Subscribe to Gizbot

ಜಿಯೋ, ಟ್ರಾಯ್‌ ವಿರುದ್ದ ತಿರುಗಿಬಿದ್ದ ಟೆಲಿಕಾಂ!! ಮತ್ತೊಂದು ಬಿಗ್‌ಫೈಟ್??

Written By:

ನಿಯಮಬಾಹಿರ ಮತ್ತು ತಾರತಮ್ಯದ ಆಫರ್‌ಗಳ ಮೂಲಕ ಇತರೆ ಟೆಲಿಕಾಂಗಳು ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಜಿಯೋ ದೂರಿಗೆ ಇತರೆ ಟೆಲಿಕಾಂಗಳು ಕಿಡಿಕಾರಿವೆ.! ಜಿಯೋ ನೀಡಿದ ದೂರಿನ ವಿಚಾರವಾಗಿ ಟ್ರಾಯ್ ಇತರ ಟೆಲಿಕಾಂಗಳನ್ನು ಪ್ರಶ್ನಿಸಿದ್ದು, ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಯಾವುದೇ ಟೆಲಿಕಾಂಗೆ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಲು ಇನ್ನೊಂದು ಟೆಲಿಕಾಂಗೆ ಅವಕಾಶವಿದೆ ಎಂದು ಎಲ್ಲಾ ಟೆಲಿಕಾಂಗಳು ಹೇಳಿವೆ.!

ಇದರಿಂದ ಟ್ರಾಯ್ ಕೆರಳಿದ್ದು, ಈ ಮೊದಲು ಟೆಲಿಕಾಂನಲ್ಲಿದ್ದ ನಿಯಮಗಳನ್ನೆ ಜಿಯೋಗೂ ವಿಧಿಸಲಾಗಿದೆ. ಅದೇ ರೀತಿ ಇತರ ಟೆಲಿಕಾಂಗಳು ನಿಯಮಗಳನ್ನು ಪಾಲಿಸಲೇಬೇಕು. ಇಲ್ಲವಾದಲ್ಲಿ ನಿಯಮಬಾಹಿರಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಟ್ರಾಯ್ ಹೇಳಿದೆ.!! ಹಾಗಾಗಿ, ಮತ್ತೆ ಟೆಲಿಕಾಂನಲ್ಲಿ ಬಿಗ್‌ಫೈಟ್ ಎದುರಾಗುವ ಲಕ್ಷಣಗಳು ಕಾಣುತ್ತಿವೆ.!!

ಜಿಯೋ, ಟ್ರಾಯ್‌ ವಿರುದ್ದ ತಿರುಗಿಬಿದ್ದ ಟೆಲಿಕಾಂ!! ಮತ್ತೊಂದು ಬಿಗ್‌ಫೈಟ್??

 ಓದಿರಿ: ಆಧಾರ್, ಪಾನ್‌ಕಾರ್ಡ್ ಲಿಂಕ್ ಮಾಡಲು ಒಂದು ಮೆಸೇಜ್ ಸಾಕು!!

ಟೆಲಿಕಾಂಗಳು ತನ್ನದೇ ಗ್ರಾಹಕರಿಗೆ ತಾರತಮ್ಯ ಮಾಡುತ್ತಿವೆ ಎಂಬ ಜಿಯೋ ದೂರಿಗೂ ಸಹ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಟೆಲಿಕಾಂಗಳು ಸಮರ್ಥಿಸಿಕೊಂಡಿವೆ.!! ಇತರ ಟೆಲಿಕಾಂಗಳು ನೀಡುತ್ತಿರುವ ಆಫರ್‌ಗಳನ್ನು ನೊಡಿಕೊಂಡು ಕೂರಲಾಗದು ಎಂಬರ್ಥದಲ್ಲಿ ಟೆಲಿಕಾಂ ಕಂಪೆನಿಗಳು ಹೇಳಿವೆ.!

ಜಿಯೋ, ಟ್ರಾಯ್‌ ವಿರುದ್ದ ತಿರುಗಿಬಿದ್ದ ಟೆಲಿಕಾಂ!! ಮತ್ತೊಂದು ಬಿಗ್‌ಫೈಟ್??

"ಗ್ರಾಹಕರು ಮತ್ತು ಆಪರೇಟರ್ ನಡುವಿನ ಸಂಬಂಧದಿಂದ ಹೊರಬರಲು ಗ್ರಾಹಕರು ಬಯಸಿದಾಗ ಆ ಗ್ರಾಹಕನನ್ನು ಉಳಿಸಿಕೊಳ್ಳಲು ಆಪರೇಟರ್ಸ್‌ಗೆ ಮೂಲಭೂತ ಹಕ್ಕಿದೆ ಮತ್ತು ಇದು ಟೆಲಿಕಾಂ ಉದ್ಯಮಕ್ಕೆ ಮಾತ್ರವಲ್ಲ ಯಾವುದೇ ಉದ್ಯಮಕ್ಕೆ ಇದು ಸರಿಹೊಂದಿಸಬಹುದು "ಎಂದು ಭಾರ್ತಿ ಏರ್ಟೆಲ್ ನಿಯಂತ್ರಿತ ಮುಖ್ಯಸ್ಥ ರವಿ ಗಾಂಧಿ ಹೇಳಿದ್ದಾರೆ.!!

ಜಿಯೋ, ಟ್ರಾಯ್‌ ವಿರುದ್ದ ತಿರುಗಿಬಿದ್ದ ಟೆಲಿಕಾಂ!! ಮತ್ತೊಂದು ಬಿಗ್‌ಫೈಟ್??

ಆದರೆ, ಇದಕ್ಕೆ ಟ್ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದು, ಜಿಯೋಗಿಂತ ಮುಂಚೆಯೂ ಹಲವು ಟೆಲಿಕಾಂಗಳು ಬಂದಿವೆ. ಆ ಟೆಲಿಕಾಂಗಳಿಗೂ ನೀಡಿದ ಸೌಲಭ್ಯವನ್ನೆ ಜಿಯೋಗೂ ನೀಡಲಾಗಿದೆ ಅಷ್ಟೆ ಎಂದು ಟ್ರಾಯ್ ಹೇಳಿದ್ದು, ಹಾಗಾಗಿ, ನಿಯಮ ಉಲ್ಲಂಘನೆಯ ವಿಚಾರದಿಂದಾಗಿ ಟೆಲಿಕಾಂ ಪ್ರಪಂಚದ ಮುಂದಿನ ಬದಲಾವಣೆಗಳು ಕುತೋಹಲವಾಗಿದೆ.!!

ಓದಿರಿ: ಮಕ್ಕಳಿಗೆ ಸ್ಮಾರ್ಟ್‌ಫೋನ್ ಹೆಚ್ಚು ಉಪಯೋಗಿಸಲು ಕೊಡ್ತೀರಾ? ಹಾಗಿದ್ರೆ ಈ ವರದಿ ನೋಡಿ!!

English summary
Bharti Airtel and Idea Cellular say that they should have the right to give counter offers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot