ಆಪಲ್ ಸ್ಟೊರ್ ನೊಂದಿಗೆ ಗ್ರಾಹಕರು ಹೊಂದಿದ 9 ಕಿರಿಕಿರಿಯ ದೂರುಗಳು

By Prateeksha
|

ಆಪಲ್ ನ ಬಹಳಷ್ಟು ಜನ ಅಭಿಮಾನಿಗಳು ಇರಬಹುದು, ಆದರೆ ಎಲ್ಲರದು ಅವರ ಸ್ಥಳೀಯ ಆಪಲ್ ಸ್ಟೋರ್ ನೊಂದಿಗೆ ಒಳ್ಳೆ ಸಂಬಂಧ ಹೊಂದಿರಲಿಕ್ಕಿಲ್ಲಾ. ಆಪಲ್ ಸ್ಟೊರ್ ನೊಂದಿಗೆ ಎಲ್ಲರದು ರಾಗ-ದ್ವೇಷದ ಸಂಬಂಧ ಹಲವಾರು ಕಾರಣಗಳಿಗಾಗಿ.

ಆಪಲ್ ಸ್ಟೊರ್ ನೊಂದಿಗೆ ಗ್ರಾಹಕರು ಹೊಂದಿದ 9 ಕಿರಿಕಿರಿಯ ದೂರುಗಳು

ಬಿಡುಗಡೆಯಾದ ದಿನವೇ ಐಫೋನ್ ಹೊಸ ಮೊಡೆಲ್ ಖರೀದಿಸಿದ ಅನುಭವವಿದ್ದರೆ ನಿಮಗೆ ಗೊತ್ತಿರುತ್ತದೆ ಎಷ್ಟು ತರಲೆಗಳು ಈ ಆಪಲ್ ಸ್ಟೊರ್ ನವರು ಅಂತ. ನೀವು ಎಲ್ಲಾ ಕಡೆ ತಿರುಗಾಡಿ ಐಫೋನ್ ನಿನ ಹೊಸ ವರ್ಷನ್ ತೆಗೆದುಕೊಳ್ಳಲು ಸಾಧ್ಯವಾದರು ಕೂಡ , ನಿಮಗೆ ಕೆಲ ಕೆಟ್ಟ ಅನುಭವವಾಗಿರಬಹುದು.

ಓದಿರಿ: ಯೂಟ್ಯೂಬ್‌ನಲ್ಲಿ ವೀಡಿಯೊ ಬಫರಿಂಗ್‌ ಆಗದೆ ನೋಡುವುದು ಹೇಗೆ?

ಇಲ್ಲಿ, ನಾವು ಆಪಲ್ ಸ್ಟೊರ್ ನ ಎಲ್ಲಕ್ಕಿಂತ ಕೆಟ್ಟ ದೂರುಗಳೊಂದಿಗೆ ಬಂದಿದ್ದೇವೆ ಲೊಂಚ್ ಡೆ ಯ ಜನಜಂಗುಳಿ ಯ ವಿಷಯ ಬಿಟ್ಟು. ಕೆಳಗಿನ ಸ್ಲೈಡ್ಸ್ ನಲ್ಲಿ ನೋಡಿ.

ಅತಿಯಾಗಿ ಕಾಯಿಸುವುದು

ಅತಿಯಾಗಿ ಕಾಯಿಸುವುದು

ಸಾಮಾನ್ಯವಾಗಿ ಬರುವ ದೂರೆಂದರೆ ಆಪಲ್ ಸ್ಟೊರ್ ನವರು ಅಪೊಯಿಂಟ್‍ಮೆಂಟ್ ಗಾಗಿ ತುಂಬಾ ಕಾಯಿಸುತ್ತಾರೆ. ಗ್ರಾಹಕರು ತಾವು ಎದುರಿಸುವ ಸ್ಥಿತಿಯನ್ನು ಕಂಡು ಬೇಸರಪಡುತ್ತಾರೆ. ಕೊಟ್ಟ ಅಪೊಯಿಂಟ್‍ಮೆಂಟ್ ಟೈಮ್‍ಗಿಂತ ಹೆಚ್ಚು ಟೈಮ್ ತೆಗೆದುಕೊಳ್ಳುತ್ತಾರೆ ಇಲ್ಲವೆ ಟೆಕ್ನಿಷಿಯನ್ ಒಂದಕ್ಕಿಂತ ಹೆಚ್ಚು ಅಪೊಯಿಂಟ್‍ಮೆಂಟ್ಸ್ ಗಳನ್ನು ನೋಡಿಕೊಳ್ಳುತ್ತಾನೆ. ಇದರ ಪರಿಣಾಮವಾಗಿ, ಗ್ರಾಹಕರು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸಮಯ ಕಾಯಬೇಕಾಗುತ್ತದೆ ಕೊಳ್ಳಲು, ಟೆಕ್ನಿಷಿಯನ್ ಜೊತೆ ಮಾತನಾಡಲು ಅಥವಾ ರಿಪೇರಿ ಅಥವಾ ಅವರ ಡಿವೈಜ್ ಅನ್ನು ರಿಪ್ಲೇಸ್ ಮಾಡಲು.

ರಿಪ್ಲೇಸ್‍ಮೆಂಟ್ ಅಥವಾ ರಿಪೇರಿಗಾಗಿ ತುಂಬಾ ಸಮಯ

ರಿಪ್ಲೇಸ್‍ಮೆಂಟ್ ಅಥವಾ ರಿಪೇರಿಗಾಗಿ ತುಂಬಾ ಸಮಯ

ಸಾಮಾನ್ಯವಾಗಿ ಹೊಸದಾಗಿ ಫೋನ್ ತೆಗೆದುಕೊಂಡವರ ದೂರು ಇರುವುದಿಲ್ಲಾ, ಆದರೆ ಯಾರಿಗೆ ರಿಪೇರಿ ಅಥವಾ ತಮ್ಮ ಡಿವೈಜ್ ರಿಪ್ಲೇಸ್ ಮಾಡುವುದಿರುತ್ತೊ ಅವರು ದೂರುತ್ತಾರೆ. ರಿಪ್ಲೇಸ್‍ಮೆಂಟ್ ಮಾಡಬೇಕಾದಲ್ಲಿ ಆಪಲ್ ಉದ್ಯೋಗಿ ನಿಮಗೆ ಇಂತಿಷ್ಟು ಅಂದಾಜು ಸಮಯ ಹೇಳುತ್ತಾರೆ ನಿಮಗೆ ಯಾವಾಗ ಸಿಗಬಹುದು ನಿಮ್ಮ ಡಿವೈಜ್ ಸಿಗಬಹುದು ಎನ್ನುವುದರ ಬಗ್ಗೆ ಮತ್ತು ಅವರು ನೀವು ಯಾವಾಗ ಬಂದು ತೆಗೆದುಕೊಂಡು ಹೋಗಬಹುದು ಎನ್ನುವುದರ ಬಗ್ಗೆ ಈ-ಮೇಲ್ ಮಾಡುತ್ತಾರೆ. ಆದರೆ, ಗ್ರಾಹಕರು ಹೇಳುತ್ತಾರೆ ಯಾವುದೇ ಈ-ಮೇಲ್ ಇಲ್ಲದೆಯೆ ಅವರು ಕೊಟ್ಟ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.

ರಿಪೇರಿಯ ಖರ್ಚು ದುಬಾರಿ

ರಿಪೇರಿಯ ಖರ್ಚು ದುಬಾರಿ

ವಾರಂಟಿ ಇಲ್ಲದ ಆಪಲ್ ಡಿವೈಜ್ ರಿಪೇರಿ ಮಾಡುವ ಮಾತು ಬಂದರೆ ಮುಗಿಯಿತು, ಆಪಲ್ ಸಿಕ್ಕಾಪಟ್ಟೆ ಚಾರ್ಜ್ ಮಾಡುತ್ತೆ. ಗ್ರಾಹಕರಿಗೆ ತಮ್ಮ ಕೆಲಸ ಮಾಡದ ಡಿವೈಜ್ ಗಾಗಿ ದೊಡ್ಡ ಮೊತ್ತ ತೆರಬೇಕಾದಾಗ ಕಿರಿಕಿರಿ ಆಗುತ್ತದೆ. ಪರಿಸ್ಥಿತಿ ಇನ್ನು ಯಾವಾಗ ಕೆಟ್ಟದ್ದು ಎಂದರೆ ನೀವು ಶಾರೀರಿಕವಾಗಿ ಡಿವೈಜನ್ನು ಬೀಳಿಸದೆ ಇಲ್ಲವೆ ಪೆಟ್ಟು ಮಾಡದೆ ಇದ್ದಾಗ.

ಬಹಳಷ್ಟು ಪಟ್ಟಣಗಳಲ್ಲಿ ಆಪಲ್ ಸ್ಟೊರ್ ಇಲ್ಲಾ

ಬಹಳಷ್ಟು ಪಟ್ಟಣಗಳಲ್ಲಿ ಆಪಲ್ ಸ್ಟೊರ್ ಇಲ್ಲಾ

ಮುಖ್ಯ ದೂರು ಎಂದರೆ ಬಹಳಷ್ಟು ಪಟ್ಟಣ ಮತ್ತು ಊರುಗಳಲ್ಲಿ ಆಪಲ್ ಸ್ಟೊರ್ ಇಲ್ಲಾ. ಹೀಗಾಗಿ ಗ್ರಾಹಕ ರಿಪೇರಿಗಾಗಿ ತುಂಬಾ ದೂರ ಪ್ರಯಾಣ ಮಾಡಬೇಕಾಗುತ್ತದೆ ಮತ್ತು ಸ್ಥಿತಿ ಇನ್ನೂ ಹದಗೆಡುವುದು ಅಪೊಯಿಂಟ್‍ಮೆಂಟ್ಸ್ ಡೀಲೆ ಆದಾಗ.

ಅಪ್‍ಗ್ರೇಡ್ ಮಾಡಲು ಒತ್ತಡ

ಅಪ್‍ಗ್ರೇಡ್ ಮಾಡಲು ಒತ್ತಡ

ಬಹಳಷ್ಟು ಗ್ರಾಹಕರು ತಮ್ಮ ಹಳೆಯ ಆಪಲ್ ಡಿವೈಜನ್ನು ಪ್ರೀತಿಸುತ್ತಾರೆ ಮತ್ತು ಹೊಸ ಮೊಡೆಲ್ ಗೆ ಅಪ್‍ಗ್ರೇಡ್ ಆಗಬೇಕೆಂದು ಬಯಸುವುದಿಲ್ಲಾ. ಅಂತಹ ಗ್ರಾಹಕರಿಗೆ ತಲೆ ಕೆಡುತ್ತದೆ ಟೆಕ್ನಿಷಿಯನ್ ರಿಪೇರಿ ಮಾಡುವ ಬದಲಿಗೆ ಡಿವೈಜನ್ನು ಅಪಗ್ರೇಡ್ ಮಾಡಲು ಹೋದಾಗ.

ಗೊಂದಲ ತರಿಸುವ ವಾರಂಟಿಗಳು

ಗೊಂದಲ ತರಿಸುವ ವಾರಂಟಿಗಳು

ಆಪಲ್ ಕೇರ್ ಪ್ಲಾನ್ ಡಿವೈಜ್ ಗೆ ಹೆಚ್ಚಿನ ಸುರಕ್ಷತೆಯ ಕೊಡುಗೆ ನೀಡುತ್ತೆ, ಆದರೆ ಈ ವಾರಂಟಿ ಯಾವಾಗ ಮುಗಿಯುತ್ತೆ ಅಥವಾ ಏನೆಲ್ಲವನ್ನು ಒಳಗೊಂಡಿರುತ್ತದೆ ಎನ್ನುವುದನ್ನು ಸ್ಪಷ್ಟಪಡಿಸದೆ ಗೊಂದಲ ತರಿಸುತ್ತದೆ. ಗ್ರಾಹಕ ಐಫೋನ್ ನನ್ನು ಕ್ಯಾರಿಯರ್ ಅಥವಾ ಆಪಲ್ ಸ್ಟೊರ್ ನ ಹೊರತಾಗಿ ಬೇರೆ ರಿಟೇಲರ್ ನಿಂದ ಕೊಂಡರೆ ಐಫೊನ್ ನ ವಾರಂಟಿ ಎಲ್ಲಿಯವರೆಗೆ ಇದೆ ಎನ್ನುವುದು ಗೊಂದಲದ ವಿಷಯವಾಗುತ್ತದೆ.

ಡಾಟಾ ಕಳೆದುಕೊಳ್ಳುವ ಅವಕಾಶವಿದೆ

ಡಾಟಾ ಕಳೆದುಕೊಳ್ಳುವ ಅವಕಾಶವಿದೆ

ಬಹಳಷ್ಟು ಗ್ರಾಹಕರು ತಮ್ಮ ಡಾಟಾ ದ ಬ್ಯಾಕ್‍ಅಪ್ ತೆಗೆದುಕೊಳ್ಳುವುದು ಅವಶ್ಯಕ ಎಂದು ಅರಿಯುವುದಿಲ್ಲಾ. ಯಾರು ಮುನ್ನೆಚ್ಚರಿಕೆ ವಹಿಸುವುದಿಲ್ಲವೊ ಅವರದು ಡಾಟಾ ಕಳೆದು ಕೊಳ್ಳುವ ಹೆಚ್ಚಿನ ಸಂಭವವಿರುತ್ತದೆ ನೊನ್ ಫಂಕ್ಷನಲ್ ಡಿವೈಜ್ ನಿಂದಾಗಿ. ಕೆಲ ಸವiಯದಲ್ಲಿ ಟೆಕ್ನಿಷಿಯನ್ ಎಲ್ಲಾ ಡಾಟಾ ಅಳಿಸುವ ಸಂಭವವಿರುತ್ತದೆ.

ಆಪಲ್ ಐಡಿ ಮತ್ತು ಲೊಗಿನ್ ಸಮಸ್ಯೆ

ಆಪಲ್ ಐಡಿ ಮತ್ತು ಲೊಗಿನ್ ಸಮಸ್ಯೆ

ಆಪಲ್ ಬಳಕೆದಾರರಲ್ಲಿ ಬಹಳಷ್ಟು ಜನ ಲೊಗಿನ್ ಸಮಸ್ಯೆ ಎದುರಿಸಿರಬಹುದು. ಕೆಲಸ ಮಾಡಲು ಆಪಲ್ ಐಡಿ ಸಿಗದಿದ್ದಾಗ ಅಥವಾ ಪಾಸ್‍ಕೋಡ್ ಇಲ್ಲಾ ಸೆಕ್ಯುರಿಟಿ ಕೋಡ್ ನೆನಪಿಲ್ಲದೆ ಹೋದರೆ ಸಿಟ್ಟು ತರುವ ಸಮಸ್ಯೆಯಾಗುತ್ತದೆ. ಇದನ್ನು ಪರಿಹರಿಸುವುದು ಆಪಲ್ ಟೆಕ್ನಿಷಿಯನ್ ಗೆ ಅಷ್ಟು ಸುಲಭವಾದ ಮಾತಲ್ಲಾ.

ಹೆಚ್ಚಿನ ಡಿಸ್ಕೌಂಟ್ ಇಲ್ಲಾ

ಹೆಚ್ಚಿನ ಡಿಸ್ಕೌಂಟ್ ಇಲ್ಲಾ

ಡಿಸ್ಕೌಂಟ್ ಗಾಗಿ ಜನರು ಸಾಮಾನ್ಯವಾಗಿ ನೋಡುತ್ತಾರೆ. ಆದರೆ ಆಪಲ್ ನಿಮಗೆ ಬೇಕಾದಷ್ಟು ಡಿಸ್ಕೌಂಟ್ ಕೊಡುವುದಿಲ್ಲಾ ಲೇಟೆಸ್ಟ್ ಐಫೋನ್ ಅಥವಾ ಮ್ಯಾಕ್ ಗೆ ಅಪ್‍ಗ್ರೇಡ್ ಮಾಡಿದಾಗ. ಆದರೆ, ಅದೇ ಸಿಗುತ್ತದೆ ಪ್ರತಿಷ್ಟಿತ ಅಂಗಡಿ ಅಥವಾ ಕ್ಯಾರಿಯರ್ ಸೈಟ್ಸ್ ಗಳಲ್ಲಿ ಸಿಗುತ್ತದೆ ಏಕೆಂದರೆ ಅವರು ತಮ್ಮ ವ್ಯಾಪಾರ ಚೆನ್ನಾಗಿ ಆಗಲೆಂದು ತುಂಬಾ ಕಷ್ಟ ಪಡುತ್ತಿದ್ದಾರೆ.

Best Mobiles in India

English summary
Apple customers experience a lot of issues with the Apple store. They experience frustrating experiences such as long waits, delayed appointments, and more. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X