ವಿಜ್ಞಾನಿಗಳಿಗೆ ಸವಾಲೆಸೆದ ಭಯಾನಕ ರಹಸ್ಯಗಳು

By Shwetha
|

ಜಗತ್ತು ನೀವು ಕಂಡಷ್ಟು ಸರಳವಾಗಿಲ್ಲ. ಎಷ್ಟೆಷ್ಟೋ ಊಹೆಗೂ ನಿಲುಕದ ರಹಸ್ಯಗಳನ್ನು ವಿಶ್ವ ತನ್ನಲ್ಲಿ ಬಚ್ಚಿಟ್ಟುಕೊಂಡಿದೆ ಮತ್ತು ಬಲವಾದ ಕಾರಣಗಳಿಂದ ಈ ರಹಸ್ಯ ನಮ್ಮ ಮುಂದಕ್ಕೆ ಬರುತ್ತದೆ. ಆದರೆ ಈ ರಹಸ್ಯಗಳನ್ನು ಬೇಧಿಸಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲ ಎಂಬುದು ಆಶ್ಚರ್ಯವನ್ನುಂಟು ಮಾಡುತ್ತಿರುವ ಸಂಗತಿಯೂ ಹೌದು.

ಓದಿರಿ: ಫೇಮಸ್‌ ಸಿನಿಮಾಗಳಲ್ಲಿ ರೋಮಾಂಚನಕಾರಿ ದೃಶ್ಯಗಳನ್ನು ಸೆರೆಹಿಡಿದಿದ್ದು ಹೀಗೆ!

ಆಧುನಿಕ ಜಗತ್ತು ಎಷ್ಟು ಮಾರ್ಪಾಡನ್ನು ಪಡೆದುಕೊಂಡಿದೆ ಎಂದರೆ ಇಲ್ಲಿ ಅಸಾಧ್ಯ ಎಂಬ ಮಾತಿಗೆ ಜಾಗವೇ ಇಲ್ಲದಂತಾಗಿದೆ. ಅದಾಗ್ಯೂ ಈ ರಹಸ್ಯಗಳು ಮಾತ್ರವೇ ಭೂಮಿಯಲ್ಲಿ ಅಡಗಿದೆ ಅದೂ ಕೂಡ ಉತ್ತರವೇ ಇಲ್ಲದಂತೆ ನಮ್ಮನ್ನು ಪ್ರಶ್ನೆಯಾಗಿ ಕಾಡಿದೆ. ಇಂದಿನ ಲೇಖನದಲ್ಲಿ ಇಂತಹುದೇ ರಹಸ್ಯಮಯ ಅಂಶಗಳನ್ನು ನಿಮ್ಮೆದುರಿಗೆ ಇಡುತ್ತಿದ್ದು ಇದು ನಿಮ್ಮನ್ನು ಇನ್ನಷ್ಟು ಕುತೂಹಲಕ್ಕೆ ತಳ್ಳುವುದು ಖಂಡಿತ.

ಅಲ್ಯುಮಿನಿಯಮ್ ವೆಡ್ಜ್

ಅಲ್ಯುಮಿನಿಯಮ್ ವೆಡ್ಜ್

ರೊಮಾನಿಯಾದಲ್ಲಿ 1974 ರಲ್ಲಿ ಕಂಡುಬಂದ ವಸ್ತು ಇದಾಗಿದೆ. ಮೂರಾಸ್ ನದಿಯ ತೀರದಲ್ಲಿ ಇದು ಪತ್ತೆಯಾಗಿದೆ. ಹ್ಯಾಮರ್‌ನ ತಲೆಯಂತೆ ಕಾಣುತ್ತಿರುವ ಇದನ್ನು ಅಲ್ಯುಮಿನಿಯಮ್‌ ಬಳಸಿ ತಯಾರಿಸಲಾಗಿದೆ. 1808 ರಲ್ಲಿ ಯಾವುದೇ ಅಲ್ಯುಮಿನಿಯಮ್ ಪತ್ತೆಯಾಗಲು ಸಾಧ್ಯವೇ ಇಲ್ಲ. ಅದಾಗ್ಯೂ ಇದನ್ನು ಇದನ್ನು ಬಳಸಿ ಮಾತ್ರವೇ ನಿರ್ಮಿಸಲಾಗಿದೆ ಎಂಬುದು ಹೆಚ್ಚು ಆಶ್ಚರ್ಯಕರ ಮತ್ತು ಪ್ರಶ್ನೆಯಾಗಿ ನಮ್ಮನ್ನು ಕಾಡುತ್ತದೆ.

ಬಬುಕ್ಷಾ ಮಹಿಳೆ

ಬಬುಕ್ಷಾ ಮಹಿಳೆ

1963 ರಲ್ಲಿ ಜಾನ್ ಎಫ್ ಕೆನಡಿಯ ಮರಣ ಮೆರವಣಿಗೆಯಲ್ಲಿ ಈ ರಹಸ್ಯ ಮಹಿಳೆ ಕಂಡುಬಂದಿದ್ದಾರೆ. ಕಂದು ಬಣ್ಣದ ಓವರ್ ಕೋಟ್ ಅನ್ನು ಧರಿಸಿ ಸ್ಕಾರ್ಫ್ ಅನ್ನು ತಲೆಗೆ ಕಟ್ಟಿದ್ದಾಳೆ. ಕ್ಯಾಮೆರಾದಂತಹ ವಸ್ತುವೊಂದನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿರುವುದು ಇಲ್ಲಿ ವ್ಯಕ್ತವಾಗುತ್ತಿದೆ. ಆದರೆ ಈಕೆ ಕ್ಯಾಮೆರಾದಲ್ಲಿ ಸೆರೆಹಿಡಿದ ಯಾವುದೇ ಫೂಟೇಜುಗಳನ್ನು ನೀಡಿಲ್ಲ ನಂತರ ಆಕೆ ಎಲ್ಲಿ ಹೋದಳು ಮತ್ತು ಎಲ್ಲಿಂದ ಬಂದಳು ಎಂಬುದು ಕೂಡ ಯಾರೂ ತಿಳಿದಿಲ್ಲ.

ಸಿಕಾಡಾ 3301

ಸಿಕಾಡಾ 3301

ಕಳೆದ ಮೂರು ವರ್ಷಗಳಿಂದ, ಪ್ರತೀ ಜನವರಿಯಲ್ಲಿ ಒಂದು ವಿಚಿತ್ರ ಪಜಲ್ ಆಟವೊಂದು ನಡೆಯುತ್ತಿದ್ದು ಇದನ್ನು 3301 ಎಂಬುದಾಗಿ ಕರೆಯಲಾಗಿದೆ. ಇದರ ಗುರುತು ಸಿಕಾಡಾ ಆಗಿದೆ. ಬುದ್ಧಿವಂತ ವ್ಯಕ್ತಿಯ ಪತ್ತೆಗಾಗಿ ಈ ಪಜಲ್ ಆಟವನ್ನು ಆಡಲಾಗುತ್ತಿದೆ ಎಂಬ ಮಾಹಿತಿ ಕೂಡ ಇದೆ.

ಡೈಟಾನ್ ರಾಕ್

ಡೈಟಾನ್ ರಾಕ್

ಮೆಸಚುಸೆಟ್ಸ್‌ನ ನದಿ ತೀರದಲ್ಲಿ ಪತ್ತೆಯಾದ ಈ ಕಲ್ಲು 40 ಟನ್ ಭಾರವಾಗಿದೆ. 1963 ರಲ್ಲಿ ಇದನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ಇದನ್ನು ನಿರ್ಮಿಸಿದವರು ಯಾರು ಎಂಬುದು ಮಾತ್ರ ಪತ್ತೆಯಾಗಿಲ್ಲ.

ಗ್ರೀನ್ ಚಿಲ್ಡ್ರನ್

ಗ್ರೀನ್ ಚಿಲ್ಡ್ರನ್

ರಷ್ಯಾದ, ವೂಲ್‌ಪಿಟ್‌ನಲ್ಲಿ ಕಂಡುಬಂದ ಗ್ರೀನ್ ಚಿಲ್ಡ್ರನ್ ಸಹೋದರ ಮತ್ತು ಸಹೋದರಿಯಾಗಿದ್ದಾರೆ.. ಇವರ ಮೈ ಬಣ್ಣ ಹಸಿರಾಗಿತ್ತು. ಮತ್ತೆಲ್ಲಾ ಸಾಮಾನ್ಯವಾಗಿಯೇ ಇವರಲ್ಲಿತ್ತು. ಗುರುತಿಸಲು ಆಗದೇ ಇರುವ ಭಾಷೆಯನ್ನು ಮಾತನಾಡುತ್ತಿದ್ದರು.

ಪೊಲಾಕ್ ಟ್ವಿನ್ಸ್

ಪೊಲಾಕ್ ಟ್ವಿನ್ಸ್

ಇಂಗ್ಲೇಂಡ್‌ನಲ್ಲಿ 1957 ರಲ್ಲಿ ಆರರ ಹರೆಯದ ಜಾಕ್ವಲಿನ್ ಪೊಲಾಕ್ ಮತ್ತು ಹನ್ನೊಂದರ ಹರೆಯದ ಜೊನ್ನಾ ಕಾರು ಅಫಘಾತದಲ್ಲಿ ಮೃತಪಟ್ಟಿದ್ದರು. ಇವರಿಬ್ಬರೂ ಸಹೋದರಿಯರಾಗಿದ್ದರು. ವರ್ಷಗಳ ನಂತರ ಅವರ ತಾಯಿ ಅವಳಿ ಜವಳಿಗಳಿಗೆ ಜನ್ಮವನ್ನು ನೀಡಿದರು. ನಡೆದ ವಿಚಿತ್ರ ಎಂದರೆ ಅಪಘಾತದಲ್ಲಿ ಮಡಿದ ಅದೇ ಮಕ್ಕಳ ದೇಹ ಲಕ್ಷಣಗಳನ್ನು ಈ ಅವಳಿಗಳು ಪಡೆದುಕೊಂಡಿದ್ದರು.

ಜೊಡಿಯಾಕ್ ಕಿಲ್ಲಿಂಗ್ಸ್

ಜೊಡಿಯಾಕ್ ಕಿಲ್ಲಿಂಗ್ಸ್

ಜೊಡಿಯಾಕ್ ಎಂಬ ಸರಣಿ ಕೊಲೆಗಾರ ತನಗೆ ಕೊಲೆ ಮಾಡುವುದು ಎಂದರೆ ಮೋಜಿನ ವಿಷಯ ಎಂಬುದಾಗಿ ಬರೆದ ಪತ್ರಿಕಾ ಪ್ರಕಟಣೆಯೊಂದನ್ನು ಸ್ಯಾನ್ ಫ್ರಾನಿಸ್ಕೊ ಪತ್ರಿಕಾಲಯಕ್ಕೆ ಕಳುಹಿಸಿದ್ದ. 1969 ರಲ್ಲಿ ಬೇ ಅರಿಯಾ ಎಂಬ ವ್ಯಕ್ತಿ ಐದರ ಹರೆಯದಿಂದ ಆರಂಭಿಸಿ ಹೆಚ್ಚು ವ್ಯಕ್ತಿಗಳನ್ನು ಕೊಂದಿದ್ದ. ಜೋಡಿಗಳೇ ಇವನಿಗೆ ಹೆಚ್ಚು ಆಹುತಿಯಾಗುತ್ತಿದ್ದರು. ವ್ಯಕ್ತಿಗಳನ್ನು ಸಾಯಿಸಿದ ನಂತರ ಸುದ್ದಿಪತ್ರಿಕೆಗಳಿಗೆ ಕೋಡ್ ಭಾಷೆಯಲ್ಲಿ ಸಂದೇಶಗಳನ್ನು ಕಳುಹಿಸುತ್ತಿದ್ದ.

Most Read Articles
Best Mobiles in India

English summary
Take these 7 mysteries, for example. They have been mysteries for decades (if not longer). No matter how many experts have examined the cases, they are still shrouded in mystery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more