Wi-Fi ಕನೆಕ್ಷನ್ ನಿಧಾನ ಆಗಿದ್ದರೇ; ಈ ಕ್ರಮಗಳನ್ನು ಫಾಲೋ ಮಾಡಿರಿ!

|

ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರು ಇಂಟರ್ನೆಟ್‌ ಮೂಲಕ ಹಲವು ಆನ್‌ಲೈನ್‌ ಕೆಲಸಗಳನ್ನು ಸ್ಮಾರ್ಟ್‌ಫೋನ್‌ ಮೂಲಕವೇ ಮಾಡಿಮುಗಿಸುತ್ತಾರೆ. ಸ್ಮಾರ್ಟ್‌ಫೋನ್ ಸೇರಿದಂತೆ ದೈನಂದಿನ ಹಲವು ಸ್ಮಾರ್ಟ್‌ ಡಿವೈಸ್‌ಗಳು ಇಂಟರ್ನೆಟ್ ಬೇಡುತ್ತವೆ. ಈ ನಿಟ್ಟಿನಲ್ಲಿ ಬಹಳಷ್ಟು ಜನರು ಮೊಬೈಲ್ ಡೇಟಾ ಜೊತೆಗೆ ವೈ-ಫೈ ಇಂಟರ್ನೆಟ್ ಸಂಪರ್ಕ ಪಡೆಯುತ್ತಾರೆ. ವೈ-ಫೈ ಸಂಪರ್ಕವು ವೇಗದ ಇಂಟರ್ನೆಟ್‌ಗೆ ಪೂರಕವಾಗಿದೆ. ಆದರೆ ಕೆಲವೊಮ್ಮೆ ವೈ-ಫೈ ವೇಗ ಸ್ಲೋ ಆಗಿ ಬಿಡುತ್ತದೆ.

ಇಂಟರ್ನೆಟ್

ಹೌದು, ಅಧಿಕ ಇಂಟರ್ನೆಟ್ ಅಗತ್ಯತೆಯನ್ನು ನಿರ್ವಹಿಸಲು ರೂಟರ್‌ಗಳ ಬಳಕೆ ಹೆಚ್ಚು. ಆದರೆ ಅವುಗಳು ಎಷ್ಟೊ ಸಮಯದಲ್ಲಿ ವೇಗವಾಗಿ ಕೆಲಸ ಮಾಡುವುದೇ ಇಲ್ಲ ಎನ್ನುವ ಮಾತುಗಳನ್ನು ಬಹುತೇಕ ಬಳಕೆದಾರರು ಆಡುತ್ತಾರೆ. ಅನೇಕ ಬಾರಿ ನೆಟವರ್ಕ್ ಸಮಸ್ಯೆಯಿಂದಲೂ ರೂಟರ್ ವೇಗದಲ್ಲಿ ಕಡಿತವಾಗಿರುವ ಸಾಧ್ಯತೆಗಳಿರುತ್ತವೆ. ಆದರೆ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ವಾಯರ್‌ಲೆಸ್‌ ಸಾಧನಗಳ ಬಳಕೆಗೆ ರೂಟರ್ ವೈಫೈ ಬೂಸ್ಟ್ ಹೆಚ್ಚಿಸಬಹುದು. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ರೂಟರ್‌ ಏಂಟಿನಾ ಬಳಕೆ ಉತ್ತಮ

ರೂಟರ್‌ ಏಂಟಿನಾ ಬಳಕೆ ಉತ್ತಮ

ವೈಫೈ ರೊಟರ್‌ಗೆ ಆಂತರಿಕ ಏಂಟಿನಾ ಸೌಲಭ್ಯ ಇದ್ದರೆ. ಅದಕ್ಕೆ ಹೆಚ್ಚುವರಿ ಬಾಹ್ಯ ಏಂಟಿನಾ ವ್ಯವಸ್ಥೆ ಮಾಡಿಕೊಳ್ಳಿ ಇದರಿಂದ ಉತ್ತಮ ನೆಟವರ್ಕ್ ಸೌಲಭ್ಯಕ್ಕೆ ಅನುಕೂಲವಾಗಲಿದೆ. ಆಂತರಿಕ ಏಂಟಿನಾ ರೊಟರ್‌ಗಳು ಉತ್ತಮ ಸಿಗ್ನಲ್ ಕವರೇಜ್ ನೀಡುತ್ತವೆ. ಅದ್ಯಾಗೂ ವೇಗದ ಸಿಗ್ನಲ್‌ ಅಗತ್ಯ ಇದ್ದರೆ ಎಂಟನಾ ಅಳವಡಿಸಿಕೊಳ್ಳಿ.

ಕವರೇಜ್ ವ್ಯಾಪ್ತಿ ಹೆಚ್ಚಿಸಿ

ಕವರೇಜ್ ವ್ಯಾಪ್ತಿ ಹೆಚ್ಚಿಸಿ

ಸಾಮಾನ್ಯವಾಗಿ ರೊಟರ್‌ಗಳಿ ನಿಗದಿತ ಸಿಗ್ನಲ್ ವ್ಯಾಪ್ತಿಯನ್ನು ಹೊಂದಿರುತ್ತವೆ. ಹೆಚ್ಚಿನ ಇಂಟರ್ನೆಟ್ ಅಗತ್ಯದ ಕವರೇಜ್‌ ಬೇಕಿದ್ದರೆ ನಿಗದಿತ ವ್ಯಾಪ್ತಿಯನ್ನು ವಿಸ್ತರಿಸುವುದು ಸೂಕ್ತ. ಇದರಿಂದ ವೈಫೈ ರೊಟರ್ ಸಿಗ್ನಲ್ ವ್ಯಾಪ್ತಿ ಇನ್ನಷ್ಟು ಹೆಚ್ಚಾಗಲಿದೆ.

ಪಾಸ್‌ವರ್ಡ್ ಕಾಯ್ದುಕೊಳ್ಳುವುದು

ಪಾಸ್‌ವರ್ಡ್ ಕಾಯ್ದುಕೊಳ್ಳುವುದು

ವೈಫೈ ರೂಟರ್ ವೇಗ ಹೆಚ್ಚಿಸುವುದು ಬಳಕೆ ಮಾಡುವುದು ಒಂದೆಡೆಯಾದರೇ. ಅದರ ಪಾಸ್‌ವರ್ಡ್ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಯಾರೊಂದಿಗೂ ವೈ ಫೈ ರೂಟರ್ ಪಾಸ್‌ವರ್ಡ್ ಶೇರ್ ಮಾಡಬೇಡಿ.

ರೂಟರ್ ಸಿಗ್ನಲ್ ಸರಿಯಾಗಿರಲಿ

ರೂಟರ್ ಸಿಗ್ನಲ್ ಸರಿಯಾಗಿರಲಿ

ಸರಿಯಾಗಿ ಮತ್ತು ಹೆಚ್ಚು ನೆಟವರ್ಕ್ ಕವರೇಜ್ ಇರುವ ಸ್ಥಳದಲ್ಲಿ ವೈ-ಫೈ ರೂಟರ್ ಇದೆಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿರಿ. ಸರಿಯಾದ ಸಿಗ್ನಲ್ ಇರುವ ಸ್ಥಳ ಗುರುತುಮಾಡಿಕೊಳ್ಳಿ ಮತ್ತು ಸಿಗ್ನಲ್‌ಗಳಿಗೆ ಅಡೆತಡೆಗಳಿದ್ದರೇ ಸರಿ ಮಾಡಿ.

ರೀ ಸ್ಟಾರ್ಟ್ ಮಾಡುವುದು

ರೀ ಸ್ಟಾರ್ಟ್ ಮಾಡುವುದು

ವೈಫೈ ರೊಟರ್‌ಗಳ ವೇಗ ಹೆಚ್ಚಿಸಲು ಅಥವಾ ಸರಿಯಾಗಿ ಸಿಗ್ನಲ್ ಕವರೇಜ್ ಆಗುತ್ತಿಲ್ಲ ಎನ್ನುವುದಾದರೇ ರೂಟರ್ ಒಮ್ಮ ರೀ ಸ್ಟಾರ್ಟ್‌ ಮಾಡಿ. ರೀ ಸ್ಟಾರ್ಟ್‌ ಅಥವಾ ರೀ ಬೂಟ್ ಮಾಡುವುದರಿಂದ ರೂಟರ್ ಕಾರ್ಯವೈಖರಿ ಉತ್ತಮವಾಗಲಿದೆ.

Best Mobiles in India

Read more about:
English summary
WiFi Signal So Bad? Follow These Steps To Improve WIFI Performance.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X