Just In
- 1 hr ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 1 hr ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 3 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
- 4 hrs ago
ವಿವೋ X90 ಸ್ಮಾರ್ಟ್ಫೋನ್ ಲಾಂಚ್; ಅಚ್ಚರಿ ಫೀಚರ್ಸ್ ಬಗ್ಗೆ ತಿಳಿದುಕೊಳ್ಳಿ!
Don't Miss
- News
ಸರ್ಕಾರಿ ಶಾಲೆ ಪ್ರಾಂಶುಪಾಲರಿಗೆ ಸಿಂಗಾಪುರ್ ಪ್ರವಾಸ ಭಾಗ್ಯ
- Movies
ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ
- Automobiles
ಜಪಾನ್ ಅಂಬಾಸಿಡರ್ಗೆ ಬಹುಬೇಡಿಕೆಯ ಗ್ರ್ಯಾಂಡ್ ವಿಟಾರಾ ಎಸ್ಯುವಿ ಗಿಫ್ಟ್ ನೀಡಿದ ಮಾರುತಿ ಸುಜುಕಿ
- Finance
World Cancer Day: ಕ್ಯಾನ್ಸರ್ ವಿಮೆ ಎಂದರೇನು, ಪ್ರಾಮುಖ್ಯತೆ, ಇತರೆ ಮಾಹಿತಿ
- Lifestyle
Chankya Neeti: ಶತ್ರುವಿನ ವಿರುದ್ಧ ಗೆಲ್ಲಬೇಕಾ..? ಚಾಣಾಕ್ಯನ ಈ ನೀತಿ ಅನುಸರಿಸಿ..!
- Sports
ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ಭಾರತದ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದ ಆರ್ ಅಶ್ವಿನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ಯಾಮೆರಾಗಳು ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ಹೇಳಲಾಗುವುದಿಲ್ಲ!
ಸೆಂಟರ್ ಆಫ್ ಇಂಟಲಿಜೆನ್ಸಿ (ಸಿಐಎ) ತಮ್ಮ ಪತ್ತೇದಾರಿ ನಿಯೋಗಗಳಿಗಾಗಿ ಲೇಸರ್ ಪವರ್ ವಾಚ್‌ಗಳನ್ನು ಬಳಸುವುದಿಲ್ಲ ಕೆಲವೊಂದು ಟಿಪ್ಸ್‌ಗಳನ್ನು ಅನುಸರಿಸಿ ತಮ್ಮ ಗೂಢಚಾರಿಕೆಯನ್ನು ಮಾಡುತ್ತಾರೆ. ವಾಶಿಂಗ್ಟನ್‌ನಲ್ಲಿರುವ ಸಿಐಎ ಮ್ಯೂಸಿಯಮ್‌ನಲ್ಲಿ ಹಿಂದಿನ ಕಾರ್ಯಾಚರಣೆಗಳಿಗೆ ಬಳಸಲಾದ ಗ್ಯಾಜೆಟ್‌ಗಳ ವಿವರಗಳನ್ನು ನೀಡುತ್ತಿದ್ದೇವೆ.
ಓದಿರಿ: ಹಲವು ಆಂಡ್ರಾಯ್ಡ್ ಡಿವೈಸ್‌ಗಳೊಂದಿಗೆ ಸ್ಕ್ರೀನ್ ಶೇರ್ ಮಾಡುವುದು ಹೇಗೆ?
ಕ್ಯಾಮೆರಾಗಳಿಂದ ಹಿಡಿದು ಅದ್ಭುತ ಸ್ಪೈ ಗ್ಯಾಜೆಟ್‌ಗಳ ವಿವರಗಳನ್ನು ನೀಡುತ್ತಿದ್ದು ಇವುಗಳಿಂದ ಗೂಢಚಾರಿಕೆಯನ್ನು ಅವರು ಮಾಡುತ್ತಿದ್ದರು ಎಂಬ ಅಂಶ ನಿಮ್ಮನ್ನು ಚಕಿತಗೊಳಿಸಬಹುದಾಗಿದೆ. ಬನ್ನಿ ಆ ಗೂಢಚಾರಿಕೆ ಗ್ಯಾಜೆಟ್‌ಗಳು ಯಾವುವು ಎಂಬುದನ್ನು ಕಂಡುಕೊಳ್ಳೋಣ.
ಓದಿರಿ: ವೈಫೈ ಸ್ಲೋ ಆಗಿದೆಯೇ? ಎಫ್‌ಎಮ್ ರೇಡಿಯೊ ಬಳಸಿ

ಪೈಪ್ ರೇಡಿಯೊ
1960 ರ ಈ ಪೈಪ್‌ನಲ್ಲಿ ರೇಡಿಯೊ ರಿಸೀವರ್ ಇದೆ. ದವಡೆಯ ಮೂಳೆಗಳ ಮೂಲಕ ಕಿವಿಯನ್ನು ಧ್ವನಿಯು ತಲುಪುತ್ತದೆ.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಸಿಗರೇಟ್ ಪ್ಯಾಕ್‌ನಲ್ಲಿ ಕುಳಿತುಕೊಳ್ಳುವ ಕ್ಯಾಮೆರಾ
35 ಎಮ್‌ಎಮ್ ಟೆಸಿನಾ ಫಿಲ್ಮ್ ಕ್ಯಾಮೆರಾ ಈ ಸಿಗರೇಟ್ ಕೇಸ್‌ನಲ್ಲಿ ಕುಳಿತುಕೊಳ್ಳುತ್ತದೆ. 1060 ರ ಅತಿ ಸಣ್ಣ ಮತ್ತು ಗಂಭೀರ ಕ್ಯಾಮೆರಾ ಇದಾಗಿದೆ.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಸಂದೇಶ ಕಳುಹಿಸುವ ಪಾರಿವಾಳ
ವಿಶ್ವಯುದ್ಧ ಎರಡರ ಸಮಯದಲ್ಲಿ ಈ ಹಗುರ ಕ್ಯಾಮೆರಾಗಳನ್ನು ಪಾರಿವಾಳಗಳ ಕಾಲಿಗೆ ಸಿಕ್ಕಿಸಿ ಕಳುಹಿಸುತ್ತಿದ್ದರು. ಪಾರಿವಾಳ ಹಾರಿದಂತೆಲ್ಲಾ ಕ್ಯಾಮೆರಾ ಫೋಟೋಗಳನ್ನು ಕ್ಲಿಕ್ಕಿಸುತ್ತಿತ್ತು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಇನ್‌ಸೆಕ್ಟೋಪ್ಟರ್
ಫೇಕ್ ಮೈಕ್ರೋಫೋನ್ ಗಾತ್ರದ ಜೀವಿಗಳನ್ನು ಗೂಢಚಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಸಣ್ಣ ಇಂಜಿನ್ ಅನ್ನು ಬಳಸಿಕೊಂಡು, 650 ಫೀಟ್ ಎತ್ತರವನ್ನು 60 ಸೆಕೆಂಡ್‌ಗಳಲ್ಲಿ ಇವುಗಳು ಪ್ರಯಾಣಿಸುತ್ತಿದ್ದವು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಡೆಡ್ ಡ್ರಾಪ್ ಸ್ಲೈಕ್
1960 ರಲ್ಲಿ ಅನ್ವೇಷಣೆಯಾದ ಫೀಲ್ಮ್ ಹಿಡಿದಿಡುವ ಸ್ಪೈಕ್. ಇದರಲ್ಲಿ ರಹಸ್ಯವಾಗಿ ಫಿಲ್ಮ್‌ಗಳನ್ನು ಗೂಢಚಾರಿಕೆದಾರರ ಎತ್ತಿಡುತ್ತಿದ್ದರು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಶತ್ರುಗಳನ್ನು ಪತ್ತೆಹಚ್ಚುವ ಡಿವೈಸ್
ಮಣ್ಣಿನಲ್ಲಿ ಬ್ಲೆಂಡ್ ಮಾಡಿರುವ, ಈ ಸಾಧನವು 1,000 ಫೀಟ್ ದೂರದಿಂದ ಶತ್ರುಗಳನ್ನು ಪತ್ತೆಹಚ್ಚುತ್ತದೆ. ವೈಬ್ರೇಶನ್ ಅನ್ನು ಇದು ಪಡೆದುಕೊಂಡ ಕೂಡಲೇ, ಬಿಲ್ಟ್ ಇನ್ ಆಂಟೆನಾ ಟ್ರಾನ್ಸ್‌ಮಿಟ್ಸ್, ರೇಡಿಯೊ ಸಿಗ್ನಲ್‌ಗಳ ಮೂಲಕ ಸಿಐಎಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಸೀಕ್ರೇಟ್ ಕೋಡ್ ಹೊಂದಿರುವ ಕಾಂಪ್ಯಾಕ್ಟ್
ರಹಸ್ಯ ಕೋಡ್‌ಗಳನ್ನು ಒಳಗೊಂಡಿರುವ ಈ ಕಾಂಪ್ಯಾಕ್ಟ್ ಸಿಐಎಗಳಿಗೆ ಸಹಾಯ ಮಾಡುತ್ತಿತ್ತು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಯುಎಸ್ ಆರ್ಮಿ ಲ್ಯಾನ್ಸಟಿಕ್ ಕಂಪಾಸ್
ಇತರ ಕಂಪಾಸ್‌ಗಳಂತೆ, ಈ ಆಲೈವ್ ಲೆನ್ಸಾಟಿಕ್ ಕಂಪಾಸ್ ಹಿಂಭಾಗದಲ್ಲಿ ಅಯಸ್ಕಾಂತೀಯ ಲೆನ್ಸ್ ಅನ್ನು ಒಳಗೊಂಡಿದೆ. 1950 ರಲ್ಲಿ ಯುಎಸ್ ಸೇನೆಯು ಇದನ್ನು ಬಳಸಿಕೊಂಡಿತ್ತು ಎನ್ನಲಾಗಿದೆ.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಚಾರ್ಲಿ ರೊಬೋಟ್ ಮೀನು
1990 ರಲ್ಲಿ, ಸಿಐಎ ಚಾರ್ಲಿ ಎಂಬ ರೊಬೋಟ್ ಮೀನನ್ನು ಅಭಿವೃದ್ಧಿಪಡಿಸಿದ್ದು, ಇದು ನೀರಿನಾಳದಲ್ಲಿ ಶತ್ರುಗಳ ವಸ್ತುಗಳ ಸಿಗ್ನಲ್‌ಗಳನ್ನು ಪಡೆದುಕೊಳ್ಳುತ್ತಿತ್ತು. ರೇಡಿಯೊ ರಿಮೋಟ್‌ನಿಂದ ಇದನ್ನು ನಿಯಂತ್ರಿಸಲಾಗುತ್ತಿತ್ತು, ಮತ್ತು ದೇಹದಲ್ಲಿ ಇದು ಮೈಕ್ರೋಫೋನ್ ಅನ್ನು ಹೊಂದಿತ್ತು
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಹ್ಯಾಂಡ್ ಕ್ರ್ಯಾಂಕ್ ಡ್ರಿಲ್
ಈ ಪರಿಕರವನ್ನು ಬಳಸಿಕೊಂಡು, ಗೋಡೆಗಳಲ್ಲಿ ತೂತುಗಳನ್ನು ಮಾಡಿ ಮೈಕ್ರೋಫೋನ್ ಅನ್ನು ಇದರಲ್ಲಿ ಇರಿಸಲಾಗುತ್ತಿತ್ತು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಸಿಲ್ವರ್ ಡಾಲರ್
ಇದು ಸಾಮಾನ್ಯ ಬೆಳ್ಳಿ ಡಾಲರ್‌ನಂತೆ ಕಂಡರೂ, ಇದು ಸಂದೇಶ ಮತ್ತು ಚಿತ್ರಗಳನ್ನು ಹಿಡಿದಿಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಕಪ್‌ಲಿಂಕ್
1930 ರಲ್ಲಿ ಸಿಐಎಗಳು ಮಿನಿಯೇಚರ್ ಕಂಪಾಸ್‌ಗಳನ್ನು ಇದರಲ್ಲಿ ಅಡಗಿಸಿಡಲು ಬಳಸಿಕೊಳ್ಳುತ್ತಿದ್ದರು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಎನಿಗ್ಮಾನಗಳನ್ನು ತಯಾರಿಸುವ ಮೆಶೀನ್
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿ ಮಿಲಿಟರಿಯು ಮೆಶೀನ್‌ಗಳನ್ನು ಬಳಸಿಕೊಳ್ಳುತ್ತಿದ್ದು ಇದರಲ್ಲಿ ಎನ್‌ಕ್ರಿಪ್ಟ್ ಮಾಡಲಾದ ರಹಸ್ಯ ಸಂದೇಶಗಳಾದ ಎನಿಗ್ಮಾಗಳನ್ನು ರಚಿಸಲು ಬಳಸಿಕೊಳ್ಳುತ್ತಿದ್ದರು. ಇದು ಬೇಧಿಸಲು ಆಗದೇ ಇರುವ ಕೋಡ್‌ಗಳನ್ನು ರಚಿಸುತ್ತಿತ್ತು ಮತ್ತು ಅಕ್ಷರಗಳನ್ನು ಸಿದ್ಧಪಡಿಸುತ್ತಿತ್ತು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಮೈಕ್ರೋಸ್ಕೋಪಿಕ್ ಫೋಟೋಗಳನ್ನು ತೆಗೆಯುವ ಕ್ಯಾಮೆರಾ
40 ರ ನಂತರದ ಕಾಲದಲ್ಲಿ, ಸಿಐಎ ಈ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿದ್ದು ಇದು ರಹಸ್ಯವಾಗಿ ಡಾಕ್ಯುಮೆಂಟ್‌ಗಳು ಮತ್ತು ಫೋಟೋಗಳನ್ನು ವರ್ಗಾಯಿಸುತ್ತಿತ್ತು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಚಿತ್ರಗಳ ಮೂಲಕ ಶತ್ರುಗಳ ಮಾಹಿತಿ
1960 ರ ವಿಯೇಟ್ನಾಮ್ ಯುದ್ಧ ಸಂದರ್ಭದಲ್ಲಿ, ಸಿಐಎ ಈ ಅಸಾಮಾನ್ಯ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದ್ದು, ಜನರನ್ನು ಎಣಿಸುವುದು ಮತ್ತು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಪ್ರಯಾಣಿಸುತ್ತಿದ್ದ ಮಾಹಿತಿಯನ್ನು ಒದಗಿಸುತ್ತಿತ್ತು.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್

ಬುಲೆಟ್‌ಗಳನ್ನು ಬಂಧಿಸಿಡುವ ಹೆಡ್‌ಫೋನ್ಸ್
ಈ ಸ್ಟೀಲ್ ಹೆಡ್‌ಫೋನ್‌ಗಳು ಬುಲ್ಲೆಟ್ ಪ್ರೂಫ್ ಆಗಿದ್ದು ಹಲವಾರು ಜನರ ಪ್ರಾಣವನ್ನು ಕಾಪಾಡುವ ಸಾಧನವಾಗಿ ಪರಿಗಣಿತವಾಗಿದೆ.
ಚಿತ್ರಕೃಪೆ: ಸಿಐಎ ಮ್ಯೂಸಿಯಮ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470