ಜಪಾನ್‌ನಲ್ಲಿನ ಒಂದು ವಿಚಿತ್ರ ಸಮಸ್ಯೆ ಪರಿಹರಿಸಲು ಡ್ರೋಣ್ ಬಳಕೆ!..ವಿಶ್ವಕ್ಕೆ ಶಾಕ್!!

ಜಪಾನ್ ಸರ್ಕಾರ ಹೆಚ್ಚು ಹೊತ್ತು ಕೆಲಸ ಮಾಡುವ ಜನರ ಸಂಸ್ಕೃತಿಯನ್ನು ಬದಲಿಸಲು ಪ್ರಯತ್ನಿಸುತ್ತಿದೆ.!!

|

ದೇಶದಲ್ಲಿನ ಒಂದು ವಿಚಿತ್ರ ಸಮಸ್ಯೆಗೆ ಡ್ರೋಣ್ ಮೂಲಕ ಪರಿಹಾರ ಕಂಡುಕೊಳ್ಳುವ ಕಾರ್ಯಕ್ಕೆ ಜಪಾನ್ ಕೈ ಹಾಕಿದೆ.! ಆ ದೇಶದಲ್ಲಿನ ಕೆಲಸಗಾರರು ಮನೆಗೆ ಹೋಗದೆ ಕಚೇರಿಯಲ್ಲೇ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅವರನ್ನು ಮನೆಗೆ ಹೋಗುವಂತೆ ಮಾಡಲು ಡ್ರೂಣ್ ಬಳಕೆಗೆ ಮುಂದಾಗಿದೆ.!!

ಎರಡನೇ ಮಹಾಯುದ್ದದ ನಂತರ ಜಪಾನ್ ದೇಶದಲ್ಲಿನ ಜನರು ಹೆಚ್ಚು ಹೊತ್ತು ಕೆಲಸ ಮಾಡುವ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದಾರೆ. ದೀರ್ಘಾವಧಿಯ ಕೆಲಸವನ್ನು ನಿಷ್ಠೆ ಮತ್ತು ಸಮರ್ಪಣೆಯ ಪುರಾವೆ ಎಂದು ಗ್ರಹಿಸಲಾಗಿದೆಯಾದರೂ ಜಪಾನ್ ಸರ್ಕಾರ ಹೆಚ್ಚು ಹೊತ್ತು ಕೆಲಸ ಮಾಡುವ ಜನರ ಸಂಸ್ಕೃತಿಯನ್ನು ಬದಲಿಸಲು ಪ್ರಯತ್ನಿಸುತ್ತಿದೆ.!!

ಜಪಾನ್‌ನಲ್ಲಿನ ಒಂದು ವಿಚಿತ್ರ ಸಮಸ್ಯೆ ಪರಿಹರಿಸಲು ಡ್ರೋಣ್ ಬಳಕೆ!!

ನೌಕರರು ಕಚೇರಿಯಲ್ಲೇ ಹೆಚ್ಚು ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅಲ್ಲಿನ ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಪಾರ್ಶ್ವವಾಯು, ಹೃದಯಾಘಾತ ಮತ್ತು ಆತ್ಮಹತ್ಯೆಗಳ ಕಾರಣದಿಂದಾಗಿ ದೀರ್ಘಕಾಲದ ಕೆಲಸದ ಅವಧಿಗಳು ಹೆಚ್ಚು ಸಾವುಗಳಿಗೆ ಕಾರಣವಾಗಿವೆ ಎಂದು ಹೇಳಲಾಗಿದೆ.!!

ಜಪಾನ್‌ನಲ್ಲಿನ ಒಂದು ವಿಚಿತ್ರ ಸಮಸ್ಯೆ ಪರಿಹರಿಸಲು ಡ್ರೋಣ್ ಬಳಕೆ!!

ಹಾಗಾಗಿ, ಕೆಲಸಗಾರರನ್ನು ಮನೆಗೆ ಕಳುಹಿಸಲು, ರಜೆ ತೆಗೆದುಕೊಳ್ಳುವಂತೆ ಮಾಡಲು ಕಂಪನಿಗಳು ಪ್ರಯತ್ನಿಸುತ್ತಿದ್ದು, ಕೆಲಸದ ಅವಧಿ ಮುಗಿದ ನಂತರವೂ ಕಚೇರಿಯಲ್ಲಿರುವವರ ತಲೆ ಮೇಲೆ ಹಾರುತ್ತ ಜೋರಾಗಿ ಕೆಟ್ಟ ಸಂಗೀತ ಪ್ಲೇ ಮಾಡಿ, ಇದರ ಕಾಟ ತಡೆಯಲಾರದೆ ಉದ್ಯೋಗಿ ಮನೆಗೆ ತೆರಳುವಂತೆ ಮಾಡುವ ಯೋಚನೆಯನ್ನು ಕಂಪೆನಿಗಳು ಮಾಡಿವೆ.!!

ಓದಿರಿ: ವೊಡಾಫೋನ್‌ನಿಂದ ಇತಿಹಾಸದ ಆಫರ್!..348 ರೂ.ಗೆ ಪ್ರತಿದಿನ 2GB ಡೇಟಾ, ಉಚಿತ ಕರೆ!!!

Best Mobiles in India

English summary
A drone that hovers over Japanese employees and blares music to force them to go home was unveiled on Thursday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X