Subscribe to Gizbot

ಸ್ವಿಸ್ ಚೀಸ್, ಬಾಂಬ್ ಪ್ರಿಯ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್

Written By:

ಪ್ರಪಂಚದ ಕ್ರೇಜಿ ಅಧ್ಯಕ್ಷ ಎಂದೇ ಕರೆಯಿಸಿಕೊಂಡಿರುವ ಕಿಮ್ ಜಾಂಗ್ ಉನ್ ತಮ್ಮ ಕೆಲವೊಂದು ವೈವಿಧ್ಯಮಯ ಚಟುವಟಿಕೆಗಳಿಂದ ಪ್ರಚಲಿತದಲಿದ್ದಾರೆ. ಉತ್ತರ ಕೊರಿಯಾದ ಅಧ್ಯಕ್ಷನಾಗಿರುವ ಕಿಮ್ ಸರ್ವಾಧಿಕಾರಿ ಎಂದೇ ಹೇಳಬಹುದು. ತಮ್ಮ ಕಿರಿಯ ವಯಸ್ಸಿಗೆ ಉತ್ತರ ಕೊರಿಯಾದ ಅಧಿಪತ್ಯವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡವರು.

ತಮ್ಮ ಅಧಿಕಾರ ಕೈ ತಪ್ಪಿ ಹೋಗದಂತೆ ಕಾಪಾಡಿಕೊಳ್ಳುವ ಸಲುವಾಗಿ ಈತ ಮಾಡದ ಕಾರುಬಾರುಗಳಿಲ್ಲ ಎಂದೇ ಹೇಳಬಹುದು. ಮೊಬೈಲ್ ಬಳಕೆಯ ಮೇಲೆ ನಿರ್ಬಂಧ, ಇಂಟರ್ನೆಟ್ ಬಳಸದೇ ಇರುವುದು, ಫೋಟೋಗ್ರಫಿಯ ಮೇಲೆ ತಡೆಹಿಡಿದಿರುವುದು ಹೀಗೆ ಹಲವಾರು ನಿಷೇಧಗಳನ್ನು ಹೇರುವ ಮೂಲಕ ಪ್ರಜೆಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದಾನೆ. ಈತನ ಕೆಲವೊಂದು ನಿಯಮಗಳು ನಿಜಕ್ಕೂ ದಿಗ್ಭ್ರಮೆಗೊಳಿಸುಸಂತಿದ್ದು ಅವುಗಳಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತರ ಕೊರಿಯಾದ ಸರ್ವಾಧಿಕಾರಿ

#1

2012 ರಲ್ಲಿ ತಮ್ಮ ತಂದೆಯ ಮರಣದ ನಂತರ ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿ ಗದ್ದುಗೆ ಏರಿದ ಕಿಮ್ ಜಾಂಗ್ ಉನ್ ವಯಸ್ಸು ಆಗ ಬರೇ 29.

ತನ್ನನ್ನು ತಾನೇ ಉತ್ತರ ಕೊರಿಯಾದ ಸರ್ವಾಧಿಕಾರಿ

#2

ತನ್ನನ್ನು ತಾನೇ ಉತ್ತರ ಕೊರಿಯಾದ ಸರ್ವಾಧಿಕಾರಿ ಎಂದೇ ಘೋಷಿಸಿಕೊಂಡಾತ ಕಿಮ್

ಈತ ನಿಷ್ಣಾತ

#3

ಸೈನ್ಯ ಪಡೆಯಲ್ಲೂ ಈತ ನಿಷ್ಣಾತನೆಂಬ ಬಿರುದನ್ನು ಪಡೆದುಕೊಂಡಿದ್ದು ಉತ್ತರ ಕೊರಿಯಾದ ಸೇನೆಯಲ್ಲಿ ಮಾರ್ಶಲ್ ಪದವಿಯನ್ನು ಪಡೆದುಕೊಂಡವರು.

ಎರಡು ಡಿಗ್ರಿ

#4

ಎರಡು ಡಿಗ್ರಿಗಳನ್ನು ಪಡೆದುಕೊಂಡಿರುವ ಕಿಮ್ ಭೌತಶಾಸ್ತ್ರ ಮತ್ತು ಮಿಲಿಟರಿ ಯೂನಿವರ್ಸಿಟಿಯಲ್ಲಿ ಸೇನಾ ಪದವಿಯನ್ನು ಗಳಿಸಿಕೊಂಡವರಾಗಿದ್ದಾರೆ.

ಯಾರನ್ನೂ ಭೇಟಿ ಮಾಡದ ವ್ಯಕ್ತಿ

#5

ಉತ್ತರ ಕೊರಿಯಾದವರನ್ನು ಬಿಟ್ಟು ಬೇರೆ ಯಾರನ್ನೂ ಭೇಟಿ ಮಾಡದ ವ್ಯಕ್ತಿ ಈ ಕಿಮ್ ಜಾಂಗ್ ಉನ್.

ಹೈಡ್ರೋಜನ್ ಬಾಂಬ್ ಪರೀಕ್ಷೆ

#6

ತನ್ನ ಹುಟ್ಟುಹಬ್ಬಕ್ಕೆ ತನಗೆ ತಾನೇ ಉಡುಗೊರೆ ಕೊಟ್ಟುಕೊಳ್ಳುವ ವ್ಯಕ್ತಿಯಾಗಿರುವ ಕಿಮ್ ತನ್ನ ಹುಟ್ಟಹಬ್ಬಕ್ಕಾಗಿ ಹೈಡ್ರೋಜನ್ ಬಾಂಬ್ ಪರೀಕ್ಷೆಯಂತಹ ಉಡುಗೊರೆಯನ್ನು ಘೋಷಿಸಿದಾತ.

ಅತ್ಯಂತ ಕ್ರೂರಿ ನಾಯಕ

#7

ಅತ್ಯಂತ ಕ್ರೂರಿ ನಾಯಕ ಎಂಬ ಹೆಸರನ್ನೇ ಈತ ಪಡೆದುಕೊಂಡಿದ್ದು ತನ್ನ ಭಾಷಣ ಕೇಳುತ್ತಿರುವಾಗ ತನ್ನ ಮಾವ ನಿದ್ದೆ ಮಾಡಿದರೆಂದು ಆತನಿಗೆ ಗಲ್ಲು ಶಿಕ್ಷೆಯನ್ನು ನೀಡಿದಾತ. ಈ ಹಿಂದೆ ಆಕೆಗೆ ಬೇರೆ ಪ್ರೇಮವಿತ್ತು ಎಂಬುದನ್ನು ತಿಳಿದು ತನ್ನ ಸ್ನೇಹಿತೆಯನ್ನೇ ಕಿಮ್ ಸಾಯಿಸಿದ್ದಾನೆ.

ವ್ಯವಹಾರ ಕಂಪೆನಿ

#8

ಉತ್ತರ ಕೊರಿಯಾದ ಆರ್ಥಿಕ ಪರಿಸ್ಥಿತಿಗೆ ಗಮನವನ್ನು ನೀಡಿದ ಕಿಮ್ ಗಣಿಗಾರಿಕೆ, ತೈಲ ಮತ್ತು ಇತರೆ ವ್ಯವಹಾರ ಕಂಪೆನಿಗಳನ್ನು ತಮ್ಮ ದೇಶದಲ್ಲಿ ಅನುಮತಿಸಿದ್ದಾರೆ.

ದಾಖಲಾತಿ

#9

ಸ್ವಿಡ್ಜರ್ ಲ್ಯಾಂಡ್‌ನ ಶಾಲೆಯಲ್ಲಿ ಯಾರಿಗೂ ತಿಳಿಯದಂತೆ ದಾಖಲಾತಿಯನ್ನು ಪಡೆದುಕೊಂಡ ಕಿಮ್ ಅಲ್ಲಿ ಸಂಗೀತ ಮತ್ತು ತಾಂತ್ರಿಕ ಅಧ್ಯಯನಗಳನ್ನು ನಡೆಸಿದ್ದಾರೆ.

ಸ್ವಿಸ್ ಚೀಸ್‌

#10

ಸ್ವಿಸ್ ಚೀಸ್‌ ಅನ್ನು ಇಷ್ಟಪಡುವ ಈತ ಇದನ್ನು ಆಮದು ಮಾಡಲೆಂದೇ ಸರಕಾರ ಸಾವಿರ ಪೌಂಡ್‌ಗಳಷ್ಟು ಹಣವನ್ನು ವ್ಯಯಿಸಿದೆ. ಈಗ ಹೆಚ್ಚಿನ ಜನಸಂಖ್ಯೆ ಅಪೌಷ್ಟಿಕತೆಯಿಂದ ಬಳಲುತ್ತಿದೆ.

ಶೋಕಾಚರಣೆ

#11

ತನ್ನ ತಂದೆಯ ಮರಣದ ನಂತರ ಸಾಕಷ್ಟು ಶೋಕಾಚರಣೆಯನ್ನು ಮಾಡದ ವ್ಯಕ್ತಿಯನ್ನು ಶಿಕ್ಷಿಸುವುದಾಗಿ ಘೋಷಿಸಿದ. ಇದರ ಫಲವಾಗಿ ಮಿಲಿಯಗಟ್ಟಲೆ ಜನರು ಕಣ್ಣೀರು ಹಾಕಿದ್ದಾರೆ.

ಅತಿಕಿರಿಯ ರಾಜ್ಯ ಮುಖ್ಯಸ್ಥ

#12

ವಿಶ್ವದ ಅತಿಕಿರಿಯ ರಾಜ್ಯ ಮುಖ್ಯಸ್ಥ ಎಂಬುದಾಗಿ ಕಿಮ್ ಹೆಸರು ಗಳಿಸಿದ್ದಾನೆ.

ತನ್ನ ಮೆಚ್ಚಿನ ಕ್ರೀಡೆ ಬಾಸ್ಕೆಟ್ ಬಾಲ್

#13

ತನ್ನ ಮೆಚ್ಚಿನ ಕ್ರೀಡೆ ಬಾಸ್ಕೆಟ್ ಬಾಲ್ ಆಗಿದ್ದು ಮಿಶೇಲ್ ಜೋರ್ಡನ್ ಈತನ ಮೆಚ್ಚಿನ ಆಟಗಾರರಾಗಿದ್ದಾರೆ.

ಉತ್ತರ ಕೊರಿಯಾದ ರಾಷ್ಟ್ರೀಯ ರಜಾದಿನ

#14

ಈತನ ಹುಟ್ಟುಹಬ್ಬವನ್ನು ಉತ್ತರ ಕೊರಿಯಾದ ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸಲಾಗಿದೆ.

ಬಾಲ್ಯಕಾಲದ ಫೋಟೋ

#15

ಕಿಮ್ ಜಾಂಗ್‌ನ ಯಾವುದೇ ಸಾರ್ವಜನಿಕ ಫೋಟೋಗ್ರಾಫ್‌ಗಳಿಲ್ಲ. ಈತನ ಬಾಲ್ಯಕಾಲದ ಫೋಟೋಗಳು ದೊರಕುವುದು ಕಷ್ಟಾಸಾಧ್ಯವಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We bring you some amazing Facts About Kim Jong Un and his life. Terrifying, Hilarious, and Mind boggling facts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot