ಸೆಲ್ಫಿ ಕ್ರೇಜ್ ಇವರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ!!!

Written By:

ಸೆಲ್ಫಿ ತೆಗೆಯುವುದು ಫೋನ್ ಪ್ರೇಮಿಗಳ ಹುಚ್ಚು ಹವ್ಯಾಸ ಎಂದೆನಿಸಿದ್ದರೂ ಈ ಗೀಳು ಪ್ರಾಣವನ್ನೇ ಬಲಿ ತೆಗೆಯುವಷ್ಟರ ಮಟ್ಟಕ್ಕೆ ಇಂದು ಬೆಳೆದು ಬಿಟ್ಟಿದೆ. ಸೆಲ್ಫಿ ತೆಗೆಯುವ ಕ್ರೇಜ್‌ನಲ್ಲಿ ಎಷ್ಟೋ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈಲು ಬರುತ್ತಿರುವಾಗ ತೆಗೆಯುವ ಸೆಲ್ಫಿ, ಎತ್ತರದ ಕಟ್ಟಡಗಳಲ್ಲಿ ನಿಂತು ತೆಗೆದ ಸೆಲ್ಫಿ, ಹೀಗೆ ಹುಚ್ಚಿಗೆ ಸಿಲುಕಿ ತೆಗೆದ ಸಾಕಷ್ಟು ಸೆಲ್ಫಿಗಳು ಪ್ರಾಣವನ್ನೇ ಆಹುತಿ ತೆಗೆದಿದೆ. ಆದರೂ ಜನರು ಇಂತಹ ಹುಚ್ಚು ಸೆಲ್ಫಿ ತೆಗೆಯುವುದನ್ನು ಬಿಟ್ಟಿಲ್ಲ.

ಇತ್ತೀಚೆಗೆ ತಾನೇ ಭಾರತದ ಹದಿಹರೆಯದ ಯುವಕ ಅಮನ್‌ದೀಪ್ ಸಿಂಗ್ ತನ್ನ ತಂದೆಯ ಪಿಸ್ತೂಲ್ ಹಿಡಿದುಕೊಂಡು ಸೆಲ್ಫಿ ತೆಗೆಸಿಕೊಳ್ಳುತ್ತಿರುವಾಗ ಅದು ಹಠಾತ್ ಸಿಡಿದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಸೆಲ್ಫಿ ತೆಗೆಯುವಾಗ ರಿವಾಲ್ವರ್ ಹಿಡಿದೆಳೆದದ್ದೇ ಈ ದುರಂತಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿರುವ ಅಮನ್‌ದೀಪ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಇದು ಬರಿಯ ಅಮನ್‌ದೀಪ್ ಕಥೆ ಮಾತ್ರವಲ್ಲದೆ ಇಂತಹ ಸೆಲ್ಫಿ ಹುಚ್ಚಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡವರನ್ನೂ ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
18 ವರ್ಷದ ತರುಣಿ ವಿಶೇಷ ಸೆಲ್ಫಿ

18 ವರ್ಷದ ತರುಣಿ ವಿಶೇಷ ಸೆಲ್ಫಿ

#1

ಅನ್ನಾ ಉರುಸು 18 ವರ್ಷದ ತರುಣಿ ವಿಶೇಷ ಸೆಲ್ಫಿಯನ್ನು ತೆಗೆಯುವುದಕ್ಕಾಗಿ ಟ್ರೈನ್ ಮೇಲ್ಭಾಗಕ್ಕೆ ಹತ್ತಿದ್ದಳು ಆದರೆ 27,000 ವೋಲ್ಟ್‌ನ ಇಲೆಕ್ಟ್ರಿಕ್ ವಯರ್ ಅವಳ ಜೀವಕ್ಕೆ ಮುಳ್ಳಾಗಿ ಬಲಿ ತೆಗೆದುಕೊಂಡಿತು.

ಬ್ರಿಡ್ಜ್‌ನಲ್ಲಿ ಸಾವು

ಬ್ರಿಡ್ಜ್‌ನಲ್ಲಿ ಸಾವು

#2

ದಕ್ಷಿಣ ಸ್ಪೇನ್‌ನಲ್ಲಿ 23 ವರ್ಷದ ನರ್ಸಿಂಗ್ ವಿದ್ಯಾರ್ಥಿ ಬ್ರಿಡ್ಜ್‌ನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಮರಣ ಹೊಂದಿದ್ದಾನೆ. ಸೇತುವೆ ಕೊನೆಯಲ್ಲಿ ನಿಂತು ಸಮತೋಲಿನ ತಪ್ಪಿ ಈ ಸಾವು ಸಂಭವಿಸಿದೆ.

ಗುಂಡು ತಾಗಿ ಸಾವು

ಗುಂಡು ತಾಗಿ ಸಾವು

#3

2014 ರಲ್ಲಿ ಮೆಕ್ಸಿಕನ್ ವ್ಯಕ್ತಿ ಗನ್ ಬಳಸಿ ಸೆಲ್ಫಿ ತೆಗೆಯುತ್ತಿರುವಾಗ ಟ್ರಿಗ್ಗರ್ ಒತ್ತಿ ಸಾವು ಸಂಭವಿಸಿದೆ.

ಕಾರು ಅಪಘಾತ

ಕಾರು ಅಪಘಾತ

#4

ಬ್ಯಾಚುಲರ್ ಪಾರ್ಟಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಮಾಡಿದ ಅವಾಂತರ ಸೆಲ್ಫಿ ಮೊರೀನೊ ಪ್ರಾಣವನ್ನೇ ಕಸಿದುಕೊಂಡಿತು.

ರೈಲ್ವೇ ಸೇತುವೆ ಸೆಲ್ಫಿ

ರೈಲ್ವೇ ಸೇತುವೆ ಸೆಲ್ಫಿ

#5

30 ಫೀಟ್ ಎತ್ತರದ ರೈಲ್ವೇ ಸೇತುವೆಯ ಮೇಲ್ಭಾಗದಲ್ಲಿ ಸೆಲ್ಫಿ ತೆಗೆಯುತ್ತಿರುವಾಗ ಈ ಹುಡುಗಿ ತೀರಿ ಹೋಗಿದ್ದಾಳೆ.

ಪ್ರಥಮ ಡೇಟ್‌ನಲ್ಲೇ ಮರಣ

ಪ್ರಥಮ ಡೇಟ್‌ನಲ್ಲೇ ಮರಣ

#6

ತನ್ನ ಪ್ರಿಯತಮನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಈ ಯುವತಿ ಮರಣವನ್ನು ಹೊಂದಿದ್ದಾಳೆ.

ಬಾತ್‌ರೂಮ್ ಬಾಗಿಲಿನಿಂದ ಮರಣ

ಬಾತ್‌ರೂಮ್ ಬಾಗಿಲಿನಿಂದ ಮರಣ

#7

ಈ ಯುವಕ ಬಾತ್‌ರೂಮ್ ಬಾಗಿಲಿನಲ್ಲಿ ನಿಂತು ಸೆಲ್ಫಿ ತೆಗೆಯುತ್ತಿರುವಾಗ ಮರಣ ಹೊಂದಿದ್ದಾನೆ.

ಹುಟ್ಟುಹಬ್ಬದಂದೇ ಮರಣ ಕಾದಿತ್ತು

ಹುಟ್ಟುಹಬ್ಬದಂದೇ ಮರಣ ಕಾದಿತ್ತು

#8

ಗೆಳೆಯನ ಹುಟ್ಟುಹಬ್ಬವನ್ನು ಮುಗಿಸಿ ಸೆಲ್ಫಿ ತೆಗೆಸಿಕೊಳ್ಳುತ್ತಿರುವಾಗ ಚೆಸ್ಕಾ ಮರಣವನ್ನಪ್ಪಿದ್ದಾನೆ. ವಿಂಡ್ ಮಿಲ್‌ನಲ್ಲಿ ಈ ಸಂಭವ ಸಂಭವಿಸಿದೆ.

ಪೋಲಿಶ್ ಜೋಡಿ ಮರಣ

ಪೋಲಿಶ್ ಜೋಡಿ ಮರಣ

#9

ಆಗಸ್ಟ್ 2014 ರಂದು ಪೋಲಿಶ್ ಜೋಡಿ ಪೋರ್ಚುಗಲ್‌ನ ಕಬಾಡೊ ರೊಕಾ ಸ್ಥಳದಲ್ಲಿ ಸೆಲ್ಫಿ ತೆಗೆಯುತ್ತಿರುವಾಗ ಮರಣ ಹೊಂದಿದ್ದಾರೆ.

ಮೋಟಾರ್‌ಸೈಕಲ್‌ನಿಂದ ಮರಣ

ಮೋಟಾರ್‌ಸೈಕಲ್‌ನಿಂದ ಮರಣ

#10

ತನ್ನ ಮೋಟಾರ್‌ಸೈಕಲ್‌ನಿಂದ ಪೋಸ್ ಕೊಟ್ಟು ಸೆಲ್ಫಿ ತೆಗೆಯುತ್ತಿರುವಾಗ ಈ ಬೈಕ್ ಸವಾರ ಮರಣವನ್ನಪ್ಪಿದ್ದಾನೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Indian teenager namely Amandeep Singh aged 15 accidently shot himself in the head while taking selfie with his father’s gun..
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot