Subscribe to Gizbot

ಆಪ್‌ನಲ್ಲಿ ಕ್ಯಾಬ್ ಬುಕ್ ಮಾಡ್ತೀರಾ?..ಅವುಗಳ ಹೊಸ ಮೋಸ ಬಿಚ್ಚಿಟ್ಟಿದ್ದಾರೆ ನೋಡಿ!!

Written By:

ನೀವು ಓಲಾ, ಉಬರ್‌ನಂತಹ ಆಪ್‌ ಆಧಾರಿತ ಟ್ಯಾಕ್ಸಿ ಸೇವಾ ಕಂಪೆನಿಗಳಲ್ಲಿ ಹೆಚ್ಚು ಭಾರಿ ಕ್ಯಾಬ್ ಬಳಕೆ ಮಾಡಿದ್ದರೆ ನಿಮಗೆ ಪ್ರತಿಸಾರಿಯೂ ಟ್ಯಾಕ್ಸಿ ದರಗಳಲ್ಲಿ ಭಾರಿ ಬದಲಾವಣೆ ಕಾಣಿಸುವುದು ಸಾಮಾನ್ಯ.! ಏಕೆಂದರೆ ಸಮಯಕ್ಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಎರಡು ಪಟ್ಟು, ಮೂರು ಪಟ್ಟು ಹಣವನ್ನು ಅವರು ಏರಿಸುತ್ತಾರೆ.!!

ಇದಕ್ಕೆ ಆಪ್‌ ಆಧಾರಿತ ಟ್ಯಾಕ್ಸಿ ಸೇವಾ ಕಂಪೆನಿಗಳು ಸರ್ಜ್ ಪ್ರೈಸ್ (surge pricing) ಎಂದು ಕರೆದುಕೊಳ್ಳುತ್ತವೆ. ಹೆಚ್ಚು ಜನ ಏಕಕಾಲಕ್ಕೆ ಕಾರು ಹುಡುಕುತ್ತಿದ್ದಾಗ ಹೀಗೆ ಹೆಚ್ಚಿನ ಬೆಲೆ ತೋರಿಸುತ್ತದೆ ಎಂದು ಟ್ಯಾಕ್ಸಿ ಸೇವಾ ಕಂಪೆನಿಗಳೇ ಗ್ರಾಹಕರಿಗೂ ಹೇಳಿಕೊಳ್ಳುವ ಅತ್ಯುತ್ತಮ ಪರಿಪಾಟ ಕೂಡ ಇದೆ ಎನ್ನುವುದು ಸಹ ಅಷ್ಟೆ ನಿಜ.!!

ಆಪ್‌ನಲ್ಲಿ ಕ್ಯಾಬ್ ಬುಕ್ ಮಾಡ್ತೀರಾ?..ಅವುಗಳ ಹೊಸ ಮೋಸ ಬಿಚ್ಚಿಟ್ಟಿದ್ದಾರೆ ನೋಡಿ!!

ಇಲ್ಲಿ ನಿಮಗೆ ಟ್ಯಾಕ್ಸಿ ಕಂಪೆನಿಗಳು ತಿಳಿಯುವ ಹಾಗೆ ಮೋಸ ಮಾಡಿದರೆ, ಇನ್ನೊಂದೆಡೆ ನಿಮಗೆ ತಿಳಿಯದಂತೆ ಮೋಸ ಮಾಡುತ್ತಿವೆ ಎಂಬುದಕ್ಕೆ ಒಬ್ಬರು ಪ್ರಯೋಗ ಮಾಡಿ ತೋರಿಸಿದ್ದಾರೆ. ಏಕಕಾಲಕ್ಕೆ ಒಂದು ಕಡಿಮೆ ಬೆಲೆಯ ಫೋನ್ ಮತ್ತು ಇನ್ನೊಂದು ದುಬಾರಿ ಐಫೋನಿನಿಂದ ಓಲಾ ಟ್ಯಾಕ್ಸಿ ಬುಕ್ ಮಾಡಿ ಅದರ ಬಂಡವಾಳ ಬಿಚ್ಚಿಟ್ಟಿದ್ದಾರೆ.!!

ಆಪ್‌ನಲ್ಲಿ ಕ್ಯಾಬ್ ಬುಕ್ ಮಾಡ್ತೀರಾ?..ಅವುಗಳ ಹೊಸ ಮೋಸ ಬಿಚ್ಚಿಟ್ಟಿದ್ದಾರೆ ನೋಡಿ!!

ಕಡಿಮೆ ಬೆಲೆಯ ಫೋನ್ ಮತ್ತು ದುಬಾರಿ ಐಫೋನಿನಿಂದ ಒಂದೇ ಸಮಯದಲ್ಲಿ, ಒಂದೇ ಸ್ಥಳದಿಂದ, ಒಂದೇ ರೀತಿಯ ಕಾರನ್ನು, ತಲುಪಬೇಕಾದ ಒಂದೇ ಸ್ಥಳಕ್ಕೆ ಓಲಾ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಾರೆ. ಬುಕ್ ಮಾಡಿದ ಸ್ಥಳವೂ ಒಂದೇ ಆಗಿದ್ದರೂ ಕೂಡ ಐಫೋನಿನಿಂದ ಕ್ಯಾಬ್ ಬುಕ್ ಮಾಡಿದವನಿಗೆ ಆಪ್ ದುಪ್ಪಟ್ಟು ಬೆಲೆ ತೋರಿಸಿದೆ.!!

ಆಪ್‌ನಲ್ಲಿ ಕ್ಯಾಬ್ ಬುಕ್ ಮಾಡ್ತೀರಾ?..ಅವುಗಳ ಹೊಸ ಮೋಸ ಬಿಚ್ಚಿಟ್ಟಿದ್ದಾರೆ ನೋಡಿ!!

ನಿಮಗೀಗ ಅರ್ಥವಾಗಿರಬಹುದು ಓಲಾ ಸೇರಿ ಇತರ ಟ್ಯಾಕ್ಸಿ ಕಂಪೆನಿಗಳು ನಿಮಗೆ ತಿಳಿಯದಂತೆ ಹೇಗೆ ಮೋಸ ಮಾಡುತ್ತಿರಬಹುದು ಎಂದು.! ಹಾಗಾಗಿ, ಇನ್ನು ಮುಂದೆ ಓಲಾ ಟ್ಯಾಕ್ಸಿ ಬುಕ್ ಮಾಡಲೆಂದೇ ಒಂದು ಅತಿ ಕಡಿಮೆ ಬೆಲೆಯ ಫೋನ್ ಇಟ್ಟುಕೊಳ್ಳಿ! ಇಲ್ಲವಾದರೆ ದುಪ್ಪಟ್ಟು ಹಣವನ್ನು ನೀಡಿ ಕ್ಯಾಬ್‌ನಲ್ಲಿ ಪ್ರಯಾಣಿಸಿ.!!

ಓದಿರಿ: ಮಕ್ಕಳಿಗೆ ಮೊಬೈಲ್/ವಿಡಿಯೋಗೇಮ್ ವ್ಯಸನವಾಗಲು ಪೋಷಕರೇ ಕಾರಣ!!.ಹೇಗೆ ಗೊತ್ತಾ?

English summary
If you wish to hire a cab to reach the airport or other destinations book cab with budget phone.! to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot