ಭೂಮಿಯ ಮೇಲಿರುವ ರಹಸ್ಯಮಯ ನಿಗೂಢ ಪ್ರದೇಶಗಳು

By Shwetha
|

ನಿಗೂಢತೆಯು ಅದ್ಭುತವನ್ನು ಸೃಷ್ಟಿಸುತ್ತದೆ ಮತ್ತು ಅದ್ಭುತವು ಮಾನವನ ಅರ್ಥಮಾಡಿಕೊಳ್ಳುವ ಬಯಕೆಯ ಮೂಲವಾಗಿದೆ ಎಂಬುದು ನೀಲ್ ಆರ್ಮ್ಸ್ಟ್ರಾಂಗ್ ಹೇಳಿರುವ ಮಾತಾಗಿದೆ. ಅಜ್ವಾತ, ಅನೂಹ್ಯ, ಕೌತುಕಮಯವಾಗಿರುವ ಅಂಶಗಳನ್ನು ನಾವು ನಿಗೂಢತೆಯೊಂದಿಗೆ ಜೋಡಿಸುತ್ತೇವೆ. ನೈಸರ್ಗಿಕವಾಗಿ ನಡೆಯುವ ಕೆಲವೊಂದು ಘಟನೆಗಳನ್ನು ನಮಗೆ ಯಥಾವತ್ತಾಗಿ ವಿವರಿಸಲಾಗುವುದಿಲ್ಲ. ಹೀಗೆಯೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇರುವ ವಿಷಯಗಳನ್ನು ತಿಳಿಯುವ ಬಯಕೆಯನ್ನು ಈ ನಿಗೂಢತೆಯು ನಮ್ಮಲ್ಲಿ ಉಂಟುಮಾಡುತ್ತದೆ.

ಇಂತಹುದೇ ಎಷ್ಟೆಷ್ಟೋ ವಿಚಿತ್ರಗಳನ್ನು ವೈಚಿತ್ರ್ಯಗಳನ್ನು ಸೃಷ್ಟಿಯು ಒಳಗೊಂಡಿದ್ದು ಅವುಗಳ ಬಗೆಗಿನ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅವುಗಳ ಒಳಾರ್ಥ ವಿವರಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ಮೌಂಟ್ ರೋರ್ಮಿಯಾ

ಮೌಂಟ್ ರೋರ್ಮಿಯಾ

ಇದು ಪರ್ವತದಂತೆಯೇ ತೋರುತ್ತದೆ. ಇದು ತುದಿಯನ್ನು ಒಳಗೊಂಡಿರದೇ, ಮೋಡಗಳಿಂದ ಅವೃತವಾಗಿದೆ. ಇದರ ಮೇಲ್ಮೈ ಸಮತಟ್ಟಾಗಿದೆ. ಇದು ನಿಸರ್ಗದ ಕೌತುಕಗಳಲ್ಲಿ ಒಂದು ಎಂಬುದಾಗಿ ಪರಿಗಣಿತವಾಗಿದ್ದು ಪರ್ವತದ ಮೇಲ್ಮೈ ಸಮತಟ್ಟಾಗಿರುವುದು ನಿಜಕ್ಕೂ ಸೋಜಿಗವನ್ನುಂಟು ಮಾಡಿದೆ.

ಫ್ಲೈ ಗೀಸರ್

ಫ್ಲೈ ಗೀಸರ್

ಯುಎಸ್‌ನ ನೆವೆಡಾ ಮರುಭೂಮಿಯಲ್ಲಿ ಫ್ಲೈ ಗೀಸರ್ ಇದ್ದು 1916 ರಲ್ಲಿ ಇದು ಪತ್ತೆಯಾಗಿದೆ. ಈ ಕಾರಂಜಿಗಳಲ್ಲಿ ಬಿಸಿನೀರು ಹೊರಬರುತ್ತಿದ್ದು ವಿಶ್ವದ ಕೌತುಕಗಳಲ್ಲಿ ಒಂದೆನಿಸಿದೆ. ಇದು ಯಾತ್ರಾ ಸ್ಥಳವಾಗದೇ ಇದ್ದರೂ ವಿಶ್ವದ ಮೂಲೆಗಳಲ್ಲೂ ಮನೆಮಾತಾಗಿದೆ.

ದ ಬರ್ಮುಡಾ ಟ್ರಯಾಂಗಲ್

ದ ಬರ್ಮುಡಾ ಟ್ರಯಾಂಗಲ್

ಅಟ್ಲಾಂಟಿಕ್ ಸಾಗರದಲ್ಲಿ ಬರ್ಮುಡಾ ಟ್ರಯಾಂಗಲ್ ಮೂರು ಮೂಲೆಗಳಿರುವ ಪ್ರದೇಶವೆಂದೇ ಪ್ರತೀತಿಯನ್ನು ಪಡೆದುಕೊಂಡಿದೆ. ಬರ್ಮುಡಾ, ಮಿಯಾಮಿ ಮತ್ತು ಸ್ಯಾನ್ ಜುವಾನ್ ಪ್ರದೇಶದಲ್ಲಿ ಈ ಮೂಲೆಗಳಿದ್ದು ಜನರು, ಹಡಗುಗಳು ಮತ್ತು ವಿಮಾನಗಳನ್ನು ಅದೃಶ್ಯವಾಗಿಸುತ್ತಿದೆ. ಈ ಅದೃಶ್ಯತೆಗೆ ಕಾರಣ ಇನ್ನೂ ದೊರಕಿಲ್ಲ.

ಬ್ಲಡ್ ಫಾಲ್ಸ್ (ರಕ್ತ ಜಲಪಾತ)

ಬ್ಲಡ್ ಫಾಲ್ಸ್ (ರಕ್ತ ಜಲಪಾತ)

ಅಂಟಾರ್ಟಿಕಾದಲ್ಲಿ ಒಂದು ಪ್ರದೇಶವಿದ್ದು, ಇಲ್ಲಿಗೆ ಭೇಟಿ ನೀಡುವ ಸುವರ್ಣವಕಾಶ ಹೆಚ್ಚಿನವರಿಗೆ ಲಭ್ಯವಾಗಿಲ್ಲ. ಇದನ್ನು ಹೆಚ್ಚು ನಿಗೂಢ ಸ್ಥಳವೆಂದೇ ಕರೆಯಲಾಗಿದೆ. ಜಲಾಶಯದ ನೀರು ರಕ್ತದ ಬಣ್ಣದಲ್ಲಿರುವುದರಿಂದ ಇದನ್ನು ರಕ್ತ ಜಲಪಾತ ಎಂದೂ ಕರೆಯಲಾಗಿದೆ.

ಟ್ರವರ್ಟಿನ್ ಪೂಲ್ಸ್

ಟ್ರವರ್ಟಿನ್ ಪೂಲ್ಸ್

ಹಿಮದಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಸಣ್ಣ ಸಣ್ಣ ಕೊಳಗಳಿವೆ ಕ್ಯಾಲ್ಶಿಯಮ್ ಕಾರ್ಬೋನೇಟ್‌ಗಳ ಉಳಿಕೆಯಿಂದ ಈ ಕೊಳ ನಿರ್ಮಿತವಾಗಿದೆ.

ರಿಚಾಟ್ ಸ್ಟ್ರಕ್ಚರ್

ರಿಚಾಟ್ ಸ್ಟ್ರಕ್ಚರ್

ಸಹಾರಾದ ಕಣ್ಣು ಎಂದೂ ಕೂಡ ಇದನ್ನು ಕರೆದಿದ್ದು, ಮರುಭೂಮಿಯಲ್ಲಿ ನಿರ್ಮಿತವಾಗಿರುವ ನಿಗೂಢ ವೃತ್ತಾಕಾರದ ಆಕಾರವಾಗಿದೆ. ಇದರ ಪಕ್ಕದಲ್ಲಿ ನಿಂತು ನೀವು ನೋಡಿದಾಗ ಇದು ನಿಮಗೆ ನಿಖರವಾಗಿ ಗೋಚರಿಸುತ್ತದೆ. ಜ್ವಾಲಾಮುಖಿ ನಿರ್ಮಿಸಿರಬಹುದಾದ ಕುಳಿಯೂ ಇದಾಗಿರಬಹುದು ಎಂಬ ಸಂಶಯವೂ ಇಲ್ಲದಿಲ್ಲ.

ಅಯಸ್ಕಾಂತೀಯ ಅರಣ್ಯ ಮಾಂಕ್ಟನ್

ಅಯಸ್ಕಾಂತೀಯ ಅರಣ್ಯ ಮಾಂಕ್ಟನ್

ಕೆಲವೊಂದು ಸಂದರ್ಭಗಳಲ್ಲಿ ನೀವು ಕಾರನ್ನು ಚಾಲನೆ ಮಾಡದೆಯೇ ತನ್ನಷ್ಟಕ್ಕೆ ಅದು ಮೇಲ್ಮಟ್ಟಕ್ಕೆ ಹೋದ ಅನುಭವ ನಿಮಗುಂಟಾಗುತ್ತದೆ. ನಿಜಕ್ಕೂ ಇದು ಭಯಾನಕವಾಗಿದೆ ಅಲ್ಲವೇ? ಭೂಮಿಯ ಕೆಳಭಾಗ ಮೇಲ್ಮೈಯಲ್ಲಿರುವ ಅಯಸ್ಕಾಂತೀಯ ಪ್ರಭಾವವವೇ ಇಲ್ಲಾ ದೆವ್ವಗಳ ಕೆಲಸವೇ ಎಂಬುದು ಇನ್ನೂ ತಿಳಿದಿಲ್ಲ.

ಮೊರಾಕಿ ಬೋಲ್ಡರ್ಸ್

ಮೊರಾಕಿ ಬೋಲ್ಡರ್ಸ್

ನ್ಯೂಜಿಲ್ಯಾಂಡ್‌ನ ಸೌತ್ ಐಲ್ಯಾಂಡ್‌ನಲ್ಲಿರುವ ಕೊಕೊ ಬೀಚ್‌ನಲ್ಲಿ ಬಹುದೊಡ್ಡ ಕಲ್ಲಿನಾಕೃತಿಗಳನ್ನು ಕಾಣಬಹುದಾಗಿದೆ. 12 ಫೀಟ್ ದೊಡ್ಡದಾಗಿರುವ ಈ ಕಲ್ಲಿನ ರಚನೆಗಳು ನಿಜಕ್ಕೂ ನಿಗೂಢತಯೆನ್ನು ಒಳಗೊಂಡಿದೆ.

ಕ್ಯಾನೊ ಕ್ರಿಸ್ಟಲ್ಸ್

ಕ್ಯಾನೊ ಕ್ರಿಸ್ಟಲ್ಸ್

ನದಿಗಳ ಬಗ್ಗೆ ನಿಮಗೆಲ್ಲಾ ಗೊತ್ತಿದೆ ಎಂಬ ಊಹೆಯನ್ನು ಕ್ಯಾನೊ ಕ್ರಿಸ್ಟಲ್ಸ್ ಸುಳ್ಳು ಮಾಡುತ್ತದೆ ವಿಶ್ವದಲ್ಲೇ ಅತ್ಯಂತ ಸುಂದರ ನದಿಯೆಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿದ್ದು ಸಪ್ಟೆಂಬರ್ ಮತ್ತು ನವೆಂಬರ್‌ನಲ್ಲಿ ನಡೆಯುವ ಚಮತ್ಕಾರದಿಂದ ಇದಕ್ಕೆ ಈ ಹೆಸರು ಬಂದಿದೆ. ಹಳದಿ, ಗುಲಾಬಿ, ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ನದಿಯ ಬಣ್ಣ ಬದಲಾಗುತ್ತದೆ.

ಅಕೊಗಿಹಾರಾ

ಅಕೊಗಿಹಾರಾ

ಇದೊಂದು ಅರಣ್ಯವಾಗಿದ್ದು, 3500 ಹೆಕ್ಟೇರುಗಳ ಪ್ರದೇಶವನ್ನು ವ್ಯಾಪಿಸಿಕೊಂಡಿದೆ. ಜಪಾನ್‌ನ ಮೌಂಟ್ ಫ್ಯೂಜಿನಲ್ಲಿ ಇದು ನೆಲೆಗೊಂಡಿದೆ. ವಿಶ್ವದಲ್ಲೇ ಹೆಚ್ಚು ಮೋಡಿ ಮಾಡುವ ಅರಣ್ಯವೆಂದೇ ಇದು ಪ್ರಸಿದ್ಧಗೊಂಡಿದೆ. ಜನರು ಇಲ್ಲಿ ಪ್ರಾಣವನ್ನೂ ತೆತ್ತಿದ್ದು ಕಳೆದ 65 ವರ್ಷಗಳಿಂದ 500 ಜನರು ಇಲ್ಲಿ ಸಾವನ್ನಪ್ಪಿದ್ದಾರೆ.

ಏಸುಕ್ರಿಸ್ತನಮೂರ್ತಿ

ಏಸುಕ್ರಿಸ್ತನಮೂರ್ತಿ

ಅಬ್ಯಾಸ್ ಕ್ರೈಸ್ಟ್ ಇಟಲಿಯ ಸಾಗರದಲ್ಲಿ ಕಂಡುಬಂದಿದೆ. ಕ್ರಿಸ್ತನ ಪ್ರತಿಮೆ ಇದಾಗಿದ್ದು, ಶಾಂತಿಯ ಸಂಕೇತವನ್ನು ಇದು ಸೂಚಿಸುತ್ತಿದೆ. ಕಂಚಿನ ಪ್ರತಿಮೆ ಇದಾಗಿದ್ದು ಇದು 2.50 ಮೀಟರ್ಸ್ ಉದ್ದವಿದೆ.

ಲಾಂಗಿರ್ಯಾಬಾನ್

ಲಾಂಗಿರ್ಯಾಬಾನ್

ಇಲ್ಲಿನ ಜನರಿಗೆ ನಕ್ಷತ್ರಗಳನ್ನು ರಾತ್ರಿಯ ವೇಳೆ ಕಾಣುವ ಅವಕಾಶವೇ ಇಲ್ಲ. ಏಪ್ರಿಲ್ 20 ರಿಂದ ಆಗಸ್ಟ್ 23 ರವರೆಗೆ ಮಾತ್ರ ಈ ನಿರ್ಬಂಧ. ಏಕೆಂದರೆ ಇಲ್ಲಿ ರಾತ್ರಿಯಾಗುವುದೇ ಇಲ್ಲ.

ಇಟರ್ನಲ್ ಫ್ಲೇಮ್ ಫಾಲ್ಸ್

ಇಟರ್ನಲ್ ಫ್ಲೇಮ್ ಫಾಲ್ಸ್

ಈ ಜಲಪಾತದ ನಡುವೆ ಜ್ವಾಲೆಯೊಂದು ಉರಿಯುತ್ತಿದ್ದು ಇದು ಕಲ್ಪನೆ ಎಂಬ ಭಾವನೆ ನಿಮಗುಂಟಾಗಿರಬಹುದು. ಆದರೆ ನಿಜಕ್ಕೂ ಇದು ಇರುವುದು ಸತ್ಯ. ಹೆಚ್ಚಿನ ಮಿಥೇನ್ ಅನಿಲಗಳು ಭೂಮಿಯ ಅಡಿಯಿಂದ ತಪ್ಪಿಸಿ ಇಲ್ಲಿ ಜ್ವಾಲೆಯನ್ನು ಉಂಟುಮಾಡಿವೆ ಎಂಬುದಾಗಿ ಹೇಳಲಾಗಿದೆ. ಇದು ನೀರಿಗೆ ನಂದಿ ಹೋದರೂ ಪುನಃ ಇದು ಹತ್ತಿಕೊಳ್ಳುತ್ತದೆ.

ರೂಪಕುಂಡದ ಅಸ್ಥಿಪಂಜರ ನದಿ, ಉತ್ತರಾಖಾಂಡ್

ರೂಪಕುಂಡದ ಅಸ್ಥಿಪಂಜರ ನದಿ, ಉತ್ತರಾಖಾಂಡ್

ತನ್ನ ವೈಜ್ಞಾನಿಕ ಸೌಂದರ್ಯ, ರಮಣೀಯ ಹವಾಮಾನ ಮೊದಲಾದ ಅಂಶಗಳಿಂದ ಉತ್ತರಾಖಾಂಡ್ ಪ್ರಸಿದ್ಧವಾಗಿದ್ದು ಇಲ್ಲಿರುವ ಒಂದು ಸ್ಥಳ ಈ ಜಾಗವನ್ನು ನಿಗೂಢವಾಗಿ ಪರಿವರ್ತನೆಗೊಳಿಸಿದೆ. ರೂಪಕುಂಡ ಹಿಮಾಲಯದಲ್ಲಿ ಸ್ಥಾಪನೆಗೊಂಡಿರುವ ನದಿಯಾಗಿದೆ.

ಸ್ಟೋನ್ ಹೆಂಗೇ

ಸ್ಟೋನ್ ಹೆಂಗೇ

3000 ಬಿಸಿಯಿಂದ 2000 ಬಿಸಿಯಲ್ಲಿ ಕಂಡುಬಂದ ಶಿಲಾರಚನೆ ಇದಾಗಿದೆ. ವೃತ್ತಾಕಾರವಾಗಿ ಈ ಕಲ್ಲುಗಳ ರಚನೆಯನ್ನು ಮಾಡಲಾಗಿದ್ದು, ಇದು ಅತ್ಯದ್ಭುತ ಎಂದೆನಿಸಿದೆ.

Best Mobiles in India

English summary
The following are the twenty most alien, bizarre, weird and mysterious places on earth.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X