Subscribe to Gizbot

ಆಪಲ್‌ 'ಸ್ಪೇಸ್‌ಶಿಪ್‌' ಕ್ಯಾಂಪಸ್ ಬಗೆಗಿನ 12 ಕುತೂಹಲಕಾರಿ ವಿಷಯಗಳು

Written By:

ಆಪಲ್‌ ಸ್ಪೇಸ್‌ಶಿಪ್‌ ಕ್ಯಾಂಪಸ್ (ಆಪಲ್‌ ಕ್ಯಾಂಪಸ್‌ 2) ನಿರ್ಮಾಣ ಪ್ರಾರಂಭವಾಗಿ ಈಗಾಗಲೇ 5 ವರ್ಷ ಕಳೆದಿದ್ದು, ಆಪಲ್ ಜಾಗತಿಕವಾಗಿ ವಿಶಾಲ ವಾಣಿಜ್ಯೋದ್ಯಮ ಕಂಪನಿಯಾಗಿದೆ. ಅಮೆರಿಕದಲ್ಲಿ $626 ಶತಕೋಟಿ ಶೇರ್‌ ಅನ್ನು ಹೊಂದಿರುವ ಆಪಲ್‌ ಕಂಪನಿ, ತನ್ನ ಹೊಸ ಸ್ಪೇಸ್‌ಶಿಪ್‌ ಕ್ಯಾಂಪಸ್‌ ಅನ್ನು 2017 ರಲ್ಲಿ ಉದ್ಘಾಟನೆ ಮಾಡಲು ಸಜ್ಜುಗೊಂಡಿದೆ.

ಸಾಮಾನ್ಯವಾಗಿ 'ಸ್ಪೇಸ್‌ ಶಟಲ್‌' ಎಂದೇ ಪ್ರಖ್ಯಾತವಾದ 'ಆಪಲ್ ಕ್ಯಾಂಪಸ್ 2'ಗೆ ಸಂಬಂಧಿಸಿದ 12 ಕುತೂಹಲ ಮಾಹಿತಿಗಳನ್ನು ಟೆಕ್‌ ಪ್ರಿಯರೆಲ್ಲಾ ತಿಳಿಯಲೇ ಬೇಕಿದೆ. ಈ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಪ್ರವಾಸಿ ತಾಣಕ್ಕಿಂತಲೂ ಸುಂದರ ಆಪಲ್‌ ಸ್ಪೇಸ್‌ಶಿಪ್‌ ಕ್ಯಾಂಪಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಪೇಸ್ ಶಟಲ್‌ ಕ್ಯಾಂಪಸ್ ಸ್ಟೀವ್‌ ಜಾಬ್ಸ್‌ ರವರ ನೆಚ್ಚಿನ ಪ್ರಾಜೆಕ್ಟ್

ಸ್ಪೇಸ್ ಶಟಲ್‌ ಕ್ಯಾಂಪಸ್ ಸ್ಟೀವ್‌ ಜಾಬ್ಸ್‌ ರವರ ನೆಚ್ಚಿನ ಪ್ರಾಜೆಕ್ಟ್

ಸ್ಟೀವ್‌ ಜಾಬ್'ರವರು ಆಪಲ್‌ ಕ್ಯಾಂಪಸ್‌ 2.0 ಬಗ್ಗೆ ಅತ್ಯಾಧುನಿಕ ಉದ್ಯೋಗ ಸ್ಥಳ ವಿನ್ಯಾಸವನ್ನು ನಿರ್ಮಾಣ ಮಾಡುವ ಪ್ರಾಜೆಕ್ಟ್‌ ಹೊಂದಿದ್ದರು. ಆದ್ದರಿಂದ ಈ ಅಲ್ಟ್ರಾ ಮಾರ್ಡನ್‌ ಆಪಲ್‌ ಕ್ಯಾಂಪಸ್ ವಿನ್ಯಾಸದ ಬಗ್ಗೆ 'ನಾರ್ಮನ್‌ ಫಾರೆಸ್ಟರ್'ಗೆ ಹೇಳಿದ್ದರು.

ಪ್ರಪಂಚದಲ್ಲೇ ಹೆಚ್ಚು ಬಾಗಿದ ಗಾಜಿನ ಫಲಕಗಳನ್ನು ಕ್ಯಾಂಪಸ್ ಹೊಂದಿದೆ

ಪ್ರಪಂಚದಲ್ಲೇ ಹೆಚ್ಚು ಬಾಗಿದ ಗಾಜಿನ ಫಲಕಗಳನ್ನು ಕ್ಯಾಂಪಸ್ ಹೊಂದಿದೆ

ಆಪಲ್‌ನ ಕ್ಯಾಂಪಸ್‌ 2 ಎರಡು ಬದಿಯಲ್ಲೂ ಸಹ ಬಾಗಿದ ವಿಶಾಲ ಗಾಜಿನ ಫಲಕಗಳನ್ನು ಹೊಂದಿದ್ದು, 3000 ಫಲಕಗಳನ್ನು ಹೊಂದಿದೆ. ಯಾವ ಕಡೆ ನೋಡಿದರು ಸಹ ಉದ್ಯೋಗಿಗಳು ಹಸಿರಿನ ವಾತಾವರಣ ನೋಡಬಹುದಾಗಿದೆ.

ಅಂಡರ್‌ಗ್ರೌಂಡ್‌ ಆಡಿಟೋರಿಯಂನಲ್ಲಿ 1000 ಉದ್ಯೋಗಿಗಳಿಗೆ ಮನೆಗಳನ್ನು ಹೊಂದಿದೆ

ಅಂಡರ್‌ಗ್ರೌಂಡ್‌ ಆಡಿಟೋರಿಯಂನಲ್ಲಿ 1000 ಉದ್ಯೋಗಿಗಳಿಗೆ ಮನೆಗಳನ್ನು ಹೊಂದಿದೆ

ಸ್ಪೇಸ್‌ ಶಟಲ್‌ ಕ್ಯಾಂಪಸ್‌ ದೊಡ್ಡ ಸಭಾಂಗಣ ಹೊಂದಿದ್ದು, ಅಲ್ಲಿಯೇ 1000 ಉದ್ಯೋಗಿಗಳಿಗೆ ವಾಸಸ್ಥಳ ಹೊಂದಿದೆ. 2017 ರ ವರ್ಲ್ಡ್‌ ವೈಡ್‌ ಡೆವಲಪರ್‌ ಕಾನ್ಫರೆನ್ಸ್‌ ಈ ಸಭಾಂಗಣದಲ್ಲೇ ನಡೆಯಲಿದೆ.

ಶೇಕಡ 80 ರಷ್ಟು ಕ್ಯಾಂಪಸ್‌ ಪ್ರದೇಶ ಹಸಿರು

ಶೇಕಡ 80 ರಷ್ಟು ಕ್ಯಾಂಪಸ್‌ ಪ್ರದೇಶ ಹಸಿರು

ಆಪಲ್‌ ಕ್ಯಾಂಪಸ್ ವಿಶಾಲ ಪ್ರದೇಶದಲ್ಲಿ 7000 ಸಸಿಗಳನ್ನು ನೆಡೆಸಲಾಗಿದ್ದು, ಶೇಕಡ 80 ರಷ್ಟು ಹಸಿರು ಯುಕ್ತವಾಗಿದೆ ಎಂದು 'ಡಾನ್‌ ವಿಸೆನ್ಹಂಟ್‌' ಹೇಳಿದ್ದಾರೆ.

ನವೀಕರಿಸಬಹುದಾದ ಮೂಲಗಳ ವಿದ್ಯುತ್‌ ಪವರ್‌

ನವೀಕರಿಸಬಹುದಾದ ಮೂಲಗಳ ವಿದ್ಯುತ್‌ ಪವರ್‌

ಆಪಲ್‌ ಸ್ಪೇಸ್‌ ಶಟಲ್‌ ಜೈವಿಕ ಇಂಧನ ಮತ್ತು 65,000 ಸ್ಕ್ವೇರ್‌ ಮೀಟರ್‌ ಸೋಲಾರ್‌ ಪ್ಯಾನೆಲ್‌ನಿಂದ ವಿದ್ಯುತ್‌ ಪಡೆಯಲಿದೆ.

ಕ್ಯಾಂಪಸ್ 3 ತ್ರೈಮಾಸಿಕ ಯಾವುದೇ ಹೀಟಿಂಗ್‌ ಮತ್ತು ಏರ್‌ ಕಂಡೀಷನ್‌ ಬೇಡುವುದಿಲ್ಲ

ಕ್ಯಾಂಪಸ್ 3 ತ್ರೈಮಾಸಿಕ ಯಾವುದೇ ಹೀಟಿಂಗ್‌ ಮತ್ತು ಏರ್‌ ಕಂಡೀಷನ್‌ ಬೇಡುವುದಿಲ್ಲ

ಆಪಲ್‌ ಕ್ಯಾಂಪಸ್ 2 ಕ್ಯಾಲಿಪೋರ್ನಿಯಾ ನೈಸರ್ಗಿಕ ವಾತಾವರಣ ಮತ್ತು 4,300 ಟೊಳ್ಳು ಕೇಂದ್ರಿತ ಕ್ರಾಂಕ್ರೀಟ್‌ ಸ್ಲ್ಯಾಬ್ಸ್‌ ಹೊಂದಿರುವುದರಿಂದ ಸ್ಪೇಸ್‌ ಶಟಲ್‌ ಅನ್ನು ಕೂಲ್‌ ಆಗಿ ಇಡುತ್ತದೆ.

6,000 ಹೆಕ್ಟೋಲೀಟರ್ ನೀರು ದಿನನಿತ್ಯ ಬೇಕು

6,000 ಹೆಕ್ಟೋಲೀಟರ್ ನೀರು ದಿನನಿತ್ಯ ಬೇಕು

ಸ್ಯಾನ್‌ ಜೋಶ್‌ ಮರ್ಕ್ಯೂರಿ ನ್ಯೂಸ್ ವರದಿ ಪ್ರಕಾರ ಆಪಲ್‌ ಕ್ಯಾಂಪಸ್‌ಗೆ ದಿನನಿತ್ಯ 157,000 ಗ್ಯಾಲನ್ಸ್‌ ನೀರು ಬೇಕಾಗಿದೆ. ವಿಶೇಷ ಅಂದ್ರೆ ಕಂಪನಿ ಮರುಬಳಕೆಯ ನೀರನ್ನು ಬಳಸಿಕೊಳ್ಳುತ್ತದೆ.

ಉದ್ಯೋಗಿಗಳು ಕ್ಯಾಂಪಸ್‌ನ ಸುತ್ತಾ ಬೈಸಿಕಲ್‌ನಲ್ಲಿ ಓಡಾಡುತ್ತಾರೆ

ಉದ್ಯೋಗಿಗಳು ಕ್ಯಾಂಪಸ್‌ನ ಸುತ್ತಾ ಬೈಸಿಕಲ್‌ನಲ್ಲಿ ಓಡಾಡುತ್ತಾರೆ

ಆಪಲ್‌ ಉದ್ಯೋಗಿಗಳು ಕಂಪನಿ ನೀಡಿರುವ 1000 ಬೈಕ್‌ಗಳನ್ನು ಒಂದು ಕಾರ್ನರ್‌ನಿಂದ ಇನ್ನೊಂದು ಕಾರ್ನರ್‌ಗೆ ಹೋಗಲು ಬಳಸುತ್ತಾರೆ.

ಆಪಲ್‌ ಪ್ರಾಜೆಕ್ಟ್‌ ವೆಚ್ಚ ಎಷ್ಟು ಗೊತ್ತೇ?

ಆಪಲ್‌ ಪ್ರಾಜೆಕ್ಟ್‌ ವೆಚ್ಚ ಎಷ್ಟು ಗೊತ್ತೇ?

ಆಪಲ್‌ ಪ್ರಾಜೆಕ್ಟ್‌ ವೆಚ್ಚ $5 ಶತಕೋಟಿಯಾಗಿದೆ.

 11,000 ಸಾವಿರ ಕಾರುಗಳನ್ನು ನಿಲ್ಲಿಸಲು ಅಂಡರ್‌ಗ್ರೌಂಡ್‌

11,000 ಸಾವಿರ ಕಾರುಗಳನ್ನು ನಿಲ್ಲಿಸಲು ಅಂಡರ್‌ಗ್ರೌಂಡ್‌

11,000 ಸಾವಿರ ಕಾರುಗಳನ್ನು ನಿಲ್ಲಿಸಲು ಅಗಾಧ ಅಂಡರ್‌ಗ್ರೌಂಡ್‌ ಕಾರುಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಆಪಲ್‌ ಹೊಸ ಕ್ಯಾಂಪಸ್ ಹೊಂದಿದೆ.

ಬೃಹತ್‌ ದೊಡ್ಡ ಆಸ್ಪತ್ರೆ

ಬೃಹತ್‌ ದೊಡ್ಡ ಆಸ್ಪತ್ರೆ

ಆಪಲ್ ತನ್ನ 20,000 ಉದ್ಯೋಗಿಗಳ ಉತ್ತಮ ಆರೋಗ್ಯಕ್ಕಾಗಿ ಬೃಹತ್‌ ದೊಡ್ಡ ಆಸ್ಪತ್ರೆ 'ಸ್ಪಾ' ಹೊಂದಿದ್ದು, ಅದರ ನಿರ್ಮಾಣಕ್ಕಾಗಿ $70 ದಶಲಕ್ಷ ವೆಚ್ಚ ಮಾಡಿದೆ.

rn

ಫುಟ್‌ಬಾಲ್‌ ಆಟದ ಮೈದಾನದಷ್ಟು ವಿಶಾಲ ಕೆಫೆಟೇರಿಯಾ

5500 ಚದರ ಮೀಟರ್‌ ಅಗಲವಾದ, ಒಮ್ಮೆಯೇ 21,000 ಉದ್ಯೋಗಿಗಳು ಕೂರಬಹುದಾದ ಕೆಫೆಟೇರಿಯಾ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
12 Mind Blowing Facts About The New Apple Campus You Never Knew Before. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot