ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುವವರೇ ಒಮ್ಮೆ ಈ ಸ್ಟೋರಿ ಓದಿ..!

ದೂರದ ಊರುಗಳಿಗೆ ಹೋಗುವವರು ಮತ್ತು ಮನೆಯಲ್ಲಿ ಚಾರ್ಜಿಂಗ್ ಮಾಡಿಕೊಳ್ಳಲು ಸಮಯ ಸಿಗದೆ ಇರುವರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮೊಬೈಲ್ ಗಳನ್ನು ಚಾರ್ಜ್ ಮಾಡಿಕೊಳ್ಳಲು ಮುಂದಾಗುವುದು ಸಾಮಾನ್ಯ.

|

ಇಂದು ಎಲ್ಲರ ಕೈಯಲ್ಲಿಯೂ ನೋಡಲು ಸಿಗುವ ಸ್ಮಾರ್ಟ್‌ಫೋನ್‌ಗಳ ಚಾರ್ಜಿಂಗ್ ದಾಹವನ್ನು ತಣಿಸುವುದು ಕಸ್ಟ ಸಾಧ್ಯವಾದ ಮಾತು. ನಾವು ಎಷ್ಟೇ ಚಾರ್ಜ್ ಮಾಡಿದರು ಬೇಗನೇ ಖಾಲಿಯಾಗುತ್ತದೆ ಎಂಬುದು ಎಲ್ಲರ ದೂರಾಗಿದೆ. ಅದರಲ್ಲಿಯೂ ದೂರದ ಊರುಗಳಿಗೆ ಹೋಗುವವರು ಮತ್ತು ಮನೆಯಲ್ಲಿ ಚಾರ್ಜಿಂಗ್ ಮಾಡಿಕೊಳ್ಳಲು ಸಮಯ ಸಿಗದೆ ಇರುವರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮೊಬೈಲ್ ಗಳನ್ನು ಚಾರ್ಜ್ ಮಾಡಿಕೊಳ್ಳಲು ಮುಂದಾಗುವುದು ಸಾಮಾನ್ಯ.

ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುವವರೇ ಒಮ್ಮೆ ಈ ಸ್ಟೋರಿ ಓದಿ..

ಓದಿರಿ: ಜಿಯೋ ಪ್ರೈಮ್ ಸದಸ್ಯತ್ವ ಕೊನೆ ಆಯ್ತು: ಉಳಿದ ಜಿಯೋ ಗ್ರಾಹಕರ ಕಥೆ ಏನು..?

ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೇ ನಿಮ್ಮ ಮೊಬೈಲ್ ಗಳನ್ನು ಚಾರ್ಜಿಂಗ್ ಗೆ ಹಾಕುವ ಸಂದರ್ಭದಲ್ಲಿ ಎಚ್ಚರಿಕೆವಹಿಸುವುದು ಅಗತ್ಯ. ಕಾರಣ ಹ್ಯಾಕರ್ಸ್್ಗಳು ನಿಮ್ಮ ಸ್ಮಾರ್ಟ್‌ಫೋನಿನ ಮಾಹಿತಿಯನ್ನು ಕದಿಯಲು ಚಾರ್ಜಿಂಗ್ ಮೂಲಕವೂ ನುಸುಳುವ ಸಾಧ್ಯತೆ ಇದೆ. ಅದರಲ್ಲಿಯೂ ಯೂಎಸ್‌ಬಿ ಕೇಬಲ್ ಮೂಲಕ ನೀವು ಚಾರ್ಜ್‌ಗೆ ಹಾಕಿದ ಸಮಯದಲ್ಲಿ ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿರಲಿದೆ.

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..?

ಹೊಸ ಹೊಸ ಮಾರ್ಗಗಳನ್ನು ಅನುಸರಿಸುವ ಹ್ಯಾಕರ್ಸ್:

ಹೊಸ ಹೊಸ ಮಾರ್ಗಗಳನ್ನು ಅನುಸರಿಸುವ ಹ್ಯಾಕರ್ಸ್:

ಈ ಕುರಿತು ಒಂದು ಅಧ್ಯಾಯನ ವರದಿಯನ್ನು ಬಿಡುಗಡೆ ಮಾಡಿರುವ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹ್ಯಾಕರ್ಸ್ ಗಳು ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್ ಮಾಡಲು ದಿನೇ ದಿನೇ ಹೊಸ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಈಗ ಯೂಎಸ್‌ಬಿ ಚಾರ್ಜಿಂಗ್ ಮೂಲಕ ಡೇಟಾವನ್ನು ಕದಿಯುತ್ತಿದ್ದಾರೆ. ಪಶ್ವಿಮ ದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬಂದಿದ್ದು, ಶೀಘ್ರವೇ ಭಾರತದಲ್ಲೂ ಈ ರೀತಿಯ ಹ್ಯಾಕಿಂಗ್ ಆರಂಭವಾಗಲಿದೆ ಎನ್ನಲಾಗಿದೆ.

ನಿಮ್ಮನ್ನು ಬ್ಲಾಕ್ ಮೇಲ್ ಮಾಡಬಹುದು:

ನಿಮ್ಮನ್ನು ಬ್ಲಾಕ್ ಮೇಲ್ ಮಾಡಬಹುದು:

ಯೂಎಸೆಬಿ ಮೂಲಕ ಚಾರ್ಜ್‌ಗೆ ಹಾಕಿದ ಸಂದರ್ಭದಲ್ಲಿ ಚಾರ್ಜ್ಂಗ್ ಸಾಕೆಟ್‌ಗೆ ಸಂಪರ್ಕ ಹೊಂದಿರುವ ಹ್ಯಾಕರ್ಸ್ ನಿಮ್ಮ ಅರಿವಿಗೆ ಬಾರದ ಹಾಗೆಯೇ ನಿಮ್ಮ ಡೇಟಾವನ್ನು ಅಪಹರಿಸುತ್ತಾರೆ. ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಕಾನ್ಟೆಕ್ಟ್ಸ್, ಫೋಟೋಗಳು ವಿಡಿಯೋಗಳು ಹೀಗೆ ಹಲವಾರು ಮಾಹಿತಿಯನ್ನು ಅಪಹರಿಸಬಹುದು. ಇರಿಂದ ನಿಮ್ಮನ್ನು ಬ್ಲಾಕ್ ಮೇಲ್ ಮಾಡಬಹುದು ಇಲ್ಲವೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಬಹುದು.

ಆಡಪ್ಟರ್ ಚಾರ್ಜರ್ ಬಳಸಿ:

ಆಡಪ್ಟರ್ ಚಾರ್ಜರ್ ಬಳಸಿ:

ಇದಕ್ಕಾಯೇ ಇನ್ನು ಮುಂದೇ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಫೋನನ್ನು ಚಾರ್ಜಿಗೆ ಇಡುವ ಮೊದಲು ನೂರು ಬಾರಿ ಯೋಚಿಸಿ, ಇಲ್ಲ ಆಡಪ್ಟರ್ ಚಾರ್ಜರ್ ಮೂಲಕ ನಿಮ್ಮ ಫೋನನ್ನು ಚಾರ್ಜ್ ಮಾಡಿಕೊಳ್ಳುವುದು ಉತ್ತಮ.

ವೈಫೈ ಬಳಸದರು ಕಷ್ಟ, ಚಾರ್ಜ್ ಮಾಡಿದರು ಕಷ್ಟ:

ವೈಫೈ ಬಳಸದರು ಕಷ್ಟ, ಚಾರ್ಜ್ ಮಾಡಿದರು ಕಷ್ಟ:

ಒಂದು ರೀತಿಯಲ್ಲಿ ಸ್ಮಾರ್ಟ್‌ಫೋನನುಗಳನ್ನು ಸುರಕ್ಷಿತವಾಗಿ ಇಡುವುದೇ ಕಷ್ಟವಾಗಿದೆ. ವೈಫೈ ಬಳಸದರು ಕಷ್ಟ, ಚಾರ್ಜ್ ಮಾಡಿದರು ಕಷ್ಟ ಮಾಡದೇ ಇದ್ದರು ಕಸ್ಟ ಒಟ್ಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಇದಿದ್ದೇ. ಹಾಗಾಗಿ ನೀವು ಎಷ್ಟು ಎಚ್ಚರದಿಂದ ನಿಮ್ಮ ಫೋನುಗಳನ್ನು ಬಳಸುತ್ತೀರೋ ಎಷ್ಟು ಸುರಕ್ಷಿತವಾಗಿರಲಿದೆ.

Best Mobiles in India

Read more about:
English summary
Plugging your smartphone to public charging stations or computers using USB cables can make your device vulnerable to hackers to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X