ಐನ್‌ಸ್ಟೀನ್ ಮೀರಿಸಿದ 10 ವರ್ಷದ ಭಾರತದ ಸಂಜಾತ 'ಮಹಿ'!!

Written By:

'ಮೆನ್ಸಾ ಬುದ್ಧಿಮತ್ತೆ ಪರೀಕ್ಷೆಯಲ್ಲಿ' 10 ವರ್ಷದ ಬಾಲಕ ಭಾರತ ಸಂಜಾತ ಬ್ರಿಟನ್‌ ವಿದ್ಯಾರ್ಥಿ 'ಮೆಹುಲ್ ಗರ್ಗ್' ದಾಖಲೆ ಸೃಷ್ಟಿಸಿದ್ದಾನೆ. ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸುವ ಮೂಲಕ ಈ ಬಾಲಕ ಆಲ್ಬರ್ಟ್‌ ಐನ್‌ಸ್ಟೀನ್, ಸ್ಟೆಫನ್ ಹಾಕಿಂಗ್ ಅವರಂಥ ಬುದ್ಧಿವಂತ ವಿಜ್ಞಾನಿಗಳನ್ನೂ ಮೀರಿಸಿದ್ದಾನೆ.!!

ಐನ್‌ಸ್ಟೀನ್ ಮೀರಿಸಿದ 10 ವರ್ಷದ ಭಾರತದ ಸಂಜಾತ 'ಮಹಿ'!!

ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಮೆಹುಲ್ ಗರ್ಗ್ 162 ಅಂಕಗಳಿಸಿದ್ದು, ಗರಿಷ್ಠ ಅಂಕ ಪಡೆದಿರುವ ಅತ್ಯಂತ ಕಿರಿಯ ಬಾಲಕ ಎನಿಸಿದ್ದಾನೆ.! ಇನ್ನು ವಿಶೇಷವೆಂದರೆ 'ಮಹಿ'ಯ ಹಿರಿಯ ಸಹೋದರ 13 ವರ್ಷದ ಧ್ರುವ ಗರ್ಗ್ ಕೂಡ ಕಳೆದ ವರ್ಷ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ದಾಖಲೆ ಸೃಷ್ಟಿಸಿದ್ದು, ಈ ಬಗ್ಗೆ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆನ್ಸಾ ಬುದ್ಧಿಮತ್ತೆ ಪರೀಕ್ಷೆ

ಮೆನ್ಸಾ ಬುದ್ಧಿಮತ್ತೆ ಪರೀಕ್ಷೆ

ಜಗತ್ತಿನಲ್ಲಿ ಕೇವಲ ಪ್ರತಿಶತ 1ರಷ್ಟು ಜನ ಮಾತ್ರವೇ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಸಾಧನೆ ಮಾಡಬಲ್ಲರು ಎಂದು ಮಾಧ್ಯಮ ವರದಿಗಳು ಹೇಳಿವೆ. ಹಾಗಾಗಿಯೇ, ಮೆನ್ಸಾ ಬುದ್ಧಿಮತ್ತೆ ಪರೀಕ್ಷೆಗೆ ವಿಶ್ವ ಮಾನ್ಯತೆಯನ್ನು ನೀಡಲಾಗಿದ್ದು, ಇಲ್ಲಿ ಐಕ್ಯೂ ಪರೀಕ್ಷೆ ತೇರ್ಗಡೆ ಹೊಂದಿರುವವರ ಹೆಸರು ಎಲ್ಲೆಡೆ ಪಸರಿಸಲಿದೆ.!!

ಯಾರೀತ ಮೆಹುಲ್ ಗರ್ಗ್?

ಯಾರೀತ ಮೆಹುಲ್ ಗರ್ಗ್?

ಕಳೆದ ವರ್ಷ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ದಾಖಲೆ ಸೃಷ್ಟಿಸಿದ್ದ 'ಧ್ರುವ ಗರ್ಗ್' ಅವರ ಕಿರಿಯ ಸಹೋದರ ಮೆಹುಲ್ ಗರ್ಗ್. ಲಂಡನ್‌‌ನಲ್ಲಿ ನೆಲೆಸಿರುವ 10 ವರ್ಷ ವಯಸ್ಸಿನ ಭಾರತೀಯ ಸಂಜಾತ ಮೆಹುಲ್ ಗರ್ಗ್ ಅನ್ನು 'ಮಹಿ' ಎಂಬ ನಿಕ್‌ನೇಮ್‌ನಿಂದಲೂ ಕರೆಯುತ್ತಾರೆ.!!

ಅಣ್ಣನಷ್ಟೆ ಬುದ್ದಿವಂತ!!

ಅಣ್ಣನಷ್ಟೆ ಬುದ್ದಿವಂತ!!

ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಆಲ್ಬರ್ಟ್‌ ಐನ್‌ಸ್ಟೀನ್, ಸ್ಟೆಫನ್ ಹಾಕಿಂಗ್‌ ಅವರಿಗಿಂತ 2 ಅಂಕಗಳನ್ನು ಹೆಚ್ಚು ಗಳಿಸಿರುವ 'ಮಹಿ' ಅಣ್ಣನಷ್ಟೆ ಬಿದ್ದಿವಂತ ಕೂಡ ಹೌದು.!! 'ಮಹಿ'ಯ ಹಿರಿಯ ಸಹೋದರ 13 ವರ್ಷದ ಧ್ರುವ ಗರ್ಗ್ ಕೂಡ ಕಳೆದ ವರ್ಷ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ 162 ಅಂಕ ಗಳಿಸಿದ್ದ.!

ಒಬ್ಬ ಛಲಗಾರ ಸ್ಪರ್ಧಿ!!

ಒಬ್ಬ ಛಲಗಾರ ಸ್ಪರ್ಧಿ!!

ಕಳೆದ ವರ್ಷ ಆತನ ಅಣ್ಣ ಕೂಡ 162 ಅಂಕಗಳಿಸಿದ್ದ. ತನ್ನ ಅಣ್ಣನಿಗಿಂತ ತಾನೇನು ಕಡಿಮೆ ಬುದ್ಧಿವಂತ ಅಲ್ಲ ಎಂಬವುದನ್ನು ಸಾಬೀತುಪಡಿಸಲು ಮಹಿ ಹಂಬಲಿಸುತ್ತಿದ್ದ ಅಣ್ಣನ ಸ್ಫೂರ್ತಿಯಿಂದಲೇ ಮೆಹುಲ್ ಗರ್ಗ್‌ ಈ ಸಾಧನೆ ಮಾಡಿದ್ದಾನೆ ಎಂದು ತಾಯಿ ದಿವ್ಯಾ ಗರ್ಗ್ ತಿಳಿಸಿದ್ದಾರೆ.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಗೂಗಲ್‌ನಲ್ಲಿ ಕೆಲಸ ಮಾಡುವ ಆಸೆ!!

ಗೂಗಲ್‌ನಲ್ಲಿ ಕೆಲಸ ಮಾಡುವ ಆಸೆ!!

ಫಲಿತಾಂಶ ಪ್ರಕಟಗೊಂಡಾಗ ನನ್ನ ಕಣ್ಣಲ್ಲಿ ನೀರು ತುಂಬಿದ್ದವು ಎಂದಿರುವ ಸಾಧಕ ಮೆಹುಲ್ ಗರ್ಗ್‌ಗೆ ಗಣಿತ ವಿಷಯವು ನೆಚ್ಚಿನ ವಿಷಯವಂತೆ. ಇನ್ನು ಭವಿಷ್ಯದಲ್ಲಿ ಹೆಸರಾಂತ ಗೂಗಲ್‌ ಕಂಪನಿಯಲ್ಲಿ ಕೆಲಸ ಮಾಡುವ ಗುರಿ ಹೊಂದಿರುವುದಾಗಿ ಹೇಳಿದ್ದಾನೆ.!

ಓದಿರಿ:ಬಿಡುಗಡೆಗೂ ಮುನ್ನವೇ ಸ್ಯಾಮ್‌ಸಂಗ್ 'ಗ್ಯಾಲಕ್ಸಿ S9' ಫೀಚರ್ಸ್ ಲೀಕ್!..ಇದೀಗ ವೈರೆಲ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
"Mahi older brother had achieved the same score last year so he really wanted to prove that he is no less intelligent than his brother". to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot