ವೈದ್ಯಲೋಕಕ್ಕೆ ಸವಾಲೆಸೆದ ಸೋಲಾರ್ ಕಿಡ್ಸ್ ಈಗ ಇಂಟರ್ನೆಟ್ ವೈರಲ್

Written By:

ಸೋಲಾರ್ ಮಕ್ಕಳು ಎಂಬ ಹೆಸರನ್ನು ಪಡೆದುಕೊಂಡಿರುವ ಪಾಕಿಸ್ತಾನದ ಇಸ್ಲಾಮಾಬಾದ್‌ನ ಇಬ್ಬರು ಮಕ್ಕಳ ಕುರಿತೇ ನಾವು ಇಂದಿನ ಲೇಖನದಲ್ಲಿ ನಾವು ಮಾಹಿತಿ ತಿಳಿಸುತ್ತಿರುವುದು. ಪಾಕಿಸ್ತಾನದ ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದ ಸೋಲಾರ್ ಕಿಡ್ಸ್ ಇದೀಗ ಇಂಟರ್ನೆಟ್‌ನಲ್ಲಿ ಹೆಚ್ಚು ಚರ್ಚಿತರು.

ವಿಶ್ವವು ಅನೂಹ್ಯ ರಹಸ್ಯಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿದೆ ಎಂಬುದಕ್ಕೆ ಸಾಕ್ಷ್ಯವಾಗಿ ಈ ಘಟನೆಯನ್ನು ನಾವು ತೆಗೆದುಕೊಳ್ಳಬಹುದಾಗಿದ್ದು ಮಕ್ಕಳ ಈ ವಿಚಿತ್ರ ನಡವಳಿಕೆ ವೈದ್ಯ ಲೋಕವನ್ನೇ ಅಚ್ಚರಿಯ ಕೂಪಕ್ಕೆ ತಳ್ಳಿದೆ ಎಂದಾದಲ್ಲಿ ನಿಜಕ್ಕೂ ಇದು ವಿಸ್ಮಯವೇ ಹಾಗಿದ್ದರೆ ಈ ಸೋಲಾರ್ ಕಿಡ್ಸ್ ಕುರಿತ ಕೆಲವೊಂದು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಿನದಲ್ಲಿ ಚಟುವಟಿಕೆ

ದಿನದಲ್ಲಿ ಚಟುವಟಿಕೆ

#1

ಒಂಭತ್ತು ಮತ್ತು ಹದಿಮೂರರ ಹರೆಯದ ಈ ಇಬ್ಬರೂ ಮಕ್ಕಳು ದಿನದಲ್ಲಿ ಚಟುವಟಿಕೆಯಿಂದ ಕೂಡಿರುತ್ತಾರೆ. ಆದರೆ ಸೂರ್ಯ ಅಸ್ತಮವಾಗುತ್ತಿದ್ದಂತೆಯೇ, ಇಬ್ಬರೂ ಹಾಗೆಯೇ ನಿಸ್ತೇಜವಾಗಿ ಮಲಗುತ್ತಾರೆ. ಯಾವುದೇ ಚಟುವಟಿಕೆಗಳು ಇವರಲ್ಲಿ ಇರುವುದಿಲ್ಲ.

ರೋಗ

ರೋಗ

#2

ಪಾಕಿಸ್ತಾನದ ಮೆಡಿಕಲ್ ವಿದ್ಯಾನಿಲಯದ ಪ್ರೊಫೆಸರ್ ಜಾವೇದ್ ಅಕ್ರಮ್ ಹೇಳುವಂತೆ, ಈ ರೋಗದ ಬಗ್ಗೆ ತಮಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ.

ಚಾಲೆಂಜ್‌

ಚಾಲೆಂಜ್‌

#3

ನಾವೊಂದು ಚಾಲೆಂಜ್‌ನಂತೆ ಈ ಕೇಸ್ ಅನ್ನು ಪರಿಗಣಿಸಿದ್ದೇವೆ. ನಮ್ಮ ವೈದ್ಯರುಗಳು ಈ ರೋಗದ ಬಗ್ಗೆ ಸಮಗ್ರ ಪರಿಶೀಲನೆಯನ್ನು ನಡೆಸುತ್ತಿದ್ದು ಬೆಳಗ್ಗಿನ ಹೊತ್ತು ಚಟುವಟಿಕೆಯಿಂದಿರುವ ಈ ಮಕ್ಕಳು ಸೂರ್ಯ ಮುಳುಗುತ್ತಿದ್ದಂತೆಯೇ ಮಾತನಾಡರು, ಚಲಿಸಲಾರರು ಎಂಬುದಾಗಿ ಮಕ್ಕಳ ಚಟುವಟಿಕೆಯಿಂದ ಕಂಡುಕೊಂಡಿದ್ದಾರೆ.

ಉಚಿತ ವೈದ್ಯಕೀಯ ನೆರವು

ಉಚಿತ ವೈದ್ಯಕೀಯ ನೆರವು

#4

ವೈದ್ಯರು ಹೇಳಿರುವಂತೆ, ಸಹೋದರರಿಗೆ ಉಚಿತ ವೈದ್ಯಕೀಯ ನೆರವನ್ನು ಸರಕಾರ ನೀಡುತ್ತಿದೆ. ಮಕ್ಕಳು ಬಡ ಕುಟುಂಬದಿಂದ ಬಂದಿವೆ.

ಹೆಚ್ಚಿನ ವೈದ್ಯಕೀಯ ಪರೀಕ್ಷೆ

ಹೆಚ್ಚಿನ ವೈದ್ಯಕೀಯ ಪರೀಕ್ಷೆ

#5

ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳಿಗೆ ಮಕ್ಕಳನ್ನು ಒಳಪಡಿಸಲಾಗುತ್ತಿದೆ,ಅವರ ರಕ್ತದ ನಮೂನೆಗಳನ್ನು ಹೆಚ್ಚುವರಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಕುಟುಂಬದ ಮೂಲ ಮನೆಯಿಂದ ಗಾಳಿ ಮತ್ತು ಮಣ್ಣಿನ ನಮೂನೆಗಳನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗುತ್ತಿದೆ.

ಯಾವುದೇ ಲಕ್ಷಣ

ಯಾವುದೇ ಲಕ್ಷಣ

#6

ಈ ಇಬ್ಬರೂ ಮಕ್ಕಳ ತಂದೆ ಕ್ವೆಟ್ಟಾ ಎಂಬ ಹಳ್ಳಿಯಿಂದ ಬಂದವರಾಗಿದ್ದಾರೆ. ಇವರು ಆರು ಮಕ್ಕಳಲ್ಲಿ ಮೊದಲ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಇನ್ನಿಬ್ಬರು ಮಕ್ಕಳು ಈ ರೀತಿಯ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ.

ಸೂರ್ಯನಿಂದ ಹೆಚ್ಚುವರಿ ಶಕ್ತಿ

ಸೂರ್ಯನಿಂದ ಹೆಚ್ಚುವರಿ ಶಕ್ತಿ

#7

ಈ ಹುಡುಗರ ತಂದೆ ಹೇಳುವಂತೆ ಮಕ್ಕಳಿಗೆ ಸೂರ್ಯನಿಂದ ಹೆಚ್ಚುವರಿ ಶಕ್ತಿ ದೊರೆಯುತ್ತಿದೆ ಎಂದಾಗಿದೆ. ವೈದ್ಯಲೋಕ ಈ ವಾದವನ್ನು ಒಪ್ಪುತ್ತಿಲ್ಲ. ಮಕ್ಕಳನ್ನು ಕತ್ತಲೆ ಕೋಣೆಯಲ್ಲಿ ಹಗಲಲ್ಲಿ ಇರಿಸಿದಾಗ ಅವರು ಮೊದಲಿನಂತೆ ಚಟುವಿಟಿಕೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಚಟುವಟಿಕೆಯಿಂದಲೇ ಆಟ ಪಾಠ

ಚಟುವಟಿಕೆಯಿಂದಲೇ ಆಟ ಪಾಠ

#8

ದಿನದಲ್ಲಿ ಶೋಯೆಬ್ ಅಹ್ಮದ್ ಮತ್ತು ಸಹೋದರ ಅಬ್ದುಲ್ ರಶೀದ್ ಸಾಮಾನ್ಯವಾಗಿ ಚಟುವಟಿಕೆಯಿಂದಲೇ ಆಟ ಪಾಠಗಳನ್ನು ನಡೆಸುತ್ತಿದ್ದು ಕತ್ತಲಾಗುತ್ತಿದ್ದಂತೆಯೇ ಪಾರ್ಶ್ವವಾಯು ಪೀಡಿತರಂತೆ ವರ್ತಿಸುತ್ತಾರೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳಿಗಾಗಿ ಗಿಜ್‌ಬಾಟ್ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The two brothers have come to be known as the "solar kids" and their case has mystified Pakistani doctors.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot