Subscribe to Gizbot

ಶೀಘ್ರವೇ ಮಾತ್ರೆಗಳ ಮೇಲೆಯೂ ಕ್ಯೂಆರ್ ಕೋಡ್..!

Posted By: manju

ಇಂದಿನ ದಿನದಲ್ಲಿ ತಂತ್ರಜ್ಞಾನ ಎನ್ನುವವುದು ನಮ್ಮ ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗುತ್ತಿದೆ. ಒಂದೇ ಒಂದು ಕ್ಷಣವೂ ತಂತ್ರಜ್ಞಾನದ ಸಹಾಯವಿಲ್ಲದೇ ನಮ್ಮ ಜೀವನ ಮುಂದೆ ಸಾಗುವುದೇ ಇಲ್ಲವೇನು ಎನ್ನುವಷ್ಟು ಮಟ್ಟಕ್ಕೆ ಅವರಿಸಿಕೊಂಡಿದೆ. ವೈದ್ಯಕೀಯ ಲೋಕ, ಶಿಕ್ಷಣ, ಮನರಂಜನೆ ಸೇರಿದಂತೆ ಎಲ್ಲಾ ವಿಷಯಗಳು ತಂತ್ರಜ್ಞಾನದೊಂದಿಗೆ ಸೇರಿಕೊಂಡಿದೆ.

ಶೀಘ್ರವೇ ಮಾತ್ರೆಗಳ ಮೇಲೆಯೂ ಕ್ಯೂಆರ್ ಕೋಡ್..!

ಇದೇ ಮಾದರಿಯಲ್ಲಿ ವಿಜ್ಞಾನಿಗಳು ಹೊಸದೊಂದು ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು, ವೈದ್ಯರು ನೀಡುವಂತಹ ಮಾತ್ರೆಗಳಿಗೆ ಕ್ಯೂಆರ್ ಕೋಡ್ ಅನ್ನು ಅಳವಡಿಸಲು ಮುಂದಾಗಿದ್ದಾರೆ. ಈ ಮೂಲಕ ಔಷಧಗಳು ಸರಿಯಾದರ ರೀತಿಯಲ್ಲಿ ರೋಗಿಗಳಿಗೆ ತಲುಪಲಿ ಎನ್ನುವ ಕಾರಣಕ್ಕಾಗಿ ಮತ್ತು ಔಷಧಗಳು ಇಂದು ಆನ್ ಲೈನ್ ಡಿಲಿವರಿಯಾಗುತ್ತಿದ್ದು, ಇದಕ್ಕೂ ಕ್ಯೂಆರ್ ಕೋಡ್ ಸಹಾಯವನ್ನು ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯೂಆರ್ ಕೋಡ್:

ಕ್ಯೂಆರ್ ಕೋಡ್:

ಔಷಧಗಳಲ್ಲಿ ಕ್ಯೂಆರ್ ಕೋಡ್ ಗಳನ್ನು ಅಳವಡಿಸುವುದರಿಂದ ರೋಗಿಗಳಿಗೆ ಹೆಚ್ಚಿನ ಸಹಾಯವು ಆಗಲಿದೆ. ತಾವು ಬಳಸುವ ಔಷಧಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಪಡೆದುಕೊಳ್ಳಲಿದ್ದಾರೆ. ಮಾತ್ರೆಗಳ ಮೇಲೆ ಇರುವ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕು ಅದರ ಸಂಪೂರ್ಣ ಮಾಹಿತಿಯೂ ದೊರೆಯಲಿದೆ.

ಫಿನ್ ಲ್ಯಾಂಡ್ ಸಂಶೋಧಕರು:

ಫಿನ್ ಲ್ಯಾಂಡ್ ಸಂಶೋಧಕರು:

ಫಿನ್ ಲ್ಯಾಂಡ್ ನ ಸಂಶೋಧಕರು ಈ ಕ್ಯೂಆರ್ ಕೋಡ್ ಹೊಂದಿರುವ ಡ್ರಗ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಮಾತ್ರೆಗಳ ಮೇಲೆ ಕ್ಯೂಆರ್ ಕೋಡ್ ಪ್ರಿಂಟ್ ಮಾಡಲು ಮುಂದಾಗಿದ್ದಾರೆ. ಇದು ಔಷಧ ಉತ್ಪಾದನೆಯ ಲೋಕಕ್ಕೆ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.

ನಿಜ ಆಯ್ತು ನಿರೀಕ್ಷೆ: ಫೆ.14ಕ್ಕೆ ರೆಡ್‌ಮಿ ನೋಟ್ 5 ಬಿಡುಗಡೆ ಪಕ್ಕಾ..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಲಭ್ಯ..!

ಮಾತ್ರೆಗಳ ಸಂಪೂರ್ಣ ವಿವರ:

ಮಾತ್ರೆಗಳ ಸಂಪೂರ್ಣ ವಿವರ:

ಕ್ಯೂಆರ್ ಕೋಡ್ ಗಳನ್ನು ಮಾತ್ರೆಗಳ ಮೇಲೆಯೇ ಪ್ರಿಂಟ್ ಮಾಡುವುದರಿಂದಾಗಿ ಬಳಕೆದಾರರಿಗೆ ಅದರ ಸಂಫೂರ್ಣ ಡೇಟಾ ದೊರೆಯಲಿದೆ. ಇದರಿಂದಾಗಿ ಯಾವುದೋ ಮಾತ್ರೆಯನ್ನು ತೆಗೆದುಕೊಂಡು ತೊಂದರೆಗೆ ಸಿಲುಕುವುದನ್ನು ತಪ್ಪಿಸಬಹುದಾಗಿದೆ. ನೀವು ತೆಗೆದುಕೊಳ್ಳಬೇಕಾದ ಮಾತ್ರೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Scientists have developed drugs created with QR codes, that are set to enable efficient drug delivery, alongside helping to check for counterfeit medicines. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot