Subscribe to Gizbot

BSLN ನೀಡಿದ 339 ರೂ. 56 GB ಡೇಟಾ ಆಫರ್‌ನಲ್ಲಿದೆ ಮೂರು ತೊಂದರೆಗಳು..!!!

Written By:

ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ದರ ಸಮಯದಲ್ಲಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಲು ಮುಂದಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಜಿಯೋ, ಏರ್‌ಟೆಲ್ ಮತ್ತು ವೊಡೋಪೋನ್ ಕಂಪನಿಗಳ ಕೊಡುಗೆಗಳಿಗೆ ಪ್ರತಿಯಲ್ಲಿ ನೂತನ ಆಫರ್‌ವೊಂದನ್ನು ಘೋಷಣೆ ಮಾಡಿತ್ತು. ಈ ಕೊಡುಗೆ ಬೇರೆ ಎಲ್ಲಾ ಕಂಪನಿಗಳ ಆಫರ್‌ಗಳಿಗಿಂತಲೂ ಉತ್ತಮವಾಗಿದ್ದರೂ, ತನ್ನದೇ ಆದ ಮಿತಿಗಳನ್ನು ಒಳಗೊಂಡಿದೆ.

BSLN ನೀಡಿದ 339 ರೂ. 56 GB ಡೇಟಾ ಆಫರ್‌ನಲ್ಲಿದೆ ಮೂರು ತೊಂದರೆಗಳು..!!!

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ಕೇವಲ 339 ರೂ.ಗಳಿಗೆ 28 ದಿನಗಳ ಅವಧಿಗೆ ಪ್ರತಿ ನಿತ್ಯ 2GB ಡೇಟಾದಂತೆ 56GB ಡೇಟಾ ನೀಡುವುದಾಗಿ ಘೋಷಣೆ ಮಾಡಿದ BSNL ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ಸಮರಕ್ಕೆ ಮತ್ತಷ್ಟು ತುಪ್ಪವನ್ನು ಸುರಿಯಿತು. ಈ ಹಿನ್ನಲೆಯಲ್ಲಿ BSNL ನೀಡಿರುವ ಆಫರ್‌ನಲ್ಲಿ ಎರಡು ಪ್ರಮುಕ ತೊಡಕುಗಳಿದ್ದು, ಅದು ಇಲ್ಲವಾದಗಿದ್ದರೇ ಮಾರುಕಟ್ಟೆಯಲ್ಲಿ ಇದೇ ಸದ್ಯದ ಬೆಸ್ಟ್ ಆಫರ್‌ ಆಗುತ್ತಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕರೆ ಸಮಸ್ಯೆ:

ಕರೆ ಸಮಸ್ಯೆ:

ಸದ್ಯ BSNL ಘೋಷಣೆ ಮಾಡಿರುವ 339 ರೂ. ಪ್ಲಾನ್‌ ನಲ್ಲಿ ಉಚಿತ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆಯಾದರು, ಅದು BSLN ನಿಂದ BSLNಗೆ ಮಾತ್ರ, ನಿಮ್ಮ ಸ್ಮೇಹಿತರು- ಬಂಧುಬಾಂಧವರು BSLN ಹೊಂದಿದ್ದರೆ ಅವರಿಗೆ ಮಾತ್ರ ಕರೆ ಮಾಡಬಹುದಾಗಿದೆ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡಬೇಕಿದ್ದರೆ ಪ್ರತಿನಿತ್ಯ ಕೇವಲ 25 ನಿಮಿಷಗಳು ಮಾತ್ರ ಉಚಿತವಾಗಿದ್ದು, ನಂತರ ಪ್ರತಿ ನಿಮಿಷಕ್ಕೆ 25 ಪೈಸೆ ದರವನ್ನು ವಿಧಿಸಲಿದೆ. ಆದರೆ ಇದೇ ಬೇರೆ ಕಂಪನಿಗಳು ಉಚಿತ ಕರೆ ಸೇವೆಯನ್ನು ನೀಡಿವೆ.

ನೆಟ್‌ವರ್ಕ್ ತೊಂದರೆ:

ನೆಟ್‌ವರ್ಕ್ ತೊಂದರೆ:

ಇದು ಅತ್ಯಂತ ದೊಡ್ಡ ಸಮಸ್ಯೆಯಾಗಿದ್ದು, ಖಾಸಗಿ ಕಂಪನಿಗಳು ದೇಶದಲ್ಲಿ ಈಗಾಗಲೇ 4G ಸೇವೆಯನ್ನು ಆರಂಭಿಸಿರುವುದಲ್ಲದೇ ಉಚಿತ ಕೊಡುಗೆಗಳನ್ನು ನೀಡುತ್ತಿರುವುದು ಕೇವಲ 4G ಬಳಕೆದಾರಿಗೆ ಮಾತ್ರ, ಆದರೆ ಸರ್ಕಾರಿ ಸ್ವಾಮ್ಯದ BSNL ಸದ್ಯ 3G ಸೇವೆಯನ್ನು ಮಾತ್ರ ನೀಡುತ್ತಿದೆ. ಈ ಕೊಡುಗೆಯೂ 3G ಡೇಟಾಗೆ ಸಿಮೀತವಾಗಿದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ BSLN ಇನ್ನು 2G ಸೇವೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು ಇದರಿಂದ ಹೆಚ್ಚಿನ ಗ್ರಾಹರಿಗೆ ಇದರ ಲಾಭ ಪಡೆಯುವ ಸಾಧ್ಯತೆ ಕಡಿಮೆ:

ಎಲ್ಲರಿಗೂ ಈ ಕೊಡುಗೆ ಮುಕ್ತವಾಗಿಲ್ಲ:

ಎಲ್ಲರಿಗೂ ಈ ಕೊಡುಗೆ ಮುಕ್ತವಾಗಿಲ್ಲ:

BSLN ಘೋಷಣೆ ಮಾಡಿರುವ 339 ರೂ ಕೊಡುಗೆಯೂ ಎಲ್ಲಾ BSLN ಬಳಕೆದಾರಿಗೂ ಮುಕ್ತವಾಗಿಲ್ಲ, ಯಾರಿಗೆ ಈ ಆಫರ್‌ ಕುರಿತು ಮೇಸೆಜ್ ಬಂದಿರುತ್ತದೆ ಮತ್ತು ನೋಷಿಫಿಕೇಷನ್ ಬಂದಿರುವುದೋ ಅವರಿಗೆ ಮಾತ್ರ ಈ ಕೊಡುಗೆ ಬಳಕೆಗೆ ಮುಕ್ತವಾಗಿದೆ. ಈ ಕಾರಣಗಳಿಂದಾಗಿ BSLN ಕೊಡುಗೆ ಬೇರೆ ಕಂಪನಿಗಳಿಗೆ ಅಷ್ಟೊಂದು ಮಾರಕವಾಗುತ್ತಿದಿಲ್ಲ ಎನ್ನಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
NL on Thursday announced a new monthly pack for its users. This packs gives users 56 GB of bundled data, along with "unlimited calls" at Rs 339. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot