ಮೊಬೈಲ್‌ ಅನ್‌ಲಾಕ್‌ ಮಾಡೋಕೆ ಮಾತ್ರವಲ್ಲ ಫಿಂಗರ್‌ಪ್ರಿಂಟ್!!.ಮತ್ತೆ?

ಫಿಂಗರ್‌ಪ್ರಿಂಟ್ ಅನ್ನು ಮೊಬೈಲ್‌ ಅನ್‌ಲಾಕ್‌ ಮಾಡುವುದಕ್ಕೆ ಮಾತ್ರ ಉಪಯೋಗಿಸುತ್ತಿದ್ದಾರೆ.!!

|

ಇತ್ತೀಚಿಗಂತೂ ಫಿಂಗರ್‌ಪ್ರಿಂಟ್ ಫೀಚರ್ ಇರದ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವವರೆ ಇಲ್ಲ. ಯಾರು ನೋಡಿದರೂ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದರಷ್ಟೆ ಆ ಮೊಬೈಲ್‌ಗೆ ಬೆಲೆ ಎಂದು ಹೇಳುತ್ತಾರೆ.!! ಹಾಗಾದರೆ, ಮೊಬೈಲ್‌ ಅನ್‌ಲಾಕ್‌ ಮಾಡುವುದಕ್ಕೆ ಮಾತ್ರ ಇರುವ ಫೀಚರ್‌ಗೆ ಅಷ್ಟೊಂದು ಬೆಲೆಯೇ?

ಹೌದು, ಫಿಂಗರ್‌ಪ್ರಿಂಟ್ ಫೀಚರ್ ಒಂದು ಉತ್ತಮ ಆಯ್ಕೆಯಾಗಿದ್ದು, ಇಂದು ಮೊಬೈಲ್ ಶ್ರೀಮಂತಿಕೆಯನ್ನು ಸಹ ಸೂಚಿಸುತ್ತಿದೆ. ಆದರೆ, ಫಿಂಗರ್‌ಪ್ರಿಂಟ್ ಫೀಚರ್ ಆಯ್ಕೆ ಹೊಂದಿರುವ ಹಲವರು ಮಾತ್ರ ಫಿಂಗರ್‌ಪ್ರಿಂಟ್ ಅನ್ನು ಮೊಬೈಲ್‌ ಅನ್‌ಲಾಕ್‌ ಮಾಡುವುದಕ್ಕೆ ಮಾತ್ರ ಉಪಯೋಗಿಸುತ್ತಿದ್ದಾರೆ.!

ಹಾಗಾಗಿ, ಇಂದಿನ ಲೇಖನದಲ್ಲಿ ಮೊಬೈಲ್‌ ಅನ್‌ಲಾಕ್‌ ಮಾಡುವುದರ ಜೊತೆಯಲ್ಲಿಯೇ ಫಿಂಗರ್‌ಪ್ರಿಂಟ್ ಫೀಚರ್‌ನಿಂದ ನಾವು ನಿರ್ವಹಿಸಬಹುದಾದ ಇನ್ನು ಹೆಚ್ಚಿನ ಕಾರ್ಯಗಳು ಯಾವುವು? ಈ ಆಯ್ಕೆಯಿಂದ ನಮಗೆ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಫಿಂಗರ್‌ಪ್ರಿಂಟ್‌ ಮೂಲಕವೇ ಎಲ್ಲವನ್ನೂ ಮಾಡಿ!!

ಫಿಂಗರ್‌ಪ್ರಿಂಟ್‌ ಮೂಲಕವೇ ಎಲ್ಲವನ್ನೂ ಮಾಡಿ!!

ಒಮ್ಮೆ ಫಿಂಗರ್‌ಪ್ರಿಂಟ್‌ ಅನ್ನು ಒಮ್ಮೆ ಮುಟ್ಟಿದರೆ ಫೇಸ್‌ಬುಕ್‌ ತೆರೆದುಕೊಳ್ಳುವ, ಎರಡು ಬಾರಿ ಮುಟ್ಟಿದರೆ ವಾಟ್ಸ್‌ಆಪ್‌ ತೆರೆದುಕೊಳ್ಳುವ, ಮೂರು ಭಾರಿ ಮುಟ್ಟಿದರೆ ಯೂಟ್ಯೂಬ್ ತೆರೆಯುವಹಾಗೆ ಮಾಡಬೇಕೆ? ಹಾಗಾದ್ರೆ, Fingerprint Gestures ಆಪ್ ಅಳವಡಿಸಿಕೊಳ್ಳಿ ಸಾಕು.!!

ಒಮ್ಮೆಲೇ ಹಲವು ಸೆಲ್ಫಿ ತೆಗೆಯಲು!!

ಒಮ್ಮೆಲೇ ಹಲವು ಸೆಲ್ಫಿ ತೆಗೆಯಲು!!

ಸೆಲ್ಫಿ ತೆಗೆಯುವಾಗ ಫಿಂಗರ್‌ಪ್ರಿಂಟ್‌ ಬಟನ್ ಒತ್ತುತ್ತಿದ್ದರೆ ಒಮ್ಮೆಲೇ ಎಷ್ಟಾದರೂ ಸೆಲ್ಫಿ ತೆಗೆಯಬಹುದಾದ ಆಯ್ಕೆ ನೀಡುವ ಆಯ್ಕೆಯೂ ಸಹ ಫಿಂಗರ್‌ಪ್ರಿಂಟ್‌ ಫೀಚರ್‌ ಮೂಲಕ ಲಭ್ಯವಿದೆ.!! ಇದು ಸೆಲ್ಫಿ ತೆಗೆಯಲು ಪರ್ಫೆಕ್ಟ್ ಆದ ಫೀಲ್ ನೀಡುತ್ತದೆ ಎಂದು ಹೇಳಬಹುದು.!!

ಆಪ್‌ಗೆ ಫಿಂಗರ್‌ಪ್ರಿಂಟ್ ಬೀಗಹಾಕಿ!!

ಆಪ್‌ಗೆ ಫಿಂಗರ್‌ಪ್ರಿಂಟ್ ಬೀಗಹಾಕಿ!!

ಸ್ನೇಹಿತರು ಅಥವಾ ಮನೆಯವರು ನ ಇಮ್ಮ ಮೊಬೈಲ್ ತೆರೆದು ನೋಡುತ್ತಾರೆ ಎನ್ನುವ ಭಯ ಇದ್ದರೆ, ನೀವು ಫಿಂಗರ್‌ಪ್ರಿಂಟ್ ಮೂಲಕ ಅದನ್ನು ಲಾಕ್ ಮಾಡಬಹುದು.!ಇದಕ್ಕಾಗಿ AppLock-Fingerprint Unlock ಎಂಬ ಆಪ್‌ ಲಭ್ಯವಿದ್ದು, ನಿಮ್ಮ ಆಯ್ಕೆಯ ಆಪ್‌ಗಳನ್ನು ಲಾಕ್ ಮಾಡಬಹದು.!! ನಿಮ್ಮ ಬೆರಳಚ್ಚು ಇಲ್ಲದೆ ಆಪ್ ತೆರೆಯಲು ಸಾಧ್ಯವೇ ಇಲ್ಲ.!!

ಕೆಲವೇ ಇಮೇಜ್‌ಗಳನ್ನು ಹೈಡ್‌ ಮಾಡಿ!!

ಕೆಲವೇ ಇಮೇಜ್‌ಗಳನ್ನು ಹೈಡ್‌ ಮಾಡಿ!!

ಗ್ಯಾಲರಿ ಆಪ್‌ ಅನ್ನು ಲಾಕ್ ಮಾಡಿ ನಿಮ್ಮ ಸ್ವಂತ ಚಿತ್ರಗಳನ್ನು ಲಾಕ್ ಮಾಡಬಹುದಾದರೂ ಕೆಲವೇ ಇಮೇಜ್‌ಗಳನ್ನು ಹೈಡ್ ಮಾಡಲು Solo Photo ಎಂಬ ಆಪ ಲಭ್ಯವಿದೆ.! ಇದು ಮೊಬೈಲ್‌ನಲ್ಲಿರುವ ಗ್ಯಾಲರಿ ಆಪ್‌ನಂತೆಯೇ ಇದ್ದು, ಚಿತ್ರಗಳನ್ನು ಬೆರಳಚ್ಚು ಮೂಲಕ ಹೈಡ್ ಮಾಡಿಡಲು ಸಹಾಯಕ!!!

<strong>ಜಿಯೋ ಉಚಿತ ಫೋನ್ ಜಿಯೋಗೆ ಮಾತ್ರ ಸಪೋರ್ಟ್ ಆಗುತ್ತಾ?..ಇಲ್ಲಿದೆ ಉತ್ತರ!!!</strong>ಜಿಯೋ ಉಚಿತ ಫೋನ್ ಜಿಯೋಗೆ ಮಾತ್ರ ಸಪೋರ್ಟ್ ಆಗುತ್ತಾ?..ಇಲ್ಲಿದೆ ಉತ್ತರ!!!

Best Mobiles in India

English summary
You typically use it to unlock your phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X