ಈ ರಹಸ್ಯ ತಾಣಗಳು ಭೂಮಿಯ ಮೇಲೆ ಇದ್ದಿದ್ದು ಹೌದು
ಜಗವು ವಿಸ್ಮಯಗಳ ತಾಣವಾಗಿದೆ. ನಾವು ಇದರ ಮೂಲವನ್ನು ಹುಡುಕುತ್ತಾ ಹೋದಂತೆ ಈ ರಹಸ್ಯಗಳು ಇನ್ನಷ್ಟು ನಿಗೂಢವಾಗಿಯೇ ಹೋಗುತ್ತದೆ. ಭೂಮಿಯ ಮೇಲೆ ಹಿಂದೆ ಇದ್ದಂತಹ ನಾಗರೀಕತೆಗಳು, ಪಳೆಯುಳಿಕೆಗಳು, ಸ್ಮಾರಕಗಳು, ಹೀಗೆ ಹಿಂದೆ ಇದ್ದಂತಹ ಎಷ್ಟೂ ಪುರಾತನ ದಾಖಲೆಗಳು ಇಂದಿನ ನಮ್ಮ ಸಾಮಾನ್ಯ ಜೀವನದ ಮೂಲವಾಗಿದೆ. ನಾವು ಇಂದು ಬಳಸುತ್ತಿರುವ ಯಾವುದೇ ಉತ್ಪನ್ನಗಳನ್ನು ಈ ಹಿಂದೆಯೇ ಹೆಚ್ಚಿನ ನಾಗರೀಕತೆಗಳು ಬಳಸಿ ಅವುಗಳನ್ನು ನಮಗಾಗಿ ಉಳಿಸಿರುವಂತದ್ದಾಗಿದೆ.
ಅಂತೆಯೇ ಈ ನಾಗರೀಕತೆಗಳು ಕೆಲವೊಂದು ರಹಸ್ಯಮಯವಾದ ಅಂಶಗಳನ್ನು ಭೂಮಿಯ ಮೇಲೆ ಬಿಟ್ಟುಹೋಗಿದ್ದು ಇವುಗಳಿಂದ ಆ ನಾಗರೀಕತೆಗಳು, ಇಲ್ಲವೇ ಪ್ರಾಣಿಗಳು, ಆಯುಧಗಳು ಮೊದಲಾದವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಕೂಡ ಇಂತಹುದೇ ಕೆಲವೊಂದು ರಹಸ್ಯಮವಾದ ಅಂಶಗಳನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದು ಏಕೆ ಇಷ್ಟೊಂದು ರೋಚಕವಾಗಿದೆ ಎಂಬುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.
ಓದಿರಿ: ಹೇಗೆ ನೋಡಿದ್ರು ಕನ್‌ಫ್ಯೂಸ್ ಮಾಡೋ ಫೋಟೋಗಳು

#1
ನ್ಯೂಜಿಲ್ಯಾಂಡ್‌ನಲ್ಲಿ ಅಸ್ತಿತ್ವದಲ್ಲಿದ್ದ ಬಹುಶಃ 500 ವರ್ಷಗಳ ಹಿಂದೆ ಗತಿಸಿತು ಎಂದು ನಂಬಲಾದ ದೈತ್ಯ ಉಷ್ಟ್ರ ಪಕ್ಷಿಗಳಾಗಿವೆ ಮೋವಾ. 1980 ರಲ್ಲಿ ಮೌಂಟ್ ಓವನ್‌ನಲ್ಲಿ ಮೋವಾ ಪಳೆಯುಳಿಕೆಗಳು ದೊರೆತಾಗ ಸಂಶೋಧಕರನ್ನು ಇದು ಬೆಚ್ಚಿಬೀಳಿಸಿತು.

#2
ಈ ಮಾನವ ನಿರ್ಮಿತ ಗುಹೆಗಳು ಚೀನಾದ ಭೂಗತ ನೆಲದಲ್ಲಿ ಪತ್ತೆಯಾಗಿದೆ. ಆದರೆ ಇವುಗಳ ಮೂಲ ಒಂದು ರಹಸ್ಯಮಯ ಕೌತುಕ ಎಂದೆನಿಸಿದೆ. ಕ್ವಿನ್ ರಾಜವಂಶದ ಸಮಯದಲ್ಲಿ ಬಹುಶಃ ಇದನ್ನು ನಿರ್ಮಿಸಲಾಗಿದೆ ಎಂಬುದು ತಿಳಿದು ಬಂದಿರುವ ಮಾಹಿತಿ. ಇದುವರೆಗೆ ಇಂತಹ ಗುಹೆಗಳು ದೊರಕಿರುವುದರ ಬಗ್ಗೆ ದಾಖಲೆಗಳಿಲ್ಲ.

#3
ಬೊಲಿವಿಯಾದ ಗೇಟ್ ಆಫ್ ದ ಸನ್ ರಹಸ್ಯಮಯ ಅಂಶವಾಗಿದೆ. 13,000 ಫೀಟ್‌ನಲ್ಲಿ ಇದು ಸ್ಥಾಪನೆಗೊಂಡಿದ್ದು ಪುರಾತತ್ವ ಮತ್ತು ಜ್ಯೋತಿಷ್ಯಶಾಸ್ತ್ರದ ರಚನೆಗಳನ್ನು ಇದು ಒಳಗೊಂಡಿದೆ.

#4
ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನಲ್ಲಿರುವ ಈ ಮೌಂಡ್ಸ್ ಪುರಾತನ ನಾಗರೀಕತೆಯ ಪಳೆಯುಳಿಕೆ ಎಂದೆನಿಸಿದೆ. ದಕ್ಷಿಣ ಅಮೇರಿಕಾಕ್ಕೆ ವಿಕಿಂಗ್ಸ್ ನಾಗರೀಕತೆಯು 500 ವರ್ಷಗಳ ಹಿಂದೆಯೇ ದಾರಿಯನ್ನು ಕಂಡುಕೊಂಡಿದ್ದು ಕ್ರಿಸ್ಟೋಫರ್ ಕೊಲಂಬಸ್‌ಗಿಂತಲೂ ಮುಂಚೆಯೇ ಇವರು ತಮ್ಮ ಯೋಜನೆಯನ್ನು ಯೋಜಿಸಿದ್ದಾರೆ.

#5
ಟರ್ಕಿಯ ಪರ್ವತಗಳಲ್ಲಿ ಪತ್ತೆಯಾದ ಈ ಸ್ಥಳವು, ಪುರಾತನ ನಾಗರೀಕತೆಗಳ ಮೂಲವಾಗಿದೆ. ಇದೊಂದು ಚರ್ಚ್ ಆಗಿದ್ದು ಧರ್ಮದ ಬಗೆಗೆ ಜನರ ನಂಬಿಕೆಯನ್ನು ದೃಢಪಡಿಸಿದೆ.

#6
ಈ ಹಸ್ತಪ್ರತಿ ಏನು ಹೇಳುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ, ಅಂತೆಯೇ ಇದರ ಭಾಷೆ ಕೂಡ ಅರಿಯಲು ಕಷ್ಟಾಸಾಧ್ಯವಾಗಿದೆ. ಕೋಡೆಡ್ ಏಷ್ಯಾ ಭಾಷೆಯಾಗಿರಬಹುದು ಅಥವಾ ಮೆಕ್ಸಿಕನ್ ಭಾಷೆಯಾಗಿರಬಹುದು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಅಂತೂ ಇದು ರಹಸ್ಯಮಯವಾಗಿದೆ.

#7
ಮಾನವ ನಿರ್ಮಿತವೇ ಅಥವಾ ಪ್ರಾಕೃತಿಕವಾದುದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೂ ಇದನ್ನು ನಂಬಬಹುದೇ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಜಪಾನ್‌ನಲ್ಲಿ ಈ ಸ್ಮಾರಕ ದೊರಕಿದೆ.

#8
ಈ ಸುರಂಗಗಳ ದೊಡ್ಡ ಸಾಲು ಶಿಲಾಯುಗದ ನೆನಪನ್ನು ಉಂಟುಮಾಡುತ್ತಿದೆ. ಆದರೆ ಈ ಸಮಯದಲ್ಲಿ ಇದನ್ನು ನಿರ್ಮಿಸಿರುವುದು ಹೇಗೆ ಎಂಬುದೇ ರಹಸ್ಯ ಮತ್ತು ಕೌತುಕಮವಾಗಿದೆ.

#9
ವೃತ್ತಾಕಾರದ ಈ ಗೋಳಗಳು ಕೋಸ್ಟಾ ರಿಕಾದ ಎಲ್ಲಾ ಪ್ರಾಂತ್ಯಗಳಲ್ಲೂ ದೊರಕಿವೆ. ಪುರಾತತ್ವಜ್ಞರು ಇದರ ಸೃಷ್ಟಿಯ ಬಗೆಗೆ ಯಾವುದೇ ಕಲ್ಪನೆಯನ್ನು ನೀಡುತ್ತಿಲ್ಲ.

#10
ಪೂರ್ಣಗೊಳಿಸಲಾಗದೇ ಇರುವ ಒಬೆಲಿಸ್ಕ್ ಈಜಿಪ್ಟ್‌ನಲ್ಲಿದ್ದು ಗ್ರಾನೈಟ್‌ನಲ್ಲಿ ಬಿರುಕುಗಳು ಉಂಟಾದಾಗ ಕಟ್ಟಡ ಕಟ್ಟುವಿಕೆಯನ್ನು ಕೈಬಿಡಲಾಯಿತು.

#11
ಪಾಕಿಸ್ತಾನದಲ್ಲಿರುವ ಈ ಸ್ಥಳ ಹಿಂದೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿರುವ ಪಳೆಯುಳಿಕೆಯಾಗಿದೆ. ನಗರ ನಿರ್ಮಾಣ, ಸಾಮಾಜಿಕ ಸಂಘಟನೆ ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ಈ ನಾಗರೀಕತೆ ನಮಗೆ ತಿಳಿಸಿಕೊಟ್ಟಿದೆ. 40,000 ಜನರು ಅಲ್ಲಿ ವಾಸವಾಗಿದ್ದರು ಎಂಬುದಾಗಿ ನಂಬಲಾಗಿದೆ.

#12
ಪೆರುವಿನಲ್ಲಿ ಕಂಡುಬಂದಿರುವ ಈ ಕಲ್ಲಿನ ರಚನೆಗಳು ಇಂಕಾನ್ ಸಾಮ್ರಾಜ್ಯದ ಪಳೆಯುಳಿಕೆ ಎಂದೆನಿಸಿದೆ. ಈ ಕಲ್ಲುಗಳನ್ನು ಜಾಗರೂಕತೆಯಿಂದ ಕತ್ತರಿಸಲಾಗಿದೆ ಮತ್ತು ಭದ್ರವಾಗಿ ಇನ್ನೊಂದರೊಂದಿಗೆ ಕೂರಿಸಲಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








