ಇಂಟರ್ನೆಟ್ ವೈರಲ್ ಆದ ವಿಶ್ವದ ಟಾಪ್ ಚರ್ಚಿತ ಸುದ್ದಿಗಳು

By Shwetha

  ಒಂದು ಕಾಲವಿತ್ತು ಆ ಸಮಯದಲ್ಲಿ ಮನುಷ್ಯ ತನ್ನ ನಂಬಿಕೆಗಳನ್ನು ಮುದ್ರಿತವಾಗಿದ್ದ ಪುಸ್ತಕದಲ್ಲಿ ಇಡುತ್ತಿದ್ದ. ಆದರೀಗ ಕಾಲ ಬದಲಾಗಿದೆ ಎಲ್ಲವೂ ಇಂಟರ್ನೆಟ್ ಮಯವಾಗಿದೆ. ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ತಾಣಗಳನ್ನೇ ಆಶ್ರಯಿಸಿಕೊಂಡಿದ್ದು ಇದರಲ್ಲಿ ಬರುವ ಸುದ್ದಿಗಳನ್ನು ನಿಜವೆಂದೇ ನಂಬುತ್ತಿದ್ದಾರೆ.

  ಇಂಟರ್ನೆಟ್‌ನಲ್ಲಿ ಹರಿದಾಡುವ ಈ ಸುದ್ದಿಗಳು ಸತ್ಯವಾಗಿರದೇ ಇದ್ದರೂ ನಮ್ಮನ್ನು ಒಮ್ಮೊಮ್ಮೆ ಇದು ನಂಬಿ ಬಿಡುವಂತೆ ಮಾಡುತ್ತದೆ. ಜಾಲತಾಣದಲ್ಲಿ ಬಂದ ಸುದ್ದಿಯಲ್ಲವೇ? ಇದು ಸಾಕಷ್ಟು ಸತ್ಯತೆಗಳನ್ನು ಒಳಗೊಂಡಿರಬಹುದು ಎಂಬುದೇ ನಮ್ಮನ್ನು ಇದು ನಂಬುವಂತೆ ಮಾಡುತ್ತದೆ. ಹಾಗಿದ್ದರೆ ಇಂಟರ್ನೆಟ್‌ನಲ್ಲಿ ಕಥೆಗಳಾಗಿ ಹರಿದಾಡುತ್ತಿರುವ ಸತ್ಯ ಸುದ್ದಿಗಳನ್ನೇ ಇಂದಿನ ಲೇಖನದಲ್ಲಿ ನೀಡುತ್ತಿದ್ದು ಅದು ಹೇಗಿದೆ ಎಂಬುದನ್ನು ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ಫೇಸ್‌ಬುಕ್‌ನಲ್ಲಿ ಇಂತಹ ಫೋಸ್ಟ್‌ಗಳು ಹರಿದಾಡುತ್ತಿರುವುದನ್ನು ನೀವು ಗಮನಿಸಿರಬಹುದು. ನಿಮ್ಮ ಒಂದು ಲೈಕ್ ಅಥವಾ ಶೇರ್‌ನಿಂದ ಬಡವರಿಗೆ ನಿರಾಶ್ರಿತರಿಗೆ ಸಹಾಯ ಧನ ದೊರಕುತ್ತದೆ ಎಂಬುದಾಗಿ. ನಿಜವಾಗಿಯೂ ಇದು ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ನೋಡಿದರೆ ಇಲ್ಲ ಎಂಬುದೇ ಉತ್ತರವಾಗಿರಬಹುದು. ಫೇಸ್‌ಬುಕ್ ಯಾವುದೇ ಹಣವನ್ನು ಸಂಗ್ರಹಿಸುವುದಿಲ್ಲ ಮತ್ತು ಶೇರ್ ಹಾಗೂ ಲೈಕ್ ಬಟನ್‌ಗಳು ಈ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಕೂಡ.

  #2

  ಮಲೇಶಿಯನ್ ಸಾಗರ ತೀರದಲ್ಲಿ ಮತ್ಸ್ಯಕನ್ಯೆಯ ಸತ್ತ ಶರೀರವೊಂದು ದೊರಕಿರುವುದಾಗಿ ಸುದ್ದಿಯಾಗಿದೆ. ಈ ಅಸ್ಥಿಪಂಜರವನ್ನು ಪುರಾತತ್ತ್ವಜ್ಞರು ಪರಿಶೀಲಿಸಿದ್ದು ಇದು ನಿಜ ಎಂಬುದಾಗಿ ದೃಢೀಕರಿಸುವಷ್ಟರ ಮಟ್ಟಿಗೆ ಇಂಟರ್ನೆಟ್‌ನಲ್ಲಿ ಸುದ್ದಿಯಾಗಿದೆ. ಇದು ಕೂಡ ಕಟ್ಟು ಕಥೆಯಾಗಿರಲೂಬಹುದು.

  #3

  ಈ ಚಿತ್ರದಲ್ಲಿ ತೋರಿಸಿರುವಂತೆ, ಬ್ರೆಜಿಲ್‌ನ ವ್ಯಕ್ತಿಯೊಬ್ಬ ನಾಯಿಯ ಮುಖವನ್ನಿರಿಸಿಕೊಂಡು ತನ್ನ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದಾನೆ. ಬ್ರೆಜಿಲ್‌ನ ಕಲಾವಿದ ರೊಡ್ರಿಗೊ ತನ್ನದೇ ತಲೆಗೆ ನಾಯಿಯ ಮುಖ ಮತ್ತು ತಲೆಯನ್ನಿರಿಸಿಕೊಂಡು ಬರೆದುಕೊಂಡ ಚಿತ್ರ ಇದಾಗಿದೆ.

  #4

  ನ್ಯೂಕ್ಲಿಯರ್ ಪವರ್ ಪ್ಲಾಂಟ್ ಹೊಂದಿರುವ ಜಪಾನ್‌ನಲ್ಲಿ ಕಂಡುಬಂದ ದೈತ್ಯ ಜಲಜೀವಿಯ ಚಿತ್ರ ಇದಾಗಿದೆ. ಇದರ ಗಾತ್ರ 160 ಫೀಟ್ ಆಗಿದೆ. ಸ್ಥಳೀಯ ಸೈಟ್‌ನಲ್ಲಿ ಈ ಸುದ್ದಿ ವೈರಲ್ ಆಗಿದೆ.

  #5

  ಚಲಿಸುತ್ತಿರುವ ಕಾರಿನತ್ತ ಮೊಟ್ಟೆಯನ್ನು ಎಸೆದಾಗ ಕಾರು ಚಾಲಕ ಹಠಾತ್ತನೇ ಕಾರನ್ನು ನಿಲ್ಲಿಸುತ್ತಾನೆ ಮತ್ತು ಸ್ವಲ್ಪ ಸಮಯದವರೆಗೆ ಆತನಿಗೆ ಏನೂ ಅರಿವಾಗಿರುವುದಿಲ್ಲ. ಈ ಸಮಯದಲ್ಲೇ ಕಾರುಗಳ್ಳರು ಕಾರನ್ನು ಅಪಹರಣ ಮಾಡಲು ಯತ್ನಿಸುತ್ತಾರೆ. ಇನ್ನೊಂದು ಪ್ರಕರಣವೆಂಬಂತೆ ಅಳುತ್ತಿರುವ ಮಕ್ಕಳು ಚಾಲಕರ ಬಳಿ ಬಂದು ಸಹಾಯವನ್ನು ಕೇಳುವುದು ಮತ್ತು ಹಿಂದಿನಿಂದ ಕಾರುಗಳ್ಳರು ಕಾರನ್ನು ಅಪಹರಿಸುವುದು. ಇಂತಹ ಘಟನಾವಳಿಗಳು ಇಂಟರ್ನೆಟ್‌ನಲ್ಲಿ ಸುದ್ದಿಯಾಗಿದೆ. ಆದರೆ ಇದು ಶುದ್ಧ ಸುಳ್ಳು ಎಂಬುದನ್ನು ನಾವು ನಂಬಲೇಬೇಕು.

  #6

  ಪ್ರಾಣಿ ಕ್ರಿಮಿನಾಶಕವನ್ನು ಬಳಸಿ ಮಹಿಳೆಯ ಪಾನೀಯದಲ್ಲಿ ಬೆರೆಸಿ ಆಕೆಯನ್ನು ರೇಪ್ ಮಾಡುವುದು ಮತ್ತು ಮರುದಿನ ಬೆಳಗ್ಗೆ ಆಕೆಗೆ ತನ್ನ ಮೇಲೆ ಯಾರು ರೇಪ್ ಮಾಡಿದ್ದಾರೆ ಎಂಬುದು ಅರಿವೇ ಇರುವುದಿಲ್ಲವಂತೆ. ಈ ಡ್ರಗ್ ಹೆಸರು ಪ್ರೊಗೆಸ್ಟ್ರೆಕ್ಸ್ ಎಂದಾಗಿದ್ದು ಆಕೆಗೆ ತನ್ನ ಮೇಲೆ ನಡೆದಿರುವ ಅತ್ಯಾಚಾರವನ್ನೇ ಇದು ಮರೆಸಿ ಬಿಡುತ್ತದೆ ಎಂದಾಗಿದೆ. ಆದರೆ ಇದು ನಿಜವೋ ಸುಳ್ಳೋ ಎಂಬುದು ಇನ್ನೂ ಪತ್ತೆಯಾಗಿಲ್ಲ.

  #7

  ಆನ್‌ಲೈನ್‌ನಲ್ಲಿರುವ ಸಂದೇಶ ಮತ್ತು ಕೆಲವು ಸುದ್ದಿಗಳು ಹೇಳುವಂತೆ ಮೆಚ್ಚಿನ ಚಾಕಲೇಟ್ ಬಿಸ್ಕತ್ತಾದ ಓರಿಯೊ ಕೊಕೇನ್‌ನಿಂದ ತಯಾರು ಮಾಡಲಾಗಿದ್ದು ಇದು ಚಟಕ್ಕೆ ಕಾರಣವಾಗಲಿದೆ ಎಂದಾಗಿದೆ.

  #8

  ಕೆಲವೊಂದೆಡೆಗಳಲ್ಲಿ ಸೂಜಿಗಳಿಂದ ಏಡ್ಸ್‌ನಂತಹ ಭಯಂಕರ ರೋಗಗಳು ಹರಡುತ್ತದೆ ಎಂಬುದಾಗಿ ಇಂಟರ್ನೆಟ್‌ನಲ್ಲಿ ಸದ್ದು ಉಂಟಾಗುತ್ತಿದೆ. ಇದನ್ನು ಸಾಧಿಸುವ ಅಂಶಗಳು ಇನ್ನೂ ದೊರೆಯದೇ ಇದ್ದರೂ ಇದುವರೆಗೆ ಯಾರೂ ಇದನ್ನು ಪತ್ತೆಹಚ್ಚಿಲ್ಲ.

  #9

  ಪಾರ್ಟಿ ಮೆಹೆಂದಿ ರೆಡ್ ಕೋನ್‌ನಲ್ಲಿ ರಾಸಾಯನಿಕಗಳು ಇದ್ದು ಇದನ್ನು ಹಚ್ಚಿದ ಮಹಿಳೆಯೋರ್ವರ ಕೈಯಲ್ಲಿ ಸೋಂಕುಗಳು ಉಂಟಾಗಿ ತ್ವಚೆಯ ಸೋಂಕಿನಿಂದ ಆಕೆ ಮರಣವನ್ನಪ್ಪಿರುವುದಾಗಿ ಸುದ್ದಿಯಾಗಿದೆ. ಆದರೆ ಈ ಮೆಹೆಂದಿಯನ್ನು ಪರಿಶೀಲಿಸಿದಾಗ ಕೂಡ ಇಂತಹ ಯಾವುದೇ ಅಂಶಗಳು ಪತ್ತೆಯಾಗಿಲ್ಲ

  #10

  56 ಮಹಿಳೆಯರು ಸ್ಯಾನಿಟರಿ ನ್ಯಾಪ್‌ಕಿನ್‌ನಿಂದ ಕ್ಯಾನ್ಸರ್ ಉಂಟಾಗಿ ಅಸುನೀಗಿದರು ಎಂಬುದು ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇನ್ನೂ ದೊರೆತಿಲ್ಲ. ಅಂದರೆ ಇಂಟರ್ನೆಟ್‌ನಲ್ಲಿ ಹರಿದಾಡಿರುವ ಸುಳ್ಳು ಕಥೆಯಾಗಿ ಇದನ್ನು ಪರಿಗಣಿಸಲಾಗಿದೆ.

  ಗಿಜ್‌ಬಾಟ್ ಲೇಖನಗಳು

  ಭಾರತದಲ್ಲಿ ಸದ್ಯದಲ್ಲಿಯೇ ಬಜೆಟ್ ಐಫೋನ್
  ವಿಶ್ವದ ಮೊದಲ ಮೊಬೈಲ್‌ ಯಾವುದು ಗೊತ್ತೇ? ಫೀಚರ್‌ ಅಚ್ಚರಿ!!
  ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು
  ಚಂದ್ರನ ಮೇಲ್ಮೈಯಲ್ಲಿರುವ ಮಚ್ಚೆಗಳ ರಹಸ್ಯ ಪತ್ತೆಹಚ್ಚಿದ ನಾಸಾ

  ಗಿಜ್‌ಬಾಟ್ ಫೇಸ್‌ಬುಕ್ ತಾಣ

  ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  There are many rumours and false statements all over the internet, cloaked by such well-articulated explanations that it is difficult to understand that they are not valid.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more