ಇಂದಿಗೂ ಉತ್ತರ ದೊರಕದೇ ಇರುವ ವಿಶ್ವ ರಹಸ್ಯಗಳು

Written By:

  ಕಣ್ಮರೆಯಾದ ವಿಮಾನದಿಂದ ಹಿಡಿದು ಭೂಮಿಯ ಅಂತರಾಳದಲ್ಲಿ ಅಡಗಿರುವ ನಗರದವರೆಗೆ ರಹಸ್ಯಗಳನ್ನು ಈ ವಿಶ್ವ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಇದು ಇಂದಿಗೂ ನಿಗೂಢವಾಗಿಯೇ ಇದ್ದು ಪರಿಹಾರವೇ ಕಾಣದ ಪೆಡಂಭೂತಗಳಂತೆ ಕಾಡುತ್ತಿದೆ. ರಹಸ್ಯಗಳು ಯಾವುದೇ ಇರಲಿ ಹೇಗೇ ಇರಲಿ ಅದನ್ನು ಭೇಧಿಸುವವರೆಗೆ ಸಮಾಧಾನ ಖಂಡಿತ ಸಾಧ್ಯವಿಲ್ಲ ಅಲ್ಲವೇ?

  ಇಂತಹುದೇ ವಿಶ್ವದಲ್ಲೂ ಇಂದಿಗೂ ಚರ್ಚೆಗೆ ಗ್ರಾಸವಾಗುತ್ತಿರುವ ರಹಸ್ಯಗಳನ್ನು ನಿಮ್ಮ ಮುಂದೆ ನಾವು ಪ್ರಸ್ತುತಪಡಿಸುತ್ತಿದ್ದು ಇದು ಇನ್ನೂ ಏಕೆ ಬಗೆಹರಿಯದ ಸಮಸ್ಯೆಯಾಗಿ ಕಾಡಿದೆ ಎಂಬುದನ್ನು ಅರಿತುಕೊಳ್ಳೋಣ. ಅಂತೆಯೇ ಆ ರಹಸ್ಯಗಳಾವುವು ಎಂಬುದನ್ನು ಕಂಡುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  #1

  ಮಲೇಷಿಯಾ ಏರ್‌ಲೈನ್ಸ್ ಫ್ಲೈಟ್ ಅಚಾನಕ್ಕಾಗಿ ಕಣ್ಮರೆಗೊಂಡಿದ್ದು ಕೌಲಲಂಪುರದಿಂದ ಬೀಜಿಂಗ್‌ಗೆ ಬರುವ ದಾರಿಯಲ್ಲಿ ಮಾರ್ಚ್ 8 ರಂದು ನಿಗೂಢವಾಗಿ ಕಣ್ಮರೆಯಾಗಿದೆ. ಹವಾಮಾನ ನಿರಾಳವಾಗಿದ್ದು ಕಾಕ್‌ಪಿಟ್‌ನಿಂದ ಯಾವುದೇ ಅಪಾಯಕಾರಿ ಸಿಗ್ನಲ್ ರವಾನೆಯಾಗಿಲ್ಲ. ಇಂಡಿಯನ್ ಸಾಗರದ ಮೇಲೆ ವಿಮಾನಕ್ಕಾಗಿ ಸತತ ಪ್ರಯತ್ನಗಳು ನಡೆದರೂ ಬೋಯಿಂಗ್ 777 ಪತ್ತೆಯಾಗಲೇ ಇಲ್ಲ.
  ಚಿತ್ರಕೃಪೆ:ಮ್ಯಾಶೇಬಲ್

  #2

  ಐಲ್ಯಾಂಡ್‌ನಲ್ಲಿ ಉಂಟಾಗುತ್ತಿರುವ ಜ್ವಾಲಾಮುಖಿ ಆಗಸ್ಟ್‌ನಿಂದ ಆರಂಭವಾಗಿ ಇಲ್ಲಿಯವರೆಗೆ ಮುಂದುವರಿದುಕೊಂಡೇ ಇದೆ. ಇದರ ಲಾವಾ ಪ್ರಮಾಣ, ಸಲ್ಫರ್ ಡೈಕ್ಸೈಟ್ ಗ್ಯಾಸ್ ಬಿಡುಗಡೆ, ಮುಳುಗಡೆ ಹೀಗೆ ಮೂರು ವಿಧಾನದಲ್ಲಿ ಇದು ಅಚ್ಚರಿಯನ್ನುಂಟು ಮಾಡುತ್ತಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #3

  ತನ್ನ ಮಾಜಿ ಗೆಳತಿ ಹೇ ಮಿನ್ ಲೀಯನ್ನು ಕೊಂದಿದ್ದಕ್ಕಾಗಿ ಜೀವಿತಾವಧಿಯ ಶಿಕ್ಷೆ ಅನುಭವಿಸುತ್ತಿರುವ ಅದ್‌ನನ್ಸ್ ಕಥೆ ಇದಾಗಿದೆ. ವರ್ಷಗಳ ನಂತರ ಇದನ್ನು ಧಾರವಾಹಿಯಾಗಿ ಹೊರತಂದ ಸರಾ ಕೊಯಿಂಗ್ ಪ್ರಕರಣವನ್ನು ತನಿಖೆ ಮಾಡಿದಾಗ ಹೆಚ್ಚಿನ ದಾಖಲೆಗಳು ಮಾಯವಾಗಿರುವುದು ಕಂಡುಬಂದಿದೆ. ಸಯ್ಯದ್‌ಗೆ ಹೋಲಿಕೆಯಾಗುತ್ತಿರುವ ಯಾವುದೇ ಕಣ್ಣಿನ ಸಾಕ್ಷಿಗಳಿಲ್ಲ, ಈತ ತನ್ನದಲ್ಲದ ತಪ್ಪನ್ನು ಖಾತ್ರಿಪಡಿಸುತ್ತಿದ್ದು ಲೀಯನ್ನು ಸಯ್ಯದ್ ಕೊಂದಾಗ ತಾನು ಆಕೆಯೊಂದಿಗೆ ಇದ್ದೆ ಎಂದಿದ್ದ ಸಾಕ್ಷಿಯನ್ನು ವಕೀಲರಿಗೆ ವಿಚಾರಿಸಲು ಆಗಲೇ ಇಲ್ಲ.
  ಚಿತ್ರಕೃಪೆ:ಮ್ಯಾಶೇಬಲ್

  #4

  115 ಅಡಿ ಆಳದ ಸಿಂಕ್ ಹೋಲ್‌ಗಳು ಸೈಬೇರಿಯಾದ ಯಾಮಲ್ ಪೆನಿನ್ಸಿಲೇನಾದಲ್ಲಿ ಪತ್ತೆಯಾಗಿದ್ದು ವಿಶ್ವದ ಅಂತ್ಯ ಎಂಬುದಾಗಿ ಇದನ್ನು ಕರೆಯಲಾಗಿದೆ. ಈ ಸಿಂಕ್ ಹೋಲ್ ಕುರಿತಾದ ಹಲವಾರು ಅನ್ವೇಷಣೆಗಳು ನಡೆಯುತ್ತಿದ್ದರೂ ಇದಕ್ಕೆ ಸರಿಯಾದ ಮಾಹಿತಿ ಇನ್ನೂ ದೊರಕಿಲ್ಲ.
  ಚಿತ್ರಕೃಪೆ:ಮ್ಯಾಶೇಬಲ್

  #5

  ಎಷ್ಟೋ ಶತಮಾನಗಳ ಹಿಂದೆ ಹೂಳಿದ್ದ ಈ ಚಿನ್ನದ ನಾಣ್ಯಗಳನ್ನು ಮಧ್ಯಮ ವರ್ಗದ ದಂಪತಿಗಳು ಅನ್ವೇಷಿಸಿದ್ದು ಎಂಟು ಕ್ಯಾನ್‌ಗಳ ತುಂಬಾ ಬಂಗಾರದ ನಾಣ್ಯಗಳೇ ತುಂಬಿ ತುಳುಕಿತ್ತು. ಈ ಚಿನ್ನ ಎಲ್ಲಿಂದ ಬಂದಿತು ಎಂಬುದು ಇನ್ನೂ ರಹಸ್ಯಮಯವಾಗಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #6

  ಆಗಸ್ಟ್ ಆರಂಭದಲ್ಲಿ ಸೆಲೆಬ್ರಿಟಿಗಳ 14 ಅಪರೂಪದ ಫೋಟೋಗಳು ಎಂಬ ಶೀರ್ಷಿಕೆಯಡಿಯಲ್ಲಿ ಜೆನ್ನಿಫರ್ ಲಾರೆನ್ಸ್ ಫೋಟೋಗಳು ಇಂಟರ್ನೆಟ್ ವೈರಲ್ ಆದವು. ಆಕೆಯ ಐಕ್ಲೌಡ್ ಖಾತೆಗಳಿಂದ ಕದ್ದಂತಹ ಫೋಟೋಗಳು ಇದಾಗಿದ್ದವು. ಇಂತಹ ಕೃತ್ಯಗಳು ಈಕೆಯೊಂದಿಗಲ್ಲದೆ, ಕಿಮ್ ಕರ್ದಶಿಯಾನ್, ಸ್ಲಾರ್‌ಲೆಟ್ ಜಾನ್‌ಸನ್, ಕೇಟ್ ಅಪ್ಟನ್ ಮತ್ತು ಮಕಾಲಾ ಮರೋನಿಯೊಂದಿಗೂ ನಡೆದಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #7

  ಏಲಿಯನ್ ಗ್ರಹದ ಚಂದ್ರನನ್ನು ತಾವು ಪತ್ತೆಹಚ್ಚಿದ್ದೇವೆ ಎಂಬುದಾಗಿ ವಿಜ್ಞಾನಿಗಳು ಅಂದುಕೊಂಡಿದ್ದು, ಇದು ಪ್ರಪ್ರಥಮ ಬಾರಿಗೆ ಕಂಡುಬಂದ ಎಕ್ಸೋಮೂನ್ ಆಗಿದೆ. ಖಗೋಳಶಾಸ್ತ್ರಜ್ಞರಿಗೆ ಇದರಲ್ಲಿ ಏನು ಕಂಡುಬಂದಿತು ಎಂಬುದು ಇನ್ನೂ ತಿಳಿಯದೇ ಇರುವ ರಹಸ್ಯವಾಗಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #8

  5,000 ಕ್ಕಿಂತಲೂ ಹಳೆಯದಾದ ಕಲ್ಲಿನ ರಚನೆ ಇದಾಗಿದ್ದು ಇದು ಅಸಂಖ್ಯ ರಚನೆಗಳನ್ನು ಪಡೆದುಕೊಂಡಿದೆ. ಇದು ಯಾವಾಗಲೂ ಒಂದೇ ರೀತಿಯದ್ದಾಗಿರುವುದಿಲ್ಲ ಎಂಬುದು ಈ ಸಂಶೋಧನೆಯನ್ನು ಕೈಗೊಂಡಿರುವ ವಿನ್ಸ್ ಗೆಫ್ನಿ ಮಾತಾಗಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #9

  ಕಿಮ್ ಜಾಂಗ್ ಉನ್ ಕಂಪ್ಯೂಟರ್ ಪರದೆಯನ್ನು ನೋಡುತ್ತಿರುವ ಚಿತ್ರವೊಂದು ಉತ್ತರ ಕೊರಿಯಾದ ಕೇಂದ್ರ ನ್ಯೂಸ್ ಏಜೆನ್ಸಿ ಮೂಲಕ ಬಿಡುಗಡೆಗೊಂಡಿದ್ದು ಇದು ವಿವಾದಕ್ಕೆ ಕಾರಣವಾಗಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #10

  ನಾಲ್ಕು ಡಜನ್‌ನಷ್ಟು ವಿದ್ಯಾರ್ಥಿಗಳು ಕಣ್ಮರೆಯಾಗಿದ್ದು ಪೋಲೀಸ್ ತನಿಖೆ ನಡೆದಾಗ ಅವರನ್ನು ಡ್ರಗ್ ಗ್ಯಾಂಗ್ ಹಸ್ತಾಂತರಿಸಿದ್ದು ತಿಳಿದು ಬಂದಿದ್ದು ನಂತರ ಅವರನ್ನು ಕೊಂದಿರುವುದು ತಿಳಿದು ಬಂದಿದೆ. ಇದುವರೆಗೆ ಅವರ ಮೃತದೇಹ ಪತ್ತೆಯಾಗಿಲ್ಲ.
  ಚಿತ್ರಕೃಪೆ:ಮ್ಯಾಶೇಬಲ್

  #11

  ಸಣ್ಣ ಹಳ್ಳಿಯಾದ ಪಿಲ್ಗರ್‌ನಲ್ಲಿ ಕಂಡುಬರುವ ದ್ವಿ ಸುಂಟರಗಾಳಿ ಇಬ್ಬರನ್ನು ಸಾಯಿಸಿ ಎರಡು ಡಜನ್‌ನಷ್ಟು ಗಾಯಗಳನ್ನು ಮಾಡಿ, ಜನರಲ್ಲಿ ಕಳವಳವನ್ನು ಉಂಟುಮಾಡಿತ್ತು. ಇದು ಗಂಟೆಗೆ 200 ಮೈಲುಗಳಷ್ಟು ವೇಗವನ್ನು ಪಡೆದುಕೊಂಡಿತ್ತು.ಇವರನ್ನು ಅವಳಿ ಸುಂಟರಗಾಳಿ ಎಂದು ಕರೆಯಲಾಗಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #12

  ನೈಜೀರಿಯಾದ ಶಾಲೆಯೊಂದರಿಂದ 300 ಶಾಲಾ ಬಾಲಕಿಯನ್ನು ಅಪಹರಿಸಿದ್ದು, ಇದನ್ನು ನಡೆಸಿರುವುದು ಬೊಕೊ ಹರಾಮ್ ಎನ್ನುವ ಇಸ್ಲಾಮಿಕ್ ತಂಡವಾಗಿದೆ. ಟ್ವಿಟ್ಟರ್‌ನಲ್ಲಿ ಈ ಅಪಹರಣ ಹ್ಯಾಶ್ ಟ್ಯಾಗ್ ಅನ್ನೇ ರಚಿಸಿ ಸಾಮಾಜಿಕವಾಗಿ ಸುಂಟರಗಾಳಿಯನ್ನು ಎಬ್ಬಿಸಿತ್ತು. ಆದರೆ ಇದು ಪರಿಹಾರವೇ ಕಾಣದ ಕೇಸ್ ಆಗಿ ಪರ್ಯಾವಸಾನಗೊಂಡಿದೆ.
  ಚಿತ್ರಕೃಪೆ:ಮ್ಯಾಶೇಬಲ್

  #13

  ಅಗೋಚರವಾದ ಸಬ್ ಮೆರೀನ್ ಒಂದು ಪತ್ತೆಯಾಗಿದ್ದು ಸ್ವೀಡನ್ ನಗರದಲ್ಲಿ ಇದು ಪತ್ತೆಯಾಗಿದೆ. ಇದು ರಷ್ಯಾದ ಕೆಲಸವಾಗಿರಬಹುದು ಎಂಬುದಾಗಿ ಊಹಪೋಹಗಳೂ ಹಬ್ಬಿವೆ.
  ಚಿತ್ರಕೃಪೆ:ಮ್ಯಾಶೇಬಲ್

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  From a missing plane to a vast city hidden beneath Earth, 2014 left many stones unturned. Although we made many discoveries over the course of 12 months, some of them led to even more puzzling questions..
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more