Subscribe to Gizbot

ಭವಿಷ್ಯದ ಸೂಪರ್‌ಫೋನ್‌ ತಂತ್ರಜ್ಞಾನ ಹೇಗಿರುತ್ತದೆ ಗೊತ್ತಾ? ಇಲ್ಲಿದೆ ನೋಡಿ!!

Written By:

ಕೇವಲ 10 ರಿಂದ 20 ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಅನ್ನು ಆಶ್ಚರ್ಯವಾಗಿ ನೋಡುತ್ತಿದ್ದ ಪ್ರತಿಯೊಬ್ಬರು ಇಂದು ಸ್ಮಾರ್ಟ್‌ಫೋನ್‌ಗಳನ್ನು ಉಪಯೋಗಿಸುತ್ತಿದ್ದಾರೆ.! ಈಗ ಇದನ್ನು ಹೇಳಿದ ಉದ್ದೇಶ ಇಷ್ಟೆ. ಸ್ಮಾರ್ಟ್‌ಫೋನ್ ತಂತ್ರಜ್ಞಾನ ಬೆಳಕಿನ ವೇಗದಲ್ಲಿ ಬದಲಾಗುತ್ತಿದೆ.!!

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇನ್ನು ಕೇವಲ ಐದು ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಪ್ರಪಂಚವು ಯಾರು ಊಹಿಸಲಾಗದಷ್ಟು ಬದಲಾಗುತ್ತದೆ.! ಅತ್ಯಾಧುನಿಕ ತಂತ್ರಜ್ಞಾನಗಳು ಜನರನ್ನು ಆವರಿಸಿಕೊಂಡಿರುತ್ತವೆ ಮತ್ತು ತಂತ್ರಜ್ಞಾನ ಎಲ್ಲಾ ಜನರನ್ನು ಬಹುಬೇಗ ತಲುಪುತ್ತಿದೆ.!!

ಹಾಗಾದರೆ, ಇನ್ನೈದು ವರ್ಷಗಳಲ್ಲಿ ಸ್ಮಾರ್ಟ್ಫೋನ್ ಪ್ರಪಂಚ ಏನೆಲ್ಲಾ ಬದಲಾವಣೆಗಳನ್ನು ಕಾಣುತ್ತದೆ? ಈಗ ಅಭಿವೃದ್ದಿ ಕಾರ್ಯದ ಹಂತದಲ್ಲಿರುವ ತಂತ್ರಜ್ಞಾನಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ.!!

ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗುವುದೇ ಇಲ್ಲ.!!

ಇನ್ನೈದು ವರ್ಷಗಳಲ್ಲಿ ಬ್ಯಾಟರಿ ಖಾಲಿಯಾಗುವುದೇ ಇಲ್ಲದ ಸ್ಮಾರ್ಟ್‌ಫೋನ್ ತಂತ್ರಜ್ಞಾನ ಅಭಿವೃದ್ದಿಯಾಗುತ್ತದೆ. ಕೇವಲ ಸೋಲಾರ್ ಪವರ್ ಮೂಲಕವೇ ಸ್ಮಾರ್ಟ್‌ಫೋನ್ ಸ್ವಯಂ ಚಾರ್ಜ್ ಆಗುವ ತಂತ್ರಜ್ಞಾನ ಬೆಳವಣಿಗೆಯಾಗಲಿದೆ.!!

ಮಡುಚಬಹುದಾದ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!!

ಮಡುಚಬಹುದಾದ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್!!

ಮಡುಚುವ ಮತ್ತು ವಿಸ್ತರಿಸಬಹುದಾದ ಸ್ಮಾರ್ಟ್‌ಫೋನ್ ತಂತ್ರಜ್ಞಾನದ ಬಗ್ಗೆ ಅಭಿವೃದ್ದಿ ನಡೆಯುತ್ತಿದ್ದು, ಎಲ್‌ಜಿ, ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಸ್ವಲ್ಪಮಟ್ಟಿನ ಯಶಸ್ಸನ್ನು ಸಹ ಈ ತಂತ್ರಜ್ಞಾನ ಪಡೆದುಕೊಂಡಿದೆ.!!

ಪಾರದರ್ಶಕ ಡಿಸ್‌ಪ್ಲೇ!!

ಪಾರದರ್ಶಕ ಡಿಸ್‌ಪ್ಲೇ!!

ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಬಹುಬೇಗ ಬದಲಾವಣೆ ಕಾಣುವ ತಂತ್ರಜ್ಞಾನ ಎಂದು ಹೇಳಲಾಗುತ್ತಿರುವ ಪಾರದರ್ಶಕ ಡಿಸ್‌ಪ್ಲೇ ಕಲ್ಪನೆಯೇ ಅತ್ಯದ್ಬುತವಾಗಿದೆ.!! ಒಂದು ಕಡೆಯೊಂದ ಇನ್ನೊಂದು ಕಡೆ ನೋಡಬಹುದಾದ ಪಾರದರ್ಶಕ ಡಿಸ್‌ಪ್ಲೇ ಇನ್ನೆನು ಕೆಲವೇ ವರ್ಷಗಳಲ್ಲಿ ಕಾಲಿಡುತ್ತದೆ.!!

 ಸ್ಮಾರ್ಟ್‌ವಾಚ್ ಸ್ಮಾರ್ಟ್‌ಫೋನ್!!

ಸ್ಮಾರ್ಟ್‌ವಾಚ್ ಸ್ಮಾರ್ಟ್‌ಫೋನ್!!

ಕೇವಲ ಒಂದು ಸ್ಮಾರ್ಟ್‌ವಾಚ್ ರೀತಿಯಲ್ಲಿ ಸ್ಮಾರ್ಟ್‌ಫೋನ್ ಇರುತ್ತದೆ. ಈ ಸ್ಮಾರ್ಟ್‌ವಾಚ್ ಹೊರಸೂಸುವ ಪಾರದರ್ಶಕ ಬೆಳಕಿನ ಪರದೆಯ ಮೂಲಕವೇ ಸ್ಮಾರ್ಟ್‌ಫೋನ್‌ನಲ್ಲಿ ನಿರ್ವಹಿಸಬಹುದಾದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸಬಹುದು.!!

ಡೇಟಾ ಪ್ರಪಂಚ!!

ಡೇಟಾ ಪ್ರಪಂಚ!!

ಭವಿಷ್ಯದಲ್ಲಿ ಜಗತ್ತಿನ ಬಹುತೇಕ ವ್ಯವಹಾರ ಕಾರ್ಯಗಳು ಆನ್‌ಲೈನ್‌ನಲ್ಲಿಯೇ ನಡೆಯುವುದರಿಂದ ಕೆವಲ ಇನ್ನೈದು ವರ್ಷಗಳಲ್ಲಿ ಪ್ರಪಂಚವೇ ಡೇಟಾ ಮೂಲಕ ಆವೃತವಾಗಲಿದೆ.!! ಪ್ರತಿಯೊಂದು GB ಡೇಟಾದ ಬೆಲೆ 1 ರೂಪಾಯಿಗಳಿಗಿಂತ ಕಡಿಮೆಯಾಗುತ್ತದೆ.! ಅಂಬಾನಿ ಕೂಡ ಜಿಯೋ ಹುಟ್ಟಿಹಾಕಿದ್ದು ಇದಕ್ಕೆ!!

ಓದಿರಿ: 4 ಕ್ಯಾಮೆರಾದ ಜಿಯೋನಿ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು? ಫೀಚರ್ಸ್ ಹೇಗಿದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Next generation mobile phones, “superphone” to launch in 2022. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot