ಭಾರತದ 10 ಅತ್ಯುತ್ತಮ ಇಂಜಿನಿಯರಿಂಗ್‌ ಕಾಲೇಜುಗಳು ಇವುಗಳೇ!

By Suneel
|

ಸಂಸತ್ತು ಇತ್ತೀಚೆಗೆ ತಾನೆ ಕಾನೂನು ಹೊರಡಿಸಿ ಭಾರತದಾದ್ಯಂತ 6 ಸಿಟಿಗಳಲ್ಲಿ 'ಭಾರತೀಯ ತಂತ್ರಜ್ಞಾನ ಸಂಸ್ಥೆ' ಸ್ಥಾಪಿಸಲು ಸಜ್ಜುಗೊಂಡಿರುವುದು ಈಗಾಗಲೇ ಬಹುಸಂಖ್ಯಾತರಿಗೆ ತಿಳಿದಿರುವ ವಿಷಯ. 'ಭಾರತೀಯ ತಂತ್ರಜ್ಞಾನ ಸಂಸ್ಥೆ'ಗಳನ್ನು ಜಮ್ಮು, ತಿರುಪತಿ, ಪಾಲಕ್ಕಾಡ್(ಕೇರಳ), ಗೋವಾ, ಧಾರವಾಡ ಮತ್ತು ಭಿಲಾಯಿ(ಛತ್ತೀಸ್‌ಘಡ್) ಸೇರಿದಂತೆ 6 ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಗುತ್ತಿದೆ.

ಇದೇ ಮೊಟ್ಟ ಮೊದಲ ಬಾರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ 'ಪ್ರಕಾಶ್‌ ಜಾವಡೇಕರ್‌'ರವರು ದೇಶದಾದ್ಯಂತದ 'ಉತ್ತಮ ಶ್ರೇಣಿಯ ಉನ್ನತ ಶಿಕ್ಷಣ ಸಂಸ್ಥೆಗಳ' ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 'ರಾಷ್ಟ್ರೀಯ ಸಂಸ್ಥೆಗಳ ಶ್ರೇಣಿಯನ್ನು ಸಿದ್ಧಪಡಿಸಿದ್ದ 'NIRF' ಶಿಕ್ಷಣ ಸಂಸ್ಥೆಗಳನ್ನು 'ಇಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌, ಫಾರ್ಮಸಿ ಮತ್ತು ವಿಶ್ವವಿದ್ಯಾಲಯ ಎಂದು ವಿಭಾಗಿಸಿತ್ತು.

ಉತ್ತಮ ಶ್ರೇಣಿಯ ಉನ್ನತ ಶಿಕ್ಷಣ ಸಂಸ್ಥೆ ಹೆಸರಿಗಾಗಿ 3,500 ಸಂಸ್ಥೆಗಳು ಭಾಗವಹಿಸಿದ್ದವು. ಇವುಗಳಲ್ಲಿ ದೇಶದಾದ್ಯಂತದ 10 ಉತ್ತಮ ಇಂಜಿನಿಯರಿಂಗ್‌ ಕಾಲೇಜ್‌ಗಳನ್ನು ಉತ್ತಮ ಶ್ರೇಣಿಯ ಇಂಜಿನಿಯರಿಂಗ್‌ ಕಾಲೇಜುಗಳೆಂದು ಆಯ್ಕೆ ಮಾಡಿ ಹೆಸರಿಲಾಗಿತ್ತು. ಅವುಗಳು ಯಾವುವು ಎಂದು ಇಂದಿನ ಲೇಖನದಲ್ಲಿ ನಿಮಗೆ ಪರಿಚಯಿಸುತ್ತಿದ್ದೇವೆ.

2,500 ಅಡಿ ಎತ್ತರದಿಂದ ಬಿದ್ದರೂ ಡ್ಯಾಮೇಜ್ ಆಗದ ಐಫೋನ್!

 ಐಐಟಿ ಮದ್ರಾಸ್

ಐಐಟಿ ಮದ್ರಾಸ್

ಐಐಟಿ ಮದ್ರಾಸ್‌ 1959ರಲ್ಲಿ ಸ್ಥಾಪನೆಗೊಂಡಿದೆ. ಉತ್ತಮ ಶ್ರೇಣಿಯ ಇಂಜಿನಿಯರಿಂಗ್‌ ಸಂಸ್ಥೆಯ ಪಟ್ಟಿಯಲ್ಲಿ 89.42 ಅಂಕಗಳ ಶ್ಲಾಘನೆಯೊಂದಿಗೆ ಮೊದಲ ಸ್ಥಾನದಲ್ಲಿದೆ.

ಐಐಟಿ ಬಾಂಬೆ

ಐಐಟಿ ಬಾಂಬೆ

ಉತ್ತಮ ಇಂಜಿನಿಯರಿಂಗ್‌ ಸಂಸ್ಥೆ ಪಟ್ಟಿಯ ಎರಡನೇ ಸ್ಥಾನದಲ್ಲಿ ಐಐಟಿ ಬಾಂಬೆ ಇದ್ದು, 87.67 ಸ್ಕೋರ್‌ ಪಡೆದಿದೆ. ಅತ್ಯಂತ ಹಳೆಯ ಐಐಟಿ ಸಂಸ್ಥೆಯ ಸಾಲಿನಲ್ಲಿ ಬಾಂಬೆ ಐಐಟಿ ಇದ್ದು, ಇದು 1958 ರಲ್ಲಿ ಸ್ಥಾಪನೆಯಾಗಿದೆ.

ಐಐಟಿ ಖಾರಗ್‌ಪುರ್‌

ಐಐಟಿ ಖಾರಗ್‌ಪುರ್‌

ಎಚ್‌ಆರ್‌ಡಿ ಸಚಿವರ ಪಟ್ಟಿಯ ಮೂರನೇ ಉತ್ತಮ ಶ್ರೇಣಿಯ ಐಐಟಿ ಸಂಸ್ಥೆ ಸ್ಥಾನದಲ್ಲಿ 'ಐಐಟಿ ಖಾರಗ್‌ಪುರ್‌' ಇದೆ. 83.91 ಅಂಕಗಳೊಂದಿಗೆ ಉತ್ತಮ ಐಐಟಿ ಸಂಸ್ಥೆ ಎಂಬ ಹೆಸರು ಪಡೆದಿರುವ ಈ ಕಾಲೇಜು 1951 ರಲ್ಲಿ ಸ್ಥಾಪನೆಯಾಗಿದೆ.

ಐಐಟಿ ದೆಹಲಿ

ಐಐಟಿ ದೆಹಲಿ

82.03 ಅಂಕಗಳೊಂದಿಗೆ ಐಐಟಿ ಬಾಂಬೆಯು ಉತ್ತಮ ಶ್ರೇಣಿಯ ಐಐಟಿ ಸಂಸ್ಥೆಗಳ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಐಐಟಿ ದೆಹಲಿಯು 1951 ರಲ್ಲಿ ಸ್ಥಾಪನೆಯಾಗಿದೆ.

ಐಐಟಿ ಕಾನ್ಪುರ್‌

ಐಐಟಿ ಕಾನ್ಪುರ್‌

ಐಐಟಿ ಕಾನ್ಪುರ್‌ 5 ನೇ ಸ್ಥಾನದಲ್ಲಿದೆ. ಅತ್ಯಂತ ಹಳೆಯ ಇಂಜಿನಿಯರಿಂಗ್‌ ಸಂಸ್ಥೆಯಾದ ಐಐಟಿ ಕಾನ್ಪುರ್‌ 1959 ರಲ್ಲಿ ಸ್ಥಾಪನೆಯಾಗಿದ್ದು, 81.07 ಸ್ಕೋರ್‌ ಹೊಂದಿದೆ.

ಐಐಟಿ ರೂರ್ಕೀ

ಐಐಟಿ ರೂರ್ಕೀ

ಭಾರತೀಯ ತಂತ್ರಜ್ಞಾನ ಸಂಸ್ಥೆ ರೂರ್ಕೀ ಉತ್ತಮ ಶ್ರೇಣಿಯ ಇಂಜಿನಿಯರಿಂಗ್‌ ಪಟ್ಟಿಯಲ್ಲಿ 6 ನೇ ಸ್ಥಾನ ಪಡೆದಿದೆ. 2001 ರಲ್ಲಿ ಸ್ಥಾಪನೆಯಾದ ಈ ಐಐಟಿ ಸಂಸ್ಥೆಯು 78.68 ಉತ್ತಮ ಸ್ಕೋರ್ ಹೊಂದಿದೆ.

ಐಐಟಿ ಹೈದರಾಬಾದ್‌

ಐಐಟಿ ಹೈದರಾಬಾದ್‌

ನೂತನ ಐಐಟಿ ಸಂಸ್ಥೆಗಳ ಪಟ್ಟಿಯಲ್ಲಿಯೂ 77.23 ಸ್ಕೋರ್‌ ನೊಂದಿಗೆ ಉತ್ತಮ ಶ್ರೇಣಿಯ ಇಂಜಿನಿಯರಿಂಗ್‌ ಸಂಸ್ಥೆಗಳ ಪಟ್ಟಿಯಲ್ಲಿ 7 ಸ್ಥಾನದಲ್ಲಿರುವ ಐಐಟಿ ಹೈದರಾಬಾದ್‌ 2008 ರಲ್ಲಿ ಸ್ಥಾಪನೆಯಾಗಿದೆ.

ಐಐಟಿ ಗಾಂಧಿನಗರ್‌

ಐಐಟಿ ಗಾಂಧಿನಗರ್‌

ನಂಬರ್‌ 8 ನೇ ಸ್ಥಾನದಲ್ಲಿ ಐಐಟಿ ಗಾಂಧಿನಗರ್ ಇದೆ. 75.21 ಸ್ಕೋರ್‌ನೊಂದಿಗೆ ಉತ್ತಮ ಇಂಜಿನಿಯರಿಂಗ್‌ ಸಂಸ್ಥೆ ಪಟ್ಟಿಯಲ್ಲಿರುವ ಐಐಟಿ ಗಾಂಧಿನಗರ್ 2008 ರಲ್ಲಿ ಸ್ಥಾಪನೆಯಾಗಿದೆ.

 ಐಐಟಿ ರೂಪರ್‌

ಐಐಟಿ ರೂಪರ್‌

74.89 ಸ್ಕೋರ್‌ನೊಂದಿಗೆ ಉತ್ತಮ ಶ್ರೇಣಿಯ ಇಂಜಿನಿಯರಿಂಗ್ ಪಟ್ಟಿಯಲ್ಲಿ ಐಐಟಿ ರೂಪರ್‌ 9 ನೇ ಸ್ಥಾನ ಪಡೆದಿದೆ. ಅಂದಹಾಗೆ ಈ ಸಂಸ್ಥೆ ಸ್ಥಾಪನೆಯಾಗಿದ್ದು 2009 ರಲ್ಲಿ.

 ಐಐಟಿ ಪಾಟ್ನಾ

ಐಐಟಿ ಪಾಟ್ನಾ

ಎಚ್‌ಆರ್‌ಡಿ ಸಚಿವರ ಪಟ್ಟಿಯಲ್ಲಿನ 10 ನೇ ಸ್ಥಾನದಲ್ಲಿ 74.68 ಸ್ಕೋರ್‌ನೊಂದಿಗೆ ಐಐಟಿ ಪಾಟ್ನಾ ಇದೆ. ಈ ಸಂಸ್ಥೆಯು 2008 ರಲ್ಲಿ ಸ್ಥಾಪನೆಯಾಗಿದೆ.

Best Mobiles in India

Read more about:
English summary
10 best engineering colleges of India. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X