ಸ್ಮಾರ್ಟ್‌ಫೋನ್‌ನಿಂದ ಉಂಟಾದ 10 ಹೃದಯವಿದ್ರಾವಕ ಮರಣಗಳು

By Shwetha
|

ನಮ್ಮ ಫೋನ್ಗಳನ್ನು ನಾವು ಅತಿ ಹೆಚ್ಚು ಪ್ರೀತಿಸುತ್ತೇವೆ ಮತ್ತು ನಾವು ಅದನ್ನು ಬಿಟ್ಟು ಇರದೇ ಇರುವ ಸಮಯವೇ ಇಲ್ಲ ಎಂದೇ ಹೇಳಬಹುದು. ಆದರೆ ಇದೇ ಫೋನ್‌ಗಳು ನಿಮ್ಮ ಪ್ರಾಣವನ್ನು ಬಲಿತೆಗೆದುಕೊಳ್ಳುವಷ್ಟರ ಮಟ್ಟಿಗೆ ಇವುಗಳು ಹಾನಿಕಾರಕ ಎಂಬುದನ್ನು ಇಂದು ನೀವು ತಿಳಿಯಲೇಬೇಕು.

ಇದನ್ನೂ ಓದಿ: ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!

ನಮಗೆ ತಿಳಿದೋ ತಿಳಿಯದೆಯೋ ನಾವು ನಮ್ಮ ಫೋನ್‌ನಲ್ಲಿ ನಡೆಸುವಂತಹ ಚಟುವಟಿಕೆಗಳಿಂದ ನಾವೇ ನಷ್ಟವನ್ನು ಅನುಭವಿಸುತ್ತೇವೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ . ಫೋನ್ ಅನ್ನು ಹೇಗೆ ಯಾವ ರೀತಿಯಲ್ಲಿ ಎಲ್ಲಿ ಬಳಸಬೇಕು ಎಂಬುದರ ಕುರಿತಾದ ಅತ್ಯಮೂಲ್ಯ ಮಾಹಿತಿಯನ್ನು ಈ ಲೇಖನ ನಿಮಗೆ ನೀಡುವುದರಲ್ಲಿ ಸಂಶಯವೇ ಇಲ್ಲ.

#1

#1

2015 ರಲ್ಲಿ ಟೆಕ್ಸಾಸ್‌ನಲ್ಲಿ ನಡೆದ ಘಟನೆ ಇದಾಗಿದ್ದು ತಮ್ಮ ಫೋನ್ ನೋಡುವುದರಲ್ಲಿ ಬ್ಯುಸಿಯಾಗಿದ್ದಾಗ ತಂದೆ ತಾಯಂದಿರುವ ಈಜಲು ಬಾರದೇ ಇದ್ದ ತಮ್ಮ ಮಕ್ಕಳನ್ನು ನೀರಿನಲ್ಲಿ ಮುಳುಗಿಸಿದ ಹೃದಯ ವಿದ್ರಾವಕ ಘಟನೆ ಇದಾಗಿದೆ. ಈಜುಕೊಳದಲ್ಲಿ ತಮ್ಮ ಮಕ್ಕಳು ಈಜುತ್ತಾರೆ ಎಂಬ ನಂಬಿಕೆಯಿಂದ ಹೆತ್ತವರು ನಿರ್ಲಕ್ಷ್ಯವನ್ನು ತಳೆದಿದ್ದಾರೆ.

#2

#2

2010 ರಲ್ಲಿ ಗೋಪಾಲ್ ಗುಜ್ಜಾರ್ ಎಂಬ ವ್ಯಕ್ತಿ ತಮ್ಮ ಹೊಲದಲ್ಲಿದ್ದಾಗ ನೋಕಿಯಾ ಫೋನ್ ಸ್ಫೋಟಗೊಂಡು ಕಿವಿ, ತಲೆಯಭಾಗ, ಕುತ್ತಿಗೆ ಮತ್ತು ಮುಖದ ಮೇಲೆ ಗಾಯಗಳನ್ನು ಹೊಂದಿದ್ದಾರೆ. ನೋಕಿಯಾ ಫೋನ್ ನಕಲಿ ಬ್ಯಾಟರಿಯನ್ನು ಹೊಂದಿದ್ದೇ ಇದಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

#3

#3

ರೊಮಾನಿಯಾದ ಅನ್ನಾ ಉರ್ಸು 18 ರ ಹರೆಯದ ಹುಡುಗಿ ಸೆಲ್ಫಿ ಹೆಸರಿನಲ್ಲೇ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಟ್ರೈನ್ ಮೇಲ್ಭಾಗದಲ್ಲಿ ಹತ್ತಿ ಸೆಲ್ಫಿ ತೆಗೆಯುವ ಮರಣ ಆಟವನ್ನು ಇವರ ಗೆಳೆಯರು ಮತ್ತು ಈಕೆ ನಿರ್ಧರಿಸಿದ್ದಾಳೆ. ಆಕೆ ಟ್ರೈನ್‌ನ ಮೇಲ್ಭಾಗದಲ್ಲಿರುವ ವಯರ್ ಅನ್ನು ಹಿಡಿದುಕೊಂಡು ಸೆಲ್ಫಿ ತೆಗೆಯುವ ಉತ್ಸಾಹದಲ್ಲಿರುವಾಗ ಆ ವಯರ್ ಹೈ ವೋಲ್ಟೇಜ್‌ನದ್ದಾಗಿತ್ತು ಅಂತೆಯೇ ವಿದ್ಯುತ್‌ನ ದಿಢೀರ್ ದಾಳಿಗೆ ಉರ್ಸು ಬಲಿಯಾಗಿದ್ದಾಳೆ.

#4

#4

ವೆಂಡೆ ರೋಬಾಲ್ಟ್ ತಮ್ಮ ಮಗಳೊಂದಿಗೆ ಇರುವ ಮನೆ ಬೆಂಕಿಗೆ ಆಹುತಿಯಾಗಿದ್ದಾಗ ಒಳಗಡೆ ಇಟ್ಟಿದ್ದ ಫೋನ್ ಅನ್ನು ಸಂರಕ್ಷಿಸುವ ಭರದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡ ನತದೃಷ್ಟೆಯಾಗಿದ್ದಾಳೆ.

#5

#5

ಟ್ರ್ಯಾಶ್ ಕಂಪಾಕ್ಟರ್‌ನಲ್ಲಿ ಬಿದ್ದಿದ್ದ ಫೋನ್ ಅನ್ನು ಪುನಃ ಪಡೆದುಕೊಳ್ಳುವ ನಿಟ್ಟಿನಲ್ಲಿ ರೋಗರ್ ಮಿರ್ರೊ ಅದರೊಳಗೆ ಹೋಗಿದ್ದಾನೆ. ಆದರೆ ಮೂರು ಗಂಟೆಗಳ ನಂತರ ಕೂಡ ಮಿರ್ರೊ ಅಲ್ಲಿಂದ ಬರದೇ ಇದ್ದುದನ್ನು ನೋಡಿ ಆತನ ಪತ್ನಿ ಪೋಲೀಸ್ ದೂರು ನೀಡಿದ್ದಾಳೆ. ಆದರೆ ಪೋಲೀಸ್ ಬಂದು ಟ್ರ್ಯಾಶ್ ಕಂಪಾಕ್ಟರ್‌ನಲ್ಲಿ ಹುಡುಕಾಡಿದಾಗ ಆತನ ಶವ ಪತ್ತೆಯಾಗಿದೆ.

#6

#6

ಚೀನಾದಲ್ಲಿ ಮಹಿಳೆಯೊಬ್ಬಳು ರಸ್ತೆದಾಟುತ್ತಿದ್ದಾಗ ತನ್ನ ಫೋನ್ ನೋಡಿ ಮರಣವನ್ನು ಬಳಸೆಳೆದುಕೊಂಡಿದ್ದಾಳೆ. ಆಕೆ ವಾಹನ ದಟ್ಟಣೆಗೆ ಗಮನವನ್ನು ನೀಡದೇ ಫೋನ್ ನೋಡುತ್ತಿದ್ದುದು ಈ ಅಪಘಾವುಂಟಾಗಲು ಕಾರಣವಾಗಿದೆ

#7

#7

ಐಲನ್ ತನ್ನ ಐಫೋನ್ ಅನ್ನು ಚಾರ್ಜ್ ಮಾಡುತ್ತಿದ್ದಾಗ ಫೋನ್ ಸ್ವೀಕರಿಸಿ ಶಾಕ್ ತಗುಲಿ ಭೀಕರವಾಗಿ ಮರಣವನ್ನು ಹೊಂದಿದ್ದಾಳೆ. ಆದ್ದರಿಂದ ನಿಮ್ಮ ಫೋನ್ ಚಾರ್ಜ್ ಆಗುತ್ತಿರುವ ಸಂದರ್ಭದಲ್ಲಿ ಫೋನ್ ಕರೆ ಮಾಡುವುದು, ಸ್ವೀಕರಿಸುವುದು, ಹಾಡು ಕೇಳುವುದು, ಗೇಮ್ ಆಡುವುದು ಮೊದಲಾದ ಕೆಲಸಗಳನ್ನು ಮಾಡದಿರಿ.

#8

#8

19 ರ ಹರೆಯದ ಮಿಸೌರಿಯ ವ್ಯಕ್ತಿಯೊಬ್ಬ ಸಂದೇಶ ರವಾನೆ ಮಾಡುತ್ತಾ ಟ್ರಕ್ ಚಾಲನೆ ಮಾಡಿದ್ದರಿಂದಾಗಿ ಹಿಂದಿದ್ದ ಸ್ಕೂಲ್ ಬಸ್‌ಗೆ ಅಪಘಾತವನ್ನುಂಟು ಮಾಡಿ ಇಬ್ಬರು ಮಕ್ಕಳ ಸಾವಿಗೆ ಕಾರಣನಾಗಿದ್ದು 35 ಜನರು ಗಾಯಗೊಳ್ಳುವ ಪರಿಸ್ಥಿತಿಯನ್ನು ಏರ್ಪಡಿಸಿದ್ದಾನೆ. ಸ್ವತಃ ಈತ ಕೂಡ ಮರಣವನ್ನು ಹೊಂದಿದ್ದಾನೆ.

#9

#9

23 ಹರೆಯದ ಅಲ್‌ಬಾಮಾದ ವ್ಯಕ್ತಿಯ ಐಫೋನ್ ಕಳುವಾಗಿದ್ದು ಈತ ಐಫೋನ್‌ನಲ್ಲಿದ್ದ ಟ್ರ್ಯಾಕಿಂಗ್ ಅಪ್ಲಿಕೇಶನ್ ಬಳಸಿ ಡಿವೈಸ್ ಅನ್ನು ಪತ್ತೆಹಚ್ಚಿದ್ದಾನೆ. ಆದರೆ ಫೋನ್ ಅನ್ನು ಕದ್ದ ವ್ಯಕ್ತಿ ಈತನನ್ನು ಕೊಂದಿದ್ದಾನೆ. ಆದ್ದರಿಂದ ನಿಮ್ಮ ಫೋನ್ ಅನ್ನು ಪತ್ತೆಮಾಡಿದ ನಂತರ ಸ್ಥಳೀಯ ಪೋಲೀಸರಿಗೆ ಮಾಹಿತಿಯನ್ನು ನೀಡಿ ನಂತರವೇ ಕಾರ್ಯಪ್ರವೃತ್ತರಾಗಿ.

#10

#10

ಕ್ರಿಸ್‌ಮಸ್ ದಿನದಂದು, ಸ್ಯಾನ್ ಡಿಗೋದ ಸೂರ್ಯಾಸ್ತವನ್ನು ಸೆರೆಹಿಡಿಯಲು ಧಾವಿಸಿದ್ದ ವ್ಯಕ್ತಿ ಕ್ಲಿಪ್ಸ್‌ನ ಸುರಕ್ಷಿತ ವಲಯವನ್ನುದಾಟಿ ಫೋಟೋ ತೆಗೆಯಲು ಹೋಗಿ ಅಸ್ತಂತನಾಗಿದ್ದಾನೆ. 18 ಮೀಟರ್‌ಗಳಿಂದ ಕಾಲು ಜಾರಿ ಈತ ಕೆಳಕ್ಕೆ ಬಿದಿದ್ದಾನೆ ಎಂಬುದಾಗಿ ಫೋಲೀಸ್ ಮೂಲಗಳು ತಿಳಿಸಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಯಸ್ಸು ಹದಿನೈದಾದರೂ ಸಾಧನೆಗೆ ಹ್ಯಾಟ್ಸಾಫ್ ಅನ್ನಲೇಬೇಕು

ಸೂರ್ಯ, ನಕ್ಷತ್ರಗಳು ಮನುಕುಲದ ಬದ್ಧ ವೈರಿಗಳಾಗಲಿವೆಯೇ?

ಎಚ್ಚರ ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಲೂಬಹುದು!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಹೆಚ್ಚಿನ ಲೇಖನಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Below are 10 of the most bizarre ways that people have died due to their favorite electronic devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more