ಜಿಯೋ ಧನ್ ಧನಾ ಧನ್‌ಗೆ ಸೆಡ್ಡು..ಯಾವ ಯಾವ ಕಂಪೆನಿಗಳಿಂದ ಏನೆಲ್ಲಾ ಆಫರ್?

Written By:

ಸಮ್ಮರ್ ಸರ್‌ಪ್ರೈಸ್ ಕೊನೆಗೊಂಡು ಈಗ ಜಿಯೋ ಧನ್ ಧನಾ ಧನ್ ಆಫರ್ ಬಿಡುಗಡೆಯಾಗಿದ್ದು, ಏರ್‌ಟೆಲ್, ಐಡಿಯಾ ಮತ್ತು ವೊಡಾಫೊನ್ ಕಂಪೆನಿಗಳಿಗೆ ಇನಿಲ್ಲದ ಸಂಕಷ್ಟ ತಂದೊಡ್ಡಿದೆ.!! ಹಾಗಾಗಿ, ಈ ಎಲ್ಲಾ ಟೆಲಿಕಾಂಗಳು ಹೊಸ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡುತ್ತಿವೆ.!!

ಟ್ರಾಯ್ ಸೂಚನೆಯಂತೆ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ವಾಪಸ್ ತೆಗೆದುಕೊಂಡಿತ್ತು. ಇದರಿಂದ ಇನ್ನುಳಿದ ಟೆಲಿಕಾಂಗಳು ನಿಟ್ಟುಸಿರುಬಿಟ್ಟಿದ್ದವು. ಜೊತೆಯಲ್ಲಿಯೇ ಗ್ರಾಹಕರಿಗೆ ನೀಡಿದ್ದ ಹಲವು ಸೌಲಭ್ಯಗಳನ್ನು ಸಹ ಹಿಂತೆಗೆದುಕೊಂಡಿದ್ದವು.!! ಆದರೆ, ಜಿಯೋ ಧನ್ ಧನಾ ಧನ್ ಆಫರ್ ಮತ್ತೆ ಇವುಗಳ ನಿದ್ದೆಗೆಡಿಸಿ ಮತ್ತೆ ಹೊಸ ಆಫರ್‌ಗಳನ್ನು ಬಿಡುಗಡೆ ಮಾಡುವಂತೆ ಮಾಡಿದೆ.!!

ಮನೆಯಲ್ಲಿ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ!!

ಹಾಗಾದರೆ, ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ ಏರ್‌ಟೆಲ್, ಐಡಿಯಾ ಮತ್ತು ವೊಡಾಫೊನ್ ಕಂಪೆನಿಗಳು ಏನೆಲ್ಲಾ ಆಫರ್‌ಗಳನ್ನು ಬಿಡುಗಡೆ ಮಾಡಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ 244 ರೂ. ಆಫರ್.!!

ಏರ್‌ಟೆಲ್ 244 ರೂ. ಆಫರ್.!!

ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ, ಏರ್‌ಟೆಲ್ 244 ರೂಪಾಯಿಗಳ ಆಫರ್ ಬಿಡುಗಡೆ ಮಾಡಿದೆ. ಈ ಆಫರ್ ಮೂಲಕ ಏರ್‌ಟೆಲ್ 4G ಬಳಕೆದಾರರರು 70 ದಿವಸಗಳ ಕಾಲ 70GB ಡೇಟಾ ಪಡೆಯಬಹುದಾಗಿದೆ. ಇನ್ನು ದೇಶದಾಧ್ಯಂತ ಎಸ್‌ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಉಚಿತವಾಗಿ ನೀಡಿದೆ. ಏರ್‌ಟೆಲ್ ಟು ಏರ್‌ಟೆಲ್ ಪ್ರತಿದಿನ 300 ಕರೆಗಳು ಮತ್ತು 1200 ಇತರೆ ಕರೆಗಳನ್ನು ಒಂದು ವಾರಕ್ಕೆ ನೀಡಿದೆ.!!

ವೊಡಾಫೋನ್ 352 ರೂ. ಆಫರ್!

ವೊಡಾಫೋನ್ 352 ರೂ. ಆಫರ್!

ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ, ವೊಡಾಫೋನ್ 352 ರೂಪಾಯಿಗಳ ಆಫರ್ ಬಿಡುಗಡೆ ಮಾಡಿದೆ. ಈ ಆಫರ್ ಮೂಲಕ ವೊಡಾಫೋನ್ 4G ಬಳಕೆದಾರರರು 56 ದಿವಸಗಳ ಕಾಲ ಪ್ರತಿದಿವಸ 1GB ಡೇಟಾ ಪಡೆಯಬಹುದಾಗಿದೆ. ಇನ್ನುಳಿದಂತೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕರೆಗಳು ಉಚಿತವಾಗಿವೆ. ಆದರೆ, ಈ ಆಫರ್‌ ಆಯ್ದ ಗ್ರಾಹಕರಿಗಷ್ಟೆ ಸೀಮಿತವಾಗಿದೆ.

ಐಡಿಯಾ 297 ರೂ. ಆಫರ್

ಐಡಿಯಾ 297 ರೂ. ಆಫರ್

ಜಿಯೋ ಧನ್ ಧನಾ ಧನ್ ಆಫರ್‌ಗೆ ವಿರುದ್ದವಾಗಿ ಎನ್ನುವುದಕ್ಕಿಂತಲೂ ಏರ್‌ಟೆಲ್ ಬಿಡುಗಡೆ ಮಾಡಿದ ಆಫರ್‌ಗಳನ್ನು ನಕಲು ಮಾಡುವ ಕಂಪೆನಿ ಐಡಿಯಾ ಎನ್ನಬಹುದು. ಏರ್‌ಟೆಲ್ 244 ರೂ. ಆಫರ್‌ನಂತೆಯೇ ಐಡಿಯಾದ 297 ರೂ. ಆಫರ್ ಬಿಡುಗಡೆ ಮಾಡಿದ್ದು, ಈ ಆಫರ್ ಮೂಲಕ ಐಡಿಯಾ 4G ಬಳಕೆದಾರರರು 70 ದಿವಸಗಳ ಕಾಲ 70GB ಡೇಟಾ ಪಡೆಯಬಹುದಾಗಿದೆ. ಪ್ರತಿದಿನ ಐಡಿಯಾ ಟು ಐಡಿಯಾಕ್ಕೆ 300 ಕರೆಗಳು ಮತ್ತು 1200 ಇತರೆ ಕರೆಗಳನ್ನು ಒಂದು ವಾರಕ್ಕೆ ನೀಡಿದೆ.!!

BSNL ಅನ್‌ಲಿಮಿಟೆಡ್ 249 ಆಫರ್!

BSNL ಅನ್‌ಲಿಮಿಟೆಡ್ 249 ಆಫರ್!

ಅನ್‌ಲಿಮಿಟೆಡ್ 249 ಆಫರ್‌ನಲ್ಲಿ BSNL ಪ್ರತಿ ತಿಂಗಳು 300 ಜಿಬಿ ಡೇಟಾ ನೀಡುತ್ತಿದೆ. ಇನ್ನು ಈ ಪ್ಲಾನ್ ಅನ್ವಯ ಒಂದು ದಿನಕ್ಕೆ 10 ಜಿಬಿ ಡೇಟಾವನ್ನು ಬಳಸಬಹದಾಗಿದ್ದು, ಜೊತೆಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಅನಿಯಮಿತ ಉಚಿತ ಕರೆ ಮಾಡುವ ಸೌಲಭ್ಯವೂ ಸಿಗಲಿದೆ.!!

ಜಿಯೋ ಧನ್ ಧನಾ ಧನ್

ಜಿಯೋ ಧನ್ ಧನಾ ಧನ್

ಜಿಯೋ ಧನ್ ಧನಾ ಧನ್ ಆಫರ್ ಮೂಲಕ 309 ರೂ.ಗೆ ಎಲ್ಲಾ ಅನಿಯಮಿತ ಪ್ಲಾನ್ ಅನಿಯಮಿತ ಎಸ್‌ಎಂಎಸ್, ಕರೆ ಮತ್ತು ಡಾಟಾ (ಪ್ರತಿದಿನ ೪ಜಿ ಸ್ಪೀಡ್‌ನಲ್ಲಿ 1 ಜಿಬಿ ಡಾಟಾ)ವನ್ನು ಮೊದಲ ರಿಚಾರ್ಜ್‌ನ 3 ತಿಂಗಳ ಕಾಲ ನೀಡಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio is giving up to 2GB per day under Jio Dhan Dhana Dhan Offer. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot