ಇತಿಹಾಸದಲ್ಲಿದ್ದ ಪವರ್‌ಪುಲ್‌ ಟೆಕ್‌ ವೆಪನ್‌ಗಳು

By Suneel
|

ಪವರ್‌ಗೆ ಇನ್ನೊಂದು ಹೆಸರು ವೆಪನ್. ಒಂದು ದೇಶದ ರಕ್ಷಣೆ, ಯುದ್ಧ ಎಂಬ ಎರಡು ಪದಗಳು ಕೇಳಿಸಿದಾಗ ನೆನಪಾಗೋದೆ ಪವರ್‌ಪುಲ್‌ ವೆಪನ್‌ಗಳು. ವ್ಯತ್ಯಾಸ ಏನಪ್ಪಾ ಅಂದ್ರೆ ದೇಶವನ್ನು ಕಾಪಾಡುವುದು, ಹಾಗೆ ದೇಶವನ್ನು ನಾಶಮಾಡುವುದು ಎರಡು ಸಹ ವೆಪನ್‌ಗಳೇ. ಒಂದು ದೇಶ ತನ್ನ ರಕ್ಷಣೆಗೆ ಇನ್ನೊಂದು ದೇಶದ ಮೇಲೆ ಯುದ್ಧ ಮಾಡಲು ವೆಪನ್‌ಗಳನ್ನು ಬಳಸುತ್ತದೆ. ಯುದ್ಧ ಸಂದರ್ಭದಲ್ಲಿ ಒಂದು ದೇಶ ರಕ್ಷಣೆ ಪಡೆದರೆ ಇನ್ನೊಂದು ದೇಶಕ್ಕೆ ಹಾನಿ ಆಗದೇ ಇರದು.

ಗೂಗಲ್ ಅರ್ಥ್‌ನಿಂದ ಬಹಿರಂಗಗೊಂಡ ಪ್ರಪಂಚದ ರಹಸ್ಯ ತಾಣಗಳು

ಅಂದಹಾಗೆ ಪವರ್‌ಪುಲ್‌ ವೆಪನ್‌ಗಳ ಬಗ್ಗೆ ಮಾತನಾಡಲು ಕಾರಣವೆಂದರೆ ಸ್ವಲ್ಪ ಹಿಂದಿನ ಇತಿಹಾಸ ನೋಡೋದೆ ಆದ್ರೆ ಪ್ರಸ್ತುತವಿರುವ ಟೆಕ್‌ ವೆಪನ್‌ಗಳು ಇರಲಿಲ್ಲ. ಆದರೂ ಸಹ ಅಂದಿನ ಜ್ಞಾನಕ್ಕೆ ತಕ್ಕಂತೆ ಪವರ್‌ಪುಲ್‌ ವೆಪನ್‌ಗಳನ್ನು ಹೊಂದಿದ್ದರು. ಉದಾಹರಣೆಗೆ ಟಿಪ್ಪು ಸುಲ್ತಾನ್‌ 1782 ರಲ್ಲೇ ಬ್ರಿಟೀಷ್ ಸಾಮ್ರಾಜ್ಯ ಶಾಹಿಯ ವಿರುದ್ಧದ ಆಗಿನ ಕಾಲದ ಯುದ್ಧದಲ್ಲೇ ರಾಕೆಟ್‌ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ ಆಗಿದ್ದರು. ಅಂದಿನ ರಾಕೆಟ್‌ ಯುದ್ಧ ವೆಪನ್‌ ಅಂದು ಅತ್ಯಂತ ಪವರ್‌ಪುಲ್‌ ವೆಪನ್‌ ಸಹ ಆಗಿತ್ತು. ಅಂದಿನಿಂದ ತಂತ್ರಜ್ಞಾನನೊಂದಿಗೆ ಪವರ್‌ಪುಲ್‌ ವೆಪನ್‌ಗಳು ಹೇಗೆ ಬೆಳೆದುಬಂದಿವೆ, ಹಾಗೂ ಇತಿಹಾಸದಲ್ಲಿದ್ದ ಅತ್ಯಂತ ಪವರ್‌ಪುಲ್‌ ವೆಪನ್‌ಗಳು ಯಾವುವು ಎಂದು ನಿಮಗೆ ತಿಳಿಸುತ್ತಿದ್ದೇವೆ.

ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

1

1

ಮ್ಯಾಕ್ಸಿಮ್‌ ಮಷಿನ್‌ ಗನ್‌ ಒಂದು ನಿಮಿಷಕ್ಕೆ 600 ಸುತ್ತುಗಳು ಫೈಯರ್‌ ಮಾಡುವಂತಹ ಸಾಮರ್ಥ್ಯ ಹೊಂದಿತ್ತು. 700 ಬ್ರಿಟೀಷ್‌ ಸೈನಿಕರು ಕೇವಲ ನಾಲ್ಕು ಮ್ಯಾಕ್ಸಿಮ್‌ ಮೆಷಿನ್‌ ಗನ್‌ ಬಳಸಿ ಶಾಂಗನಿ ಯುದ್ಧದಲ್ಲಿ 3000 ಯೋಧರ ವಿರುದ್ಧ ಯುದ್ಧ ಮಾಡಲಾಗಿತ್ತು. ಅಂದಿನಕಾಲದ ತಂತ್ರಜ್ಞಾನದ ಪ್ರಖ್ಯಾತ ವೆಪನ್ 'ಮ್ಯಾಕ್ಸಿಮ್‌ ಮೆಷಿನ್‌ ಗನ್‌' ಆಗಿತ್ತು.

2

2

15ನೇ ಶತಮಾನದಲ್ಲಿ 80 ಸೆಂಮೀ ವ್ಯಾಸದ ವಿಶಾಲ ಬಾಲ್‌ ಸೂಪರ್‌ ಗನ್‌ ಅನ್ನು ಆಸ್ಟ್ರಿಯಾದಲ್ಲಿ ಬಳಸಲಾಗುತ್ತಿತ್ತು. ಪ್ರಸ್ತುತದಲ್ಲಿ ದೈತ್ಯಾಕಾರದ ಮದ್ದುಗುಂಡುಗಳ ಈ ವೆಪನ್‌ ಅನ್ನು ವಿಯೆನ್ನಾ " Heeresgeschichtliches" ಮ್ಯೂಸಿಯಂನಲ್ಲಿ ಇಡಲಾಗಿದೆ.

3

3

ಇದುವರೆಗೆ ಸಹ ವಿಶ್ವದ ದೊಡ್ಡ ಫಿರಂಗಿ ಎಂದರೆ ಅದು 975 mm. ಇದನ್ನು ಜೋಸೆಫ್‌ ಪೈಕ್ಸಾನ್ಸ್‌ ಎಂಬುವವರು ತಯಾರಿಸಿದ್ದರು. 1832 ರಲ್ಲಿ ಇದು ಉತ್ತರ ಬೆಲ್ಜಿಯಂನ ಆಂಟ್ವರ್ಪ್‌ ಪ್ರದೇಶವನ್ನು ಸುತ್ತುಗಟ್ಟುವಲ್ಲಿ ಕುಖ್ಯಾತಿಯನ್ನು ಪಡೆಯಿತು.

4

4

ಇದುವರೆಗೆ ತಯಾರಿಸಿದ ದೊಡ್ಡ ಹೊವಿಟ್ಜರ್‌ ( short gun for firing shells). ಇದರ ತೂಕ 38 ಟನ್‌ ಆಗಿದ್ದು, 5.34 ಮೀಟರ್‌ ಉದ್ದವಿದೆ. ತ್ಸಾರ್‌ ಕ್ಯಾನನ್‌ ಅನ್ನು 1586ರಲ್ಲಿ ನಿರ್ಮಿಸಲಾಗಿತ್ತು.

5

5

ಮೊಟ್ಟ ಮೊದಲ ಯುದ್ಧ ವಾಹನ "ಮಾರ್ಕ್ 1". ಇದನ್ನು ಟ್ಯಾಂಕ್‌ ಎಂದು ಕರೆಯಲಾಗುತ್ತಿತ್ತು. ಮೊದಲು ನಿರ್ಮಿಸಿದಾಗ ಇದರಲ್ಲಿ 5 ಮೆಷಿನ್‌ ಗನ್‌ ಮತ್ತು 8 ಸೈನಿಕರನ್ನು ಹೊತ್ತೋಯ್ಯಲಾಗುತ್ತಿತ್ತು. ಮೊದಲ ಮಹಾಯುದ್ಧ ವೇಳೆಯಲ್ಲಿ ಹಲವು ದೇಶಗಳು ಇದನ್ನು ಬಳಸಿವೆ. ಅಲ್ಲದೇ ಹೆಚ್ಚು ಅಪ್‌ಡೇಟ್‌ ಅನ್ನು ಸಹ ಇದು ಪಡೆದಿದೆ.

6

6

"ಕಾರ್ಲ್‌ ಗೆರಟ್‌" ಎಂಬ ವಿಶಾಲ ಸ್ವಯಂನೋದಿತ ಮೆಷಿನ್ ಅನ್ನು ರೇನ್‌ಮೆಟಾಲ್‌ ಎಂಬುವವರು ತಯಾರಿಸಿದರು. ಇದನ್ನು ನಾಜಿ ಯುದ್ಧಕ್ಕಾಗಿ ತಯಾರಿಸಿದ್ದಲ್ಲದೇ ಎರಡನೇ ಮಹಾಯುದ್ಧ ವೇಳೆಯಲ್ಲಿ ಬಳಸಿಕೊಳ್ಳಲಾಯಿತು.

7

7

ಎರಡನೇ ಮಹಾಯುದ್ಧ ವೇಳೆಯಲ್ಲಿ ಈ ಎರಡು ವಿಶಾಳ ಕಾಲಿಬರ್‌ ಯುದ್ಧ ವೆಪನ್‌ಗಳನ್ನು ಜರ್ಮನ್‌ 80 cm ರೈಲ್ವೆ ದಾಳಿ ಗನ್‌ ಆಗಿ ಬಳಸಿತ್ತು.

8

8

Ruchnoy Protivotankovyy Granatomyot ( RPG-71 ) ಯು ವಿಶ್ವಚ ಮೊದಲ ವಿರೋಧ ಯುದ್ಧ ಕವಚವಾಗಿದೆ.

9

9

ಅಮೇರಿಕದ ಗುರುತ್ವಾಕರ್ಷಣ ಬಾಂಬ್‌ ಹಾಗೂ ಅತ್ಯಂತ ಪವರ್‌ಪುಲ್‌ ನ್ಯೂಕ್ಲಿಯಾರ್ ಯುದ್ಧ ಶಸ್ತ್ರವೆಂದರೆ "B41 (ಎಂ.ಕೆ.-41)". ಆದರೆ ಇದನ್ನು 1975 ರಲ್ಲೇ ಬಳಕೆ ಮಾಡುವುದನ್ನು ನಿಲ್ಲಿಸಲಾಯಿತು.

10

10

ರಷ್ಯಾದ "P-270 Moskit" ಅತ್ಯಂತ ವೇಗವಾದ ಸೂಪರ್‌ಸಾನಿಕ್‌ ರಾಮ್‌ಜೆಟ್‌ ಕ್ಷಿಪಣಿಯು ಯುದ್ಧದಲ್ಲಿ ಕೌಂಟರ್‌ ದಾಳಿಗೆ ಹೆಸರುವಾಸಿಯಾಗಿದೆ. ಆದರೆ ಇದರ ವೇಗ ಮತ್ತು ಸಾಮರ್ಥ್ಯದ ಬಗ್ಗೆ ಹೆಚ್ಚು ರಹಸ್ಯಗಳನ್ನು ಮಿಲಿಟರಿಯಿಂದ ಹೊರಗೆ ಬಿಟ್ಟುಕೊಡಲಾಗಿಲ್ಲ.

11

11

ಯುದ್ಧ ಕ್ಷಿಪಣಿಗಳಲ್ಲಿ ಅತಿ ಹೆಚ್ಚು ವೇಗ Mach 2.9 (3580.92 km/h) ರೆಕಾರ್ಡ್‌ ಮಾಡಿದೆ. ರಷ್ಯಾದ ಸೂಪರ್‌ಸಾನಿಕ್ ವಿರೋಧಿ ವೇಗ ಕ್ಷಿಪಣಿ ಅಮೇರಿಕದ ಕ್ಯಾರಿಯರ್‌ಗಳನ್ನು ಸುಲಭವಾಗಿ ಬೀಳಿಸಬಲ್ಲದು.

12

12

ಹೆಚ್ಚು ಉದ್ದವಿರುವ ಇರಾನಿಯನ್‌ ಕ್ಷಿಪಣಿಗಳು ಸುಮಾರು 5,000 km ಅನ್ನು ತಲುಪಬಲ್ಲವು. ಅದರೆ ಈ ಕ್ಷಿಪಣಿಗಳನ್ನು ಇರಾನ್‌ 'ಇಸ್ರೇಲ್‌ ಸಂಭಾವ್ಯ ದಾಳಿಯ ಸಮಯದಲ್ಲಿ ಮಾತ್ರ ಬಳಸುತ್ತದಂತೆ'.

13

13

ಅಗ್ನಿ ಕ್ಷಿಪಣಿಯನ್ನು ಭಾರತ ಅಭಿವೃದ್ದಿಪಡಿಸಿದೆ. ಇದು ಅಭಿವೃದ್ದಿ ಹೊಂದಿದ ನಂತರ ಪರಿಸರದ ಮೂಲಭೂತ ವಸ್ತುಗಳಲ್ಲಿ ಇದು ಒಂದು ಎಂದು ಹೆಸರು ಪಡೆದಿದೆ. ಅಂದಹಾಗೆ ಇದು ಖಂಡಾಂತರ ಕ್ಷಿಪಣಿಯಾಗಿದೆ.

14

14

ಬಹುಸಂಖ್ಯಾತರಿಗೆ ಈಗಾಗಲೇ ಹಿರೋಶಿಮಾ ಮತ್ತು ನಾಗಸಾಕಿ ಅಣುಬಾಂಬ್‌ ಸ್ಫೋಟದ ಬಗ್ಗೆ ತಿಳಿದಿರಬಹುದು. ಆದರೆ ಫ್ಯಾಟ್‌ ಮ್ಯಾನ್ ಮತ್ತು ಲಿಟಲ್ ಬಾಯ್‌ ಎಂಬ ಈ ಎರಡು ಪ್ರಖ್ಯಾತವಲ್ಲದ ಅಣುಬಾಂಬ್‌ಗಳು ಯುದ್ಧಗಳು ಮುಂದಿನ ದಿನಗಳಲ್ಲಿ ದೇಶಕ್ಕೆ ಏನನ್ನು ನೀಡಬಲ್ಲವು ಎಂಬುದನ್ನು ತಿಳಿಸಲಿವೆ.

15

15

ಅಮೇರಿಕ ಉಷ್ಣನ್ಯೂಕ್ಲಿಯಾರ್‌ ಬಾಂಬ್‌ ಸೇವೆಯ ಪವರ್‌ಪುಲ್‌ ಯುದ್ಧ ವೆಪನ್‌ "B53". ಆದರೆ ಇದು ದೀರ್ಘಕಾಲ ಕಾರ್ಯನಿರ್ವಹಿಸಲಾರದಂತೆ.

16

16

ಪ್ರಪಂಚದಲ್ಲಿ ನ್ಯೂಕ್ಲಿಯರ್‌ ಬಾಂಬ್‌ ಅಲ್ಲದಿದ್ದರು ಅದಕ್ಕಿಂತ ಹೆಚ್ಚು ಪವರ್‌ಪುಲ್‌ ಆಗಿ ನಿರ್ಮಾಣವಾಗಿದ್ದ ಬಾಂಬ್‌ ಎಂದರೆ ಅದು " MOAB/GBU-43/B ಬೃಹತ್‌ ಶಸ್ತ್ರಾಗಾರ". ಇದನ್ನು 2003 ಮಾರ್ಚ್‌ 11 ರಂದು ಪರಿಶೀಲನೆ ನಡೆಸಲಾಗಿತ್ತು. ಒಮ್ಮೆಯೇ ಇದು 137.61 m ರೇಡಿಯಸ್‌ ಸಾಮರ್ಥ್ಯದ ಮೂಲಕ 9 ನಗರಗಳನ್ನು ನಾಶಮಾಡಬಲ್ಲದು.

17

17

ಇದರ ನಿಕ್‌ನೇಮ್‌ ಎಂದರೆ "ಫಾದರ್‌ ಆಫ್‌ ಆಲ್‌ ಬಾಂಬ್‌". ಫೊಯಬ್‌ ವೆಪನ್‌ ಅನ್ನು ರಷ್ಯಾ ನಿರ್ಮಿಸಿ ಥೆರ್ಮೊಬೆರಿಕ್‌ ವೆಪನ್‌ ಆಗಿ ಕಾರ್ಯ ಆರಂಭಿಸಿತ್ತು.

18

18

ತ್ಸಾರ್‌ ಬಾಂಬ್ 27 ಟನ್‌ ದ್ರವ್ಯರಾಶಿಗಳನ್ನು ಹೊಂದಿದ್ದು, 3.5 ಕಿಲೋಮೀಟರ್‌ ನಷ್ಟು ರೇಡಿಯಸ್‌ನೊಂದಿಗೆ ಫೈಯರ್‌ಬಾಲ್‌ಗಳನ್ನು ತಯಾರಿಸಬಲ್ಲದು.

19

19

ನಿಮಿಟ್ಜ್‌ ಕ್ಲಾಸ್‌ ವಿಮನಾ ನೌಕೆಯು ಎರಡು ನ್ಯೂಕ್ಲಿಯಾರ್‌ ರಿಯಾಕ್ಟರ್‌ ಅನ್ನು ಹೊಂದಿದ್ದು 23 ವರ್ಷಗಳ ಕಾಲ ಯಾವುದೇ ಇಂಧನವನ್ನು ಬೇಡುವುದಿಲ್ಲ.

20

20

ಬೋಯಿಂಗ್ YAL -1 ಲೇಸರ್‌ ವಾಯುಗಾಮಿಯನ್ನು ಅಮೇರಿಕ ರಕ್ಷಣಾ ಕ್ಷಿಪಣಿಯಾಗಿ ವಿನ್ಯಾಸಗೊಳಿಸಲಾಗಿತ್ತು. ಅಂದಹಾಗೆ ಇದು ಆಕ್ಸಿಜನ್‌ ಆಯೋಡಿನ್‌ ಕೆಮಿಕಲ್‌ ಅನ್ನು ಹೊಂದಿತ್ತು.

Best Mobiles in India

English summary
Most Powerful Tech Weapons In History. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X