ಮಾನವ ಮಂಗಳ ಗ್ರಹದಲ್ಲಿ ವಾಸಿಸಲಾರ ಎಂಬುದಕ್ಕೆ ಕಾರಣಗಳು

By Shwetha
|

ಮಂಗಳದ ನೆಲದಲ್ಲಿ ಮಂಜು ಇದೆ, ನೀರಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನು ವಿಜ್ಞಾನಿಗಳು ಇದನ್ನು ಆಧರಿಸಿ ಮಂಗಳ ಅಂಗಳದಲ್ಲಿ ಮಾನವನ ಬದುಕು ಸಾಧ್ಯ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ ನೀರಿದ್ದರೂ ಅದು ಶುದ್ಧವಾಗಿದೆಯೇ? ನಮ್ಮ ಬದುಕಿಗೆ ಪೂರಕವಾಗಿರುವ ರೀತಿಯಲ್ಲಿ ಅಲ್ಲಿ ಹರಿಯುತ್ತಿರುವ ನೀರು ಇದೆಯೇ? ಇನ್ನು ವಾತಾವರಣ ನಮ್ಮ ಬದುಕಿಗೆ ಬೇಕಾಗಿರುವ ಮಾದರಿಯಲ್ಲಿದೆಯೇ ಎಂಬ ಅಂಶವನ್ನು ಕಂಡುಕೊಳ್ಳುವುದಾದರೂ ಹೇಗೆ?

ಓದಿರಿ: ಇಂಟರ್ನೆಟ್‌ನಲ್ಲಿ ಸಂಚಲನವನ್ನುಂಟು ಮಾಡಿದ ಸುಳ್ಳು ಕಥೆಗಳು

2030 ರಲ್ಲಿ ಮಾನವನ ವಾಸವನ್ನು ಮಂಗಳನಲ್ಲಿ ಸ್ಥಾಪಿಸಬೇಕು ಎಂಬುದು ನಾಸಾದ ಅತಿದೊಡ್ಡ ಗುರಿಯಾಗಿದೆ. ಹೆಚ್ಚಿನ ಸಂಶೋಧನೆ, ಪರಿಶೀಲನೆ ತಂತ್ರಜ್ಞಾನಗಳು ಮತ್ತು ಸುಧಾರಿತ ಮಾನವ ಆರೋಗ್ಯವನ್ನು ಇಲ್ಲಿನ ಹವಾಮಾನಕ್ಕೆ ಹೊಂದಿಸುವುದು ಮುಂದಿರುವ ಯೋಜನೆಯಾಗಿದೆ. ಮಂಗಳ ಗ್ರಹವನ್ನು ತಲುಪುವ ತನ್ನ ಯೋಜನೆಗಳನ್ನು ಬಾಹ್ಯಾಕಾಶ ಸಂಸ್ಥೆ ಹೊರಹಾಕಿದ್ದು ಇದಕ್ಕೆ ಮಂಗಳನಲ್ಲಿ ನಾಸಾದ ಪ್ರಯಾಣ ಎಂಬ ತಲೆಬರಹವನ್ನು ನೀಡಲಾಗಿದೆ.

ಓದಿರಿ: ಏಲಿಯನ್‌ಗಳು ಇದ್ದುದು ಹೌದು! ದೃಢೀಕರಿಸುವ ಅಂಶಗಳು

ಇನ್ನು ಬಾಹ್ಯಾಕಾಶ ಯಾನಿಗಳು ಅಲ್ಲಿಗೆ ಪ್ರಯಾಣಿಸಿದ್ದಾರೆ ಅದರಿಂದಾಗಿ ನಮ್ಮ ಬದುಕೂ ಸುಖಮಯವಾಗಿರುತ್ತದೆ ಎಂಬುದಾಗಿ ನಾವು ಭಾವಿಸುವಂತಿಲ್ಲ. ಅದು ಏಕೆ ಅವರಂತೆ ನಮ್ಮ ಬಾಳು ಅಲ್ಲಿ ಏಕೆ ಸಾಧ್ಯವಿಲ್ಲ ಎಂಬ ಮಾಹಿತಿಯ ಕುರಿತೇ ಇಂದಿನ ಲೇಖನದಲ್ಲಿ ನೀವು ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಿರುವಿರಿ.

ಗಡುಸಾಗಿದೆ

ಗಡುಸಾಗಿದೆ

ಮಂಗಳನ ಅಂಗಳ ತುಂಬಾ ಗಡುಸಾಗಿದೆ. ಇನ್ನು ಅಪಾಯಕಾರಿ ರೇಡಿಯೇಶನ್ ಕೂಡ ಇಲ್ಲಿದೆ. ಇನ್ನು ಇಲ್ಲಿರುವ ನೀರು ಕೂಡ ಮಾನವನ ಬಾಳ್ವಿಕೆಗೆ ಯೋಗ್ಯವಲ್ಲದ್ದಾಗಿದೆ.

ಆಘಾತಕಾರಿಯಾದ ಫಲಿತಾಂಶ

ಆಘಾತಕಾರಿಯಾದ ಫಲಿತಾಂಶ

ಇನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನಮ್ಮ ಪ್ರಯಾಣ ಆಘಾತಕಾರಿಯಾದ ಫಲಿತಾಂಶಗಳನ್ನು ಉಂಟುಮಾಡಬಹುದು. ಇನ್ನು ನಿಮಗೆ ಗೊತ್ತಿರದೇ ಇರುವ ಪ್ರದೇಶದಲ್ಲಿ ಎಲ್ಲವೂ ಅನುಕೂಲಕರವಾಗಿರಬಹುದು ಎಂಬುದಾಗಿ ಹೇಳುವಂತಿಲ್ಲ.

ಮಾರ್ಸ್‌ನ ಸ್ವಚ್ಛತೆ

ಮಾರ್ಸ್‌ನ ಸ್ವಚ್ಛತೆ

ಮಾರ್ಸ್‌ನ ಸ್ವಚ್ಛತೆ ಕೂಡ ನಮ್ಮ ಬದುಕು ಸಾಗಲು ಅತ್ಯವಶ್ಯಕವಾಗಿದೆ. ಇನ್ನು ಮಂಗಳನಲ್ಲಿ ಪೂರ್ವ ಮತ್ತು ಪ್ರಸ್ತುತ ಜೀವಿತ ಇದೆಯೇ ಎಂಬುದನ್ನು ಕಂಡುಕೊಳ್ಳಲು ರೋವರ್ ಉಪಕರಣ ಅಲ್ಲಿಗೆ ಪ್ರಯಾಣವನ್ನು ಬೆಳೆಸಿತ್ತು.

ಬ್ಯಾಕ್ಟೀರಿಯಾ

ಬ್ಯಾಕ್ಟೀರಿಯಾ

ಭೂಮಿಯಲ್ಲಿ ಕಂಡುಬಂದಿರುವ ಬ್ಯಾಕ್ಟೀರಿಯಾಗಿಂತಲೂ ಇದು ಸಣ್ಣದಾಗಿದೆ. ಇನ್ನು ಅವುಗಳ ರಚನೆ ಕೂಡ ಮಾನವನ ಜೀವನವಿಲ್ಲದೆ ಉಂಟಾಗಿರುವಂಥದ್ದಾಗಿದೆ.

ರಾತ್ರಿ ಹಗಲು ಸರ್ವೇಸಾಮಾನ್ಯ

ರಾತ್ರಿ ಹಗಲು ಸರ್ವೇಸಾಮಾನ್ಯ

ಭೂಮಿಯಲ್ಲಿರುವಂತೆಯೇ ಮಂಗಳನಲ್ಲೂ ರಾತ್ರಿ ಹಗಲು ಸರ್ವೇಸಾಮಾನ್ಯವಾಗಿದೆ. ಇನ್ನು ಮಾಸಗಳು ಇಲ್ಲಿ ದುಪ್ಪಟ್ಟುಗೊಂಡಿವೆ. ಭೂಮಿಯಲ್ಲಿ ಮೂರು ತಿಂಗಳಿದ್ದರೆ ಮಂಗಳನಲ್ಲಿ ಇದೇ ಆರು ತಿಂಗಳಾಗಿರುತ್ತದೆ.

ಮಂಗಳನಲ್ಲಿ ಮಾನವನ ಬದುಕು

ಮಂಗಳನಲ್ಲಿ ಮಾನವನ ಬದುಕು

ಮಂಗಳನಲ್ಲಿ ಮಾನವನ ಬದುಕು ಎಂಬ ಅನ್ವೇಷಣೆಯು 18 ನೇ ಶತಮಾನದಿಂದಲೇ ಆರಂಭವಾಗಿದೆ. ಸಾಕಷ್ಟು ಸ್ಯಾಟಲೈಟ್‌ಗಳನ್ನು ಇಲ್ಲಿಗೆ ಕಳುಹಿಸಲಾಗಿದೆ ಆದರೆ ಅದರಲ್ಲಿ ಹಲವಷ್ಟು ಮರಳಿ ಭೂಮಿಗೆ ಬಂದಿಲ್ಲ. ಇದರಿಂದಾಗಿ ಇಲ್ಲಿ ಏನೋ ಕಳವಳಕಾರಿಯಾದ ವಿಷಯವಿದೆ ಎಂಬ ಭಯವೂ ಭುಗಿಲೇಳುತ್ತದೆ.

ಯೋಜನೆ

ಯೋಜನೆ

ಈ ಯೋಜನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ನಾಸಾ ವಿಜ್ಞಾನಿಗಳು ಮಂಗಳನಲ್ಲಿ ಮಾನವನ ಬದುಕು ಅಸಾಧ್ಯ ಎಂಬುದಾಗಿಯೇ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ವೈಕಿಂಗ್ ಸಂಶೋಧನೆ

ವೈಕಿಂಗ್ ಸಂಶೋಧನೆ

1970 ರಲ್ಲಿ ವೈಕಿಂಗ್ ಎಂಬ ಸಂಶೋಧನೆಯನ್ನು ನಡೆಸಿದ್ದರು. ಇದರ ಮುಖ್ಯ ಉದ್ದೇಶ ಮಂಗಳನಲ್ಲಿ ಸಾವಯವ ಅಂಶಗಳಿವೆಯೇ ಎಂಬುದನ್ನು ಪತ್ತೆಹಚ್ಚುವುದಾಗಿತ್ತು. ಆದರೆ ಕೊನೆಯಲ್ಲಿ ಇಲ್ಲಿ ಇಂತಹ ಯಾವುದೇ ಅಂಶಗಳು ಕಂಡುಬರದೇ ಇರುವುದು ವಿಪರ್ಯಾಸವಾಗಿತ್ತು.

ಪೂರ್ವ ಜೀವನ

ಪೂರ್ವ ಜೀವನ

ಇನ್ನು ಮಂಗಳನಲ್ಲಿ ಪೂರ್ವ ಜೀವನ ಇದ್ದಿರಬಹುದು ಎಂಬುದಾಗಿ ನಾಸಾ ವಿಜ್ಞಾನಿಗಳಿಗೆ ಕೊಂಚ ಮಟ್ಟಿಗಿನ ವಿಶ್ವಾಸವಿತ್ತು. ಇನ್ನು ಗ್ರಹದ ಮೇಲ್ಮೈಯಲ್ಲಿ ನೀರು ಇರುವುದರಿಂದ ಪೂರ್ವ ಜೀವಿತ ಇಲ್ಲಿ ಇದ್ದಿರಲೂಬಹುದು ಎಂಬ ಅಂಶ ಅವರಿಗಿದೆ.

ಶೀತಲ ನೀರು

ಶೀತಲ ನೀರು

ಮಂಗಳನ ಮೇಲ್ಮೈಯಲ್ಲಿ ಇರುವುದು ಶೀತಲ ನೀರು ಎಂಬ ಮಾತು ಕೂಡ ಇದೆ. 2004 ರಲ್ಲಿ ಇಲ್ಲಿರುವುದು ಮಂಜುಗಡ್ಡೆಯ ನೀರು ಎಂಬುದಾಗಿತ್ತು ಆದರೆ 2005 ರಲ್ಲಿ ಮಂಗಳ ಮೇಲ್ಮೈಯಲ್ಲಿ ಹರಿಯುವ ನೀರು ಇದೆ ಎಂಬುದಾಗಿ ಅನ್ವೇಷಣೆಯಾಗಿತ್ತು. ಆದರೆ ಇದು ಯಾವ ಬಗೆಯ ನೀರು ಎಂಬುದಾಗಿ ಇನ್ನೂ ಖಾತ್ರಿಗೊಂಡಿಲ್ಲ.

ಅಪೋಲೋ ಬಾಹ್ಯಾಕಾಶಯಾನ

ಅಪೋಲೋ ಬಾಹ್ಯಾಕಾಶಯಾನ

ಮಂಗಳನ ಯಾನ ಮಾನವರಿಗೆ ಹೊಸ ಹಾದಿಯ ಪ್ರಯಾಣವನ್ನು ತೋರಿಸುತ್ತದೆ. ಅಂದರೆ 60 ಮತ್ತು 70 ರ ದಶಕದಲ್ಲಿ ಅಪೋಲೋ ಬಾಹ್ಯಾಕಾಶಯಾನಿಗಳು ಮಾಡಿದ ಅದೇ ಹೆಜ್ಜೆ.

ಮಾನವತ್ವದ ಬ್ಯಾಕಪ್

ಮಾನವತ್ವದ ಬ್ಯಾಕಪ್

ಮಂಗಳನಲ್ಲಿ ಮಾನವತ್ವದ ಬ್ಯಾಕಪ್ ಅನ್ನು ನಾವು ಅಲ್ಲಿ ರಚಿಸುತ್ತಿದ್ದೇವೆ ಎಂದಾದಲ್ಲಿ ನಮ್ಮ ಪ್ರಯಾಣ ಮಂಗಳನಲ್ಲಿಗೆ ಅತ್ಯಗತ್ಯವಾಗಿದೆ.

ಅತ್ಯಮೂಲ್ಯ ಲೋಹ

ಅತ್ಯಮೂಲ್ಯ ಲೋಹ

ನೀರು, ಅತ್ಯಮೂಲ್ಯ ಲೋಹಗಳ ಅನ್ವೇಷಣೆ, ನಮ್ಮ ಮುಂದಿನ ಬದುಕಿಗೆ ಆಸರೆಯಾಗಿರಬಹುದಾದ ಕೆಲವೊಂದು ಅಂಶಗಳು ಕೆಂಪು ಗ್ರಹದಲ್ಲಿರಬಹುದು.

ಮಾರ್ಸ್ ಮುಂದಿನ ಗಮ್ಯಸ್ಥಾನ

ಮಾರ್ಸ್ ಮುಂದಿನ ಗಮ್ಯಸ್ಥಾನ

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಮಾರ್ಸ್ ಮುಂದಿನ ಗಮ್ಯಸ್ಥಾನ ಎಂದೆನಿಸಿದೆ. ಇನ್ನು ಮಾನವ ಸಂಕುಲವನ್ನು ರೇಡಿಯೇಶನ್‌ನಿಂದ ಕಾಪಾಡುವ ನೆಲದೊಳಗಿನ ನಿವಾಸವನ್ನಾಗಿ ಮಾರ್ಪಡಿಸಬಹುದಾದ ಗುಹೆ ವ್ಯವಸ್ಥೆಯ ಆಧಾರ ಮಂಗಳನ ನೆಲದಲ್ಲಿದೆ

ಸ್ಪೇಸ್ ಎಕ್ಸ್

ಸ್ಪೇಸ್ ಎಕ್ಸ್

ಮಾನವನನ್ನು ತಲುಪಿಸುವ ಮಂಗಳನಲ್ಲಿಗೆ ಮಾನವನನ್ನು ತಲುಪಿಸುವ ಸ್ಪೇಸ್ ಎಕ್ಸ್ ನಿರ್ಮಾಣ, ರಾಕೆಟ್‌ಗಳ ಕಟ್ಟುವಿಕೆ ಮತ್ತು ಇದಕ್ಕೆ ಬೆಂಬಲವನ್ನು ಒದಗಿಸುವ ಹಲವಾರು ಸಲಕರಣೆಗಳನ್ನು ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.

ಜನರ ವಾಸ್ತವ್ಯ

ಜನರ ವಾಸ್ತವ್ಯ

ಮಂಗಳನ ಅಂಗಳ ಅತ್ಯಂತ ಸುಂದರ ಪ್ರದೇಶವಾಗಿದೆ. ಕಡಿಮೆ ಅಂದರೆ 80,000 ಜನರ ವಾಸ್ತವ್ಯವನ್ನು ಇಲ್ಲಿ ಹೂಡಬೇಕೆಂಬುದು ಸಂಶೋಧಕರ ಅಭಿಮತವಾಗಿದೆ. ನಮ್ಮ ಸೌರ ವ್ಯವಸ್ಥೆಯಲ್ಲೇ ವಾಸಯೋಗ್ಯ ನೆಲವಾಗಿದೆ.

ಸವಲತ್ತು

ಸವಲತ್ತು

ಇಷ್ಟೆಲ್ಲಾ ಸವಲತ್ತುಗಳನ್ನು ಮಂಗಳ ಹೊಂದಿದ್ದರೂ ಇಲ್ಲಿ ಬದುಕು ನಡೆಸುವುದು ಕಷ್ಟಾಸಾಧ್ಯವಾಗಿದೆ. ಮಾನವನ ಆವಾಸ ಸ್ಥಾನವನ್ನಾಗಿ ಮಂಗಳನನ್ನು ಬದಲಾಯಿಸಬೇಕೆಂಬ ನಿರ್ಧಾರವಾದಲ್ಲಿ ನಮ್ಮ ಭೂಮಿಯ ವ್ಯವಸ್ಥಕ್ಕೆ ತಕ್ಕಂತೆ ಅದನ್ನು ಬದಲಾಯಿಸಬೇಕು.

ಆಮದು

ಆಮದು

ಭೂಮಿಯಿಂದಲೇ ಮಂಗಳನ ಅಂಗಳಕ್ಕೆ ನಾವು ಪ್ರತಿಯೊಂದು ಪದಾರ್ಥವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ದುಬಾರಿ ವ್ಯವಸ್ಥೆ ಎಂದೇ ಪರಿಗಣಿಸಲಾಗಿದೆ.

ಆಹಾರ

ಆಹಾರ

ಮಂಗಳನಲ್ಲಿಗೆ ಆಹಾರವನ್ನು ಆಮದು ಮಾಡಿಕೊಳ್ಳುವ ಬದಲಿಗೆ ಅಲ್ಲಿಯೇ ಆಹಾರವನ್ನು ನಾವು ಸಿದ್ಧಪಡಿಸಿಕೊಳ್ಳುತ್ತೇವೆ ಎಂದು ಹೊರಟಲ್ಲಿ ಇದು ಇನ್ನಷ್ಟು ತಲೆನೋವನ್ನುಂಟು ಮಾಡಬಹುದು.

ಬೆಳೆಗಳ ಬೆಳೆಸುವಿಕೆ

ಬೆಳೆಗಳ ಬೆಳೆಸುವಿಕೆ

ಬೆಳೆಗಳ ಬೆಳೆಸುವಿಕೆಗೆ ಮಂಗಳನ ಮಣ್ಣು ಯೋಗ್ಯವಿಲ್ಲ ಎಂದಾದಲ್ಲಿ ಅದರಲ್ಲಿರುವ ಪ್ರಬಲ ರಾಸಾಯನಿಕಗಳನ್ನು ತೆಗೆದುಹಾಕಬೇಕಾಗುತ್ತದೆ.

Best Mobiles in India

English summary
In this article we can see some facts about why man life will be tough on mars. we have listed some facts which possibly confirming that mans life is difficult in mars.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X