ಕೊಲೆ ಕೇಸ್‌ನಲ್ಲಿ ಗೂಗಲ್‌ನಿಂದ ಮರುಜೀವ ಪಡೆದ ಆರೋಪಿ!!..ಹೇಗೆ ಗೊತ್ತಾ?

ಕೊಲೆ ಪ್ರಕರಣದಲ್ಲಿ ಕಾಲೇಜು ವಿಧ್ಯಾರ್ಥಿಯನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಯತ್ನದ ಸಂಶಯ ಗೂಗಲ್ ಸಾಕ್ಷ್ಯದಿಂದ ವ್ಯಕ್ತವಾಗಿದೆ.!!

|

ಕಾನ್ಪುರ್‌ನಲ್ಲಿ ಕಳೆದ ವರ್ಷ ನಡೆದಿದ್ದ 11 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಬಂಧಿಯಾಗಿದ್ದ ಕಾಲೇಜು ವಿಧ್ಯಾರ್ಥಿಯೋರ್ವ ಗೂಗಲ್‌ನಿಂದ ಮರುಜೀವ ಪಡೆದಿರುವ ಘಟನೆ ನಡೆದಿದೆ.!! ಕೊಲೆ ಪ್ರಕರಣದಲ್ಲಿ ಕಾಲೇಜು ವಿಧ್ಯಾರ್ಥಿಯನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಯತ್ನದ ಸಂಶಯ ಗೂಗಲ್ ಸಾಕ್ಷ್ಯದಿಂದ ವ್ಯಕ್ತವಾಗಿದೆ.!!

ಕೊಲೆ ಪ್ರಕರಣದಲ್ಲಿ ಪ್ರತಾಪ್ ಸಿಂಗ್ ಎಂಬ ಕಾಲೇಜು ವಿದ್ಯಾರ್ಥಿಯನ್ನು ಬಂಧಿಸಿದ್ದ ಪೊಲೀಸರು, ಅವನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು. ಪ್ರಕರಣ ಕೋರ್ಟ್‌ನಲ್ಲಿದ್ದಾಗ, ಈ ಪ್ರಕರಣದಲ್ಲಿ ಪೊಲೀಸರ ಪಾತ್ರ ಅನುಮಾನಾಸ್ಪದವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ ನ್ಯಾಯಾಧೀಶರು ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.!!

ಕೊಲೆ ಕೇಸ್‌ನಲ್ಲಿ ಗೂಗಲ್‌ನಿಂದ ಮರುಜೀವ ಪಡೆದ ಆರೋಪಿ!!..ಹೇಗೆ ಗೊತ್ತಾ?

ಅಗಸ್ಟ್ 20, 2016 ರಂದು 11 ವರ್ಷದ ಬಾಲಕ ರೆಹಾನ್ ಶವವಾಗಿ ಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಅಂಬಂಧಿಸಿದಂತೆ ಪ್ರತಾಪ್ ಸಿಂಗ್ ಎಂಬ ವಿಧ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಕೋರ್ಟ್‌ನಲ್ಲಿ ಒದಗಿಸಿದ ಸಾಕ್ಷ್ಯಾಧಾರಕ್ಕೂ ಮತ್ತು ವಾಸ್ತವಿಕ ಸಾಕ್ಷ್ಯಾಧಾರಕ್ಕೆ ಹೆಚ್ಚು ವ್ಯತ್ಯಾಸವಿದ್ದು, ಇದರಿಂದ ಪೊಲೀಸರ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿತ್ತು. !!

ಕೊಲೆ ಕೇಸ್‌ನಲ್ಲಿ ಗೂಗಲ್‌ನಿಂದ ಮರುಜೀವ ಪಡೆದ ಆರೋಪಿ!!..ಹೇಗೆ ಗೊತ್ತಾ?

ಈ ಪ್ರಕರಣದಲ್ಲಿ ಗೂಗಲ್ ಸಹಾಯ ನೀಡಿ, ಕೊಲೆ ನಡೆದ ಸಂದರ್ಭದಲ್ಲಿ ಆರೋಪಿಯು ಬಳಕೆ ಮಾಡುತ್ತಿದ್ದ ಐಪಿ ವಿಳಾಸ ಚಾಲ್ತಿಯಲ್ಲಿದ್ದು, ಆತ ಕೊಲೆ ನಡೆದ ಸ್ಥಳದಲ್ಲಿ ಇರಲೇ ಇಲ್ಲ ಎನ್ನುವುದನ್ನು ಗೂಗಲ್ ಸಾಬೀತುಪಡಿಸಿದೆ. ಇದರಿಂದ ಆರೋಪಿ ವಿದ್ಯಾರ್ಥಿ ಪ್ರಕರಣದಿಂದ ಖುಲಾಸೆಯಾಗಿದ್ದಾನೆ. ಆದರೆ, ಆರೋಪಿ ಐಪಿ ವಿಳಾಸವನ್ನು ಬೇರೆಯವರು ಬಳಕೆ ಮಾಡಿರಬಹುದು ಎನ್ನುವ ಅನುಮಾನ ನಮಗೆ ಕಾಡುತ್ತಿದೆ.!!

ಓದಿರಿ: 5000 ರೂ.ಒಳಗೆ ಲಭ್ಯವಿರುವ ಟಾಪ್ 5 ಸ್ಮಾರ್ಟ್‌ಫೋನ್‌ ಲೀಸ್ಟ್ ಇಲ್ಲಿದೆ!!

Best Mobiles in India

English summary
The college student was arrested by Kanpur police for the murder of Rehan.to know more visit to kannada.gizbot.co

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X