Subscribe to Gizbot

ಜಗತ್ತಿನ ಟಾಪ್ 15 ಶ್ರೀಮಂತ ನಗರಗಳ ಪಟ್ಟಿ ಬಿಡುಗಡೆ!!..ಭಾರತದ ಯಾವ ನಗರಕ್ಕೆ ಸ್ಥಾನ?

Written By:

ಜಗತ್ತಿನ ಅತ್ಯಂತ ಶ್ರೀಮಂತ 15 ನಗರಗಳ ಪಟ್ಟಿಯನ್ನು 'ನ್ಯೂ ವರ್ಲ್ಡ್ ವೆಲ್ತ್' ಸಂಸ್ಥೆ ಬಿಡುಗಡೆ ಮಾಡಿದೆ.! ಆಯಾ ನಗರಗಳಲ್ಲಿ ವಾಸವಿರುವ ವ್ಯಕ್ತಿಗಳ ಸ್ವತ್ತಿನ ಆಧಾರದಲ್ಲಿ ನ್ಯೂ ವರ್ಲ್ಡ್ ವೆಲ್ತ್ ಶ್ರೀಮಂತ 15 ನಗರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಟಾಪ್ 15 ನಗರಗಳಲ್ಲಿ ಭಾರತದ ಒಂದು ನಗರವು ಕೂಡ ಸ್ಥಾನಗಳಿಸಿದೆ.!!

ನ್ಯೂ ವರ್ಲ್ಡ್ ವೆಲ್ತ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಸರ್ಕಾರದ ಆಸ್ತಿಗಳನ್ನು ಸೇರಿಸದೇ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಹಾಗಾದರೆ, ವಿಶ್ವದ ಟಾಪ್ 15 ಶ್ರೀಮಂತ ನಗರಗಳು ಯಾವುವು? ಭಾರತದ ಯಾವ ನಗರಕ್ಕೆ ಎಷ್ಟನೇ ಸ್ಥಾನ ಸಿಕ್ಕಿದೆ? ನಗರಗಳು ಎಷ್ಟೆಷ್ಟು ಸಂಪತನ್ನು ಹೊಂದಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1. ನ್ಯೂಯಾರ್ಕ್

1. ನ್ಯೂಯಾರ್ಕ್

ವಿಶ್ವದ ನಂಬರ್ 1 ಶ್ರೀಮಂತ ನಗರವಾಗಿ ಅಮೆರಿಕಾದ 'ನ್ಯೂಯಾರ್ಕ್' ಸಿಟಿ ಸ್ಥಾನ ಪಡೆದಿದೆ. ನ್ಯೂಯಾರ್ಕ್ ಒಟ್ಟು 3 ಲಕ್ಷ ಕೋಟಿ (₹ 192.6 ಲಕ್ಷ ಕೋಟಿ) ಡಾಲರ್ ಸಂಪತ್ತನ್ನು ಹೊಂದಿದೆ.!!

2. ಲಂಡನ್

2. ಲಂಡನ್

ಇತಿಹಾಸದ ಶ್ರೀಮತ ನಗರ ಎನ್ನುವ ಹಣೆಪಟ್ಟಿ ಹೊಂದಿರುವ 'ಲಂಡನ್' ವಿಶ್ವದ ಎರಡನೇ ಶ್ರೀಂಮತ ನಗರವಾಗಿದೆ.! ಲಂಡನ್ 2.7 ಲಕ್ಷ ಕೋಟಿ (₹ 173.3 ಲಕ್ಷ ಕೋಟಿ) ಡಾಲರ್ಸಂಪತ್ತನ್ನು ಹೊಂದಿದೆ.!

3. ಟೋಕಿಯೊ

3. ಟೋಕಿಯೊ

ಜಪಾನ್ ದೇಶದ ಐಟಿ ಹಬ್ 'ಟೋಕಿಯೊ' ವಿಶ್ವದ ಮೂರನೇ ಶ್ರೀಂಮತ ನಗರವಾಗಿದೆ. ಟೋಕಿಯೊ 2.5 ಲಕ್ಷ ಕೋಟಿ (₹ 160.5 ಲಕ್ಷ ಕೋಟಿ)ಡಾಲರ್ ಸಂಪತ್ತನ್ನು ಹೊಂದಿದೆ.!!

4. ಸ್ಯಾನ್‌ಫ್ರಾನ್ಸಿಸ್ಕೊ

4. ಸ್ಯಾನ್‌ಫ್ರಾನ್ಸಿಸ್ಕೊ

ಅಮೆರಿಕಾದ ಮತ್ತೊಂದು ಬೃಹತ್ ನಗರ 'ಸ್ಯಾನ್‌ಫ್ರಾನ್ಸಿಸ್ಕೊ' ವಿಶ್ವದ ನಾಲ್ಕನೇ ಶ್ರೀಂಮತ ನಗರವಾಗಿದೆ.! ಸ್ಯಾನ್‌ಫ್ರಾನ್ಸಿಸ್ಕೊ 2.3 ಲಕ್ಷ ಕೋಟಿ (₹ 147.6 ಲಕ್ಷ ಕೋಟಿ)ಡಾಲರ್ ಸಂಪತ್ತನ್ನು ಹೊಂದಿದೆ.!!

5. ಬೀಜಿಂಗ್

5. ಬೀಜಿಂಗ್

ಚೀನಾ ದೇಶದ ರಾಜಧಾನಿ 'ಬೀಜಿಂಗ್' ವಿಶ್ವದ ಐದನೇ ಶ್ರೀಂಮತ ನಗರವಾಗಿದೆ. ಬೀಜಿಂಗ್ 2.2 ಲಕ್ಷ ಕೋಟಿ (₹ 141.2 ಲಕ್ಷ ಕೋಟಿ) ಡಾಲರ್ ಸಂಪತ್ತನ್ನು ಹೊಂದಿದೆ.!!

6. ಶಾಂಘೈ!!

6. ಶಾಂಘೈ!!

ಚೀನಾ ದೇಶದ ಅತ್ಯಂತ ದೊಡ್ಡ ನಗರ ಎಂಬ ಹೆಗ್ಗಳಿಕೆ ಹೊಂದಿರುವ ಶಾಂಘೈ ವಿಶ್ವದ ಆರನೇ ಶ್ರೀಂಮತ ನಗರವಾಗಿದೆ. ಶಾಂಘೈ 2 ಲಕ್ಷ ಕೋಟಿ (₹ 128.4 ಲಕ್ಷ ಕೋಟಿ)ಡಾಲರ್ ಸಂಪತ್ತನ್ನು ಹೊಂದಿದೆ.!!

7. ಲಾಸ್ ಏಂಜಲಿಸ್

7. ಲಾಸ್ ಏಂಜಲಿಸ್

ಅಮೆರಿಕಾದಲ್ಲಿರುವ ಐಕಾನಿಕ್ ಹಾಲಿವುಡ್ ಚಿಹ್ನೆಯ ನಗರ 'ಲಾಸ್ ಏಂಜಲಿಸ್' ವಿಶ್ವದ ಏಳನೇ ಶ್ರೀಂಮತ ನಗರವಾಗಿದೆ. 'ಲಾಸ್ ಏಂಜಲಿಸ್' 1.4 ಲಕ್ಷ ಕೋಟಿ (₹ 89.8 ಲಕ್ಷ ಕೋಟಿ) ಡಾಲರ್ ಸಂಪತ್ತನ್ನು ಹೊಂದಿದೆ.!!

8. ಹಾಂಕಾಂಗ್

8. ಹಾಂಕಾಂಗ್

ಟೆಂಪಲ್ ಸ್ಟ್ರೀಟ್ ನೈಟ್ ಮಾರ್ಕೆಟ್ ಹೆಸರುವಾಸಿ ಹಾಂಕಾಂಗ್ ವಿಶ್ವದ ಎಂಟನೇ ಶ್ರೀಂಮತ ನಗರವಾಗಿದೆ. ಹಾಂಕಾಂಗ್ 1.3 ಲಕ್ಷ ಕೋಟಿ (₹ 83.4 ಲಕ್ಷ ಕೋಟಿ) ಡಾಲರ್ ಸಂಪತ್ತನ್ನು ಹೊಂದಿದೆ.!!

9. ಸಿಡ್ನಿ

9. ಸಿಡ್ನಿ

ಆಸ್ಟ್ರೇಲಿಯಾದ ಅತಿ ದೊಡ್ಡ ನಗರ ಸಿಡ್ನಿ ವಿಶ್ವದ ಒಂಬತ್ತನೇ ಶ್ರೀಂಮತ ನಗರವಾಗಿದೆ. ಸಿಡ್ನಿ 1 ಲಕ್ಷ ಕೋಟಿ (₹ 64.2 ಲಕ್ಷ ಕೋಟಿ)ಡಾಲರ್ ಸಂಪತ್ತನ್ನು ಹೊಂದಿದೆ.!!

10. ಸಿಂಗಪುರ

10. ಸಿಂಗಪುರ

ಮಲೆಷಿಯಾ ದೇಶದ ಒಂದು ದ್ವೀಪ ಸಿಂಗಾಪುರ ವಿಶ್ವದ ಹತ್ತನೇ ಶ್ರೀಂಮತ ನಗರವಾಗಿದೆ. ಸಿಂಗಾಪುರ 1 ಲಕ್ಷ ಕೋಟಿ (₹ 64.2 ಲಕ್ಷ ಕೋಟಿ)ಡಾಲರ್ ಸಂಪತ್ತನ್ನು ಹೊಂದಿದೆ.!!

11. ಷಿಕಾಗೊ

11. ಷಿಕಾಗೊ

ವಾಸ್ತುಶಿಲ್ಪಕ್ಕೆ ಹೆಸರುವಾಸಿಗಿರುವ ಅಮೆರಿಕಾದ ಮತ್ತೊಂದು ನಗರ ಷಿಕಾಗೊ ವಿಶ್ವದ ಹನ್ನೊಂದನೆ ಶ್ರೀಂಮತ ನಗರವಾಗಿದೆ. ಷಿಕಾಗೊ 98,800 ಕೋಟಿ (₹ 63.4 ಲಕ್ಷ ಕೋಟಿ)ಡಾಲರ್ ಸಂಪತ್ತನ್ನು ಹೊಂದಿದೆ.!!

12. ಮುಂಬೈ

12. ಮುಂಬೈ

ಟಾಪ್ 15 ಶ್ರೀಮಂತ ನಗರಗಳಲ್ಲಿ ಭಾರತದ ಏಕೈಕ ನಗರ ಮುಂಬೈ ವಿಶ್ವದ 12ನೇ ಅತ್ಯಂತ ಶ್ರೀಂಮತ ನಗರವಾಗಿದೆ ಭಾರತದ ವಾಣಿಜ್ಯ ಕೇಂದ್ರ ಲಕ್ಷ ಕೋಟಿ ಅಮೆರಿಕನ್ ಡಾಲರ್ (ಸುಮಾರು ₹65 ಲಕ್ಷ ಕೋಟಿ) ಮೌಲ್ಯದ ಸಂಪತ್ತು ಹೊಂದಿದೆ.!!

13. ಟೊರಾಂಟೊ

13. ಟೊರಾಂಟೊ

ಕೆನಡಾ ದೇಶದ ಪ್ರಮುಖ ನಗರ ಟೊರೊಂಟೊ ವಿಶ್ವದ ಹದಿಮೂರನೇ ಶ್ರೀಂಮತ ನಗರವಾಗಿದೆ. ಟೊರಾಂಟೊ 94,400 ಕೋಟಿ (₹ 60.6 ಲಕ್ಷ ಕೋಟಿ) ಮೌಲ್ಯದ ಸಂಪತ್ತು ಹೊಂದಿದೆ.!!

14. ಫ್ರಾಂಕ್‌ಫರ್ಟ್

14. ಫ್ರಾಂಕ್‌ಫರ್ಟ್

ಜರ್ಮನ್ ದೇಶದ ಪ್ರಮುಖ ವಾಣಿಜ್ಯ ನಗರ ಫ್ರಾಂಕ್‌ಫರ್ಟ್ ವಿಶ್ವದ ಹದಿನಾಲ್ಕನೇ ಶ್ರೀಂಮತ ನಗರವಾಗಿದೆ. ಫ್ರಾಂಕ್‌ಫರ್ಟ್ 91,200 ಕೋಟಿ (₹ 58.5 ಲಕ್ಷ ಕೋಟಿ) ಮೌಲ್ಯದ ಸಂಪತ್ತು ಹೊಂದಿದೆ.!!

15. ಪ್ಯಾರಿಸ್

15. ಪ್ಯಾರಿಸ್

ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ವಿಶ್ವದ ಹದಿನೈದನೇ ಶ್ರೀಂಮತ ನಗರವಾಗಿದೆ. ಪ್ಯಾರಿಸ್ 86,000 ಕೋಟಿ (₹ 55.2 ಲಕ್ಷ ಕೋಟಿ) ಮೌಲ್ಯದ ಸಂಪತ್ತು ಹೊಂದಿದೆ.!!

ಓದಿರಿ:ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ವಿಶ್ವದ ನಂ.1 ಶ್ರೀಮಂತನಾದ ಕಥೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Mumbai, India's financial capital is the 12th richest city in the world with a total wealth of $950 billion. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot