ಟಾಪ್ ಫೋಟೋ: ಕ್ಯಾಮೆರಾದಲ್ಲಿ ಸೆರೆಯಾದ ದೆವ್ವಗಳ ಇರುವಿಕೆ

By Shwetha
|

ಇಂದಿನ ಆಧುನಿಕ ಯುಗದಲ್ಲಿ ದೆವ್ವ, ಪಿಶಾಚಿ ಮೊದಲಾದವೆಲ್ಲಾ ಕಟ್ಟುಕಥೆ ಸತ್ಯವಲ್ಲ ಎಂಬುದಾಗಿ ಹೇಳುವವರೇ ಅಧಿಕ. ನಾವು ದೆವ್ವವನ್ನು ನೋಡಿರುವೆವು ಅದರ ಅಸ್ತಿತ್ವವನ್ನು ಕಂಡಿರುವೆವು ಎಂದು ಹೇಳಿದರೂ ಅದು ನಿಮ್ಮ ಭ್ರಮೆ ಎಂಬುದಾಗಿಯೇ ಹೇಳುತ್ತಾರೆ. ಆದರೆ ವಿಜ್ಞಾನವು ದೆವ್ವಗಳಿರುತ್ತವೆ ಎಂಬ ಸತ್ಯವನ್ನು ಅಂಗೀಕರಿಸಿದ್ದು ಆತ್ಮಕ್ಕೆ ಸಾವಿಲ್ಲ ಎಂಬ ಪದ್ಧತಿಯಂತೆ ತಮ್ಮ ವಾದವನ್ನು ಅವರು ಮಂಡಿಸುತ್ತಾರೆ.

ಓದಿರಿ: ರಹಸ್ಯವನ್ನೊಳಗೊಂಡಿರುವ ಏಲಿಯನ್ ಲೋಕದ ವಿಚಿತ್ರ ಜೀವಿಗಳು

ಇಂದಿನ ಲೇಖನದಲ್ಲಿ ಸತ್ತವರು ಹೇಗೆ ಫೋಟೋಗ್ರಫಿಯಲ್ಲಿ ಕಂಡುಬಂದಿದ್ದಾರೆ ಎಂಬುದನ್ನು ಕುರಿತ ದೃಷ್ಟಾಂತವನ್ನು ನಾವು ನೀಡಲಿರುವೆವು. ಕ್ಯಾಮೆರಾ ಕಣ್ಣಿನಲ್ಲಿ ಬೀಳದ ಅಂಶಗಳೇ ಇಲ್ಲ ಮಾತಿನಂತೆ ನಮಗೆ ಅಚ್ಚರಿಯನ್ನುಂಟು ಮಾಡುವ ಮಾನವರ ಅಸ್ತಿತ್ವ ಈ ಫೋಟೋಗಳಲ್ಲಿ ಅಡಕವಾಗಿದೆ.

ಓದಿರಿ: ಆಪಲ್‌ 'ಸ್ಪೇಸ್‌ಶಿಪ್‌' ಕ್ಯಾಂಪಸ್ ಬಗೆಗಿನ 12 ಕುತೂಹಲಕಾರಿ ವಿಷಯಗಳು

ಗ್ರೂಫ್ ಫೋಟೋ

ಗ್ರೂಫ್ ಫೋಟೋ

ಈ ಫೋಟೋಗ್ರಫಿಯನ್ನು ರಾಯಲ್ ಏರ್ ಫೋರ್ಸ್ ತೆಗೆದಿರುವಂತಹದ್ದಾಗಿದೆ. ಆದರೆ ಈ ಫೋಟೋದಲ್ಲಿ ಅವರನ್ನು ಬೆಚ್ಚಿ ಬೀಳಿರುವಂತೆ ಮಾಡಿರುವುದು ಎರಡು ದಿನಗಳ ಹಿಂದೆ ಮರಣ ಹೊಂದಿದ ಫ್ರೆಡ್ಡಿ ಜಾಕ್‌ಸನ್ ಫೋಟೋದಲ್ಲಿ ಅವರೊಂದಿಗೆ ನಿಂತಿರುವುದಾಗಿದೆ. ನಿಜಕ್ಕೂ ಇದು ನಡುಗುವಂತೆ ಮಾಡುತ್ತದೆ.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ಲೇಡಿ ಆಫ್ ಬ್ಯಾಚುಲರ್ಸ್ ಗ್ರೂವ್

ಲೇಡಿ ಆಫ್ ಬ್ಯಾಚುಲರ್ಸ್ ಗ್ರೂವ್

ಫೋಟೋಗ್ರಫಿಯಲ್ಲಿ ಕಂಡುಬಂದ ಈ ಹೆಣ್ಣಿನ ಚಿತ್ರ ದೆವ್ವದ್ದಾಗಿದೆ.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ಕೌಬಾಯ್ ಗೋಸ್ಟ್

ಕೌಬಾಯ್ ಗೋಸ್ಟ್

1996 ರಲ್ಲಿ ಐಕ್ ಕ್ಲಾಂಟನ್ ಕೌ ಬಾಯ್ ಗೆಟಪ್‌ನಲ್ಲಿ ಫೋಟೋ ತೆಗೆಸಿಕೊಳ್ಳುವ ಆಸೆಯನ್ನು ಹೊಂದಿ ಅದರಂತೆಯೇ ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಅವರು ತೆಗೆಸಿಕೊಂಡ ಫೋಟೋದಲ್ಲಿ ಕಂಡುಬಂದ ಘಟನೆ ಅವರನ್ನೇ ನಡುಗಿಸಿದೆ. ಹಿಂದೆ ಯಾರೋ ಇದ್ದಂತೆ ಫೋಟೋದಲ್ಲಿ ಕಂಡುಬಂದಿದೆ.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ಮರದಲ್ಲಿ ಆತ್ಮ

ಮರದಲ್ಲಿ ಆತ್ಮ

ಆರ್ ಎಸ್ ಬ್ಲಾನ್ಸ್ 1959 ರಲ್ಲಿ ತೆಗೆದ ಫೋಟೋ ಇದಾಗಿದೆ. ಮರದ ಗೆಲ್ಲುಗಳಲ್ಲಿ ಮಹಿಳೆಯೊಬ್ಬರು ಇದ್ದಂತೆ ಕಂಡುಬಂದಿದ್ದು ಫೋಟೋಶಾಪ್‌ನಲ್ಲಿ ಸೃಷ್ಟಿಸಿದ ಸುಳ್ಳು ಚಿತ್ರವೆಂದೇ ಇದನ್ನು ನಂಬಿದ್ದರು. ಆದರೆ ಈ ಫೋಟೋಗ್ರಫಿ ನೈಜವಾಗಿರುವಂತಹದ್ದು.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ಫೈರ್ ಗರ್ಲ್

ಫೈರ್ ಗರ್ಲ್

ನವೆಂಬರ್ 19, 1995 ರಂದು ಇಂಗ್ಲೇಂಡ್‌ನ ಟೌನ್ ಹಾಲ್ ಬೆಂಕಿಗೆ ಆಹುತಿಯಾಯಿತು. ಅದರಲ್ಲೊಬ್ಬ ಬೆಂಕಿಯನ್ನು ಆರಿಸಿದ ನಂತರ ಫೋಟೋವನ್ನು ತೆಗೆದಿದ್ದು, ಇದು ಅವರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಚಿತ್ರಗಳಲ್ಲಿ ಹುಡುಗಿಯೊಬ್ಬಳು ನಿಂತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ದೆವ್ವ ಕಂಡ ಟ್ಯಾಕ್ಸಿ ಡ್ರೈವರ್

ದೆವ್ವ ಕಂಡ ಟ್ಯಾಕ್ಸಿ ಡ್ರೈವರ್

1959 ರಂದು ಮೇಬಲ್ ಚಿನ್ನರಿ ತನ್ನ ತಾಯಿಯ ಸಮಾಧಿಯನ್ನು ಕಾಣಲು ತೆರಳಿದ್ದಳು. ಈ ಸಮಯದಲ್ಲಿ ತಮ್ಮ ಕಾರಿನಲ್ಲಿ ಕುಳಿತಿದ್ದ ಗಂಡನ ಫೋಟೋವನ್ನು ಆಕೆ ತೆಗೆದಾಗ ಆಕೆಯ ರೋಗಿ ತಾಯಿಯೇ ಕಾರಿನ ಹಿಂಭಾಗದಲ್ಲಿ ಕುಳಿತಿರುವುದನ್ನು ಆಕೆ ಕಾಣುತ್ತಾಳೆ.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ಚರ್ಚ್‌ನಲ್ಲಿ ಸನ್ಯಾಸಿ

ಚರ್ಚ್‌ನಲ್ಲಿ ಸನ್ಯಾಸಿ

1954 ರ ಬೇಸಿಗೆ ಸಮಯದಂದು, ರೆವ್ರೆಂಡ್ ಕೆ.ಎಫ್ ಫೋರ್ಡ್ ತಮ್ಮ ಚರ್ಚ್‌ನ ಫೋಟೋವನ್ನು ತೆಗೆಯುತ್ತಿದ್ದಾಗ ಚಿತ್ರದಲ್ಲಿ ದೆವ್ವವೊಂದು ಪತ್ತೆಯಾಗಿದೆ. ವಿಚಿತ್ರ ಮುಖದಲ್ಲಿ ಸನ್ಯಾಸಿ ರೂಪದಲ್ಲಿ ದೆವ್ವವೊಂದು ಪತ್ತೆಯಾಗಿದೆ.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ಆತನ ಮೆಚ್ಚಿನ ಕುರ್ಚಿ

ಆತನ ಮೆಚ್ಚಿನ ಕುರ್ಚಿ

ಲಾರ್ಡ್ ಕಾಂಬ್ರಿಮಿಯರ್ ಮರಣ ಹೊಂದಿದ ಸಂದರ್ಭದಲ್ಲಿ ಅವರ ಮನೆಯವರು ಕುಟುಂಬ ಸದಸ್ಯರ ಫೋಟೋವನ್ನು ತೆಗೆಯಲು ನಿರ್ಧರಿಸಿದರು. ಆದರೆ ಮರಣ ಹೊಂದಿದ ವ್ಯಕ್ತಿ ತನ್ನ ಮೆಚ್ಚಿನ ಕುರ್ಚಿಯಲ್ಲಿ ಕುಳಿತಿರುವುದು ಕಂಡುಬಂದಿತ್ತು.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ಬ್ರೌನ್ ಲೇಡಿ

ಬ್ರೌನ್ ಲೇಡಿ

ಈ ಫೋಟೋವನ್ನು ಪ್ರಖ್ಯಾತ ಗೋಸ್ಟ್ ಫೋಟೋಗ್ರಫಿ ಎಂದೇ ಕರೆಯಲಾಗಿದೆ. ಮೆಟ್ಟಿಲಿನಲ್ಲಿ ಕಾಣುತ್ತಿರುವ ದೆವ್ವದ ನೆರಳು ಫೋಟೋಗ್ರಫಿಯಲ್ಲಿ ಸೆರೆಸಿಕ್ಕಿದೆ.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

ದೆವ್ವ ಮೆಟ್ಟಿಲನ್ನು ಏರುತ್ತಿರುವ ದೃಶ್ಯ

ದೆವ್ವ ಮೆಟ್ಟಿಲನ್ನು ಏರುತ್ತಿರುವ ದೃಶ್ಯ

1966 ರಲ್ಲಿ ರಾಲ್ಫ್ ಹಾರ್ಡಿ ಗ್ರೀನ್ ವಿಚ್‌ನ ರಾಷ್ಟ್ರೀಯ ಮ್ಯೂಸಿಯಮ್‌ಗೆ ಭೇಟಿ ಕೊಟ್ಟಿದ್ದಾಗ, ಕ್ವೀನ್ಸ್ ಹೌಸ್ ಸೆಕ್ಶನ್‌ನಲ್ಲಿ, ಹಾರ್ಡಿ ಸುಂದರವಾದ ಮೆಟ್ಟಿಲಿನ ಫೋಟೋವನ್ನು ತೆಗೆಯುತ್ತಾರೆ. ಫೋಟೋವನ್ನು ಡೆವಲಪ್ ಮಾಡಿದಾಗ ದಂಗುಬಡಿಸುವಂತಹ ವಿಷಯವೊಂದು ಅದರಲ್ಲಿತ್ತು. ದೆವ್ವವೊಂದು ಮೆಟ್ಟಿಲನ್ನು ಏರುತ್ತಿರುವ ದೃಶ್ಯ ಚಿತ್ರದಲ್ಲಿ ಸೆರೆಯಾಗಿತ್ತು.

ಚಿತ್ರಕೃಪೆ:http://www.mysticfiles.com/10-famous-ghost-pictures-and-their-story/

Most Read Articles
Best Mobiles in India

English summary
Some photographic evidence of ghosts does exist, however. This photographic evidence has stood up to scrutiny and stood the test of time...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more