ರೆಕಾರ್ಡ್‌ ಸಹಿಗಾಗಿ ಮದುವೆಗೆ ಹೋದ ಬಿ.ಟೆಕ್‌ ವಿದ್ಯಾರ್ಥಿ: ವೀಡಿಯೋ ವೈರಲ್‌

Written By:

ಇಂಜಿನಿಯರಿಂಗ್‌, ಬಿ.ಟೆಕ್‌, ಎಂ.ಟೆಕ್, ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವವರಿಗೆಲ್ಲಾ ಒಂದೇ ಭಯ. ಅದೇನ್‌ ಅಂದ್ರೆ ಕೊನೆಯ ಸೆಮಿಸ್ಟರ್‌ನಲ್ಲಿ ತಮ್ಮ ರೆಕಾರ್ಡ್‌ಗಳು, ಪ್ರಾಯೋಗಿಕ ಯೋಜನೆಗಳನ್ನ ಕರೆಕ್ಟ್‌ ಟೈಮ್‌ಗೆ ಮುಗಿಸುತ್ತೀವಾ ಅಂತ. ಕಾರಣ ಸರಿಯಾದ ವೇಳೆಗೆ ಉಪನ್ಯಾಸಕರಿಗೆ ರೆಕಾರ್ಡ್‌ ಸಲ್ಲಿಸಲಿಲ್ಲ ಅಂದ್ರೆ ಅವರು ತಮ್ಮ ಸಹಿ ಹಾಕುವುದಿಲ್ಲ. ಹಾಗೆ ಕೋರ್ಸ್ ಮುಗಿಯುವುದು ಕಷ್ಟ. ಅಂದಹಾಗೆ ಈ ವಿಷಯಾದ ಇಲ್ಲಿ ಏಕೆ ಹೇಳ್ತಿದ್ದೀವಿ ಅಂತಿರಾ? ಅದಕ್ಕೆ ಒಂದು ವೀಡಿಯೋ ವೈರಲ್‌ ಆಗಿರೋದೆ ಕಾರಣ.

ರೆಕಾರ್ಡ್‌ ಸಹಿಗಾಗಿ ಮದುವೆಗೆ ಹೋದ ಬಿ.ಟೆಕ್‌ ವಿದ್ಯಾರ್ಥಿ: ವೀಡಿಯೋ ವೈರಲ್‌

ಕೋರ್ಸ್‌ ಮುಗಿಯೋ ಕೊನೆ ಅವಧಿಯಲ್ಲಿ ತುಂಬಾ ಜನ ಲೇಟಾಗಿ ರೆಕಾರ್ಡ್‌ ಮುಗಿಸಿ ಉಪನ್ಯಾಸಕರ ಸಹಿ ಪಡೆಯಲು ಏನೇನೋ ಟ್ರಿಕ್‌ ಉಪಯೋಗಿಸುತ್ತಾರೆ. ಆದ್ರೆ ಕೇರಳದ "ಮುಸಾಲಿಯರ್‌ ಇಂಜಿನಿಯರಿಂಗ್‌ ಕಾಲೇಜಿ"ನ "ಶ್ರೀನಾಥ್‌" ಎಂಬ ಬಿ.ಟೆಕ್‌ ವಿದ್ಯಾರ್ಥಿ ತಮ್ಮ ಉಪನ್ಯಾಷಕರ ಬಳಿ ಸಹಿ ತೆಗೆದುಕೊಳ್ಳಲು ಉಪಯೋಗಿಸಿದ ಟ್ರಿಕ್‌ ಮಾತ್ರ ವಿಭಿನ್ನ, ಹಾಸ್ಯಮಯ, ಹೊಸತನ ಎಲ್ಲವೂ ಕೂಡ. ಅಂದಹಾಗೆ ಶ್ರೀನಾಥ್‌ ಅವರ ಉಪನ್ಯಾಸಕರ ಬಳಿ ಸಹಿ ತೆಗೆದುಕೊಳ್ಳಲು ಅವರ ಮದುವೆಗೆ ಹೋಗಿ ಶುಭಾಷಯಗಳನ್ನು ತಿಳಿಸುವ ನೆಪದಲ್ಲಿ ರಿಷಪ್ಸನ್‌ ವೇಳೆಯಲ್ಲಿ ಸಹಿ ತೆಗೆದುಕೊಂಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿ ಎಲ್ಲರಿಗೂ ಮನರಂಜನೆಯನ್ನೂ ಸಹ ನೀಡುತ್ತಿದೆ. ಆ ವೀಡಿಯೋನ ನೀವು ಒಮ್ಮೆ ನೋಡಿ ಹೇಗಿದೆ.

ಉದ್ಯೋಗಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಭಾರತದ ಟಾಪ್‌ ಕಂಪನಿಗಳು
ವೀಡಿಯೋ ಕೃಪೆ: AZHAR REHMAN

English summary
B.Tech Student Went To His Prof’s Wedding Just To Get His Assignment Signed- Video viral. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot