ಬಾಹ್ಯಾಕಾಶಕ್ಕೆ ತೆರಳಿದ ವಿಶ್ವದ ಮೊದಲ ಮತ್ತು ಏಕೈಕ ಬೆಕ್ಕಿನ ಕಂಚಿನ ಪ್ರತಿಮೆ!!

1963ರ ಅಕ್ಟೋಬರ್ 18ರಂದು ಫೆಲಿಸೆಟ್ ಹೆಸರಿನ ಬೆಕ್ಕನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.

|

ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ವಿಶ್ವದ ಮೊದಲ ಮತ್ತು ಏಕೈಕ ಬೆಕ್ಕಿನ ಕಂಚಿನ ಪ್ರತಿಮೆ ಫ್ರಾನ್ಸ್‌ನಲ್ಲಿ ನಿರ್ಮಾಣವಾಗಲಿದೆ. ಹೌದು, ವಿಶ್ವದಲ್ಲಿಯೇ ಬಹ್ಯಾಕಾಶಕ್ಕೆ ಪ್ರಯಾಣಿಸಿದ ಏಕೈಕ ಬೆಕ್ಕು ಎಂಬ ಹೆಸರು ಪಡೆದಿರುವ ಫೆಲಿಸೆಟ್‌ನ ಕಂಚಿನ ಪ್ರತಿಮೆ ಅದು ಬಾಹ್ಯಾಕಾಶಕ್ಕೆ ತಲುಪಿದ 50ನೇ ವರ್ಷದ ನೆನಪಿಗಾಗಿ ನಿರ್ಮಾಣವಾಗುತ್ತಿದೆ.!!

1963ರ ಅಕ್ಟೋಬರ್ 18ರಂದು ಫೆಲಿಸೆಟ್ ಹೆಸರಿನ ಬೆಕ್ಕನ್ನು ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಒಟ್ಟು 157 ಕಿ.ಮೀ. ಎತ್ತರ ಕ್ರಮಿಸಿದ ನಂತರ ಈ ಬೆಕ್ಕಿನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೇವಲ15 ನಿಮಿಷಗಳ ನಂತರ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರಲಾಗಿತ್ತು.!!

ಬಾಹ್ಯಾಕಾಶಕ್ಕೆ ತೆರಳಿದ ವಿಶ್ವದ ಮೊದಲ ಮತ್ತು ಏಕೈಕ ಬೆಕ್ಕಿನ ಕಂಚಿನ ಪ್ರತಿಮೆ!!

ಇದೀಗ ಈ ಬೆಕ್ಕಿನ ನೆನಪಿಗಾಗಿ ಫ್ರಾನ್ಸ್‌ನಲ್ಲಿ ಕಂಚಿನ ಪ್ರತಿಮೆ ನಿರ್ಮಿಸಲು ಲಂಡನ್‌ನಲ್ಲಿ ಕೆಲಸ ಮಾಡುತ್ತಿರುವ ಕ್ರಿಯೇಟಿವ್ ಡೈರೆಕ್ಟರ್ ಮ್ಯಾಥ್ಯೂ ಸರ್ಜ್ ಗೈ ಅವರು , ಸುಮಾರು 6 ತಿಂಗಳ ಹಿಂದೆ, ಬಾಹ್ಯಾಕಾಶಕ್ಕೆ ತೆರಳಿದ ಬೆಕ್ಕಿನ 50 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಈ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.!!

ಬಾಹ್ಯಾಕಾಶಕ್ಕೆ ತೆರಳಿದ ವಿಶ್ವದ ಮೊದಲ ಮತ್ತು ಏಕೈಕ ಬೆಕ್ಕಿನ ಕಂಚಿನ ಪ್ರತಿಮೆ!!

ಎಷ್ಟೋ ಜನರಿಗೆ ಬಹ್ಯಾಕಾಶಕ್ಕೆ ಪ್ರಯಾಣಿಸಿದ ಏಕೈಕ ಬೆಕ್ಕಿನ ಬಗ್ಗೆ ಸರಿಯಾದ ಮಾಹಿತಿಯೇ ಸಿಕ್ಕಿಲ್ಲ. 1960ರ ದಶಕದಲ್ಲಿ ನಾಯಿ, ಮಂಗಗಳು ಎಲ್ಲವೂ ಸಹ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದರಿಂದ ವಿಶೇಷ ಬೆಕ್ಕಿನ ಬಗ್ಗೆ ಹಲವರು ಮರೆತಿದ್ದಾರೆ. ಹಾಗಾಗಿ, ಈ ಕಂಚಿನ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.!!

ಓದಿರಿ: ಆಪಲ್ X ವಿನ್ಯಾಸದಲ್ಲಿ ಬರುತ್ತಿದೆ ಶಿಯೋಮಿಯ "ಮೈ ಮಿಕ್ಸ್2 ಎಸ್" ಸ್ಮಾರ್ಟ್‌ಫೋನ್!!

Best Mobiles in India

English summary
bronze statue of Felicette, the world's first and only cat to have travelled to space, may soon be erected in France.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X