ಕಾನೂನಿನಾತ್ಮಕವಾಗಿ ಬಳಸುವ ಭಯಾನಕ ಟೆಕ್‌ ವೆಪನ್‌ಗಳು

By Suneel
|

ಪ್ರತಿ ದೇಶಗಳು ಸಹ ಇಂದು ಇತರ ದೇಶಗಳೊಂದಿಗೆ ಭಾಂದವ್ಯ ಮೂಡಿಸಿಕೊಂಡು ಉತ್ತಮ ಸ್ನೇಹಿ ರಾಷ್ಟ್ರಗಳಾಗಲು ಹಲವು ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ. ಇದಕ್ಕೆ ಉದಾಹರಣೆಯಾಗಿ ನರೇಂದ್ರ ಮೋದಿ'ರವರ ಸರ್ಕಾರದ ಕೇವಲ 2 ವರ್ಷದ ನಡೆಯನ್ನು ನೋಡಿದರೆ ಸಾಕು.

ಆದರೂ ಸಹ ಇಂದು ಕೆಲವು ಪ್ರಮುಖ ರಾಷ್ಟ್ರಗಳು ಟೆಕ್ನಾಲಜಿ ಆಧಾರಿತ ಮಿಲಿಟರಿ ವೆಪನ್‌ಗಳನ್ನು ಅಭಿವೃದ್ದಿಪಡಿಸುವಲ್ಲಿ ಹಿಂದೆ ಉಳಿದಿಲ್ಲ. ಸ್ನೇಹಕ್ಕಾಗಿ ಒಪ್ಪಂದ ಮಾಡಿಕೊಳ್ಳುವ ರಾಷ್ಟ್ರಗಳೇ ಯುದ್ಧ ವೆಪನ್‌ಗಳ ತಯಾರಿಕೆಯಲ್ಲಿ ಹೆಚ್ಚು ಆಸಕ್ತಿತೋರಿಸುತ್ತಿವೆ.

ವೆಪನ್‌ಗಳನ್ನು, ಟೆಕ್‌ ಆಧಾರಿತ ವೆಪನ್‌ಗಳನ್ನು ಕಾನೂನು ಬಾಹಿರವಾಗಿ ಬಳಸುವುದು ಅಪರಾಧ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅಮೆರಿಕ ಸಂಯುಕ್ತ ಕಾನೂನಿನಲ್ಲಿ ಕೆಲವು ಪ್ರಾಚೀನ ಮತ್ತು ಆಧುನಿಕ ಟೆಕ್‌ ವೆಪನ್‌ಗಳು ಅತಿ ಭಯಾನಕವು ಹಾಗೂ ಮಾರಣಾಂತಿಕವಾದವುಗಳಾಗಿದ್ದರೂ ಸಹ, ಅವುಗಳನ್ನು ಬಳಸುವುದು ಅಲ್ಲಿ ಕಾನೂನು ಬಾಹಿರವಲ್ಲ. ಅಂತಹ ಭಯಾನಕ ಟೆಕ್‌ ವೆಪನ್‌ಗಳು ಯಾವುದು ಎಂದು ಮುಂದೆ ಓದಿ ತಿಳಿಯಿರಿ.
ಚಿತ್ರ ಕೃಪೆ:www.thefiscaltimes.com

ಇತಿಹಾಸದಲ್ಲಿದ್ದ ಪವರ್‌ಪುಲ್‌ ಟೆಕ್‌ ವೆಪನ್‌ಗಳು

1

1

'ಫ್ಲೇಮ್‌ ಥ್ರೋವರ್‌' ಟೆಕ್‌ ಆಧಾರಿತ ವೆಪನ್‌ ಆಗಿದ್ದು, ಸುತ್ತಮುತ್ತ ಬೆಂಕಿ ಹರಡಬೇಕು ಎನಿಸಿದಲ್ಲಿ ಕಾನೂನಿನಾತ್ಮಕವಾಗಿ ಈ ವೆಪನ್‌ ಅನ್ನು ಖರೀದಿಸಬಹುದಾಗಿದೆ. ಅಮೆರಿಕದ 40 ರಾಜ್ಯಗಳಲ್ಲಿ 'ಫ್ಲೇಮ್ ಥ್ರೋವರ್‌' ಖರೀದಿಸುವುದರ ಮೇಲೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಕ್ಯಾಲಿಫೋರ್ನಿಯಾ ಇದಕ್ಕೆ ಲೈಸೆನ್ಸ್ ನೀಡಿಲ್ಲ.

2

2

'ಮಿನಿಗನ್ಸ್' ಹೆಸರಿಗೆ ಮಾತ್ರ ಮಿನಿ. ಆದರೆ ಒಂದು ನಿಮಿಷಕ್ಕೆ 2000-6000 ರೌಂಡ್‌ಗಳು, ಅಂದರೆ ಒಂದು ಸೆಕೆಂಡಿಗೆ 166 ಬುಲೆಟ್‌ಗಳನ್ನು ಫೈಯರ್ ಮಾಡಬಲ್ಲದು. ಇದರ ಬೆಲೆ 4000,000 ಡಾಲರ್‌ಗಳು. ( 26,840,000 ರೂಪಾಯಿಗಳು)

3

3

ಕಟನ ಜಪಾನ್‌ ಶೈಲಿಯ ಕತ್ತಿಯಾಗಿದ್ದು, 2 ಅಡಿ ಉದ್ದದ ಬ್ಲೇಡ್‌ ಅನ್ನು ಹೊಂದಿದೆ. ಇದನ್ನು ಅಮೆರಿಕದಲ್ಲಿ ಕಾನೂನಿನಾತ್ಮಕವಾಗಿ ಬಳಸಬಹುದಾಗಿದೆ.

4

4

ಬ್ಲಾಕ್‌ ಪೌಡರ್‌ ಕ್ಯಾನನ್‌ ಅನ್ನು ಕಾನೂನಿನ ಪ್ರಕಾರ ಬಳಸಬಹುದಾಗಿದ್ದು, ಸರ್ಕಾರದಲ್ಲಿ ಇದನ್ನು ರಿಜಿಸ್ಟರ್‌ ಮಾಡಿಸುವ ಅಗತ್ಯವಿಲ್ಲ. ಆದರೆ ಇದನ್ನು ಲೈಸನ್ಸ್‌ ಹೊಂದಿದ್ದ ಡೀಲರ್‌ಗಳಲ್ಲಿ ಅಮೆರಿಕದಲ್ಲಿ ಖರೀದಿಸಲಾಗುತ್ತಿದೆ. ಇದನ್ನು ಅಮೆರಿಕದಲ್ಲಿ ಆನ್‌ಲೈನ್‌ ಮುಖಾಂತರವು ಖರೀದಿಸಬಹುದಾಗಿದೆ.

5

5

ಅಮೆರಿಕದಲ್ಲಿ ಕೆಲವು ರಾಜ್ಯಗಳಲ್ಲಿ ಕ್ರಾಸ್‌ಬೊ ಬಳಸಲು ಕಾನೂನಿನ ಅನುಮತಿ ಇದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಲೈಸನ್ಸ್‌ ಹೊಂದಬೇಕಾಗುತ್ತದೆ. ಕ್ರಾಸ್‌ಬೊ (ಅಡ್ಡಬಿಲ್ಲು) ಅನ್ನು ಆನ್‌ಲೈನ್‌ನಲ್ಲೂ ಖರೀದಿಸಬಹುದಾಗಿದೆ. ಇದರ ಬೆಲೆ 500 ಡಾಲರ್‌.

6

6

ಗ್ರೇನೇಡ್‌ ಉಡಾವಣಾ ವೆಪನ್‌ ಬಳಸುವುದಕ್ಕೆ ಅಮೆರಿಕದಲ್ಲಿ ಯಾವುದೇ ವಿರೋಧವಿಲ್ಲ. ಆದರೆ ಉಡಾವಣೆಗೆ ಮುನ್ನ ಸಂಯುಕ್ತ ಸರ್ಕಾರದಲ್ಲಿ ರಿಜಿಸ್ಟರ್‌ ಮಾಡಿಸಬೇಕಾಗಿದೆಯಂತೆ.

7

7

'ಸ್ಪಿಯರ್‌ಗನ್' ಅಂಡರ್‌ವಾಟರ್‌ ವೆಪನ್ ಆಗಿದ್ದು, ಮೀನುಗಳಿಗೆ ಸ್ಪಿಯರ್ ಫೈಯರ್‌ ಮಾಡಲು ಬಳಸುತ್ತಾರೆ. ಇದನ್ನು ಮೀನು ಭೇಟೆಗಾಗಿ ಬಳಸುತ್ತಾರೆ. ಅಮೆರಿಕದಲ್ಲಿ ಇದನ್ನು ಕಾನೂನಿನಾತ್ಮಕವಾಗಿ ಬಳಸಲಾಗುತ್ತದೆ. ಖರೀದಿ ಬೆಲೆ $200.

8

8

'ಚೈನ್ ವಿಪ್' ವೆಪನ್‌ ಅನ್ನು ಚೀನಾದ ಮಾರ್ಟಿಯಲ್ ಕಲೆಯಲ್ಲಿ ಎದುರಾಳಿ ಬಳಸುವ ವೆಪನ್‌ ಅನ್ನು ನಿಶ್ಯಸ್ತ್ರಗೊಳಿಸಲು ಬಳಸಲಾಗುತ್ತದೆ. ಇದನ್ನು ಅಮೆರಿಕದಲ್ಲಿ ಕಾನೂನಿನಾತ್ಮಕವಾಗಿ ಬಳಸಲು ಅನುಮತಿ ನೀಡಿದ್ದು, ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಇತಿಹಾಸದಲ್ಲಿದ್ದ ಪವರ್‌ಪುಲ್‌ ಟೆಕ್‌ ವೆಪನ್‌ಗಳುಇತಿಹಾಸದಲ್ಲಿದ್ದ ಪವರ್‌ಪುಲ್‌ ಟೆಕ್‌ ವೆಪನ್‌ಗಳು

ಆವಿಷ್ಕಾರದಲ್ಲೇ ಅರ್ಧಕ್ಕೆ ನಿಂತ ಸಿಕ್ರೇಟ್ ಟೆಕ್‌ ವೆಪನ್‌ಗಳು ಆವಿಷ್ಕಾರದಲ್ಲೇ ಅರ್ಧಕ್ಕೆ ನಿಂತ ಸಿಕ್ರೇಟ್ ಟೆಕ್‌ ವೆಪನ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
8 Tech Weapons You Won't Believe Are Legal. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X