Subscribe to Gizbot

ಜಪಾನ್ ನಲ್ಲಿ ಕಾಫಿ ಮಾಡಿಕೊಡುವ ರೋಬೋಟ್: ಒಂದು ಕಾಫಿ ಬೆಲೆ ಎಷ್ಟು..?

Posted By: lekhaka

ಜಪಾನ್ ದೇಶವೂ ರೋಬೊಗಳನ್ನು ನಿರ್ಮಾಣ ಮಾಡುವಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಸಿಕೊಂಡಿದೆ. ಇದೇ ಮಾದರಿಯಲ್ಲಿ ಜಪಾನಿನ ಕಾಫಿ ಶಾಪ್ ವೊಂದಲ್ಲಿ ನೀವು ಬಯಸುವ ಬಿಸಿ ಬಿಸಿ ಕಾಫಿಯನ್ನು ಸರ್ವ್ ಮಾಡುವ ರೋಬೊವನ್ನು ಅಭಿವೃದ್ಧಿ ಪಡಿಸಲಾಗಿದೆ. ರೋಬೊಟ್ ಕಾಫಿ ಸದ್ಯ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಈ ಕಾಫಿ ಮಾಡುವ ರೋಬೊವಿಗೆ ರೋಬೋಟ್ ಸವಾಯರ್ ಎಂದು ನಾಮಕರಣವನ್ನು ಮಾಡಲಾಗಿದೆ.

ಜಪಾನ್ ನಲ್ಲಿ ಕಾಫಿ ಮಾಡಿಕೊಡುವ ರೋಬೋಟ್: ಒಂದು ಕಾಫಿ ಬೆಲೆ ಎಷ್ಟು..?

ಟೋಕಿಯೋದ ಪ್ರಸಿದ್ಧ ಕಾಫಿ ಶಾಪ್, ಹೇನಾ ಕಫೆಯಲ್ಲಿ ಈ ರೋಬೋಟ್ ಕಾಫಿ ಮೇಕರ್ ಅನ್ನು ಕಾಣಬಹುದಾಗಿದೆ. ಈ ರೋಬೋಟ್ ಮಾನವರಂತೆಯೇ ಕಾರ್ಯನಿರ್ವಹಿಸಲಿದ್ದು, ನೀವು ಆರ್ಡರ್ ಮಾಡಿದ ಕಾಫಿಯನ್ನು ಅತ್ಯಂತ ಶ್ರದ್ಧೆಯಿಂದ ಮಾಡಿಕೊಡಲಿದೆ. ಅಲ್ಲದೇ ರುಚಿ ರುಚಿಯಾದ ಕಾಫಿಯನ್ನು ನಿಮಗೆ ಸರ್ವ್ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆರ್ಡರ್ ಗಳನ್ನು ಸ್ಕ್ಯಾನ್ ಮಾಡಲಿದೆ:

ಆರ್ಡರ್ ಗಳನ್ನು ಸ್ಕ್ಯಾನ್ ಮಾಡಲಿದೆ:

ಗ್ರಾಹಕರು ತಮಗೆ ಬೇಕಾದ ಕಾಫಿಯನ್ನು ಆರ್ಡರ್ ಮಾಡಿ ಅದನ್ನು ರೋಬೋಟ್ ಗೆ ನೀಡಿದರೆ ನೀವು ಬಯಸಿದ ಕಾಫಿಯ ಆರ್ಡರ್ ಅನ್ನು ಸ್ಕ್ಯಾನ್ ಮಾಡಿಕೊಳ್ಳಲಿದ್ದು, ಮಾಡಿಕೊಂಡ ನಂತರದಲ್ಲಿ ನಿಮ್ಮ ಆಯ್ಕೆಯ ಕಾಫಿಯನ್ನು ಸರ್ವ್ ಮಾಡಲಿದೆ ಎನ್ನಲಾಗಿದೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಮಾನವನಿಗಿಂತಲೂ ಉತ್ತಮ:

ಮಾನವನಿಗಿಂತಲೂ ಉತ್ತಮ:

ಮನುಷ್ಯರು ಮಾಡಿಕೊಡುವಂತಹ ಕಾಫಿಗಿಂತಲೂ 10 ಪಟ್ಟು ಉತ್ತಮವಾದ ಕಾಫಿಯನ್ನು ಈ ರೋಬೋಟ್ ಮಾಡಿಕೊಡಲಿದೆ. ರುಚಿ ಮತ್ತು ಶುಚಿ ಎರಡಕ್ಕೂ ಆದ್ಯತೆಯನ್ನು ನೀಡಲಿದ್ದು, ನಗು ಮುಖದಿಂದ ಸೇವೆಯನ್ನು ನೀಡಲಿದೆ. ಕಾಫಿಯನ್ನು ಬೆರೆಸಿ, ಪೇಪರ್ ಕಪ್ ನಲ್ಲಿ ಹಾಕಿ ಸರ್ವ್ ಮಾಡಲಿದೆ.

ಪ್ಲಾಸ್ಟಿಕ್ ಮತ್ತು ಲ್ಯಾಮಿನೇಟೆಡ್ ಆಧಾರ್ ಬಳಸದಂತೆ ಆಧಾರ್ ಪ್ರಾಧಿಕಾರ ಎಚ್ಚರಿಕೆ!!

ದುಬಾರಿ ಕಾಫಿ:

ದುಬಾರಿ ಕಾಫಿ:

ಈ ರೋಬೊಟ್ ಮಾಡಿಕೊಡುವ ಕಾಫಿಯನ್ನು ಕುಡಿಯಲು ನೀವು ಸುಮಾರು 200 ರಿಂದ 300 ರೂ.ಗಳನ್ನು ಪಾವತಿ ಮಾಡಬೇಕು ಎನ್ನಲಾಗಿದೆ. ಅಲ್ಲದೇ ನೀವು ಆರ್ಡರ್ ನೀಡಿದ ಕೆಲವೇ ನಿಮಿಷಗಳಲ್ಲಿ ಇದು ಕಾಫಿಯನ್ನು ಸರ್ವ ಮಾಡಿಕೊಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Japan has a new robot cafe where customers can enjoy coffee brewed and served by a robot barista.The robot named Sawyer debuted this week at Henna Cafe in Tokyo's downtown business and shopping district of Shibuya. The shop's name in Japanese means "strange cafe." to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot