ಜಿಯೋವಿನ 2599 ರೂ. ಕ್ಯಾಶ್‌ಬ್ಯಾಕ್ ಆಫರ್ ಹಿಂದಿದೆ ಕರಾಳ ಸತ್ಯ!!..ಈ ಆಫರ್ ಬೇಕಾ ನಿಮಗೆ?

ಜಿಯೋವಿನ ಗ್ರಾಹಕರು 2599 ರೂ.ವರೆಗೂ ಲಾಭ ಪಡೆಯುವುದು ನಿಜವಾದರೂ ಸಹ ಜಿಯೋವಿನ ಈ ಆಫರ್ ಬಳಕೆ ಮಾಡಲು ಗ್ರಾಹಕರು ಪಡಬೇಕಾದ ಪಡಿಪಾಟಲು ಅಷ್ಟಿಷ್ಟಲ್ಲ.!!

|

ಜಿಯೋ ಪ್ರೈಮ್ ಗ್ರಾಹಕರು 399 ರೂಪಾಯಿಗಳಿಗಿಂತ ಹೆಚ್ಚು ರೀಚಾರ್ಜ್ ಮಾಡಿಸಿದರೆ ಒಟ್ಟು ರೂ. 2599ವರೆಗೂ ಲಾಭ ಪಡೆಯಬಹುದಾದ ಹೊಸ ಆಫರ್ ಅನ್ನು ಜಿಯೋ ಸಂಸ್ಥೆ ಪ್ರಕಟಿಸಿದ್ದು, ಈ ಆಫರ್ ಪ್ರಕಟಣೆ ಈಗಾಗಲೇ ವೈರಲ್ ಆಗಿದೆ. ಆದರೆ, ಜಿಯೋವಿನ ರೂ. 2599 ಕ್ಯಾಶ್‌ಬ್ಯಾಕ್ ಆಫರ್ ಹಿಂದಿದೆ ಒಂದು ನಗ್ನಸತ್ಯ.!!

ಹೌದು, ಜಿಯೋವಿನ ಗ್ರಾಹಕರು 2599 ರೂ.ವರೆಗೂ ಲಾಭ ಪಡೆಯುವುದು ನಿಜವಾದರೂ ಸಹ ಜಿಯೋವಿನ ಈ ಆಫರ್ ಬಳಕೆ ಮಾಡಲು ಗ್ರಾಹಕರು ಪಡಬೇಕಾದ ಪಡಿಪಾಟಲು ಅಷ್ಟಿಷ್ಟಲ್ಲ.!! ಈ ಆಫರ್ ಬಲೆಯಂತೆ ಹೆಣೆದುಕೊಂಡಿದ್ದು, ಹಾಗಾದರೆ, ಏನಿದು ಜಿಯೋವಿನ ರೂ. 2599 ಕ್ಯಾಶ್‌ಬ್ಯಾಕ್ ಆಫರ್ ಪ್ಲಾನ್? ಈ ಆಫರ್‌ನಿಂದ ಜಿಯೋಗೆ ಏನು ಲಾಭ? ಗ್ರಾಹಕರಿಗೆ ಈ ಆಫರ್ ಉತ್ತಮವೇ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಒಟ್ಟು 2599 ರೂ. ಕ್ಯಾಶ್‌ಬ್ಯಾಕ್!!

ಒಟ್ಟು 2599 ರೂ. ಕ್ಯಾಶ್‌ಬ್ಯಾಕ್!!

ಜಿಯೋ ಹೇಳಿದಂತೆ ಜಿಯೋವಿನ ಗ್ರಾಹಕರು 399 ರೂಪಾಯಿಗಳಿಗಿಂತ ಹೆಚ್ಚು ರೀಚಾರ್ಜ್ ಮಾಡಿಸಿದರೆ ಒಟ್ಟು ರೂ. 2599ವರೆಗೂ ಕ್ಯಾಶ್‌ಬ್ಯಾಕ್ ಆಫರ್ ಗ್ರಾಹಕರಿಗೆ ನೇರವಾಗಿ ಪಾವತಿಯಾಗುವುದಿಲ್ಲ.! ಅಥವಾ ಜಿಯೋವಿನ ಸೇವೆಗಳಿಗೆ ಮಾತ್ರ ಉಪಯೋಗವಾಗುವುದಿಲ್ಲ.!!

ಏನಿದು ಜಿಯೋ ತಂತ್ರ?

ಏನಿದು ಜಿಯೋ ತಂತ್ರ?

ಜಿಯೋ ಈಗಾಗಲೇ ನಿದು ಜಿಯೋ ತಂತ್ರ?4G ಗ್ರಾಹಕರ ಮನಗೆದ್ದಿದೆ. ಹಾಗಾಗಿ, ಜಿಯೋಹಿಂದೆ ಆನ್‌ಲೈನ್ ಕಂಪೆನಿಗಳು ಬಿದ್ದಿದ್ದು, ಜಿಯೋವಿನ ಮೂಲಕ ತನ್ನ ಬ್ಯುಸಿನೆಸ್ ಹೆಚ್ಚಿಸಿಕೊಳ್ಳಲು ಮುಂದಾಗಿವೆ.!! ಹಾಗಾಗಿ, ಹಲವು ಕಂಪೆನಿಗಳು ಸೇರಿ ಜಿಯೋವಿನ ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.!!

ಕೊನೆ ಪಕ್ಷ ಜಿಯೋ ಕ್ಯಾಶ್‌ಬ್ಯಾಕ್?

ಕೊನೆ ಪಕ್ಷ ಜಿಯೋ ಕ್ಯಾಶ್‌ಬ್ಯಾಕ್?

ರೂ. 2599ವರೆಗೂ ಲಾಭ ಪಡೆಯಬಹುದಾದ ಈ ಕ್ಯಾಶ್‌ಬ್ಯಾಕ್‌ನಲ್ಲಿ 399 ರೂಪಾಯಿಗಳಿಗೆ 400 ರೂಪಾಯಿವರೆಗೂ ಜಿಯೋ ರೀಚಾರ್ಜ್ ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಹೇಳಿದೆ. ಆದರೆ, ಜಿಯೋ ನೀಡಿರುವ ಈ ಕ್ಯಾಶ್‌ಬ್ಯಾಕ್ 7 ವೋಚರ್‌ಗಳ ರೂಪದಲ್ಲಿದೆ. ಅಂದರೆ 7 ಬಾರಿ ಜಿಯೋವಿಗೆ ರೀಚಾರ್ಜ್ ಮಾಡಿಸಿದೆರೆ ಮಾತ್ರ ಈ ಆಫರ್ ಉಪಯೋಗ.!!

ಜಿಯೋವಿನ ಈ ಆಫರ್ ಪಾಲುದಾರರು ಯಾರು?

ಜಿಯೋವಿನ ಈ ಆಫರ್ ಪಾಲುದಾರರು ಯಾರು?

ಜಿಯೋವಿನ 2599 ರೂ.ಕ್ಯಾಷ್ ಬ್ಯಾಕ್ ಆಫರ್‌ನಲ್ಲಿ ಯಾತ್ರಾ.ಕಾಮ್ ಮತ್ತು ರಿಲಯನ್ಸ್ ಟ್ರೆಂಡ್ , ಆಕ್ಸಿಸ್ ಪೇ, ಮೊಬಿಕ್ವಿಕ್, ಪೇಟಿಎಂ, ಪೋನ್‌ ಪೇ, ಅಮೆಜಾನ್ ಪೇ ಸೇರಿದಂತೆ 10 ಕ್ಕೂ ಹೆಚ್ಚು ಕಂಪೆನಿಗಳು ಪಾಲುದಾರರಾಗಿವೆ. ಹಾಗಾಗಿ, ಜಿಯೋ ರೂ. 2599ವರೆಗೂ ಲಾಭ ನೀಡುವ ಆಫರ್ ಘೋಷಿಸಿದೆ.!!

ನಿಜವಾದ ಲಾಭ ಮರೀಚಿಗೆ.!!

ನಿಜವಾದ ಲಾಭ ಮರೀಚಿಗೆ.!!

ಜಿಯೋವಿನ 2599 ರೂ.ಕ್ಯಾಷ್ ಬ್ಯಾಕ್ ಆಫರ್‌ನ ಎಲ್ಲಾ 2599 ರೂ.ಲಾಭವನ್ನು ಪಡೆಯಲು ಯಾವ ಜಿಯೋ ಗ್ರಾಹಕನಿಗೂ ಸಾಧ್ಯವಿಲ್ಲ.!! ಹೌದು, ಅಮೆಜಾನ್ ಪೇ ಬಳಕೆ ಮಾಡಿಕೊಂಡು ನೀವು ರೂ.459ಕ್ಕೆ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ಜಿಯೋವಿ ರೂ.400 ಮತ್ತು ರೂ.99 ಕ್ಯಾಶ್‌ಬ್ಯಾಕ್ ದೊರೆಯುತ್ತದೆ.!! ಆದರೆ, ಉಳಿದದ್ದು?

ರಿಲಯನ್ಸ್ ಟ್ರೆಂಡ್‌ನಲ್ಲಿ ಹೆಚ್ಚು ಕ್ಯಾಶ್‌ಬ್ಯಾಕ್!!

ರಿಲಯನ್ಸ್ ಟ್ರೆಂಡ್‌ನಲ್ಲಿ ಹೆಚ್ಚು ಕ್ಯಾಶ್‌ಬ್ಯಾಕ್!!

ಅಂಬಾನಿಯ ಸ್ವಂತದ್ದೇ ಕಂಪೆನಿ ರಿಲಯನ್ಸ್ ಟ್ರೆಂಡ್‌ನಲ್ಲಿ 800 ರೂ.ವರೆಗೂ ಕ್ಯಾಶ್‌ಬ್ಯಾಕ್ ನೀಡಲು ಆಫರ್ ಅನ್ನು ಜಿಯೋವಿನ 2599 ರೂ.ಕ್ಯಾಷ್ ಬ್ಯಾಕ್ ಆಫರ್‌ ಹೊಂದಿದೆ. ಇಲ್ಲಿಯೂ ಕೂಡ ಅಂಬಾನಿ ಬಿಗ್‌ ಪ್ಲಾನ್ ಮಾಡಿದ್ದು, ತನ್ನ ರಿಲಯನ್ಸ್ ಟ್ರೆಂಡ್ ವ್ಯಾಪಾರವನ್ನು ಹೆಚ್ಚಿಸುವ ಉದ್ದೇಶದಲ್ಲಿದ್ದಾರೆ.!!

ಗ್ರಾಹಕರು ಕಳೆದುಕೊಳ್ಳುವುದು ಏನಿಲ್ಲ.!!

ಗ್ರಾಹಕರು ಕಳೆದುಕೊಳ್ಳುವುದು ಏನಿಲ್ಲ.!!

ಜಿಯೋವಿನ 399 ರೂಪಾಯಿಗಳ ರೀಚಾರ್ಜ್ ಮಾಡಿಸಿದರೆ ಗ್ರಾಹಕರು ಕಳೆದುಕೊಳ್ಳುವುದು ಏನಿಲ್ಲ. ಏಕೆಂದರೆ ಜಿಯೋವಿನ ಡೇಟಾ ಮತ್ತು ಕರೆ ಸೌಲಭ್ಯ ಎಲ್ಲರಿಗೂ ಲಭ್ಯವಿರುತ್ತದೆ. ಆದರೆ, ಈ ಕ್ಯಾಶ್‌ಬ್ಯಾಕ್ ಎನ್ನುವ ಜಿಯೋವಿನ ಮೋಸಕ್ಕೆ ಮರುಳಾಗದೆ ಇತರ ಕಂಪೆನಿಳ ದಾಸರಾಗುವುದನ್ನು ನೀವು ತಪ್ಪಿಸಿಕೊಳ್ಳಬೇಕಷ್ಟೆ.! ನಿಜವಾದರೆ ಶೇರ್ ಮಾಡಿ!!

ಡಿಜಿಟಲ್ ಪರಿವರ್ತನೆ...ಬೀಜಿಂಗ್, ಲಂಡನ್, ಸಿಂಗಾಪುರವನ್ನು ಹಿಂದಿಕ್ಕಿದ ನಮ್ಮ ಬೆಂಗಳೂರು!!ಡಿಜಿಟಲ್ ಪರಿವರ್ತನೆ...ಬೀಜಿಂಗ್, ಲಂಡನ್, ಸಿಂಗಾಪುರವನ್ನು ಹಿಂದಿಕ್ಕಿದ ನಮ್ಮ ಬೆಂಗಳೂರು!!

Best Mobiles in India

English summary
The cashback redemption availability will have three categories.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X