ಎಲ್ಲಾ ಮೊಬೈಲ್‌ಗಳಲ್ಲಿ ಮೊದಲೇ 'ಗೂಗಲ್' ಇರುವುದೇಕೆ?..ಈ ನಗ್ನ ಸತ್ಯ ಗೊತ್ತಾ?!
ಆಂಡ್ರಾಯ್ಡ್ ಹರಿಕಾರ ಗೂಗಲ್ ಆಗಿರುವುದರಿಂದ ಗೂಗಲ್ ಇಂಟರ್‌ನೆಟ್ ಪ್ರಪಂಚವನ್ನು ಆಳುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ.! ಇದು ಸತ್ಯವೆ ಆದರೂ ಸಹ ಇನ್ನು ಕೆಲವು ಅಂಶಗಳು ಗೂಗಲ್ ಅನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಿವೆ.!
ನೀವು ಯಾವುದೇ ಮೊಬೈಲ್ ಅಥವಾ ಸ್ಮಾರ್ಟ್‌ಪೋನ್ ಖರೀದಿಸಿದರೂ ಸಹ ಅದರಲ್ಲಿ ಡಿಫಾಲ್ಟ್ ಬ್ರೌಸರ್ ಆಗಿ ಗೂಗಲ್ ಮತ್ತು ಗೂಗಲ್ ಆಪ್‌ಗಳು ಮುಂಚಿತವಾಗಿಯೇ ಇರುವುದನ್ನು ಗಮನಿಸಿರುತ್ತೀರಾ ಅಲ್ಲವೇ.? ಹಾಗಾದರೆ ಇದಕ್ಕೆ ಕಾರಣವೇನು ಎಂಬುದನ್ನು ಯಾವಾಗಲಾದರೂ ಯೋಚಿಸಿದ್ದೀರಾ? ಅಥವಾ ಗೂಗಲ್ ಬಿಟ್ಟರೆ ಬೇರೆ ಕಂಪೆನಿಗಳೆ ಇಲ್ಲವೇ ಎಂಬ ಪ್ರಶ್ನೆಗಳು ಮೂಡಿವೆಯೆ.? ಹಾಗಿದ್ದರೆ, ಇಂದಿನ ಲೇಖನವನ್ನು ಓದಿ.

ಏಕೆಂದರೆ, ಇಂತಹ ಪ್ರಶ್ನೆಗಳು ಬಹುತೇಕ ಎಲ್ಲರಿಗೂ ಹುಟ್ಟಿಕೊಳ್ಳುತ್ತವೆ. ಬಹುತೇಕರು ಗೂಗಲ್ ಕಂಪೆನಿಯೇ ಆದರೆ, ಆಂಡ್ರಾಯ್ಡ್ ಹರಿಕಾರನಾಗಿರುವುದರಿಂದ ಅದು ಮೊಬೈಲ್ ಪ್ರಪಂಚವನ್ನು ಆಳುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಇದು ಒಂದು ರೀತಿಯಲ್ಲಿ ಸತ್ಯವೆ ಆದರೂ, ಇನ್ನು ಕೆಲವು ಶಾಕಿಂಗ್ ಅಂಶಗಳು ಸಹ ಗೂಗಲ್ ಇಷ್ಟು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಿವೆ. ಹಾಗಾದರೆ, ಆ ಶಾಕಿಂಗ್ ಅಂಶಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಮೊದಲೇ ಗೂಗಲ್ ಆಪ್‌ಗಳು ಬರುವುದು ಹೇಗೆ?
ನೀವು ಯಾವುದೇ ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸಿದರು ಸಹ ಅದರಲ್ಲಿ ಮುಂಚಿತವಾಗಿಯೇ ಗೂಗಲ್ ಆಪ್‌ಗಳು ಲಭ್ಯವಿರುತ್ತವೆ ಅಲ್ಲವೇ. ಹಾಗಾದರೆ, ಆಪ್‌ಗಳನ್ನು ಮೊಬೈಲ್ ಸಂಸ್ಥೆಗಳು ನೀಡುತ್ತವೆಯೋ ಅಥವಾ ಗೂಗಲ್ ನೀಡುತ್ತದೆಯೋ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ನಿಮಗೆ ಗೊತ್ತಾ?. ಮೊದಲೇ ಇನ್‌ಬ್ಯುಲ್ಟ್ ಆಪ್‌ಗಳನ್ನು ನೀಡಲು ಮೊಬೈಲ್ ಕಂಪೆನಿಗಳಿಗೆ ಗೂಗಲ್ ಭಾರೀ ಹಣವನ್ನು ನೀಡುತ್ತದೆ.!

46,800 ಕೋಟಿ ಖರ್ಚು ಮಾಡುತ್ತದೆ ಗೂಗಲ್
ಗೂಗಲ್ ಡಿಫಾಲ್ಟ್ ಬ್ರೌಸರ್, ಜಿಮೇಲ್, ಯುಟ್ಯೂಬ್, ಗೂಗಲ್ ಡ್ರೈವ್ ಸೇರಿ ಉಳಿದ ಎಲ್ಲಾ ಗೂಗಲ್‌ನ ಆಪ್‌ಗಳ ಕಾರ್ಯನಿರ್ವಹಣೆಗೆ ಸರಿಹೋಗುವಹಾಗೆ ಮೊಬೈಲ್ ತಯಾರಿಸುವ ಮೊಬೈಲ್ ಕಂಪೆನಿಗಳಿಗೆ ಕಳೆದ ವರ್ಷ 46,800 ಕೋಟಿಗೂ ಹೆಚ್ಚು ಹಣವನ್ನು ನೀಡಿತ್ತು ಎನ್ನುತ್ತವೆ ವರದಿಗಳು.

ಆಪಲ್‌ಗೂ ಸಹ ಹಣ ನೀಡಿದೆ.
ಗೂಗಲ್ ಇತ್ತೀಚಿಗೆ ಆಪಲ್ ಕಂಪೆನಿ ಜೊತೆಗೂ ಸಹ ಒಪ್ಪಂದ ಮಾಡಿಕೊಂಡಿದ್ದು, ಐಫೋನ್‌ಗಳಲ್ಲಿ, ಮ್ಯಾಕ್‌ಬುಕ್ ಹಾಗೂ ಕಂಪ್ಯೂಟರ್‌ಗಳಲ್ಲಿ ಡಿಫಾಲ್ಟ್ ಬ್ರೌಸರ್ ಬಳಕೆ ಮಾಡಲು ಆಪಲ್ ಕಂಪೆನಿಗೆ ಗೂಗಲ್ ₹19,500 ಕೋಟಿ ಪಾವತಿಸಿದೆ. ಹಾಗಾಗಿಯೇ, ಆಪಲ್‌ನಲ್ಲಿ ಗೂಗಲ್ ಕಾಣಿಸಿಕೊಂಡಿದೆ.

ವಾರ್ಷಿಕ ಖರ್ಚು ಮಾಡುವು ಹಣ ಎಷ್ಟು?
ಜಗತ್ತಿನ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ತನ್ನ ಪ್ರಾಡೆಕ್ಟ್‌ಗಳನ್ನು ಬಳಸುವಂತೆ ಮಾಡಲು ಗೂಗಲ್ ವಾರ್ಷಿಕ ಖರ್ಚು ಮಾಡುವ ಹಣ ಎಷ್ಟು ಗೊತ್ತಾ? ಬರೋಬ್ಬರಿ 1,23,000 ಕೋಟಿಗೂ ಹೆಚ್ಚು. ಅಂದರೆ, ಭಾರತದ ನಂಬರ್ ಒನ್ ಶ್ರೀಮಂತ ಅಂಬಾನಿಯ ಅರ್ಧ ಆಸ್ತಿಯನ್ನು ಒಂದು ವರ್ಷಕ್ಕೆ ಖರ್ಚು ಮಾಡುತ್ತದೆ ಗೂಗಲ್.

ಗೂಗಲ್ ಆದಾಯವೂ ಹೆಚ್ಚಿರುತ್ತದೆ.
ವರ್ಷಕ್ಕೆ 1,23,000 ಕೋಟಿಗೂ ಹೆಚ್ಚು ಹಣವನ್ನು ಗೂಗಲ್ ತನ್ನ ಉಧ್ಯಮಕ್ಕಾಗಿ ಖರ್ಚು ಮಾಡುತ್ತಿದ್ದು, ಆದಾಯದ ಪ್ರಮಾಣ ಇದರ ಎರಡು ಪಟ್ಟು ಹೆಚ್ಚಿದೆ.ಗೂಗಲ್ ಬಳಸುವವರ ಸಂಖ್ಯೆ ಹೆಚ್ಚಿದಂತೆ ಆ ಸಂಸ್ಥೆಯ ಆದಾಯವೂ ಹೆಚ್ಚುತ್ತದೆ. ಮತ್ತು ಜಾಗತಿಕವಾಗಿ ಏಕಸ್ವಾಮ್ಯ ಕಂಪೆನಿಯಾಗಿ ಬೆಳೆಯುತ್ತಿದೆ.

ಇನ್ಮುಂದೆ ನಿಮ್ಮ ATM ಕಾರ್ಡ್ ಹಣವನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲಾ!..ಏಕೆ ಗೊತ್ತಾ?
ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ಗಳಿಂದ ಬ್ಯಾಂಕಿಂಗ್ ಕಾರ್ಯಗಳೇನೊ ಸುಲಭವಾದರೆ, ಸೈಬರ್ ಕ್ರಿಮಿನಲ್ ಚಟುವಟಿಕೆಗಳು ಭಾರಿ ಹೆಚ್ಚಾಗಿವೆ. ಪ್ರತಿದಿನವೂ ಹಣ ಕಳೆದುಕೊಂಡವರ ಸುದ್ದಿ ಎಲ್ಲೆಡೇ ಹರಿದಾಡುತ್ತಿದೆ.! ಆದರೆ, ಇನ್ನು ಹಾಗಾಗುವುದಿಲ್ಲ.
ಹೌದು, ಸದ್ಯ ದೇಶದಲ್ಲಿ ಮ್ಯಾಗ್ನೆಟಿಕ್ ಸ್ಟ್ರಿಪ್ ಇರುವ ಡೆಬಿಟ್ ಕಾರ್ಡ್‌ಗಳ ಸಂಖ್ಯೆ ಹೆಚ್ಚಿದ್ದು, ವಂಚಕರು ಮ್ಯಾಗ್ನೆಟಿಕ್ ಸ್ಟ್ರಿಪ್‌ನಲ್ಲಿರುವ ಮಾಹಿತಿ ಕದಿಯಲು ಸ್ಕಿಮ್ಮಿಂಗ್ ತಂತ್ರಜ್ಞಾನ ಬಳಸುತ್ತಿದ್ದರು. ಆದರೆ, ಇದೀಗ ನೂತನ ತಂತ್ರಜ್ಞಾನವನ್ನು ಬಳಕೆಗೆ ಬರುತ್ತಿದ್ದು, ಭವಿಷ್ಯದಲ್ಲಿ ಕಾರ್ಡ್ ವಂಚನೆಗಳು ನಿಲ್ಲುವ ಸೂಚನೆ ಸಿಕ್ಕಿದೆ.
ಸದ್ಯ ಅತ್ಯಂತ ಹೆಚ್ಚು ತಂತ್ರಜ್ಞಾನ ಹೊಂದಿರುವ ಎರಡು ಮಾದರಿಯ ನೂತನ ಹಣ ವರ್ಗವಣೆ ವ್ಯವಸ್ಥೆ ಜಾರಿಯಲ್ಲಿದ್ದು, ಮುಂದಿನ ದಿವಸಗಳಲ್ಲಿ ಈ ಸೇವೆ ದೇಶದೆಲ್ಲೆಡೆಡೇ ಚಾಲ್ತಿಗೆ ಬರುವ ದಿವಸಗಳು ದೂರವಿಲ್ಲಾ. ಹಾಗಾದರೆ, ಆ ಹೆಚ್ಚು ತಂತ್ರಜ್ಞಾನ ಸೇವೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಬಯೊ ಮೆಟ್ರಿಕ್ ಎಟಿಎಂ
ಡೆಬಿಟ್ ಕಾರ್ಡ್/ ಪಿನ್ ವಂಚನೆ ತಡೆಯಲು ಹಲವು ಬ್ಯಾಂಕ್‌ಗಳು ಬಯೊ ಮೆಟ್ರಿಕ್ ಆಧಾರಿತ ಎಟಿಎಂಗಳನ್ನು ಪರಿಚಯಿಸಿವೆ. ಇದರಿಂದ ಗ್ರಾಮೀಣ ಭಾಗದ ಅನಕ್ಷರಸ್ಥ ಗ್ರಾಹಕರನ್ನು ತಲುಪಲೂ ಬ್ಯಾಂಕ್‌ಗಳಿಗೆ ಅನುಕೂಲವಾಗಿದೆ. ಈ ತಂತ್ರಜ್ಞಾನದಿಂದ ಪಿನ್ ಮರೆಯುವ ಅಥವಾ ಬೇರೆಯವರು ದುರ್ಬಳಕೆ ಮಾಡುವ ಆತಂಕ ಇರುವುದಿಲ್ಲ.

ಹೆಬ್ಬೆಟ್ಟಿನ ಗುರುತು
ಪಿನ್ ಬಳಸುವ ಬದಲಿಗೆ ಹೆಬ್ಬೆಟ್ಟಿನ ಗುರುತು ನೀಡಿ ಹಣ ವರ್ಗಾವಣೆ ನಡೆಸುವ ಸೌಲಭ್ಯವನ್ನು ಬಯೊ ಮೆಟ್ರಿಕ್ ಎಟಿಎಂಗಳಲ್ಲಿ ಜಾರಿಗೆ ತರಲಾಗುತ್ತಿದೆ.! ಅನಕ್ಷರಸ್ಥರೂ ಕೂಡ ಯಾವುದೇ ಭಯವಿಲ್ಲದೇ ಬ್ಯಾಂಕ್ ವ್ಯವಹಾರ ಮಾಡಬಹುದಾಗಿದ್ದು, ಹೆಬ್ಬೆಟ್ಟಿನ ಗುರುತಿನ ಮೂಲಕ ಹೆಚ್ಚಿನ ಸುರಕ್ಷತೆ ದೊರೆಯುತ್ತದೆ.

ಕಣ್ಣನ್ನು ಸ್ಕ್ಯಾನ್ ಮಾಡುತ್ತವೆ ಎಟಿಎಂಗಳು
ಹೆಬ್ಬೆಟ್ಟಿನ ಗುರುತನ್ನು ಸಹ ನಕಲು ಮಾಡಿ ಹಣ ಖದಿಯುವ ಖದೀಮರಿರುತ್ತಾರೆ. ಹಾಗಾಗಿಗೇ, ಕ್ಯಾಮೆರಾದಲ್ಲಿ ಕಣ್ಣನ್ನು ಸ್ಕ್ಯಾನ್ ಮಾಡುವ ವ್ಯವಸ್ಥೆ ಸಹ ಶೀಘ್ರದಲ್ಲಿಯೇ ಎಟಿಎಂಗಳಲ್ಲಿ ಜಾರಿಗೆ ಬರಲಿದೆ. ಹೆಬ್ಬೆಟ್ಟಿನ ಗುರುತು ಮತ್ತು ಕಣ್ಣಿನ ಗುರುತು ಎರಡೂ ಇದ್ದರೆ ಯಾರೂ ಮೋಸ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು.

ಚಿಪ್ ಆಧಾರಿತ ಕಾರ್ಡ್ ಬಂದಿವೆ
ಕಾರ್ಡ್ ಬಳಕೆದಾರನ ಖಾತೆಯ ಮಾಹಿತಿಯನ್ನು ಒಂದು ಚಿಪ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಜೊತೆಗೆ ಆ ಮಾಹಿತಿಯು ಗೂಢಲಿಪಿಯಲ್ಲಿ (ಎನ್‌ಕ್ರಿಪ್ಟ್) ಇರುತ್ತದೆ. ಈ ಚಿಪ್ ಆಧಾರಿತ ಕಾರ್ಡ್ ‘ಪಿನ್' ನೀಡಿದರೆ ಮಾತ್ರವೇ ಹಣ ವರ್ಗಾವಣೆ ಸಾಧ್ಯ. ಹೀಗಾಗಿ ಕಾರ್ಡ್ ನಕಲು ಮಾಡಲು ಆಗುವುದಿಲ್ಲ. ಹಾಗಾಗಿ, ಮುಂದೆ ಚಿಪ್‌ಕಾರ್ಡ್‌ಗಳ ಮೂಲಕ ಹಣ ವ್ಯವಹಾರ ಯೋಗ್ಯ.


Click it and Unblock the Notifications








