Subscribe to Gizbot

ಬೆಳೆ ನಷ್ಟದ ಪರಿಹಾರಕ್ಕಾಗಿ ಡ್ರೋಣ್ ಸಹಾಯ: ತೆಲೆಂಗಾಣ ಸರಕಾರದಿಂದ ಹೊಸ ಪ್ರಯೋಗ..!

Written By: Lekhaka

ತಂತ್ರಜ್ಞಾನ ಕ್ರಾಂತಿಯೂ ಇಂದು ದೇಶದ ಎಲ್ಲಾ ವಿಭಾಗದಲ್ಲಿಯೂ ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ದೇಶದ ಬೆನ್ನೆಲುಬು ಕೃಷಿ ವಲಯವು ಸಹ ತಂತ್ರಜ್ಞಾನದ ಸಹಾಯವನ್ನು ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ. ದೇಶದಲ್ಲಿ ಕೃಷಿಯನ್ನು ಜೂಟಜಾಟಕ್ಕೆ ಹೋಲಿಕೆ ಮಾಡುವುದನ್ನು ನೀವು ಕೇಳಿರಬಹುದು. ಇದಕ್ಕಾಗಿದೆ ಸರಕಾರಗಳು ರೈತರಿಗೆ ಕೃಷಿ ಬೆಳೆ ವಿಮೆಯನ್ನು ಮಾಡಿಸುವಂತೆ ಸಲಹೆಯನ್ನು ನೀಡುತ್ತವೆ. ಇದೇ ಮಾದರಿಯಲ್ಲಿ ತೆಲೆಂಗಾಣ ಸರಕಾರವು ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.

ಬೆಳೆ ನಷ್ಟದ ಪರಿಹಾರಕ್ಕಾಗಿ ಡ್ರೋಣ್ ಸಹಾಯ: ತೆಲೆಂಗಾಣ ಸರಕಾರದಿಂದ ಹೊಸ ಪ್ರಯೋಗ..!

ಈಗಾಗಲೇ ಹಲವಾರು ನೈಸರ್ಗಿಕ ಮತ್ತು ಮಾನವ ನಿರ್ಮಿತ ಕಾರಣಗಳಿಂದ ರೈತರು ಬೆಳೆಯುವ ಬೆಳೆಗಳು ಕೈಗೆ ಬರುವ ಮುನ್ನವೆ ನಷ್ಟವಾಗುತ್ತವೆ, ಪ್ರಾಣೀ ದಾಳಿಯಿಂದ ಇಲ್ಲವೇ ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಷ್ಟವು ಉಂಟಾಗುತ್ತದೆ, ಹೀಗೆ ಉಂಟಾದ ನಷ್ಟವನ್ನು ತುಂಬಿ ಕೊಡಲು ಮತ್ತು ನಷ್ಟವನ್ನು ಸರಿಯಾದ ರೀತಿಯಲ್ಲಿ ಅಳತೆ ಮಾಡಿ ರೈತರಿಗೆ ನೆರವಾಗುವಂತಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅಲ್ಲಿನ ಸರಕಾರ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಳೆ ನಷ್ಟದ ಶೀಘ್ರ ಪರಿಹಾರಕ್ಕೆ:

ಬೆಳೆ ನಷ್ಟದ ಶೀಘ್ರ ಪರಿಹಾರಕ್ಕೆ:

ಸದ್ಯದ ವ್ಯವಸ್ಥೆಯಲ್ಲಿ ಬೆಳೆ ನಷ್ಟ ಉಂಟಾದ ಸಂದರ್ಭದಲ್ಲಿ ವಿಮೆ ಹಣವನ್ನು ನೀಡಲು ಮೊದಲಿಗೆ ಮಾನ್ಯೂವಲ್ ಆಗಿ ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ನೀಡಬೇಕಾಗಿತ್ತು. ಇದಕ್ಕೆ ಹೆಚ್ಚಿನ ಸಮಯ ಮತ್ತು ಹಣವು ವ್ಯಯವಾಗುತ್ತಿತ್ತು. ಇದನ್ನು ತಡೆಯುವ ಸಲುವಾಗಿ ಮತ್ತೆ ಬೆಳೆ ನಷ್ಟದ ಪರಿಹಾರವನ್ನು ಶೀಘ್ರವೇ ವಿತರಿಸಲು ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ.

HP Sprocket First Impressions (Kannada)
ಬೆಂಗಳೂರು ಮೂಲದ ಕಂಪನಿ:

ಬೆಂಗಳೂರು ಮೂಲದ ಕಂಪನಿ:

ಬೆಂಗಳೂರು ಮೂಲದ ಕಂಪನಿಯೊಂದು ಹೊಸ ಮಾದರಿಯ ತಂತ್ರಜ್ಞಾನವನ್ನು ನಿರ್ಮಿಸುತ್ತಿದೆ. ಸದ್ಯ ಸಣ್ಣ ಪ್ರಮಾಣದಲ್ಲಿ ಪರೀಕ್ಷೆಯನ್ನು ನಡೆಸಲಿದೆ. ಇದಾದ ನಂತರದಲ್ಲಿ ಇಲ್ಲಿ ಯಶಸ್ವಿಯಾದ ನಂತರದಲ್ಲಿ ರಾಜ್ಯದ ಎಲ್ಲಾ ಭಾಗಗಳಿಯೂ ವಿಸ್ತಾರ ಮಾಡಲಿದೆ. ಅದಕ್ಕಾಗಿ ಡ್ರೋಣ್ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಇದು ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

'ಪೇಟಿಎಂ ಕ್ಯೂಆರ್' ಆಯ್ಕೆಯನ್ನು ನೀಡಿದೆ ಪೇಟಿಎಂ!!..ಏನೆಲ್ಲಾ ಲಾಭ ಗೊತ್ತಾ?

ಡ್ರೋಣ್ ಟೆಕ್ನಾಲಜಿ:

ಡ್ರೋಣ್ ಟೆಕ್ನಾಲಜಿ:

ಮೊದಲಿಗೆ ಮಣ್ಣಿನ ಪರೀಕ್ಷೆಯನ್ನು ನಡೆಸಲಿದೆ. ಇದಾದ ನಂತರದಲ್ಲಿ ಬೆಳೆಗಳ ಮೇಲೆ ನಿಗಾ ವಹಿಸಲಿದೆ. ಇದಾದ ನಂತರದಲ್ಲಿ ಬೆಳೆ ನಷ್ಟವಾದ ಸಂದರ್ಭದಲ್ಲಿಯೂ ತುಂಬಿಸಿಕೊಡಲು ಡ್ರೋಣ್ ಮೂಲಕ ಸರ್ವೆಯನ್ನು ನಡೆಸಿಲಿದೆ ಎನ್ನಲಾಗಿದೆ. ಇದು ಒಟ್ಟಿನಲ್ಲಿ ರೈತರಿಗೆ ಸಹಾಯವನ್ನು ಮಾಡಲಿದೆ. ಅಲ್ಲದೇ ವೇಗವಾಗಿ ಬೆಳೆ ವಿಮೆಯನ್ನು ದೊರೆಕಿಸಿಕೊಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Telangana Government is planning to take the help of technology, for the first time in the country, in estimating crop loss for the purpose of settlement of insurance claims in a transparent and swift manner.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot