Just In
Don't Miss
- News
Budget 2023: ಇದು "ಕಾರ್ಪೊರೇಟ್ ಪ್ರೇಮಿ" ಬಜೆಟ್ ಎಂದ ಹೆಚ್. ಸಿ. ಮಹದೇವಪ್ಪ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Lifestyle
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ಧರಿಸಿರುವ ಸೀರೆಯ ವಿಶೇಷತೆ ಗೊತ್ತೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಂದಿಗೂ ರಹಸ್ಯವಾಗಿಯೇ ಉಳಿದಿರುವ ವಿಜ್ಞಾನಿಗಳ ಕೊಲೆ
ವಿಜ್ಞಾನವೆಂಬ ಕೌತುಕ ಲೋಕದಲ್ಲಿ ನಡೆಯುತ್ತಿರುವುದೆಲ್ಲಾ ರಹಸ್ಯವಾಗಿದೆ ಎಂಬುದನ್ನು ನೀವು ಅರಿತಿದ್ದೀರಾ? ಹೌದು 21 ನೇ ಶತಮಾನದಲ್ಲಿ ವಿಜ್ಞಾನಿಗಳ ಹಠಾತ್ ಮರಣ ಎಲ್ಲರಿಗೂ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಕೆಲವರು ಮರಣರಾದರೆ ಇನ್ನು ಕೆಲವರು ದಿಢೀರ್ ಅದೃಶ್ಯರಾಗಿದ್ದರು. ಇವರ ಮರಣಕ್ಕೆ ಕಾರಣವೇನು ಎಂಬುದನ್ನು ಯಾರಿಗೂ ಪತ್ತೆಹಚ್ಚಲಾಗಿರಲಿಲ್ಲ. ಮೃತರಾದವರಲ್ಲಿ ಕೆಲವರು ಏಲಿಯನ್ ಲೋಕದೊಂದಿಗೆ ಸಂಪರ್ಕವನ್ನು ಹೊಂದಿದ್ದರು ಎಂಬುದಾಗಿ ತಿಳಿದು ಬಂದಿತ್ತು.
ಓದಿರಿ: ಭಾರತದ 10 ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳು ಇವುಗಳೇ!
ಆದರೆ ಈ ಸಂವಹನವೇ ಅವರ ಮರಣಕ್ಕೆ ಕಾರಣವಾಯಿತೇ ಎಂಬುದು ಇನ್ನೂ ನಿಗೂಢವಾಗಿಯೇ ಇದ್ದು ಇದರ ಬಗ್ಗೆ ಸಂಶೋಧನೆಯನ್ನು ನಡೆಸಿದ್ದರೂ ಇದಕ್ಕೆ ಉತ್ತರ ದೊರಕಿಲ್ಲ.

ರೋಡ್ನಿ ಮಾರ್ಕ್ಸ್
ಆಸ್ಟ್ರೇಲಿಯಾದ ಬಾಹ್ಯಾಕಾಶ ವಿಜ್ಞಾನಿ ಡಾ. ರೋಡ್ನಿ ಮಿಥನೇಲ್ ಪಾಯಿಸನಿಂಗ್‌ನಿಂದ ಮರಣವನ್ನು ಹೊಂದಿದ್ದಾರೆ. ಅವರಿಗೆ ವಿಷುಉಣಿಸಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ಆದರೆ ಅವರ ಮರಣ ಮಾತ್ರ ರಹಸ್ಯವಾಗಿಯೇ ಉಳಿದಿದೆ.

ಡೋನ್ ವಿಲ್ಲೆ
ಡಿಸೆಂಬರ್ 20, 2001 ರಂದು ಡೋನ್ ವಿಲ್ಲೆಯನ್ನು ಮಿಸಿಸಿಪ್ಪಿ ನದಿಯಿಂದ ಅವರ ಶವವನ್ನು ಹೊರಗೆಳೆಯಲಾಯಿತು. ಬಯೋಫಿಸಿಕ್ಸ್ ತಜ್ಞ ಹಲವು ತಿಂಗಳಿಂದ ಪತ್ತೆಯಾಗಿದ್ದರು. ಅವರ ಮರಣ ಅಪಾಘಾತವಾಗಿದೆ ಎಂಬುದಾಗಿ ಎಫ್‌ಬಿಐ ಘೋಷಿಸಿದ್ದರೂ ಅವರ ಮರಣದ ಹಿಂದೆ ಏನೋ ರಹಸ್ಯ ಅಡಗಿದೆ ಎಂಬುದಾಗಿಯೇ ಭಾವಿಸಲಾಗಿತ್ತು.

ತಾನ್ಯಾ ಹೋಲ್ಜ್‌ಮೇಯರ್
46 ರ ಹರೆಯದ ಜೆನೆಟಿಸಿಸ್ಟ್ ತಾನ್ಯಾ ಹೋಲ್ಜ್‌ಮೇಯರ್ ಪಿಜ್ಜಾ ಡೆಲಿರಿವರಿಗಾಗಿ ಹಣವನ್ನು ನೀಡುತ್ತಿದ್ದಾಗ ಗನ್‌ನಿಂದ ಮರಣ ಹೊಂದಿದಳು. ಆಕೆಯ ಹರೆಯದ ಮಗನೇ ತಾಯಿಯನ್ನು ಕೊಂದಿದ್ದ. ನಂತರ ಆತ ಕೂಡ ಆತ್ಮಹತ್ಯ ಮಾಡಿಕೊಂಡ.

ಬೆನಿಟೊ ಕ್ಯೂ
ನವೆಂಬರ್ 12, 2001 ರಂದು ಬೆನಿಟೊ ಕ್ಯೂ ಶವವು ಆತನ ಲ್ಯಾಬ್‌ನ ಮೆಡಿಕಲ್ ಸ್ಕೂಲ್‌ನ ಆವರಣದಲ್ಲಿ ಪತ್ತೆಯಾಗಿದೆ. ಆತನನ್ನು ಚೆನ್ನಾಗಿ ಥಳಿಸಲಾಗಿತ್ತು. ಆದರೆ ಪೋಲೀಸರು ಹೃದಯಾಘಾತದಿಂದ ಈತ ಮರಣವನ್ನಪ್ಪಿದ್ದಾರೆ ಎಂಬುದಾಗಿ ಘೋಷಿಸಿದ್ದಾರೆ.

ರಾಬರ್ಟ್ ಲೆಸ್ಲೆ ಬರ್ಗ್ ಆಫ್
ಇವರು ರಸ್ತೆಯಲ್ಲಿ ನಡೆಯುತ್ತಿದ್ದಾಗ ವ್ಯಾನ್ ಒಂದು ಬಂದು ಅವರನ್ನು ಹೊಡೆದುರುಳಿಸಿ ಹೋಗಿತ್ತು. ನಂತರ ವ್ಯಾನ್ ವೇಗದಿಂದ ಮುಂದೆ ಹೋಗಿತ್ತು, ಹಿಟ್ ಏಂಡ್ ರನ್ ಕೇಸ್ ಎಂಬುದಾಗಿ ಇದನ್ನು ಕರೆಯಬಹುದಾಗಿದೆ.

ವ್ಲಾದಿಮರ್ ಕೊರ್ಶುನಾವ್ ಮತ್ತು ಅಲೆಕ್ಸಿ ಬ್ರಶಿಲಿನ್ಸಿಕಿ
ರಷ್ಯಾದ ಈ ಇಬ್ಬರೂ ವಿಜ್ಞಾನಿಗಳು ಮೈಕ್ರೊಬಯಾಲಿಜಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು, ಎರಡು ವಾರಗಳ ಅಂತರದಲ್ಲಿ ಮುಂಜಾನೆ ಇವರಿಬ್ಬರನ್ನು ಕೊಲೆ ಮಾಡಲಾಗಿತ್ತು. ಧಳಿಸಿಯೇ ಇವರನ್ನು ಮರಣಕ್ಕೆ ಆಹುತಿ ಮಾಡಲಾಗಿತ್ತು.

ಇಗುನಿ ಎಫ್. ಮಾಲ್ಲೊವ್
ಪ್ರಖ್ಯಾತ ವಿಜ್ಞಾನಿಗಳಾಗಿದ್ದ ಇಗುನಿ ಮಾಲ್ಲೊವ್ ತಮ್ಮ ಮನೆಯಲ್ಲೇ ಕೊಲೆಯಾಗಿ ಕಂಡುಬಂದಿದ್ದರು. ಇದು ಪೂರ್ವನಿಯೋಜಿತ ಕೊಲೆ ಎಂಬುದಾಗಿಯೇ ತನಿಖೆಯಿಂದ ಬಯಲಾಗಿದ್ದು ಯಾರು ಏತಕ್ಕಾಗಿ ಮಾಡಿದರು ಎಂಬುದು ಮಾತ್ರ ರಹಸ್ಯವಾಗಿಯೇ ಉಳಿದಿದೆ.

ಜಾನ್ ಮುಲ್ಲನ್
ಭೌತಶಾಸ್ತ್ರಜ್ಞ ಮತ್ತು ನ್ಯೂಕ್ಲಿಯರ್ ರೀಸರ್ಚ್ ವಿಜ್ಞಾನಿ ಜಾನ್ ಮುಲ್ಲನ್ ಜೂನ್ 2004 ರಂದು ದಿಢೀರ್ ಮರಣವನ್ನಪ್ಪಿದ್ದಾರೆ. ಅವರಿಗೆ ನೀಡಿದ್ದ ಹೆಲ್ತ್ ಡ್ರಿಂಕ್ ಅವರ ಮರಣಕ್ಕೆ ಕಾರಣವಾಗಿತ್ತು.

ಐಯಾನ್ ಲ್ಯಾಂಗ್ ಫಾರ್ಡ್
ಫೆಬ್ರವರಿ 11, 2002 ರಂದು ಮರಣ ಹೊಂದಿದ ಐಯಾನ್ ಲ್ಯಾಂಗ್‌ಫರ್ಡ್ ಮರಣ ಸಂಶಯಾಸ್ಪದವಾಗಿ ನಡೆದಿತ್ತು. ಭಾಗಶಃ ಬೆತ್ತಲೆಯಾಗಿದ್ದ ಅವರ ದೇಹದ ಮೇಲೆ ಗಾಯಗಳನ್ನು ಮಾಡಲಾಗಿತ್ತು, ಮನೆಯಲ್ಲೇ ಕುರ್ಚಿಯಲ್ಲೇ ಬಂಧಿಸಿ ಅವರನ್ನು ಹಿಂಸಿಸಿ ಕೊಲೆಮಾಡಲಾಗಿತ್ತು.

ಜಾಂಗ್ ಐಯಾಮ್
ಮಿಸ್ಸೌರಿ ಯೂನಿವರ್ಸಿಟಿಯ ಪ್ರೊಫೆಸರ್ ಜಾಂಗ್ ಐಯಾಮ್, ಹೊತ್ತಿ ಉರಿಯುತ್ತಿರುವ ಕಾರಿನಲ್ಲಿ ಶವವವಾಗಿ ಪತ್ತೆಯಾಗಿದ್ದರು. ಅವರ ಎದೆಗೆ ಗಂಭೀರ ಗಾಯವನ್ನು ಮಾಡಲಾಗಿತ್ತು, ಕಾರಿನಲ್ಲಿ ಇವರು ಕುಳಿತ ನಂತರ ಅವರನ್ನು ಕೊಲೆ ಮಾಡಲಾಗಿತ್ತು ಎಂಬುದು ತನಿಖೆಯಿಂದ ತಿಳಿದು ಬಂದ ಮಾಹಿತಿಯಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470