Subscribe to Gizbot

ಭೂಮಿಗೆ ನಮ್ಮಿಂದ ಆಗುತ್ತಿರುವ ಹಾನಿ; ನಾಸಾ ತೋರಿಸಿದ್ದು ಹೇಗೆ ಗೊತ್ತೇ?

Written By:

ಹವಾಮಾನ ಬದಲಾವಣೆ ಒಂದು ಪ್ರಮುಖ ವಿಷಯವಾಗಿದೆ. 'ವಿಶ್ವ ಪರಿಸರ ದಿನ' ಎಂಬುದು ಕೇವಲ ಜೂನ್‌ 5 ಕ್ಕೆ ಮಾತ್ರ ಸೀಮಿತವಲ್ಲ, ಅದು ದಿನನಿತ್ಯ ನಾವು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆಯೇ ಅಷ್ಟೆ ಪ್ರಾಮುಖ್ಯತೆಯನ್ನು ಮಾಲಿನ್ಯ ಮುಕ್ತ ಹವಾಮಾನ ಬದಲಾವಣೆಗಾಗಿ ನಿರ್ವಹಿಸುವ ಕರ್ತವ್ಯವಾಗಬೇಕು. ಹಿಂದೆ ಇದ್ದಂತಹ ದಟ್ಟಕಾಡುಗಳು ಈಗಿಲ್ಲ. ಕಾರಣ ಮಾನವ ಆ ದಟ್ಟಕಾಡುಗಳನ್ನು ನಾಶಗೊಳಿಸಿದ್ದಾನೆ.

ನಾಸಾ,(nasa) ವಿಶ್ವ ಪರಿಸರ ದಿನದ ಅಂಗವಾಗಿ ಮಾನವನ ಬೇಜವಾಬ್ದಾರಿಯಿಂದ ಹಿಮನದಿಗಳು, ನದಿಗಳ ಸೊಬಗು, ರೂಪ ಹೇಗೆ ಬದಲಾಗಿದೆ, ಬದಲಾಗುತ್ತಿದೆ ಎಂಬುದರ ಬಗ್ಗೆ ಹಿಂದಿನ ಮತ್ತು ಪ್ರಸ್ತುತ ಸ್ಥಿತಿಯನ್ನು ಫೋಟೋಗಳ ಮುಖಾಂತರ ನೀಡಿದೆ. ಮಾನವ ತನ್ನ ಪ್ಲಾನೆಟ್‌ ಅನ್ನು ಹೇಗೆ ತಾನೆ ನಾಶ ಮಾಡುತ್ತಿದ್ದಾನೆ ಎಂಬುದನ್ನು ಸಹ ಲೇಖನದ ಸ್ಲೈಡರ್‌ಗಳಲ್ಲಿನ ಫೋಟೋ ಮತ್ತು ಮಾಹಿತಿ ನೋಡಿ ತಿಳಿಯಿರಿ.

ಸಾಹಸಮಯಿಗಳ ರೋಮಾಂಚನಕಾರಿ ಫೋಟೋಗಳು; ನೋಡಲು ಧೈರ್ಯ ಬೇಕು!! 

ಚಿತ್ರ ಕೃಪೆ: ನಾಸಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮ್ಯಾಟರ್‌ಹಾರ್ನ್‌ ಹಿಮಾಲಯ ಪರ್ವತ

1

ಸ್ವಿಜರ್ಲ್ಯಾಂಡ್ ಮತ್ತು ಇಟಲಿ ಗಡಿ ನಡುವಿನ ಆಲ್ಪ್ಸ್ ಪ್ರದೇಶದಲ್ಲಿನ 'ಮ್ಯಾಟರ್‌ಹಾರ್ನ್ ಹಿಮಾಲಯ ಪರ್ವತ 1960 ಆಗಸ್ಟ್‌ನಲ್ಲಿ ಹೇಗಿತ್ತು ಮತ್ತು 2005 ರ ಆಗಸ್ಟ್‌ನಲ್ಲಿ ಹೇಗಿದೆ. ನೋಡಿ. ಹಿಂದೆ ಸಂಪೂರ್ಣ ಹಿಮಾವೃತವಾಗಿದ್ದ 'ಮ್ಯಾಟರ್‌ಹಾರ್ನ್‌' 45 ವರ್ಷಗಳ ಅಂತರದಲ್ಲಿ ಹಿಮವಿಲ್ಲದಂತಾಗಿದೆ.

ಪೆಡರ್ಸನ್ ಹಿಮನದಿ

2

ಅಲಾಸ್ಕ ಪ್ರದೇಶದ ಪೆಡರ್ಸನ್‌ ಹಿಮನದಿ 1917 ರ ಬೇಸಿಗೆಕಾಲದಲ್ಲಿ ಹೇಗಿತ್ತು ಮತ್ತು 2005 ರ ಬೇಸಿಗೆಕಾಲದಲ್ಲಿ ಹೇಗಿದೆ ಎಂಬದರ ವ್ಯತ್ಯಾಸವನ್ನು ಚಿತ್ರದಲ್ಲಿ ನೋಡಿರಿ. ಪ್ರಸ್ತುತದಲ್ಲಿ ಸಸ್ಯವರ್ಗವು ಹಿಮನದಿ ಸ್ಥಳದಲ್ಲಿ ಇದೆ.

ಅರಣ್ಯ ಪ್ರದೇಶ

3

ಬ್ರೆಜಿಲ್‌ನಲ್ಲಿನ ರೊಂಡೊನಿಯಾ ಅರಣ್ಯ ಪ್ರದೇಶ ಹೆಚ್ಚು ಅರಣ್ಯನಾಶಕ್ಕೆ ಒಳಪಟ್ಟ ಪ್ರದೇಶವಾಗಿ ಹೇಗೆ ಹವಾಮಾನ ಬದಲಾವಣೆಯಾಗಿದೆ ಎಂಬುದನ್ನು ನಾಸಾ ಹೇಳಿದೆ. ಜೂನ್ 1975 ರಿಮದ ಆಗಸ್ಟ್, 2009 ರ ನಡುವೆ ಈ ರೀತಿಯ ಅರಣ್ಯನಾಶವಾಗಿ ಉಷ್ಣವಲಯದ ಅರಣ್ಯ ತೀರನಾಶವಾಗಿದೆ.

ಮುಯಿರ್ ಹಿಮನದಿ

4

ಅಲಾಸ್ಕ ಪ್ರದೇಶದ 'ಮುಯಿರ್‌ ಹಿಮನದಿ' ಆಗಸ್ಟ್‌ 1941 ರ ಹಿಂದೆ ಹೇಗೆ ಹರಿಯುತ್ತಿತ್ತು, ಆಗಸ್ಟ್‌ 2004 ರಲ್ಲಿ ಪರಿಸರ ನಾಶದಿಂದಾಗಿ ಸಸ್ಯವರ್ಗ ಬೆಳೆದು ಹೇಗೆ ಹಿಮನದಿ ಹರಿವಿನ ಪ್ರಮಾಣ ಬದಲಾಗಿದೆ ಎಂಬುದನ್ನು ನಾಶ ಫೋಟೋ ಸಹಿತ ತೋರಿಸಿದ್ದು ಹೀಗೆ.

ಪೊವೆಲ್ ಸರೋವರ

5

ಅರಿಜೋನ ಮತ್ತು ಉತಾಹ್ ಪ್ರದೇಶದ ಪೊವೆಲ್‌ ಸರೋವರ ಮಾರ್ಚ್, 1999 ರಿಂದ ಮೇ 2014 ನಡುವೆ ಮ್ಯಾಪ್‌ನಿಂದಲೇ ವೀಕ್ಷಣೆಯನ್ನು ಕಳೆದುಕೊಳ್ಳುತ್ತಿದೆ.

ಮೆಕ್ಕಾರ್ಟಿ ಹಿಮನದಿ

6

ಅಲಾಸ್ಕದ 'ಮೆಕ್ಕಾರ್ಟಿ ಹಿಮನದಿ' ಜುಲೈ 1909 ರಿಂದ ಆಗಸ್ಟ್ 2004 ರಷ್ಟಲ್ಲಿ ತನ್ನ ಪ್ರದೇಶದಲ್ಲಿ ಹಿಮನದಿಯ ಸುಳಿವೇ ಇಲ್ಲದಂತೆ ಮಾನವನ ಚಟುವಟಿಕೆಗಳಿಂದ ಬದಲಾಗಿದೆ. ನಾಸಾ ಇದನ್ನು ಫೋಟೋದಲ್ಲಿ ಹೇಗೆ ತೋರಿಸಿದೆ ನೋಡಿ.

ಅರಲ್‌ ಸಮುದ್ರ

7

ಕೇಂದ್ರ ಏಷಿಯಾ ಪ್ರದೇಶದ 'ಅರಲ್‌ ಸಮುದ್ರ'ವು ಕೇವಲ 14 ವರ್ಷಗಳ ಅಂತರದಲ್ಲಿ ಸಂಪೂರ್ಣ ಬರಪೀಡಿತ ಪ್ರದೇಶವಾಗಿ ಮಾರ್ಪಾಟ್ಟಿದ್ದು ಹೀಗೆ. ಆಗಸ್ಟ್‌ 2000 ವರ್ಷದಲ್ಲಿ ಹಸಿರು ಯುಕ್ತ ಪ್ರದೇಶವಾಗಿದ್ದದ್ದು, 2014 ಆಗಸ್ಟ್‌ ವೇಳೆಗೆ ಸಂಪೂರ್ಣ ಒಣಗಿದ ಪ್ರದೇಶವಾಗಿ ಮಾರ್ಪಾಟ್ಟಿದೆ.

ಕ್ಯೂಓರಿ ಕಾಲಿಯಾ ಹಿಮನದಿ

8

ದಕ್ಷಿಣ ಅಮೇರಿಕದ ಪೆರು ದೇಶದಲ್ಲಿನ 'ಕ್ಯೂಓರಿ ಕಾಲಿಯಾ' ಹಿಮನದಿ ಜುಲೈ 1978 ರಿಂದ ಜುಲೈ 2011 ರ ನಡುವೆ ಶೇಕಡ 50 ರಷ್ಟು ಹಿಮನದಿ ನಶಿಸಿಹೋಗಿರುವ ಸನ್ನಿವೇಶ ಕಾಣಿಸಿದ್ದು ಹೀಗೆ.

ಮಾರ್‌ ಛಿಕ್ವಿಟಾ ಸರೋವರ

9

ಅರ್ಜೆಂಟಿನಾ ಪ್ರದೇಶದ ಪ್ರಖ್ಯಾತ ಸರೋವರ 'ಮಾರ್‌ ಛಿಕ್ವಿಟಾ' ಜುಲೈ 1998 ರಲ್ಲಿ ಸಂಪೂರ್ಣ ನೀರಿನಿಂದ ಕೂಡಿದ್ದು, ಸೆಪ್ಟೆಂಬರ್ 2011ರ ಸಮಯಕ್ಕೆ ಬರಡಾಗಿದ್ದು ಹೀಗೆ.

ಕರಡಿ ಹಿಮನದಿ

10

ಅಲಾಸ್ಕ ಪ್ರದೇಶದಲ್ಲಿ 'ಕರಡಿ ಹಿಮನದಿ' ಪ್ರಖ್ಯಾತ ಸೊಬಗನ್ನು ಹೊಂದಿ ಜುಲೈ 1909 ರಲ್ಲಿ ಚಿತ್ರದ ಎಡಭಾಗದಂತೆ ಕಾಣುತ್ತಿದ್ದದ್ದು, 2005 ರ ಆಗಸ್ಟ್ ವೇಳೆಗೆ ತನ್ನ ಬೃಹತ್‌ ಹಿಮ ಗರಕುವಿಕೆಯಿಂದ ತನ್ನ ಸೊಬಗನ್ನು ತೋರಿಸಿದ್ದು ಚಿತ್ರದ ಬಲಭಾಗದಂತೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಕಳೆದುಕೊಂಡ ಮೊಬೈಲ್‌ ಪತ್ತೆಗಾಗಿ ‘I lost my phone' ಗೂಗಲ್‌ ಟೂಲ್

"2016 ಸೋನಿ ವರ್ಲ್ಡ್‌ ಫೋಟೋಗ್ರಫಿ' ಸ್ಪರ್ಧೆಯಲ್ಲಿ ವಿಜೇತವಾದ ಫೋಟೋಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
On World Environment Day, NASA Reminds Us Of The Damage We’ve Done To Our Planet. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot