ಹಳೆ ಮೊಬೈಲ್‌ ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನದ ಆಭರಣಗಳು ಮಾರುಕಟ್ಟೆಗೆ!!

ಕಂಪ್ಯೂಟರ್‌ ಬಿಡಿ ಭಾಗಗಳನ್ನು ತಯಾರಿಸುವ ಡೆಲ್‌ ಕಂಪನಿ ಹಳೆಯ ಕಂಪ್ಯೂಟರ್‌, ಮೊಬೈಲ್‌ಗಳ ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನದಿಂದ ಆಭರಣ ತಯಾರಿಸಿ ಮಾರಾಟ.!!

|

ಕಂಪ್ಯೂಟರ್‌ ಬಿಡಿ ಭಾಗಗಳಲ್ಲಿ ಚಿನ್ನವಿರುತ್ತದೆ ಎಂದು ಇಲ್ಲಿಯವರೆಗೂ ನಾವು ಕೇಳಿದ್ದೆವು. ಆದರೆ, ಕಂಪ್ಯೂಟರ್‌ ಬಿಡಿ ಭಾಗಗಳನ್ನು ತಯಾರಿಸುವ ಡೆಲ್‌ ಕಂಪನಿ ಹಳೆಯ ಕಂಪ್ಯೂಟರ್‌, ಮೊಬೈಲ್‌ಗಳ ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನದಿಂದ ಆಭರಣ ತಯಾರಿಸಿ ಮಾರಾಟ ಮಾಡಲು ಸಜ್ಜಾಗಿದೆ.!!

ಹೌದು, ಉಪಯೋಗಕ್ಕೆ ಬಾರದ ಹಳೆಯ ಕಂಪ್ಯೂಟರ್‌, ಮೊಬೈಲ್‌ಗಳ ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನದಿಂದ ತಯಾರಿಸಿದ ಆಭರಣಗಳನ್ನು ಅಮೆರಿಕದ ಲಾಸ್‌ ವೆಗಾಸ್‌ನಲ್ಲಿ ನಡೆದ ಸಿಇಎಸ್ ಶೋ 2018ನಲ್ಲಿ ಪ್ರದರ್ಶಸಲಾಗಿದದೆ.! ಈ ಆಭರಣಗಳೆಲ್ಲವೂ 14-18 ಕ್ಯಾರೆಟ್‌ ಗುಣಮಟ್ಟದ ಚಿನ್ನವಾಗಿದೆ ಎಂದು ಡೆಲ್ ಕಂಪೆನಿ ತಿಳಿಸಿದೆ.!!

ಹಳೆ ಮೊಬೈಲ್‌ ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನದ ಆಭರಣಗಳು ಮಾರುಕಟ್ಟೆಗೆ!!

2018 ರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಷೋ ಮೇಳ ಹಲವು ಹೊಸತನಕ್ಕೆ ಸಾಕ್ಷಿಯಾಗಿದ್ದು, ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನ ಕೂಡ ವಿಶೇಷ ಅವಿಷ್ಕಾರವಾಗಿದೆ.!! ಹಾಗಾದರೆ, ಈ ಚಿನ್ನವನ್ನು ಹೇಗೆ ಮಾರಾಟ ಮಾಡಲಾಗುತ್ತಿದೆ? ಇ-ತ್ಯಾಜ್ಯಗಳಲ್ಲಿ ಇನ್ನು ಇರುವ ಚಿನ್ನದ ಪ್ರಮಾಣ ಎಷ್ಟು? ಎಂಬುದನ್ನು ಮುಂದೆ ತಿಳಿಯಿರಿ.!!

ಇದೇ ಮೊದಲು ಇಂತಹ ಕಾರ್ಯ!!

ಇದೇ ಮೊದಲು ಇಂತಹ ಕಾರ್ಯ!!

ಮೊದಲೇ ಹೇಳಿದಂತೆ ಕಂಪ್ಯೂಟರ್‌ ಬಿಡಿ ಭಾಗಗಳಲ್ಲಿ ಚಿನ್ನವಿರುತ್ತದೆ ಎಂದು ಇಲ್ಲಿಯವರೆಗೂ ತಿಳಿದಿದ್ದರೂ ಈ ವರೆಗೆ ಇವುಗಳಿಮದ ಚಿನ್ನವನ್ನು ತೆಗೆಯುವ ಕಾರ್ಯಕ್ಕೆ ಯಾವ ಹೆಸರಾಂತ ಕಂಪೆನಿ ಕೂಡ ಕೈಹಾಕಿರಲಿಲ್ಲ. ಆದರೆ, ಕಂಪ್ಯೂಟರ್‌ ಬಿಡಿ ಭಾಗಗಳನ್ನು ತಯಾರಿಸುವ ಡೆಲ್‌ ಇದನ್ನು ಸಾಧಿಸಿ ತೋರಿಸಿದೆ.!!

ಪರಿಸರ ಸ್ನೇಹಿ ಪ್ರಕ್ರಿಯೆ!!

ಪರಿಸರ ಸ್ನೇಹಿ ಪ್ರಕ್ರಿಯೆ!!

ಇ-ವೇಸ್ಟ್ ಪುನರ್‌ಬಳಕೆಯಲ್ಲಿ ಡೆಲ್‌ ಕಂಪನಿ ಹೊಸ ಭಾಷ್ಯ ಬರೆದಿದೆ. ಮದರ್‌ಬೋರ್ಡ್‌ ಅನ್ನು ಸಂಸ್ಕರಿಸಿ ತಯಾರಿಸಲ್ಪಟ್ಟ ಚಿನ್ನದ ಆಭರಣಗಳು, ಸಾಂಪ್ರದಾಯಿಕ ಗಣಿಗಾರಿಕೆಯಿಂದ ಹೊರತೆಗೆದ ಚಿನ್ನಕ್ಕಿಂತ ಶೇ 99 ರಷ್ಟು ಪರಿಸರ ಸ್ನೇಹಿ ಪ್ರಕ್ರಿಯೆಯಾಗಿದೆ ಎಂಬುದು ಇತರ ಎಲೆಕ್ಟ್ರಾನಿಕ್ ಕಂಪೆನಿಗಳಿಗೆ ಶಾಕ್ ನೀಡಿದೆ.!!

ಬಯೂ ವಿತ್ ಲವ್‌!!

ಬಯೂ ವಿತ್ ಲವ್‌!!

ಮದರ್‌ಬೋರ್ಡ್‌ಗಳಲ್ಲಿ ಗಣಿಗಾರಿಕೆ ನಡೆಸಿ ಹೊರ ತೆಗೆದ ಚಿನ್ನಉಂಗುರ, ಕಿವಿ ಓಲೆ, ಕೋಟ್‌ಗಳಿಗೆ ಧರಿಸುವ ಕಫ್ ಲಿಂಗ್ಸ್‌ಗಳ ರೂಪ ಪಡೆದುಕೊಂಡು ಬಿಕರಿಯಾಗಲು ಸಿದ್ಧಗೊಂಡಿದೆ. ಹಾಲಿವುಡ್‌ ನಟಿ ರೆಡ್‌ ಅವರ ನೇತೃತ್ವದ ಬಯೂ ವಿತ್ ಲವ್‌ (Bayou with Love) ಎಂಬ ಸಂಸ್ಥೆಯ ಮೂಲಕ ಈ ಆಭರಣಗಳನ್ನು ಆನ್‌ಲೈನ್‌ ಮೂಲಕ ಮಾರಟ ಮಾಡಲಾಗುತ್ತಿದೆ.!!

100 ಮಿಲಿಯನ್‌ ಪೌಂಡ್  ಪುನರ್ ಬಳಕೆ ಉತ್ಪನ್ನ!!

100 ಮಿಲಿಯನ್‌ ಪೌಂಡ್ ಪುನರ್ ಬಳಕೆ ಉತ್ಪನ್ನ!!

ಅಮೆರಿಕ ದೇಶವೊಂದರಲ್ಲೇ ಪ್ರತಿವರ್ಷ 60 ಸಾವಿರ ಯುಎಸ್‌ ಮಿಲಿಯನ್‌ ಡಾಲರ್‌ನಷ್ಟು ಮೌಲ್ಯದ ಚಿನ್ನ, ಬೆಳ್ಳಿ ಲೇಪಿತವಾದ ಸಾವಿರಾರು ಮದರ್‌ಬೋರ್ಡ್‌ಗಳು ಕಸ ಸೇರುತ್ತಿದ್ದು, 2020ರವೊಳಗೆ ಡೆಲ್‌ ರಿಕನೆಕ್ಟ್ ಯೋಜನೆಯಲ್ಲಿ 100 ಮಿಲಿಯನ್‌ ಪೌಂಡ್ ಪುನರ್ ಬಳಕೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಡೆಲ್ ಚಿಂತಿಸಿದೆ.!!

Best Mobiles in India

English summary
ಕಂಪ್ಯೂಟರ್‌ ಬಿಡಿ ಭಾಗಗಳಲ್ಲಿ ಚಿನ್ನವಿರುತ್ತದೆ ಎಂದು ಇಲ್ಲಿಯವರೆಗೂ ನಾವು ಕೇಳಿದ್ದೆವು. ಆದರೆ, ಕಂಪ್ಯೂಟರ್‌ ಬಿಡಿ ಭಾಗಗಳನ್ನು ತಯಾರಿಸುವ ಡೆಲ್‌ ಕಂಪನಿ ಹಳೆಯ ಕಂಪ್ಯೂಟರ್‌, ಮೊಬೈಲ್‌ಗಳ ಮದರ್‌ಬೋರ್ಡ್‌ನಿಂದ ಹೊರ ತೆಗೆದ ಚಿನ್ನದಿಂದ ಆಭರಣ ತಯಾರಿಸಿ ಮಾರಾಟ ಮಾಡಲು ಸಜ್ಜಾಗಿದೆ.!!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X