ

ಒಂದು ವೇಳೆ ನೀವು ದೊಡ್ಡ ಮೊತ್ತವನ್ನು ಆನ್ ಲೈನ್ ನಲ್ಲಿ ಮೊದಲೇ ಪಾವತಿಸಿ ನಂತರ ನಿಮ್ಮ ಗೆಜೆಟ್ ನಿಮ್ಮ ಕೈಸೇರದೇ ಇದ್ದರೆ ಅದಕ್ಕಾಗಿ ನೀವು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಫಸ್ಟ್ ಹ್ಯಾಂಡ್ ಗೆಜೆಟ್ ನಿಮ್ಮ ಸೇರುವ ಬಗ್ಗೆ ಖಾತ್ರಿ ಬೇಕು. ಯಾಕೆಂದರೆ ಆನ್ ಲೈನ್ ನಲ್ಲಿ ಹೊಸ ಸ್ಮಾರ್ಟ್ ಫೋನ್ ಬುಕ್ ಮಾಡಿದವರಿಗೆ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ ಫೋನ್ ಕೈಸೇರಿದ ಉದಾಹರಣೆಯೂ ಇದೆ. ಭವಿಷ್ಯದಲ್ಲಿ ಸಣ್ಣಪುಟ್ಟ ಗೆಜೆಟ್ ಸಮಸ್ಯೆಗಳಿಗೆ ಆನ್ ಲೈನ್ ಶಾಪಿಂಗ್ ಡೀಲರ್ ಗಳನ್ನುಸಂಪರ್ಕಿಸುವುದು ಮತ್ತು ಪರಿಹಾರ ಕಂಡುಕೊಳ್ಳುವುದು ಬಹಳ ಕಷ್ಟವಾದೀತು.

ಟ್ರಯಲ್‌ಗೆ ಹೆಚ್ಚಿನ ಮೊತ್ತ

ಟ್ರಯಲ್‌ಗೆ ಹೆಚ್ಚಿನ ಮೊತ್ತ

ನೀವು ಖರೀದಿಸುವ ವಸ್ತುವಿನ ಟ್ರಯಲ್ ನೋಡಲು ಇದರಲ್ಲಿ ಅವಕಾಶವಿರುವುದಿಲ್ಲ. ಆದರೆ ಇತ್ತೀಚೆಗೆ ಕೆಲವು ಆನ್ ಲೈನ್ ಸ್ಟೋರ್ ಗಳು ಇದಕ್ಕೂ ಕೂಡ ಅವಕಾಶ ನೀಡಿವೆ. ಆದರೆ ಇದಕ್ಕಾಗಿ ನೀವು ಸ್ವಲ್ಪ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಬಹುದು.

ಆಫ್ ಲೈನ್ ಖರೀದಿ

ಆಫ್ ಲೈನ್ ಖರೀದಿ

ಬೆಲೆಯ ವಿಚಾರದಲ್ಲಿ ಕಾಂಪ್ರಮೈಸ್ ಇಲ್ಲದಿದ್ದರೆ ಅಂದರೆ ಪಾವತಿ ವಿಚಾರದಲ್ಲಿ ನಿಮ್ಮದು ಸಣ್ಣ ಮನಸ್ಥಿತಿ ಆಗದೇ ಇದ್ದಲ್ಲಿ ಆಫ್ ಲೈನ್ ಖರೀದಿ ಗೆಜೆಟ್ ಗೆ ಬಹಳ ಉತ್ತಮ ಆಯ್ಕೆ. ಗೆಜೆಟ್ ಅಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಭವಿಷ್ಯದಲ್ಲಿ ಕಾಣಿಸಬಹುದು. ಆ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಮತ್ತೆ ಆಫ್ ಲೈನ್ ಡೀಲರ್ ಗಳನ್ನು ಸಂಪರ್ಕಿಸುವುದು ಬಹಳ ಸುಲಭ.

ಉಚಿತ ಟ್ರಯಲ್‌ ಅವಕಾಶ

ಉಚಿತ ಟ್ರಯಲ್‌ ಅವಕಾಶ

ಆಫರ್, ರಿಯಾಯಿತಿ ಆಫ್ ಲೈನ್ ಸ್ಟೋರ್ ಗಳಲ್ಲೂ ಕೂಡ ಲಭ್ಯವಿರುತ್ತದೆ. ಅವುಗಳ ಸದುಪಯೋಗ ಪಡೆದುಕೊಳ್ಳುವಲ್ಲಿ ಗ್ರಾಹಕ ಯಶಸ್ವಿಯಾಗಬೇಕು ಅಷ್ಟೇ. ನೀವು ಖರೀದಿಸುವ ವಸ್ತುವನ್ನು ಸೂಕ್ಷ್ಮವಾಗಿ ಪರೀಕ್ಷಿಸಿಕೊಳ್ಳಲು ಅರ್ಥಾತ್ ಟ್ರಯಲ್ ನೋಡಲು ಇದರಲ್ಲಿ ಅವಕಾಶವಿರುತ್ತದೆ. ನಂಬಿಕೆಗೆ ಅರ್ಹ ಆಫ್ ಲೈನ್ ಸ್ಟೋರ್ ಗಳನ್ನು ಆಯ್ದುಕೊಳ್ಳುವುದು ಉತ್ತಮ ಆಯ್ಕೆ.

Best Mobiles in India

English summary
which is the best platform for buy the gadgets? Online or Offline. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X