ಈ ವಿಷಯಗಳನ್ನು ಗೂಗಲ್ ಮಾಡಲು ನಿಮಗೆ ಗಟ್ಟಿ ಗುಂಡಿಗೆ ಬೇಕು!

Written By:

ಗೂಗಲ್ ಎಂಬುದು ಒಂದು ಜ್ಞಾನ ಭಂಡಾರವಾಗಿದ್ದರೂ ನೀವು ಇದರಲ್ಲಿ ಹುಡುಕುವುದಕ್ಕೆ ಒಂದು ನಿರ್ದಿಷ್ಟತೆಯನ್ನು ಕಾಪಾಡಿಕೊಳ್ಳಬೇಕು. ಏನು ಬೇಕಿದ್ದರೂ ಗೂಗಲ್‌ನಲ್ಲಿ ಹುಡುಕಿದರೆ ಸಿಗುತ್ತದೆ ಎಂಬುದೇನೋ ನಿಜವೇ ಆದರೆ ಇದನ್ನು ಹುಡುಕುವ ಧೈರ್ಯ ನಿಮ್ಮಲ್ಲಿರಬೇಕು ಅಷ್ಟೇ?

ಓದಿರಿ: ವಿವರಿಸಲು ಸಾಧ್ಯವೇ ಆಗದ ನಿಗೂಢತೆಗಳು

ಏಕೆಂದು ಕೇಳುತ್ತೀರಾ? ಈ ಲೋಕದಲ್ಲಿ ಹಲವಾರು ರಹಸ್ಯಗಳಿದ್ದು ಈ ರಹಸ್ಯಗಳನ್ನು ಬೇಧಿಸಲು ನೀವು ಗೂಗಲ್ ಅನ್ನು ಆಶ್ರಯಿಸಲೇಬೇಕು. ಆದರೆ ಈ ರಹಸ್ಯ ನಿಮ್ಮಲ್ಲಿ ವಾಕರಿಕೆಯನ್ನು ಉಂಟುಮಾಡುವಂತಿದ್ದು ಇದನ್ನು ನೋಡಿದರೆ ನೀವು ಅಧೈರ್ಯಗೊಳ್ಳುವುದು ಖಂಡಿತ. ಹಾಗಿದ್ದರೆ ಈ ಚಿತ್ರಗಳನ್ನು ವಿಷಯಗಳನ್ನು ನೋಡುವ ಮುನ್ನ ನಿಮ್ಮ ಗುಂಡಿಗೆಯನ್ನು ಗಟ್ಟಿಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲಾಕ್ ಸ್ಪೈಡರ್

ಕ್ಲಾಕ್ ಸ್ಪೈಡರ್

#1

ಈ ಹೆಸರು ವಿಚಿತ್ರವಾಗಿದೆ ಎಂದು ಅದನ್ನು ಹುಡುಕಲು ಹೊರಟರೆ ನೀವು ಭಯಬೀಳುವುದು ಖಂಡಿತ. ಅಷ್ಟು ಭಯಾನಕವಾಗಿರು ಈ ಜೇಡಗಳನ್ನು ಗೂಗಲ್‌ನಲ್ಲಿ ಹುಡುಕಲೇಬಾರದು ಎಂಬುದಾಗಿ ಪರಿಣಿತರು ಹೇಳುತ್ತಾರೆ. ಅಪಾಯಕಾರಿ ಜೇಡಗಳು ಎಂದೇ ಇವುಗಳು ಹೆಸರನ್ನು ಪಡೆದುಕೊಂಡಿವೆ.

ಟೈರೊಫೋಬಿಯಾ

ಟೈರೊಫೋಬಿಯಾ

#2

ಇದೊಂದು ರೀತಿಯ ಫೋಬಿಯಾ ಆಗಿದ್ದು ಮನಸ್ಸಿಗೆ ಘಾಸಿಯನ್ನುಂಟು ಮಾಡುವ ಅಂಶಗಳನ್ನು ಇದು ಒಳಗೊಂಡಿರುತ್ತದೆ. ಸಣ್ಣ ಸಣ್ಣ ರಂಧ್ರಗಳು ಕೈಯಲ್ಲಿ ಉಂಟಾಗಲಿದ್ದು ನಿಜಕ್ಕೂ ಈ ಚಿತ್ರಗಳು ಭಯಂಕರವಾಗಿದೆ. ಆದರೆ ನಿಮ್ಮನ್ನು ನೀವು ಅಧೈರ್ಯಗೊಳಿಸುವ ಮುನ್ನ ಇದು ಫೋಟೋಶಾಪ್ ಚಿತ್ರವೆಂದೇ ನಾವು ಹೇಳುತ್ತೇವೆ.

ಬಿಯರ್

ಬಿಯರ್

#3

ಬಿಯರ್ 1976 ರಲ್ಲಿ ಬಿಡುಗಡೆಯಾದ ಕಾದಂಬರಿಯಾಗಿದ್ದು, ಇದರ ಲೇಖಕರು ಮರಿಯನ್ ಎಂಗೆಲ್ ಆಗಿದ್ದಾರೆ. ಕರಡಿಯ ಜೊತೆಗೆ ಹುಡುಗಿಯ ಸಾಂಗತ್ಯವನ್ನು ಇದರಲ್ಲಿ ವಿವರಿಸಲಾಗಿದ್ದು ವರ್ಣನೆಯನ್ನು ನಾವು ಮಾಡಲು ಹೋಗುವುದಿಲ್ಲ.

ರೋಗ ಲಕ್ಷಣಗಳು

ರೋಗ ಲಕ್ಷಣಗಳು

#4

ಯಾವುದೇ ರೋಗಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದಿರಿ ಎಂದಾದಲ್ಲಿ ನಿಮಗೂ ಈ ರೋಗವಿದೆಯೇ ಎಂಬ ಗುಮಾನಿ ನಿಮ್ಮನ್ನು ಕಾಡಬಹುದು. ನಿಮಗೆ ಈ ರೋಗವಿಲ್ಲದೇ ಇದ್ದರೂ ನಿಮ್ಮಲ್ಲಿ ಇದು ಭೀತಿಯನ್ನುಂಟು ಮಾಡಬಹುದು. ಆದ್ದರಿಂದ ಇದನ್ನು ಗೂಗಲ್ ಮಾಡಲು ಹೋಗಲೇಬೇಡಿ.

ವೆಟ್ ಕೋಲಾ

ವೆಟ್ ಕೋಲಾ

#5

ಇಲ್ಲಿ ನೀವು ನೋಡುತ್ತಿರುವ ಚಿತ್ರವು ಫೋಟೋಶಾಪ್ಡ್ ಆಗಿದ್ದರೂ, ಇದು ನಿಜವಾಗಿದ್ದಲ್ಲಿ ನಿಮ್ಮ ಜಂಘಾಬಲ ಉಡುಗಿ ಹೋಗುವುದು ಖಂಡಿತ ಅಲ್ಲವೇ?

ಪೀನಟ್ ನಾಯಿ

ಪೀನಟ್ ನಾಯಿ

#6

ವಿಶ್ವದಲ್ಲೇ ಹೆಚ್ಚು ಅಸಹ್ಯಕರವಾಗಿರುವ ಈ ನಾಯಿಯನ್ನು ಖರೀದಿಸುವ ಧೈರ್ಯವನ್ನು ಯಾರೂ ಮಾಡಲಾರರು ಬಿಡಿ. ಸಿನಿಮಾಗಳಲ್ಲಿ ಕಾಣಸಿಗದೇ ಇರುವ ನಾಯಿ ಇದಾಗಿದ್ದು ಗೂಗಲ್‌ ಮಾಡಿದರೆ ನಿಮ್ಮ ಕನಸಲ್ಲೂ ಇದು ಕಾಡಬಹುದು.

ತಿಗಣೆಗಳು

ತಿಗಣೆಗಳು

#7

ತಿಗಣೆ ಕಾಟ ನಿಜಕ್ಕೂ ಯಾತನಾಮಯವಾದ ಸ್ಥಿತಿಯಾಗಿರುತ್ತದೆ. ಆದರೆ ಜೂಮ್ ಮಾಡಿ ತಿಗಣೆಯನ್ನು ನೀವು ನೋಡಿದರೆ ನಿಮಗೆ ವಾಕರಿಕೆ ಬರುವುದು ಖಂಡಿತ. ನಿಮಗೆ ನೋಡುವ ಧೈರ್ಯವಿದೆ ಎಂದಾದಲ್ಲಿ ಏನೂ ಭಯವಿಲ್ಲದೆ ನೋಡಬಹುದಾಗಿದೆ.

ತ್ವಚೆಯ ಸ್ಥಿತಿ

ತ್ವಚೆಯ ಸ್ಥಿತಿ

#8

ತ್ವಚೆಯ ಸ್ಥಿತಿಯ ಬಗ್ಗೆ ಗೂಗಲ್ ಸಾಕಷ್ಟು ಮಾಹಿತಿ ಮತ್ತು ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಗೂಗಲ್‌ನಲ್ಲಿ ಈ ಕುರಿತು ಸರ್ಚ್ ಮಾಡಿದಾಗ ನಿಮ್ಮ ತ್ವಚೆಯ ಸ್ಥಿತಿಯ ಬಗ್ಗೆಯೇ ನಿಮಗೆ ಭಯವುಂಟಾಗುತ್ತದೆ. ಆದ್ದರಿಂದ ಇದನ್ನು ನೋಡದಿರಿ ಎಂಬುದೇ ನಮ್ಮ ಸಲಹೆಯಾಗಿದೆ.

ಕೋಕನಲ್ ಏಡಿ

ಕೋಕನಲ್ ಏಡಿ

#9

ಈ ಏಡಿ ತುಂಬಾ ಭಯನಾಕವಾಗಿದ್ದು ನಿಮ್ಮಲ್ಲಿ ನಡುಕವನ್ನುಂಟು ಮಾಡುವುದು ಖಂಡಿತ.

ಧೂಮಪಾನಿಗಳ ಶ್ವಾಸಕೋಶ

ಧೂಮಪಾನಿಗಳ ಶ್ವಾಸಕೋಶ

#10

ಜಾಹೀರಾತುಗಳಲ್ಲಿ ಬರುವ ಧೂಮಪಾನ ತ್ಯಜಿಸಿ ಜಾಹೀರಾತಿನಲ್ಲಿ ಶ್ವಾಸಕೋಶಗಳ ಚಿತ್ರವನ್ನು ನೀವು ಕಂಡಿರಬಹುದು ಅಲ್ಲವೇ? ಹಾಗಿದ್ದರೆ ಈ ಬಗ್ಗೆ ಮತ್ತಷ್ಟು ನೋಡುವ ಅಗತ್ಯವಿಲ್ಲ. ಏಕೆಂದರೆ ಇದು ನೋಡಲು ತುಂಬಾ ಭಯಂಕರವಾಗಿದೆ.

ಆನೆಕಾಲು ರೋಗ

ಆನೆಕಾಲು ರೋಗ

#11

ಆನೆಕಾಲು ರೋಗದ ಚಿತ್ರವಂತೂ ಅತಿ ಭಯಂಕರವಾಗಿದ್ದು ನೋಡಿದರೆ ನೀವು ಭಯಬೀಳುವುದು ಖಂಡಿತ. ಆದ್ದರಿಂದ ಬೇಡವೇ ಬೇಡ ಎಂದೇ ನಾವು ಹೇಳುತ್ತೇವೆ.

ನಿಮ್ಮಷ್ಟಕ್ಕೇ ಹುಡುಕಾಡುವುದು

ನಿಮ್ಮಷ್ಟಕ್ಕೇ ಹುಡುಕಾಡುವುದು

#12

ನಿಮ್ಮಷ್ಟಕ್ಕೆ ಏನಾದರೂ ಹುಡುಕಾಡಲು ಹೋದಾಗ ಕೂಡ ಕಣ್ಣಿಗೆ ಅಸಹ್ಯಕರವಾಗಿರುವ ದೃಶ್ಯಗಳೇ ಕಾಣುವ ಸಂಧರ್ಭ ಒದಗಿಬರಬಹುದು. ಆದ್ದರಿಂದ ನಿಮ್ಮಷ್ಟಕ್ಕೆ ಗೂಗಲಿಂಗ್ ಮಾಡಲು ಎಂದಿಗೂ ಹೋಗಬೇಡಿ.

ಮೇಗನ್ ಫಾಕ್ಸ್ ಹೆಬ್ಬೆರಳು

ಮೇಗನ್ ಫಾಕ್ಸ್ ಹೆಬ್ಬೆರಳು

#13

ಮೇಗನ್ ಫಾಕ್ಸ್ ಕಾಲ್ಬೆರಳನ್ನು ಹೆಬ್ಬೆರಳಿನ ಜಾಗದಲ್ಲಿ ಇರಿಸಿಕೊಂಡಿದ್ದಾರಂತೆ! ಇದು ಎಷ್ಟು ನಿಜ ಎಂಬುದು ಆಕೆಗೆ ಮಾತ್ರವೇ ಗೊತ್ತು.

ಲ್ಯಾಂಪ್ರೀಲ್

ಲ್ಯಾಂಪ್ರೀಲ್

#14

ಈ ಚಿತ್ರ ನೋಡಿದಾಗ ನಿಮಗೆ ಅನ್ನಿಸಬಹುದು ಗೂಗಲ್‌ನಲ್ಲಿ ಏನೆಲ್ಲಾ ಇದೆಯಪ್ಪಾ ಎಂದು? ಈ ಚಿತ್ರವು ಅಷ್ಟು ಅಸಹ್ಯಕರವಾಗಿದೆ ಅಲ್ಲವೇ?

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
here are a few things you should never type into Google's search box.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot