ಎಲ್ಲೆಲ್ಲಿ ಎಷ್ಟೆಷ್ಟು ಟ್ರಾಫಿಕ್ ಇದೆ ಎಂದು ಗೂಗಲ್ ಹೇಳೋದು ಹೇಗೆ?!.ಖಂಡಿತ ಗೊತ್ತಿರೊಲ್ಲಾ!!

ಇಂದು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ''ಗೂಗಲ್ ಮ್ಯಾಪ್'' ಬಳಕೆ ಅನಿವಾರ್ಯ ಎನ್ನುವಹಾಗಿದೆ.!!

By Bhaskar
|

ಪ್ರಪಂಚದ ಯಾವುದೇ ಸ್ಥಳವನ್ನು ನಿಖರವಾಗಿ ತೋರಿಸುವ ಮತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ದಾರಿ ತೋರಿಸುವ "ಗೂಗಲ್ ಮ್ಯಾಪ್" ತಂತ್ರಜ್ಞಾನಕ್ಕೆ ಬೆರಗಾಗದೇ ಇರುವವರು ಯಾರು ಇಲ್ಲ ಎನ್ನಬಹುದು. ಹಾಗಾಗಿಯೇ, ಇಂದು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ''ಗೂಗಲ್ ಮ್ಯಾಪ್'' ಬಳಕೆ ಅನಿವಾರ್ಯ ಎನ್ನುವಹಾಗಿದೆ.!

ಇದೆಲ್ಲಾ ತಂತ್ರಜ್ಞಾನಗಳು ನಮಗೆ ವಿಸ್ಮಯ ಎನಿಸುವಾಗಲೇ ಗೂಗಲ್ ಮ್ಯಾಪ್ ಇದೀಗ ತನ್ನ ಫೀಚಸ್‌ಗಳಿಗೆ ರಿಯಲ್-ಟೈಮ್ ಅನ್ನು ಸೇರಿಸಿಕೊಂಡಿದೆ. ಪರಿಚಿತ ಮತ್ತು ಅಪರಿಚಿತ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಯಾವ್ಯಾವ ರಸ್ತೆಯಲ್ಲಿ ಎಷ್ಟೆಷ್ಟು ಟ್ರಾಫಿಕ್ ಇದೆ ಎಂಬುದನ್ನು ಸಹ ಗೂಗಲ್ ಮ್ಯಾಪ್ ತಿಳಿಸುತ್ತದೆ.! ಹಾಗಾದರೆ, ಗೂಗಲ್ ಮ್ಯಾಪ್ ಹೆಚ್ಚು ಟ್ರಾಫಿಕ್ ಇರುವ ರಸ್ತೆಯನ್ನು ಹೇಗೆ ಗುರುತಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿರಿ.

ಸೆಟಲೈಟ್ ಮೂಲಕ ಮಾತ್ರವೇ ಸಾಧ್ಯವಿಲ್ಲಾ!!

ಸೆಟಲೈಟ್ ಮೂಲಕ ಮಾತ್ರವೇ ಸಾಧ್ಯವಿಲ್ಲಾ!!

ಗೂಗಲ್ ಕಂಪೆನಿ ತನ್ನ ಸೆಟಲೈಟ್ ಮೂಲಕ ಟ್ರಾಫಿಕ್ ಅನ್ನು ಗುರುತಿಸುತ್ತದೆ ಎಂದು ಬಹುತೇಕರು ತಿಳಿದಿರುತ್ತಾರೆ. ಆದರೆ, ಇದು ಅರ್ಧಸತ್ಯ ಮಾತ್ರ.!! ಏಕೆಂದರೆ, ಗೂಗಲ್ ಮ್ಯಾಪ್ ಸೆಟಲೈಟ್ ಮಾತ್ರವಲ್ಲದೆ ವಿವಿಧ ಮೂಲಗಳ ನೆರವು ಪಡೆದು ಆ ಮಾಹಿತಿ ಸಂಗ್ರಹಿಸಿ ತನ್ನ ಬಳಕೆದಾರರಿಗೆ ನೀಡುತ್ತದೆ.

ಸ್ಮಾರ್ಟ್ಫೋನ್ ಬಳಕೆದಾರರೆ ಟಾರ್ಗೆಟ್!!

ಸ್ಮಾರ್ಟ್ಫೋನ್ ಬಳಕೆದಾರರೆ ಟಾರ್ಗೆಟ್!!

ಎಲ್ಲರಿಗೂ ಅಚ್ಚರಿ ಮೂಡಿಸುವ ಈ ರಿಯಲ್ ಟೈಮ್ ನಂತಹ ಫೀಚರ್‌ಗೆ ಬೇಕಾದ ಸಂಕೀರ್ಣ ಮಾಹಿತಿಯನ್ನು ಪಡೆಯಲು ಗೂಗಲ್ ಅವಲಂಬಿಸಿರುವುದು ಸ್ಮಾರ್ಟ್ಫೋನ್ ಬಳಕೆದಾರರನ್ನೇ!! ಟ್ರಾಫಿಕ್ನಲ್ಲಿ ನಿಂತಿರಬಹುದಾದ ಸ್ಮಾರ್ಟ್‌ಫೋನ್ ಬಳಕೆದಾರರನ್ನೇ ಗುರುತಿಸಿ. ಗೂಗಲ್ ಈ ರಿಯಲ್ ಟೈಮ್ ಸೇವೆ ಯನ್ನು ಒದಗಿಸುತ್ತದೆ.

ಎಲ್ಲವೂ ತಂತ್ರಜ್ಞಾನ!!

ಎಲ್ಲವೂ ತಂತ್ರಜ್ಞಾನ!!

ಟ್ರಾಫಿಕ್ನಲ್ಲಿ ನಿಂತಿರಬಹುದಾದ ಸ್ಮಾರ್ಟ್‌ಫೋನ್ ಬಳಕೆದಾರನ್ನು ಗುರುತಿಸುವ ಗೂಗಲ್, ವಾಹನ ನಿಲ್ಲುವ ಹೊತ್ತು, ಸಾಗುವ ವೇಗ ಇತ್ಯಾದಿ ಮಾಹಿತಿಯನ್ನು ತನ್ನ ಗೂಗಲ್ ಖಾತೆ ತಂತ್ರಜ್ಞಾನ ಸಹಾಯದಿಂದ ಪಡೆದುಕೊಳ್ಳುತ್ತದೆ. ಹಾಗಾಗಿ, ಟ್ರಾಫಿಕ್ ಬಗ್ಗೆ ಗೂಗಲ್ ಮ್ಯಾಪ್ಸ್ ಅಂದಾಜಿಸುತ್ತದೆ.

ವಿವಿಧ ಮೂಲಗಳು ಯಾವುವು?

ವಿವಿಧ ಮೂಲಗಳು ಯಾವುವು?

ರಿಯಲ್ ಟೈಮ್ ಬಗ್ಗೆ ಕೇವಲ ಸೆಟಲೈಟ್ ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರನ್ನು ಮಾತ್ರ ಗೂಗಲ್ ಅವಲಂಬಿಸಿಲ್ಲ. ಬದಲಾಗಿ ಸರಕಾರದ ಸಾರಿಗೆ ಇಲಾಖೆ ಹಾಗೂ ಖಾಸಗಿ ಡೇಟಾ ಪ್ರೊವೈಡರ್‌ಗಳೊಂದಿಗೆ ಗೂಗಲ್ ಹೊಂದಾಣಿಕೆ ಮಾಡಿಕೊಂಡು ಅವುಗಳಿಂದ ಸ್ವಲ್ಪ ಮಾಹಿತಿಯನ್ನು ಪಡೆಯುತ್ತದೆ.

ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಹೆಚ್ಚು ಬಳಸಿದರೆ ಮಾಹಿತಿ ಪಕ್ಕಾ!!

ಹೆಚ್ಚು ಬಳಸಿದರೆ ಮಾಹಿತಿ ಪಕ್ಕಾ!!

ಇಷ್ಟೆಲ್ಲಾ ಅಂಶಗಳ ನಡುವೆಯೇ ಗೂಗಲ್ ನಮ್ಮ ಮಾಹಿತಿಯನ್ನು ನಮ್ಮ ನಡುವೆಯೇ ಹಂಚಿಕೊಳ್ಳುತ್ತದೆ ಎನ್ನುವುದು ಸಹ ನಿಮ್ಮನ್ನು ಕುತೋಹಕ್ಕೆ ದೂಕಬಹುದು. ಹೌದು, ಹೆಚ್ಚು ಜನರು ಗೂಗಲ್ ಮ್ಯಾಪ್ ಬಳಸಿದರೆ ಇನ್ನಷ್ಟು ನಿಖರ ಮಾಹಿತಿಯನ್ನು ಗೂಗಲ್ ಮೂಲಕ ಪಡೆಯಲು ಸಾಧ್ಯ.! ಅಂದರೆ, ನಮ್ಮ ಮಾಹಿತಿ ನಮಗೆ!!

ಓದಿರಿ:ಒಂದು ಕ್ಷಣ ಕೂಡ ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲವೇ?..ಹಾಗಾದ್ರೆ ನಿಮಗೆ ಈ ರೋಗವಿದೆ!!

Best Mobiles in India

English summary
Hidden away in Google Maps settings is the option to view traffic data for any location in real time.to know more visit to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X