ಇಂಟರ್ನೆಟ್‌ನಲ್ಲಿ ಕಂಡುಬಂದ ಫೇಕ್ ವೈರಲ್ ಫೋಟೋ

By Shwetha
|

ಇಂಟರ್ನೆಟ್ ಎಂಬ ಮಾಯಾ ಲೋಕದಲ್ಲಿ ನಡೆಯುವುದೆಲ್ಲಾ ನಿಜವೆಂಬುದನ್ನು ನೀವು ಅಂಗೀಕರಿಸುತ್ತೀರಾ? ಮಾಹಿತಿಗಾಗಿ ನಾವು ಇಂಟರ್ನೆಟ್ ಅನ್ನು ಜಾಲಾಡಿದರೂ ಅದರಲ್ಲಿ ಬರುವುದೆಲ್ಲಾ ಸತ್ಯವೆಂಬುದನ್ನು ನಮಗೆ ಒಪ್ಪಿಕೊಳ್ಳಲು ಆಗುವುದಿಲ್ಲ. ಹಾಗಿದ್ದರೆ ಇಂಟರ್ನೆಟ್‌ನಲ್ಲಿ ಗದ್ದಲವೆಬ್ಬಿಸಿದ ಕೆಲವೊಂದು ಸಂಗತಿಗಳನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಇದನ್ನು ನಂಬುವುದೇ ಬಿಡುವುದೇ ಎಂಬುದನ್ನು ನೀವೇ ನಿರ್ಧರಿಸಬೇಕು.

ಓದಿರಿ: ಕಬಾಲಿ ಬಿಡುಗಡೆ; 169 ಸರ್ವೀಸ್ ಪ್ರೊವೈಡರ್, 225 ವೆಬ್‌ಸೈಟ್‌ ಬ್ಯಾನ್

ಇಂಟರ್ನೆಟ್‌ನಲ್ಲಿ ನಮ್ಮನ್ನು ಮೂರ್ಖರನ್ನಾಗಿಸಿದ ವಿಶ್ವದ ಕೆಲವೊಂದು ಸಂಗತಿಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದು ಇದು ನಿಮಗೆ ಆಶ್ಚರ್ಯವನ್ನು ಉಂಟುಮಾಡುವುದು ಖಂಡಿತ. ಬನ್ನಿ ಹಾಗಿದ್ದರೆ ಆ ಸಂಗತಿಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ.

ಗರ್ಭದೊಳಗಿನ ಭ್ರೂಣದ ಫೋಟೋ

ಗರ್ಭದೊಳಗಿನ ಭ್ರೂಣದ ಫೋಟೋ

ಈ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ ಎಂಬುದಾಗಿ ದೃಢವಾಗಿ ನಮಗೆ ಹೇಳಬಹುದು.

ಆಫ್ರಿಕಾದ ರಹಸ್ಯ ಮರ

ಆಫ್ರಿಕಾದ ರಹಸ್ಯ ಮರ

ಆಫ್ರಿಕಾದಲ್ಲಿರುವ ಈ ನಿಗೂಢ ಮರ ತನ್ನದೇ ವಿಶೇಷತೆಗಳನ್ನು ಪಡೆದುಕೊಂಡಿದೆಯಂತೆ. ಆದರೆ ಡಿಸ್ನಿ ವರ್ಲ್ಡ್‌ನಲ್ಲಿರುವ ಮರ ಎಂಬುದಾಗಿ ನಂತರ ಸಾಬೀತಾಯಿತು.

ವಿಚಿತ್ರ ಜೀವಿ

ವಿಚಿತ್ರ ಜೀವಿ

ಏಪ್ರಿಲ್ ಫೂಲ್ ಮಾಡುವ ಸಲುವಾಗಿ ಈ ಜೀವಿಯನ್ನು ತಯಾರು ಮಾಡಲಾಗಿದೆ ಎಂಬುದಾಗಿ ಡೇನ್ ಬೇನ್ಸ್ ಒಪ್ಪಿಕೊಂಡಿದ್ದಾನೆ.

ಸ್ಕಾಟ್‌ಲ್ಯಾಂಡ್‌ನ ನೇರಳೆ ಕಾಡು

ಸ್ಕಾಟ್‌ಲ್ಯಾಂಡ್‌ನ ನೇರಳೆ ಕಾಡು

ಇಂತಹ ಅದ್ಭುತ ಸ್ಥಳಗಳು ನಿಸರ್ಗದಲ್ಲಿದ್ದರೂ ಈ ನೇರಳೆ ಮರ ನಂಬುವಂತಹದ್ದಲ್ಲ. ಪ್ರಸ್ತುತ ಈ ಚಿತ್ರ ನ್ಯೂಜಿಲ್ಯಾಂಡ್‌ನದ್ದಾಗಿದೆ.

ಮುದ್ದಾದ ಪ್ರಾಣಿ

ಮುದ್ದಾದ ಪ್ರಾಣಿ

ಬೆಕ್ಕನ್ನು ಫೋಟೋಶಾಪ್ ಮಾಡಿ ಮೂರ್ಖರನ್ನಾಗಿಸಿದ ಚಿತ್ರವಿದು.

ಭವಿಷ್ಯಕ್ಕೆ ಮರಳಿ ಪ್ರಯಾಣ

ಭವಿಷ್ಯಕ್ಕೆ ಮರಳಿ ಪ್ರಯಾಣ

ಜನರನ್ನು ಮೂರ್ಖರನ್ನಾಗಿಸಿದ ಕ್ಯಾಲೆಂಡರ್

ಐರಿಶ್ ಮೌಂಟೆನ್ ಕ್ಯಾಸ್ಟಲ್

ಐರಿಶ್ ಮೌಂಟೆನ್ ಕ್ಯಾಸ್ಟಲ್

ಜರ್ಮನ್ ಕ್ಯಾಸ್ಟಲ್ ಫೋಟೋಶಾಪ್ ಮಾಡಿದ ಚಿತ್ರ ಇದಾಗಿದೆ.

ಆಯಿಲ್ ರಿಗ್ ಸ್ಟೋರ್ಮ್

ಆಯಿಲ್ ರಿಗ್ ಸ್ಟೋರ್ಮ್

1991 ರಲ್ಲಿ ಫ್ರೆಡ್ ಸ್ಮಿತ್ ತೆಗೆದ ಮೂಲ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ.

ಕಾಮನ ಬಿಲ್ಲಿನ ಬಣ್ಣದ ಗೂಬೆ

ಕಾಮನ ಬಿಲ್ಲಿನ ಬಣ್ಣದ ಗೂಬೆ

ಚೀನಾ ಮತ್ತು ಯುಎಸ್‌ಎನ ಕೆಲವೊಂದು ಭಾಗಗಳಲ್ಲಿ ಇಂತಹ ಗೂಬೆಗಳು ಕಂಡುಬಂದಿದ್ದರೂ ಚಿತ್ರದಲ್ಲಿರುವುದು ಮಾತ್ರ ನಿಜವಾದ ಗೂಬೆಯನ್ನು ಫೋಟೋಶಾಪ್ ಮಾಡಿರುವುದಾಗಿದೆ.

ಮಾರ್ಸ್‌ನಿಂದ ಭೂಮಿ, ಮರ್ಕ್ಯುರಿ ಮತ್ತು ವೀನಸ್ ನೋಟ

ಮಾರ್ಸ್‌ನಿಂದ ಭೂಮಿ, ಮರ್ಕ್ಯುರಿ ಮತ್ತು ವೀನಸ್ ನೋಟ

ಇದೂ ಕೂಡ ಫೋಟೋಶಾಪ್ ಮಾಡಿದ ಚಿತ್ರವಾಗಿದೆ ಅಂತೆಯೇ ಇಂಟರ್ನೆಟ್‌ನಲ್ಲಿ ಹರಿಯಬಿಡಲಾಗಿದೆ.

ಶಾರ್ಕ್ ಟ್ಯಾಂಕ್

ಶಾರ್ಕ್ ಟ್ಯಾಂಕ್

ನಿಜಕ್ಕೂ ಇಂತಹ ಘಟನೆಗಳು ನಡೆಯುವುದು ಅಸಂಭವವಾಗಿದೆ. ಟೊರೆಂಟೊದಾ ಯೂನಿಯನ್ ನೇಶನ್‌ನ ಫೋಟೋಶಾಪ್ಡ್ ಫೋಟೋ ಇದಾಗಿದೆ.

ಶಾರ್ಕ್ ಕೋಪ್ಟರ್

ಶಾರ್ಕ್ ಕೋಪ್ಟರ್

ಫೋಟೋಶಾಪ್ ಮಾಡಿರುವುದು ಈ ಚಿತ್ರದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹೆಚ್ಚಿನ ಜನರು ಇದನ್ನು ಅಸಲಿ ಎಂದೇ ಭಾವಿಸಿದ್ದರು ನಂತರ ಇದು ಫೋಟೋಶಾಪ್ಡ್ ಚಿತ್ರವೆಂಬುದಾಗಿ ತಿಳಿದು ಬಂದಿದೆ.

ಬೇಬಿ ಪೋಲಾರ್ ಬಿಯರ್

ಬೇಬಿ ಪೋಲಾರ್ ಬಿಯರ್

ಆಟಿಕೆಯ ಫೋಟೋಶಾಪ್ ಚಿತ್ರ ಇದಾಗಿದ್ದು, ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ.

ಆರ್-ಮನಿ

ಆರ್-ಮನಿ

ರೋಮ್ನಿ ಎಂಬ ಪೆಟ್ ಹೆಸರನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಈ ಚಿತ್ರವನ್ನು ಸರಿಯಾದ ವಿಧಾನದಲ್ಲಿ ತೆಗೆದ ನಂತರ ಅದನ್ನು ಮರುಹೊಂದಿಸಲಾಯಿತಂತೆ.

ಹರಿಕೇನ್

ಹರಿಕೇನ್

ಹರಿಕೇನ್ ಸ್ಯಾಂಡಿಯ ಸಂದರ್ಭದಲ್ಲಿ ಸ್ವಾತಂತ್ರ್ಯ ದೇವತೆಯ ಈ ಚಿತ್ರವನ್ನು ತೆಗೆಯಲಾಗಿದೆ ಎಂಬುದಾಗಿ ತಿಳಿಸಲಾಗಿದೆ. ಶಾಟ್ ಉತ್ತಮವಾಗಿದ್ದರೂ, ಇದು ನಿಜವಾದುದಲ್ಲ.

ತಲೆಕೆಳಗಾದ ಪುಸ್ತಕ

ತಲೆಕೆಳಗಾದ ಪುಸ್ತಕ

ಜಾರ್ಜ್ ಡಬ್ಲ್ಯು ಬುಶ್ ಈ ರೀತಿಯದ್ದು ಏನಾದರೂ ಮಾಡುತ್ತಾರೆ ಎಂಬುದನ್ನು ನಿಮಗೆ ನಂಬಲು ಸಾಧ್ಯವೇ. ಇದು ಫೋಟೋಶಾಪ್ ಮಾಡಿರುವಂಥದ್ದಾಗಿದೆ.

ಹರಿಕೇನ್ ಐಸಾಕ್

ಹರಿಕೇನ್ ಐಸಾಕ್

ಯಾವುದಾದರೂ ಹರಿಕೇನ್ ಉಂಟಾಗಲಿದೆ ಎಂಬ ಸಂದರ್ಭದಲ್ಲಿ ಇದೇ ಚಿತ್ರವನ್ನು ಸಾವಿರ ಬಾರಿ ಟ್ವೀಟ್ ಮಾಡಲಾಗುತ್ತದೆ. ಆದರೆ ಇದು ಫೋಟೋಶಾಪ್ ಮಾಡಿರುವಂಥದ್ದಾಗಿದೆ.

ವೈರಲ್ ಫೋಟೋ

ವೈರಲ್ ಫೋಟೋ

ಇಂಟರ್ನೆಟ್‌ನಲ್ಲಿ ಸಂಚಲವನ್ನುಂಟು ಮಾಡಿದ ಈ ಫೋಟೋ ನಿಜಕ್ಕೂ ಭಯಾನಕವಾಗಿದೆ. ಆದರೆ ಇದು ಫೋಟೋಶಾಪ್ ಮಾಡಿರುವಂತಹ ಫೋಟೋ ಆಗಿದೆ.

ನೆರೆಯಾಟ

ನೆರೆಯಾಟ

2012 ರಲ್ಲಿ ಫಿಲಿಫೈನ್ಸ್‌ಗೆ ಬಂದ ನೆರೆಯ ದೃಶ್ಯವಿದು. ಆದರೆ ಇದು ಫೋಟೋಶಾಪ್ಡ್ ಚಿತ್ರವಾಗಿದೆ ಎಂಬುದು ನಿಮಗೆ ಗೊತ್ತೇ?

ಇಂಡಿಯನ್ ಓಶಿಯನ್

ಇಂಡಿಯನ್ ಓಶಿಯನ್

ಅಬ್ಬಾ ಮೈ ಜುಮ್ಮೆನ್ನಿಸುವಂತಹ ಚಿತ್ರ ಇದಾಗಿದೆ ಅಲ್ಲವೇ? ಇದು ಫೋಟೋಶಾಪ್ಡ್ ಚಿತ್ರವಾಗಿದೆ.

ಮೂನ್ ಮೆಲನ್

ಮೂನ್ ಮೆಲನ್

ಜಪಾನ್ ದ್ವೀಪಗಳಲ್ಲಿ ದೊರೆಯುವ ದುಬಾರಿ ಕಲ್ಲಂಗಡಿ ಇದಾಗಿದೆ ಎಂಬ ಸುದ್ದಿ ಇದೆ. ಆದರೆ ಇದು ಕೂಡ ಕೃತ್ರಿಮ ಫೋಟೋ ಆಗಿದೆ.

ಏರ್ ಫ್ರಾನ್ಸ್

ಏರ್ ಫ್ರಾನ್ಸ್

ಇದು ಕೂಡ ಫೋಟೋಶಾಪ್ಡ್ ಇಮೇಜ್ ಆಗಿದೆ. ಟಿವಿ ಸೀರಿಯಲ್‌ನ ಶೂಟ್ ಇದಾಗಿದೆ ಎಂಬುದು ಮೂಲಗಳು ತಿಳಿಸಿರುವ ವರದಿಯಾಗಿದೆ.

ವಿ ಬಿಲ್ಟ್ ಇಟ್ ಬೋರ್ಡ್

ವಿ ಬಿಲ್ಟ್ ಇಟ್ ಬೋರ್ಡ್

2012 ರ ರಿಪಬ್ಲಿಕನ್ ಕನ್‌ವೆನ್ಶನ್‌ನಲ್ಲಿ ತೆಗೆದ ಚಿತ್ರ ಇದಾಗಿದೆ. ಇದರ ಹಿಂದಿರುವ ನೈಜತೆ ಅಂದರೆ ಈ ಬೋರ್ಡ್ ಮೇಲಿರುವ ಕ್ಲಾಕ್ ಇನ್ನೊಂದು ಭಾಗದಲ್ಲಿದೆ.

Best Mobiles in India

English summary
In this article we are presenting some photos which are went viral on Internet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X