ಮೊಬೈಲ್‌ ಫೋನ್ ಕೆಲಸ ಸ್ಲೋ ಆಗಿದ್ರೇ, ಈ ಟಿಪ್ಸ್‌ ಮೊದಲು ಅನುಸರಿಸಿ!

|

ಸದ್ಯ ಸ್ಮಾರ್ಟ್‌ಫೋನ್‌ ಬಹುಉಪಯುಕ್ತ ಡಿವೈಸ್‌ ಆಗಿದ್ದು, ಬಹುತೇಕ ಕೆಲಸಗಳು ಮೊಬೈಲ್‌ ಮೂಲಕವೇ ನಡೆಯುತ್ತವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಅತ್ಯುತ್ತಮ ಕಾರ್ಯವೈಖರಿಯ ಸ್ಮಾರ್ಟ್‌ಫೋನ್‌ ಹೊಂದಲು ಬಯಸುತ್ತಾರೆ. ಇತ್ತೀಚಿಗಿನ ನೂತನ ಫೋನ್‌ಗಳು ಬಿಗ್ ಡಿಸ್‌ಪ್ಲೇ, ಬಿಗ್ ಬ್ಯಾಟರಿ, ಬೆಸ್ಟ್‌ ಕ್ಯಾಮೆರಾ ಫೀಚರ್ಸ್‌ಗಳ ಜೊತೆಗೆ ವೇಗದ ಪ್ರೊಸೆಸರ್‌ ಸೌಲಭ್ಯ ಹೊಂದಿರುತ್ತವೆ. ಅದಾಗ್ಯೂ ಕೆಲವು ವೇಳೆ ಫೋನ್ ಸ್ಲೋ ಆಗುವ ಸಾಧ್ಯತೆಗಳಿರುತ್ತವೆ.

ಮೊಬೈಲ್‌

ಹೌದು, ಪ್ರಸ್ತುತ ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಅಧಿಕ ಡೇಟಾ ಸಾಮರ್ಥ್ಯದ ಗೇಮ್ಸ್‌, ಥರ್ಡ್‌ಪಾರ್ಟಿ ಮೂಲದ ಅಪ್ಲಿಕೇಶನ್‌ಗಳಂತಹ ಕೆಲವು ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಾರೆ. ಇವುಗಳ ಜೊತೆಗೆ ಸಾಮಾಜಿಕ ತಾಣಗಳು ಮತ್ತು ಮೆಸೆಜಿಂಗ್‌ ಆಪ್‌ಗಳು ಸೇರಿ ಸ್ಮಾರ್ಟ್‌ಫೋನ್‌ ಮೆಮೊರಿ ಭರ್ತಿಯಾಗಿ ಕಾರ್ಯ ಮಂದಗತಿಯಲ್ಲಿ ನಡೆಸುತ್ತದೆ. ಇದಲ್ಲದೇ ಫೋನ್‌ ಸರಿಯಾದ ವೇಳೆ ಅಪ್‌ಡೇಟ್‌ ಮಾಡದಿದ್ದರೂ ಸ್ಲೋ ಆಗುವ ಸಾಧ್ಯತೆಗಳಿರುತ್ತವೆ. ಇವುಗಳನ್ನು ಹೊರತುಪಡಿಸಿ ಇನ್ನು ಹಲವು ಕಾರಣಗಳಿಂದಾಗಿ ಸಹ ಫೋನ್ ತನ್ನ ಕಾರ್ಯ ಸ್ಲೋ ಮಾಡಿರುತ್ತದೆ. ಆದರೆ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಫೋನ್ ವೇಗ ವೃದ್ಧಿಸಬಹುದಾಗಿದೆ. ಆ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಅಪ್‌ಡೇಟ್‌ ಮಾಡುವುದು ಉತ್ತಮ

ಅಪ್‌ಡೇಟ್‌ ಮಾಡುವುದು ಉತ್ತಮ

ಸ್ಮಾರ್ಟ್‌ಫೋನ್‌ನಲ್ಲಿರುವ ಓಎಸ್‌ ಮೇಲಿಂದ ಮೇಲೆ ಅಪ್‌ಡೇಟ್ ಬೇಡುತ್ತಿರುತ್ತದೆ. ಅಪ್‌ಡೇಟ್ ಕೇಳಿದಾಗ ಅಪ್‌ಡೇಟ್ ಮಾಡಿಕೊಳ್ಳಿರಿ ಇದು ಸ್ಮಾರ್ಟ್‌ಫೋನ್ ವೇಗವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ ಜೊತೆಗೆ ಹೊಸ ಫೀಚರ್ಸ್‌ಗಳಿದ್ದರೇ ಅವುಗಳು ಸಹ ಲಭ್ಯವಾಗುತ್ತವೆ. ಈ ಹಂತಗಳನ್ನು ಬಳಿಸಿ ಸೆಟ್ಟಿಂಗ್ > ಸಿಸ್ಟಮ್ > ಅಬೌಂಟ್ ಫೋನ್ > ಸಿಸ್ಟಮ್ ಅಪ್‌ಡೇಟ್.

ಹೋಮ್‌ ಸ್ಕ್ರೀನ್‌ ಕಂಟ್ರೋಲ್

ಹೋಮ್‌ ಸ್ಕ್ರೀನ್‌ ಕಂಟ್ರೋಲ್

ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಹೆಚ್ಚಾಗಿ widgets ಗಳನ್ನು ಮತ್ತು ಲೈವ್ ವಾಲ್‌ಪೇಪರ್‌ಗಳನ್ನು ಬಳಕೆಮಾಡುತ್ತಿರುತ್ತಾರೆ ಆದರೆ ಖಂಡಿತಾವಾಗಿಯೂ ಇದು ಸ್ಮಾರ್ಟ್‌ಫೋನ್ ಬ್ಯಾಟರಿ ಕಬಳಿಸುವ ಜತೆಗೆ ಫೋನ್ ಸ್ಪೀಡ್ ಕುಗ್ಗಿಸುತ್ತದೆ. ಹೀಗಾಗಿ ಅನಗತ್ಯವಾಗಿ ಹೋಮ್‌ ಸ್ಕ್ರೀನ್ನಲ್ಲಿ ಹೆಚ್ಚು widgets ಗಳನ್ನು ಮತ್ತು ಲೈವ್‌ ವಾಲ್‌ಪೇಪರ್‌ಗಳನ್ನು ಬಳಕೆ ಮಾಡಬೇಡಿ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳು

ಬ್ಯಾಕ್‌ಗ್ರೌಂಡ್‌ ಆಪ್ಸ್‌ಗಳು

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ವೇಗದ ಎಸ್‌ಡಿ ಕಾರ್ಡ್

ವೇಗದ ಎಸ್‌ಡಿ ಕಾರ್ಡ್

ಇತ್ತೀಚಿನ ಹೊಸ ಸ್ಮಾರ್ಟ್‌ಫೋನಗಳು ಅಧಿಕ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿರುತ್ತವೆ. ಅದ್ಯಾಗೂ ಕೆಲವು ಬಳಕೆದಾರರು ಹೆಚ್ಚಿನ ಮೆಮೊರಿಗಾಗಿ ಬಾಹ್ಯವಾಗಿ ಎಸ್‌ಡಿ ಕಾರ್ಡ್ ಬಳಕೆ ಮಾಡುತ್ತಾರೆ. ಕಡಿಮೆ ಸ್ಪೀಡಿನ ಎಸ್‌ಡಿ ಕಾರ್ಡ್‌ ಬಳಕೆಯು ಫೋನಿನ ಕಾರ್ಯವೈಖರಿಗೆ ದಕ್ಕೆ ಉಂಡುಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಸ್‌ಡಿ ಕಾರ್ಡ್‌ ಹೈ ಸ್ಪೀಡ್‌ ಸಾಮರ್ಥ್ಯ ಪಡೆದಿರಲಿ.

ಆಟೋ ಸಿಂಕ್

ಆಟೋ ಸಿಂಕ್

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆಟೋ ಸಿಂಕ್ ಆಯ್ಕೆಯು ಸಕ್ರಿಯವಾಗಿರುತ್ತದೆ. ಇದು ಸಹ ಫೋನಿನ ವೇಗದ ಕುಂಠಿತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಬಳಕೆದಾರರು ಆಟೋ ಸಿಂಕ್ ಆಯ್ಕೆಯನ್ನು ಸ್ಟಾಪ್‌ ಮಾಡುವುದು ಒಳಿತು. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ನಲ್ಲಿ ಆಟೋ ಸಿಂಕ್ ಆಯ್ಕೆ ಸ್ಟಾಪ್‌ ಮಾಡಬಹುದಾಗಿದೆ.

Best Mobiles in India

English summary
Every task you perform on a phone leaves a trace. All of these build up as cache in the RAM.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X