ವಿಮಾನ ಹಾರಿಸಿ ದಾಖಲೆ ನಿರ್ಮಿಸಿದ ಭಾರತೀಯ ಮೂಲದ 9ನೇ ತರಗತಿ ಬಾಲಕ!!

ಭಾರತೀಯ ಮೂಲದ 9ನೇ ತರಗತಿ ಶಾಲಾ ಬಾಲಕನೋರ್ವ ವಿಮಾನ ಹಾರಿಸಿ ದಾಖಲೆ ನಿರ್ಮಿಸಿದ್ದಾನೆ.!!

By Bhaskar
|

ಭಾರತೀಯ ಮೂಲದ 9ನೇ ತರಗತಿ ಶಾಲಾ ಬಾಲಕನೋರ್ವ ವಿಮಾನ ಹಾರಿಸಿ ದಾಖಲೆ ನಿರ್ಮಿಸಿದ್ದಾನೆ. ಯುಎಇ ಶಾರ್ಜಾದ ದೆಹಲಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಮನ್ಸೂರ್‌ ಅನೀಸ್ ಸಣ್ಣ ವಿಮಾನವನ್ನು ಚಾಲನೆ ಮಾಡುವ ಮೂಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ.!

ಈ ಬಗ್ಗೆ ಅರಬ್‌ ಮಾಧ್ಯಮಗಳು ವರದಿ ಮಾಡಿದ್ದು, ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ವಿಮಾನವನ್ನು ರನ್‌ವೇಗೆ ತಂದು ಐದು ನಿಮಿಷಗಳ ಕಾಲ ವಿಮಾನ ಹಾರಾಟ ನಡೆಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ ಎಂದು ಹೇಳಿವೆ.! ವಿಮಾನ ಹಾರಟ ನಡೆಸುವ ಮುನ್ನ ಮನ್ಸೂರ್‌ ಹಾರಾಟ ಮಾಡಲು 10 ನಿಮಿಷ ತೆಗೆದುಕೊಂಡಿದ್ದಾಗಿ ತಿಳಿಸಿವೆ.!

ವಿಮಾನ ಹಾರಿಸಿ ದಾಖಲೆ ನಿರ್ಮಿಸಿದ ಭಾರತೀಯ ಮೂಲದ 9ನೇ ತರಗತಿ ಬಾಲಕ!!

ಕಳೆದ ವಾರವಷ್ಟೆ ಕೆನಡಾದ ಎಎಎ ವಿಮಾನಯಾನ ತರಬೇತಿ ಅಕಾಡೆಮಿಯಿಂದ ಪೈಲಟ್ ಪ್ರಮಾಣಪತ್ರ ಸ್ವೀಕರಿಸಿರುವ ಮನ್ಸೂರ್‌ ಅನೀಸ್ 'ಸೆಸ್ನಾ152' ವಿಮಾನ ಹಾರಿಸಿದ್ದು, ತರಬೇತಿ ಅಕಾಡೆಮಿ ನಡೆಸಿದ ಪರೀಕ್ಷೆ ವೇಳೆ ರೇಡಿಯೊ ಸಂವಹನ ಪರೀಕ್ಷೆಯನ್ನೂ ಯಶಸ್ವಿಯಾಗಿ ನಿರ್ವಹಿಸಿರುವುದಾಗಿ ಮಾಧ್ಯಮಗಳು ಹೇಳಿವೆ.!

ವಿಮಾನ ಹಾರಿಸಿ ದಾಖಲೆ ನಿರ್ಮಿಸಿದ ಭಾರತೀಯ ಮೂಲದ 9ನೇ ತರಗತಿ ಬಾಲಕ!!

ವಿಮಾನ ಚಾಲನೆ ಪರೀಕ್ಷೆಯಲ್ಲಿ ಶೇ 96 ಅಂಕ ಗಳಿಸಿರುವ ಮನ್ಸೂರ್‌, ಈವರೆಗೆ ವಿಶ್ವದ ಕಿರಿಯ ವಿಮಾನ ಚಾಲಕ ಎಂಬ ದಾಖಲೆ ಹೊಂದಿದ್ದ ಜರ್ಮನಿಯ 15 ವರ್ಷ‌ದ ಬಾಲಕನನ್ನು ಹಿಂದಿಕ್ಕಿದ್ದಾರೆ. ಕೇವಲ 25 ಗಂಟೆಗಳ ತರಬೇತಿ ಪಡೆದು ಮನ್ಸೂರ್‌ ಅನೀಸ್ ಈ ಸಾಧನೆ ಮಾಡಿದ್ದಾನೆ.!!

ಓದಿರಿ: ₹ 14,999ಕ್ಕೆ ಐಫೋನ್ 8ಗೂ ಸೆಡ್ಡು ಹೊಡೆಯಲಿದೆ 'ಶಿಯೋಮಿ MI A1'!!.ಏಕೆ?

Best Mobiles in India

English summary
A 14-year-old Indian-origin boy in the UAE has become one of the youngest pilots to fly a single -engine aircraft.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X