Subscribe to Gizbot

ವಿವಾಹಕ್ಕೆ ಹೆಣ್ಣು ಸಿಗದೇ 'ರೋಬೋಟ್' ಮದುವೆಯಾದ ಇಂಜಿನಿಯರ್!!

Written By:

ವಿವಾಹವಾಗಲು ಹೆಣ್ಣು ಸಿಗದೇ ಹತಾಶೆಗೊಳಗಾದ ಚೀನಾದ ಇಂಜಿನಿಯರ್ ಓರ್ವ ತಾನೇ ಸೃಷ್ಟಿಸಿದ ರೋಬೋಟ್ ಅನ್ನು ವಿವಾಹವಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.!! 31 ವರ್ಷ ವಯಸ್ಸಿನ ಕೃತಕ ಬುದ್ಧಿಮತ್ತೆ ತಜ್ಞ 'ಝೆಂಗ್ ಜಿಯಾಜಿಯಾ' ಎಂಬುವವರೆ ರೋಬೋಟ್ ಮದುವೆಯಾಗಿರುವವರು.!!

ಝೆಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಝೆಂಗ್ ಜಿಯಾಜಿಯಾ ವಿವಾಹವಾಗಲು ಹೆಣ್ಣು ಸಿಗದೇ ಬೇಸತ್ತು ತಾವೇ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ರೋಬೋಟ್ ಅನ್ನು ಸರಳ ಸಮಾರಂಭವೊಂದರಲ್ಲಿ ವಿವಾಹವಾಗಿದ್ದಾರೆ. ರೋಬೋಟ್ ಅನ್ನು ಚೀನಾದ ಸಾಂಪ್ರದಾಯಿಕ ವಧುವಿನಂತೆಯೇ ಸಿಂಗರಿಸಿ ಕಾರ್ಯಕ್ರಮದಲ್ಲಿ ಕೂರಿಸಲಾಗಿದೆ.!! ಇನ್ನು ರೋಬೋಟ್‌ಗೆ 'ಯಿಂಗ್ ಯಿಂಗ್' ಎಂದು ಹೆಸರಿಟ್ಟಿದ್ದಾರೆ.!

ವಿವಾಹಕ್ಕೆ ಹೆಣ್ಣು ಸಿಗದೇ 'ರೋಬೋಟ್' ಮದುವೆಯಾದ ಇಂಜಿನಿಯರ್!!

ಯಿಂಗ್ ಯಿಂಗ್ ಚೀನಾದ ಅಕ್ಷರಗಳು ಹಾಗೂ ಚಿತ್ರಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಸರಳವಾಗಿ ಮಾತನಾಡುವ ಸಾಮರ್ಥ್ಯವನ್ನೂ ಯಿಂಗ್ ಯಿಂಗ್ ಹೊಂದಿದೆಯಂತೆ.! ಮನೆಯಲ್ಲಿ ಮನುಷ್ಯರಂತೆಯೇ ಇರುವ ಮತ್ತು ನಡೆಯುವ ರೋಬೋಟ್ ಪತ್ನಿಯನ್ನಾಗಿ ಮಾಡಲು ಝೆಂಗ್ ಯೋಜನೆ ರೂಪಿಸಿದ್ದಾರೆ ಎಲ್ಲಲಾಗಿದ್ದು, ಮುಂದೆ ಝೆಂಗ್‌ನ ರೂಬಾಟ್ ಹೆಂಡತಿ ಮತ್ತಷ್ಟು ಬದಲಾವಣೆ ಆಗಲಿದ್ದಾಳೆ.!!

ವಿವಾಹಕ್ಕೆ ಹೆಣ್ಣು ಸಿಗದೇ 'ರೋಬೋಟ್' ಮದುವೆಯಾದ ಇಂಜಿನಿಯರ್!!

ಚೀನಾದಲ್ಲಿ 2030 ರ ವೇಳೆಗೆ ಸುಮಾರು 30 ಮಿಲಿಯನ್ ಚೀನಾದ ಪುರುಷರು ವಿವಾಹವಾಗದೇ ಏಕಾಂಗಿಯಾಗಿ ಉಳಿಯಲಿದ್ದಾರೆ ಎಂದು ಇತ್ತೀಚೆಗಷ್ಟೇ ಸಂಶೋಧಕರು ಎಚ್ಚರಿಸಿದ್ದರು. 2020 ರ ವೇಳೆಗೆ ಚೀನಾದಲ್ಲಿ ವಿವಾಹವಾಗದೇ ಉಳಿಯುವ 35-59 ವರ್ಷ ವಯಸ್ಸಿನ ಪುರುಷರ ಸಂಖ್ಯೆ 15 ಮಿಲಿಯನ್ ದಾಟಲಿದ್ದು, ಸಮಸ್ಯೆಗೆ ಇದು ಸ್ಪಷ್ಟ ಉದಾಹರಣೆಯಾಗಿದೆ.!!

'ಟ್ರೂ ಕಾಲರ್' ಆಪ್ ಬಳಸುತ್ತಿದ್ದರೆ ಈಗಲೇ ಡಿಲೀಟ್ ಮಾಡಿ!!.ಏಕೆ ಗೊತ್ತಾ?

English summary
‘Wife’ can identify Chinese characters and speak a few words, but hubby plans upgrades. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot